Search
  • Follow NativePlanet
Share
» »ಈ ಕೂಷ್ಮಾಂಡಿನಿ ದೇವಿಯ ತೀರ್ಥ ಸೇವಿಸಿದ್ರೆ ಕಾಯಿಲೆ ವಾಸಿಯಾಗುತ್ತಂತೆ !

ಈ ಕೂಷ್ಮಾಂಡಿನಿ ದೇವಿಯ ತೀರ್ಥ ಸೇವಿಸಿದ್ರೆ ಕಾಯಿಲೆ ವಾಸಿಯಾಗುತ್ತಂತೆ !

ನವರಾತ್ರಿಯ ನಾಲ್ಕನೇ ದಿನ ದುರ್ಗಾ ದೇವಿಯ ನಾಲ್ಕನೇ ಸ್ವರೂಪವಾದ ಕೂಷ್ಮಾಂಡಿನಿಯನ್ನು ಆರಾಧಿಸಲಾಗುತ್ತದೆ. ಇಂದು ನಾವು ಕೂಷ್ಮಾಂಡಿನಿಯ ಸಾವಿರ ವರ್ಷ ಪುರಾತನ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿನ ವಿಶೇಷತೆ ಎಂದರೆ ದೇವಿಯ ಮೂರ್ತಿಯಿಂದ ಹರಿಯುತ್ತಿರುವ ನೀರನ್ನು ಸೇವಿಸಿದರೆ ರೋಗ ರುಜಿನಗಳೆಲ್ಲಾ ಶಮನವಾಗುತ್ತವಂತೆ.

ಎಲ್ಲಿದೆ ಈ ಮಂದಿರ?

ಎಲ್ಲಿದೆ ಈ ಮಂದಿರ?

ಕಾನ್ಪುರದಿಂದ 40 ಕಿ.ಮೀ ದೂರದಲ್ಲಿರುವ ಘಾಟಮ್‌ಪುರ್‌ನಲ್ಲಿ ಸುಮಾರು 1000 ವರ್ಷ ಹಳೆಯದಾದ ಕೂಷ್ಮಾಂಡಿನಿ ದೇವಿಯ ಮಂದಿರವಿದೆ. ಇದನ್ನು 1380ರಲ್ಲಿ ರಾಜ ಘಾಟಮ್‌ಪುರ್‌ ದರ್ಶನ್ ನಿರ್ಮಿಸಿದ್ದನು. ನಂತರ 1890ರಲ್ಲಿ ಉದ್ಯಮಿಯೊಬ್ಬರು ಈ ಮಂದಿರವನ್ನು ಪುನಃ ನಿರ್ಮಾಣ ಮಾಡಿದರು.

ಈ ಬಾರಿಯಾದ್ರೂ 750 ಕೆ.ಜಿ ತೂಕದ ಚಿನ್ನದ ಅಂಬಾರಿ ನೋಡ್ಲೇ ಬೇಕು ಈ ಬಾರಿಯಾದ್ರೂ 750 ಕೆ.ಜಿ ತೂಕದ ಚಿನ್ನದ ಅಂಬಾರಿ ನೋಡ್ಲೇ ಬೇಕು

ಮಲಗಿರುವ ಮುದ್ರೆ

ಮಲಗಿರುವ ಮುದ್ರೆ

PC: facebook

ಈ ದೇವಸ್ಥಾನದಲ್ಲಿ ದುರ್ಗಾ ದೇವಿಯ ನಾಲ್ಕನೇ ಸ್ವರೂಪವಾದ ಕೂಷ್ಮಾಂಡಿನಿಯು ಮಲಗಿರುವ ಮುದ್ರೆಯಲ್ಲಿ ನೆಲೆಸಿದ್ದಾಳೆ. ಇಲ್ಲಿ ಕೂಷ್ಮಾಂಡಿನಿಯ ಮೂರ್ತಿಯಿಂದ ನೀರು ಹರಿಯುತ್ತಲೇ ಇರುತ್ತದೆ. ಯಾವುದೇ ಭಕ್ತರು ಈ ತೀರ್ಥವನ್ನು ಸೇವಿಸಿದರೆ ಅವರ ಯಾವುದೇ ರೋಗವು ನಿವಾರಣೆಯಾಗುತ್ತದಂತೆ.

ರಹಸ್ಯವಾಗಿಯೇ ಇದೆ

ರಹಸ್ಯವಾಗಿಯೇ ಇದೆ

PC:Jonoikobangali

ಆದರೆ ಇಲ್ಲಿ ನೀರು ಎಲ್ಲಿಂದ ಬರುತ್ತಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಇನ್ನೂ ರಹಸ್ಯವಾಗಿಯೇ ಇದೆ. ಇದನ್ನು ಪತ್ತೆ ಹಚ್ಚಲು ಅನೇಕ ವಿಜ್ಞಾನಿಗಳು ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ.

ಬ್ರಹ್ಮಚಾರಿಣಿ ದರ್ಶನ ಪಡೆದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ ! ಬ್ರಹ್ಮಚಾರಿಣಿ ದರ್ಶನ ಪಡೆದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ !

ಇಲ್ಲಿ ಮಾಲಿ ಪೂಜೆ ಮಾಡ್ತಾರೆ

ಇಲ್ಲಿ ಮಾಲಿ ಪೂಜೆ ಮಾಡ್ತಾರೆ

ಇತರ ದೇವಸ್ಥಾನಗಳಲ್ಲಿರುವಂತೆ ದೇವಸ್ಥಾನದ ಪೂಜಾರಿ ಇಲ್ಲಿ ಪೂಜೆ ಅರ್ಚನೆ ಮಾಡೋದಿಲ್ಲ. ಬದಲಾಗಿ ಮಾಲಿ ಪೂಜೆ ಮಾಡ್ತಾರೆ. ಇದು ಹತ್ತು ತಲೆಮಾರುಗಳಿಂದಲೂ ನಡೆದುಕೊಂಡು ಬಂದಿದೆ. ಇವರು ಬೆಳಗ್ಗೆ ಎದ್ದು ಸ್ನಾನ ಮಾಡಿ , ದೇವಸ್ಥಾನದ ಬಾಗಿಲು ತೆರೆದು ಹೋಮ, ಹವನ ಮಾಡುತ್ತಾರೆ. ಭಕ್ತರು ತಮ್ಮ ಮನೋಕಾಮನೆ ಈಡೇರಿದಾಗ ಇಲ್ಲಿಗೆ ಬಂದು ಪೂಜೆ, ಹವನಗಳನ್ನು ಮಾಡಿಸುತ್ತಾರೆ.

ದೇವಸ್ಥಾನದ ಇತಿಹಾಸ

ದೇವಸ್ಥಾನದ ಇತಿಹಾಸ

ಸುಮಾರು ಸಾವಿರ ವರ್ಷಗಳ ಹಿಂದೆ ಇಲ್ಲಿ ಘಾಟಮ್‌ಪುರ್‌ ಇಡೀ ಕಾಡಾಗಿತ್ತು . ಅಲ್ಲಿ ಒಬ್ಬ ಗೋಪಾಲಕ ಗೋವುಗಳನ್ನು ಮೇಯಿಸಲು ಬರುತ್ತಿದ್ದ, ಸಂಜೆ ಮನೆಗೆ ಹೋಗುವಾಗ ಹಸುವಿನಲ್ಲಿ ಹಾಲೇ ಬರುತ್ತಿರಲಿಲ್ಲ. ಹೀಗೆ ಒಂದು ದಿನ ಹಸುವಿನ ಮೇಲೆ ನಿಗಾ ವಹಿಸಲಾರಂಭಿಸಿದ.

ಬೆಳಗ್ಗೆ ನೀರಿರೋಲ್ಲ, ಸಂಜೆ ನೀರಿರುತ್ತೇ ಹ್ಯಾವ್ಲಾಕ್ ದ್ವೀಪದ ವಿಶೇಷತೆ ಏನು ಗೊತ್ತಾ ಬೆಳಗ್ಗೆ ನೀರಿರೋಲ್ಲ, ಸಂಜೆ ನೀರಿರುತ್ತೇ ಹ್ಯಾವ್ಲಾಕ್ ದ್ವೀಪದ ವಿಶೇಷತೆ ಏನು ಗೊತ್ತಾ

ಪ್ರತ್ಯಕ್ಷಳಾದ ದೇವಿ

ಪ್ರತ್ಯಕ್ಷಳಾದ ದೇವಿ

ಒಂದು ದಿನ ಮನೆಗೆ ಹಿಂದಿರುಗುವಾಗ ಗೋವು ಒಂದು ಸ್ಥಳದಲ್ಲಿ ಹಾಲೆರೆಯುವುದು ಕಂಡಿತು. ಅಲ್ಲಿ ದೇವಿಯು ಪ್ರತ್ಯಕ್ಷಳಾಗಿ ದುರ್ಗೆಯ ನಾಲ್ಕನೆ ಅವತಾರವೇ ನಾನು ಎಂದು ಹೇಳಿದಳು.

ಕೂಷ್ಮಾಂಡಿನಿ ದೇವಿಯ ಮೂರ್ತಿ

ಕೂಷ್ಮಾಂಡಿನಿ ದೇವಿಯ ಮೂರ್ತಿ

ಗೋಪಾಲಕ ಈ ವಿಷಯವನ್ನು ಊರಿನವರಿಗೆಲ್ಲಾ ತಿಳಿಸಿ. ಆ ಸ್ಥಳದಲ್ಲಿ ಅಗೆಯಲಾರಂಭಿಸಿದಾಗ ಅಲ್ಲಿ ಕೂಷ್ಮಾಂಡಿನಿ ದೇವಿಯ ಮೂರ್ತಿ ಸಿಗುತ್ತದೆ. ಆ ಮೂರ್ತಿಯನ್ನು ಊರಿನವರು ಅದೇ ಜಾಗದಲ್ಲಿ ಪ್ರತಿಷ್ಠಾಪಿಸಿದರು. ಆ ಜಾಗದಲ್ಲಿ ಆ ಮೂರ್ತಿಯಿಂದ ಬರುವ ನೀರನ್ನು ಪ್ರಸಾದವಾಗಿ ಸ್ವೀಕರಿಸಲಾರಂಭಿಸಿದರು.

ಇಲ್ಲಿ ಒಂದು ರಾತ್ರಿ ಕಳೆಯೋ ಧೈರ್ಯ ನಿಮಗಿದ್ಯಾ?ಇಲ್ಲಿ ಒಂದು ರಾತ್ರಿ ಕಳೆಯೋ ಧೈರ್ಯ ನಿಮಗಿದ್ಯಾ?

ಸತಿಯ ನಾಲ್ಕನೇ ಅಂಶ ಬಿದ್ದಿದ್ದು ಇಲ್ಲೇ

ಸತಿಯ ನಾಲ್ಕನೇ ಅಂಶ ಬಿದ್ದಿದ್ದು ಇಲ್ಲೇ

ಸತಿ ಅಗ್ನಿಗೆ ಆಹುತಿಯಾಗಿ ಸತಿಯ ದೇಹದ ಭಾಗಗಳು ಬೇರೆ ಬೇರೆ ಸ್ಥಳಗಳಲ್ಲಿ ಬಿದ್ದಿರುವ ಕಥೆ ನಿಮಗೆ ಗೊತ್ತೇ ಇದೆ. ದೇವಿಯ ನಾಲ್ಕನೇ ಅಂಶ ಘಾಟಮ್‌ಪುರದಲ್ಲಿ ಬಿದ್ದಿತ್ತು ಎನ್ನಲಾಗಿದೆ. ಹಾಗಾಗಿ ಇಲ್ಲಿ ಕೂಷ್ಮಾಂಡಿನಿ ನೆಲೆಸಿದ್ದಾಳೆ ಎನ್ನಲಾಗುತ್ತದೆ.

ಮನೋಕಾಮನೆ ಈಡೇರುತ್ತದೆ

ಮನೋಕಾಮನೆ ಈಡೇರುತ್ತದೆ

ಯಾವುದೇ ವ್ಯಕ್ತಿ ಆರು ತಿಂಗಳುಗಳ ಕಾಲ ಸೂರ್ಯೋದಯಕ್ಕೂ ಮೊದಲು ಸ್ನಾನ ಮಾಡಿ ಆ ತೀರ್ಥವನ್ನು ಸ್ವೀಕರಿಸಿದರೆ ರೋಗ ಶಮನವಾಗುತ್ತಂತೆ. ನವರಾತ್ರಿ ದಿನಗಳಲ್ಲಿ ಈ ಮಂದಿರಕ್ಕೆ ಬಂದು ಅವಲಕ್ಕಿ, ಬೆಲ್ಲ ಹಾಗು ಕಡಲೆಯನ್ನು ನೀಡಿದರೆ ಮನೋಕಾಮನೆ ಈಡೇರುತ್ತದಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X