• Follow NativePlanet
Share
» »ಈ ಸ್ವಾಮಿಯ ಸಮಾಧಿಯೇ ಇಂದು ದೇವಾಲಯವಾಗಿದೆ...

ಈ ಸ್ವಾಮಿಯ ಸಮಾಧಿಯೇ ಇಂದು ದೇವಾಲಯವಾಗಿದೆ...

Posted By:

ನಮ್ಮ ಭಾರತ ದೇಶದಲ್ಲಿ ಅನೇಕ ದೇವಾಲಯಗಳಿವೆ. ನಿಮಗೆ ನಮಗೆ ತಿಳಿದ ಹಾಗೆ 3 ಕೋಟಿಗಿಂತಲೂಅಧಿಕವಾಗಿಯೇ ದೇವರುಗಳು ಇರುವುದು ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ. ನಮ್ಮ ಹಿಂದೂ ಧರ್ಮದಲ್ಲಿ ಮಾನವನನ್ನು ದೈವ ಸಮಾನವಾಗಿ ಕಾಣುವುದು ಸಾಮಾನ್ಯವಾದುದೇ. ಕೇವಲ ಮಾನವರಿಗೆ ಅಲ್ಲದೇ ಪ್ರತಿಯೊಂದು ಜೀವಿಯಲ್ಲಿಯೂ, ವಸ್ತುವಿನಲ್ಲಿಯೂ ದೈವತ್ವವನ್ನು ಕಾಣುತ್ತಾರೆ. ಹಾಗಿರುವಾಗ....

ಆ ಸ್ವಾಮಿ ಸಮಾಧಿಯಾದ ಆಶ್ರಮವೇ ಇಂದು ದೇವಾಲಯವಾಗಿ ಪ್ರಸಿದ್ಧಿ ಹೊಂದಿದೆ. ನಮ್ಮ ಭಾರತ ದೇಶದಲ್ಲಿ ಅನೇಕ ಸುಪ್ರಸಿದ್ಧವಾದ ದೇವಾಲಯಗಳು ಇವೆ ಆದರೆ ಇಲ್ಲಿನ ವಿಶೇಷವೆನೆಂದರೆ ಒಬ್ಬ ಸ್ವಾಮಿಯನ್ನು ದೈವವಾಗಿ ಪೂಜಿಸಿ ಆತನ ಮರಣದ ನಂತರ ಸಮಾಧಿಯಾದ ಆಶ್ರಮವೇ ಒಂದು ದೇವಾಲಯವಾಗಿ ನಿರ್ಮಾಣ ಮಾಡಿದ್ದಾರೆ. ನೀವು ತಿಳಿದುಕೊಂಡ ಹಾಗೆ ಸಾಯಿ ಬಾಬಾ ಅವರ ದೇವಾಲಯದ ಬಗ್ಗೆ ಅಲ್ಲ, ಇದು ಆಂಧ್ರ ಪ್ರದೇಶದಲ್ಲಿರುವ ದೇವಾಲಯವೇ ಆಗಿದೆ. ಹಾಗಾದರೆ ಆ ದೇವಾಲಯ ಎಲ್ಲಿದೆ? ಆ ಸ್ವಾಮಿಯನ್ನು ಏಕೆ ದೈವವಾಗಿ ಭಾವಿಸಿ ಆರಾಧಿಸುತ್ತಿದ್ದಾರೆ? ಎಂಬ ವಿಷಯವನ್ನು ಈ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

1.ಎಲ್ಲಿದೆ?

1.ಎಲ್ಲಿದೆ?

PC:YOUTUBE

ಇದು ಆಂಧ್ರ ಪ್ರದೇಶ ನೆಲ್ಲೂರು ಜಿಲ್ಲೆ ವೆಂಕಟಾಚಲಂ ಮಂಡಲದಲ್ಲಿದೆ. ಇದು ನೆಲ್ಲೂರಿನಿಂದ ಕೇವಲ 7 ಕಿ.ಮೀ ದೂರದಲ್ಲಿ ಗುಲಗಮೂಡಿ ಎಂಬ ಗ್ರಾಮವಿದೆ. ಈ ಗ್ರಾಮದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಶ್ರೀ ವೆಂಕಯ್ಯ ಸ್ವಾಮಿಯ ಆಶ್ರಮವಿದೆ. ಆ ಆಶ್ರಮವು ಎಷ್ಟೋ ಪ್ರಖ್ಯಾತಿ ಹೊಂದಿದೆ.

2.ಆಧ್ಯಾತ್ಮಿಕ ಭೋದನೆ

2.ಆಧ್ಯಾತ್ಮಿಕ ಭೋದನೆ

PC:YOUTUBE

20 ನೇ ಶತಮಾನದ ಮಧ್ಯ ಕಾಲದಲ್ಲಿ ಆಧ್ಯಾತ್ಮಿಕ ಭೋದನೆಯನ್ನು ಮಾಡಿದ ವೆಂಕಯ್ಯ ಸ್ವಾಮಿ ಇಲ್ಲಿಯೇ ಮಹಾ ಸಮಾಧಿಯಾದರು. ತದನಂತರ ಭಗವಾನ್ ವೆಂಕಯ್ಯ ಸ್ವಾಮಿಯಾಗಿ ನೆಲೆಸಿದರು. ಇನ್ನು ಇವರ ಜೀವನ ಕಥೆ ಏನೆಂದರೆ, ನೆಲ್ಲೂರು ಜಿಲ್ಲೆಯಲ್ಲಿನ ನಾಗಲ ವೆಲ್ಲಟ್ಟೂರು ಎಂಬ ಚಿಕ್ಕದಾದ ಗ್ರಾಮದಲ್ಲಿ ಸೋಮಪಿಚ್ಚಮ್ಮ, ನಾಯ್ಡು ಪುಣ್ಯ ದಂಪತಿಗಳಿಗೆ ಸ್ವಾಮಿಯವರು ಜನಿಸಿದರು.

3.ಜೀವನ ಕಥೆ

3.ಜೀವನ ಕಥೆ

PC:YOUTUBE

ವೆಂಕಯ್ಯ ಸ್ವಾಮಿಯವರ ಕುಟುಂಬವು ಅತ್ಯಂತ ಕಡುಬಡತನವಾದುದ್ದರಿಂದ ಜೀವನ ಸಾಗಿಸುವುದಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ದಯೆ, ಕರಣೆ ಹೆಚ್ಚಾಗಿದ್ದು, ಪಶು-ಪಕ್ಷಿಗಳಿಗೆ ಹೆಚ್ಚು ಪ್ರೇಮವನ್ನು ಮಾಡುತ್ತಿದ್ದರು. ಒಂದು ವಯಸ್ಸು ದಾಟಿದ ನಂತರ ತೀವ್ರವಾದ ಜ್ವರ
ಬಂದಿದ್ದರಿಂದ ವೆಂಕಯ್ಯ ಸ್ವಾಮಿಯು ಸಮೀಪದಲ್ಲಿಯೇ ಇದ್ದ ಅರಣ್ಯಕ್ಕೆ ತೆರಳಿದರು.

4.ಯೋಗ ಸಾಧನೆ

4.ಯೋಗ ಸಾಧನೆ

PC:YOUTUBE

ಯಾವಾಗಲಾದರೂ ಗ್ರಾಮಕ್ಕೆ ಭೇಟಿ ನೀಡುವುದು, ಉಳಿದ ಸಮಯದಲ್ಲಿ ಅರಣ್ಯದಲ್ಲಿಯೇ ಇರುವುದನ್ನು ಕಂಡ ಗ್ರಾಮಸ್ಥರು ವೆಂಕಯ್ಯನಿಗೆ ಬುದ್ದಿಹೀನವಾಗಿದ್ದಾನೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಹಾಗೆ ಕಾಲಕ್ರಮೇಣ ತಿರುಪತಿ, ಶ್ರೀ ಶೈಲಂನಲ್ಲಿ ಯೋಗ ಸಾಧನೆಯನ್ನು ಮಾಡಿದರು.

5.ಕಣ್ವ ಮಹರ್ಷಿಯ ಅನುಗ್ರಹ

5.ಕಣ್ವ ಮಹರ್ಷಿಯ ಅನುಗ್ರಹ

PC:YOUTUBE

ಹೀಗೆ ಶ್ರೀ ಶೈಲ ಅರಣ್ಯದಲ್ಲಿ ಯೋಗ ಸಾಧನೆ ಮಾಡುವ ಸಮಯದಲ್ಲಿ ವೆಂಕಯ್ಯ ಸ್ವಾಮಿಗೆ ಕಣ್ವ ಮಹರ್ಷಿಯ ಅನುಗ್ರಹ ಲಭಿಸಿತು ಎಂದು ಆನಂತರ ಸ್ವಾಮಿ ಏನು ಹೇಳಿದರು ಅದು ನಡೆಯುತ್ತದೆ ಎಂದು ಪ್ರಚಾರ ನಡೆದ ಕಾರಣವಾಗಿ ಭಗವತ್ ಸ್ವರೂಪವಾಗಿ ಭಕ್ತರು ಭಾವಿಸಿದರು.

6.ಸ್ವಾಮಿಯ ಮಹಿಮೆ

6.ಸ್ವಾಮಿಯ ಮಹಿಮೆ

PC:YOUTUBE

ಇದೆಲ್ಲಾ ತಿಳಿದುಕೊಂಡ ಜನರು ವಿವಿಧ ಪ್ರದೇಶದಲ್ಲಿನ ಎಲ್ಲಾ ಜನರಿಗೆ ಸ್ವಾಮಿಯ ಮಹಿಮೆ ತಿಳಿಯಿತು. ಹಾಗೆ ಕಾಲಕ್ರಮೇಣ, ಸ್ವಾಮಿ ಎಲ್ಲಿಗೆ ಹೋದರು ಭಕ್ತರು ಆ ಪ್ರದೇಶವನ್ನು ಸಸ್ಯ ಶ್ಯಾಮಲವನ್ನಾಗಿ ಮಾಡುತ್ತಿದ್ದರು. ಸ್ವಾಮಿಯವರು ಯೋಗ ಸಾಧನೆ ಮಾಡುವ ಸಮಯದಲ್ಲಿ....

7.ಗ್ರಾಮಕ್ಕೆ ಭೇಟಿ

7.ಗ್ರಾಮಕ್ಕೆ ಭೇಟಿ

PC:YOUTUBE

ತಮಿಳುನಾಡುನಲ್ಲಿನ ಕಂಚಿ, ಚೆನ್ನೈ ನಗರದಲ್ಲಿಯೇ ಹೆಚ್ಚು ಕಾಲ ಇದ್ದರು. ತದನಂತರ ಕೋಟಿ ತೀರ್ಥಗ್ರಾಮದಲ್ಲಿ ಕೆಲವು ಕಾಲ ನಿವಾಸವಿದ್ದರು. ಪ್ರಶಾಂತವಾಗಿ ಭಗವತ್ ಧ್ಯಾನ ಮಾಡಿಕೊಳ್ಳುವ ಸಮಯಕ್ಕೆ ಗುಲಗೂಲಮುಡಿ ಅನುಕೂಲಕರವಾದ ಪ್ರದೇಶವೆಂದು ಈ ಗ್ರಾಮಕ್ಕೆ ಭೇಟಿ ನೀಡಿದರು.

8.ವ್ಯಾಧಿಮುಕ್ತ

8.ವ್ಯಾಧಿಮುಕ್ತ

PC:YOUTUBE

ವೆಂಕಯ್ಯ ಸ್ವಾಮಿಯು ಆ ಗ್ರಾಮದಲ್ಲಿ ಬಂದಿದ್ದರಿಂದ ಗ್ರಾಮವು ಪ್ರಸಿದ್ಧಿಯನ್ನು ಪಡೆಯಿತು. ಯಾವುದೇ ವೈದ್ಯ ಸೌಕರ್ಯವಿಲ್ಲದ ಆ ದಿನಗಳಲ್ಲಿ ಪ್ರಜೆಗಳು ವ್ಯಾಧಿಗಳಿಗೆ ತುತ್ತಾದ ಸಮಯದಲ್ಲಿ ತಮ್ಮ ಬಾಧೆಯನ್ನು ತೀರಿಸಬೇಕು ಎಂದು ಸ್ವಾಮಿಯ ಬಳಿ ಭೇಟಿ ನೀಡುತ್ತಿದ್ದರು.

9.ಭಕ್ತರಿಗೆ ಅಭಯ

9.ಭಕ್ತರಿಗೆ ಅಭಯ

PC:YOUTUBE

ಹಾಗೆ ಬರುವವರಿಗೆ ಸ್ವಾಮಿಯವರು ಒಂದು ನೂಲಿನ ದಾರವನ್ನು ರಕ್ಷಾದಾರವಾಗಿ ನೀಡುತ್ತಿದ್ದರು. ಹಾಗೆಯೇ ಭಕ್ತರಿಗೆ ಅಭಯವನ್ನು ನೀಡುತ್ತಾ ತಮ್ಮ ಕೈ ಮುದ್ರೆಯ ಚೀಟಿಯ ಮುಖಾಂತರ ನೀಡುತ್ತಿದ್ದರು. ಇವು ಕಾಲಕ್ರಮೇಣವಾಗಿ ಸೃಷ್ಟಿ ಚೀಟಿಗಳಾಗಿ ಮಾರ್ಪಟಾಯಿತು.

10.1982 ಆಗಸ್ಟ್ 24 ಯೋಗ ನಿದ್ರೆ

10.1982 ಆಗಸ್ಟ್ 24 ಯೋಗ ನಿದ್ರೆ

PC:YOUTUBE

ಸ್ವಾಮಿಯು ತಮ್ಮ ಜೀವನವೆಲ್ಲಾ ನಿರಾಡಂಬರ ಜೀವನವನ್ನು ಸಾಗಿಸಿದರು. ಕೊನೆಗೆ 1982 ಆಗಸ್ಟ್ 24 ಯೋಗ ನಿದ್ರೆಗೆ ಸೇರಿಕೊಂಡರು. ಪ್ರತಿ ನಿತ್ಯವು ಸಾವಿರಾರು ಮಂದಿ ಭಕ್ತರು ಉಚಿತ ಅನ್ನ ಸಂತರ್ಪಣೆ ಮಾಡುತ್ತಾರೆ. ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲಿ ಆರಾಧನೆ ಉತ್ಸವಗಳು ನಡೆಯುತ್ತವೆ.

11.ಉತ್ಸವಗಳು

11.ಉತ್ಸವಗಳು

PC:YOUTUBE

ಈ ಉತ್ಸವಕ್ಕೆ ತಮಿಳು ನಾಡು, ಕರ್ನಾಟಕ, ಆಂಧ್ರ ಪ್ರದೇಶ ಇನ್ನಿತರ ರಾಜ್ಯಗಳಿಂದಲೂ ಕೂಡ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಸ್ವಾಮಿಯನ್ನು ದರ್ಶನ ಮಾಡಿಕೊಳ್ಳುತ್ತಾರೆ. ನೀವು ಒಮ್ಮೆ ಭೇಟಿ ನೀಡಿ ಬನ್ನಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ