» »ಹಿಂದೆ ತಿರುಗಿ ನೋಡಿದರೆ ಆ ದೇವಾಲಯದ ಗೋಪುರ ನಿಮ್ಮ ಹಿಂದೆಯೇ ಬರುತ್ತದೆಯಂತೆ...

ಹಿಂದೆ ತಿರುಗಿ ನೋಡಿದರೆ ಆ ದೇವಾಲಯದ ಗೋಪುರ ನಿಮ್ಮ ಹಿಂದೆಯೇ ಬರುತ್ತದೆಯಂತೆ...

Posted By:

ತಮಿಳುನಾಡು ರಾಜ್ಯದಲ್ಲಿನ ಕಡಲೂರು ಜಿಲ್ಲೆಯಲ್ಲಿನ ಚಿದಂಬರಂನ ಬಗ್ಗೆ ಹೇಳಿದರೆ ನಟರಾಜಸ್ವಾಮಿ ಗುರುತಿಗೆ ಬರುತ್ತದೆ. ಚಿದರಂಬರಂ ಎಂದರೆ ಆಕಾಶ ಲಿಂಗ. ಈ ದೇವಾಲಯದಲ್ಲಿ ಸ್ವಾಮಿಯೂ ಚಂದ್ರಮೌಳೀಶ್ವರ ಸ್ವಾಮಿ ಸ್ಪಟಿಕ ಲಿಂಗ ರೂಪದಲ್ಲಿ ಹಾಗು ಇನ್ನು 3 ರೂಪದಲ್ಲಿ ದರ್ಶನವನ್ನು ಸ್ವಾಮಿಯು ನೀಡುತ್ತಾನೆ. ಮೂರನೇ ರೂಪವೇ ಚಿದಂಬರಂ ರಹಸ್ಯ. ಗರ್ಭಾಲಯದ ಹಿಂದೆಯ ಗೋಡೆಯ ಮೇಲೆ ಒಂದು ಚಕ್ರವನ್ನು ಬರೆದಿದ್ದಾರೆ. ಅದರ ಮೇಲೆ ಬಂಗಾರದ ಬಿಲ್ವ ಎಲೆಗಳು ವಾಲಾಡುತ್ತಿರುತ್ತದೆ. ಅವುಗಳು ಕಾಣಿಸದೇ ಇರುವ ಹಾಗೆ ಒಂದು ತೆರೆಯನ್ನು ಕಟ್ಟಿ ಹಾಕಿರುತ್ತಾರೆ. ಅರ್ಚಕರು ಆ ತೆರೆಯನ್ನು ನಾಮಮಾತ್ರವಾಗಿ ತೆರೆದು ತೋರಿಸುತ್ತಾರೆ. ಆ ಪ್ರದೇಶವನ್ನೇ ಶಿರೋಹಾಂಭವ ಎಂದು ಕರೆಯುತ್ತಾರೆ.

ಚಿದಂಬರಂ ತಮಿಳುನಾಡಿನಲ್ಲಿರುವ ಕಡಲೂರು ಜಿಲ್ಲೆಗೆ ಸೇರಿದ ಮುನಿಸಿಪಾಲಿಟಿ ಮತ್ತು ತಾಲೂಕು ಕೇಂದ್ರವಾಗಿದೆ. ಇದು ತೀರಕ್ಕೆ ಕೇವಲ 11 ಕಿ.ಮೀ ಮತ್ತು ಚೆನ್ನೈಗೆ ರೈಲು ಮಾರ್ಗದ ಮೂಲಕ ಸುಮಾರು 240ಕಿ.ಮೀ ದಕ್ಷಿಣ ದಿಕ್ಕಿಗೆ ಇದೆ.

ಪರಮಶಿವನು ಶಿವತಾಂಡವನ್ನು ಮಾಡುತ್ತಿರುವ ನಟರಾಜನಾಗಿ ನೆಲೆಸಿರುವ ಚಿದಂಬರಂ ದೇವಾಲಯವು 40 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಶೈವರಿಗೆ ಅತ್ಯಂತ ಪವಿತ್ರವಾದ ದೇವಾಲಯ ಇದಾಗಿದೆ. ತಮಿಳು ಭಾಷೆಯಲ್ಲಿ ಕೋಯಲ್ ಎಂದರೆ ದೇವಾಲಯ. ಚಿದಂಬರಂ ಇರುವ ಈ ನಟರಾಜ ದೇವಾಲಯದಲ್ಲಿ ಅನೇಕ ನಿಗೂಢವನ್ನು ಹೊಂದಿರುವ ಘಟನೆಗಳು ನಡೆಯುತ್ತವೆ. ಚಿದಂಬರಂ ಎಂದರೆ ಶಿವನು ತಾಂಡವ ಮಾಡಿದ ಸ್ಥಳ ಎಂದೂ ಕೂಡ ಅರ್ಥವಿದೆ.

ವಿಚಿತ್ರ ಏನಪ್ಪ ಎಂದರೆ ಹಿಂದೆ ತಿರುಗಿ ನೋಡಿದರೆ ಆ ದೇವಾಲಯದ ಗೋಪುರವು ನಿಮ್ಮ ಹಿಂದೆಯೇ ಬರುತ್ತದೆಯಂತೆ. ಹಾಗಾದರೆ ಆ ದೇವಾಲಯದ ವಿಶೇಷದ ಬಗ್ಗೆ ತಿಳಿಯೋಣ.

1.ಆನಂದ ತಾಂಡವ

1.ಆನಂದ ತಾಂಡವ

ಚಿದಂಬರದಲ್ಲಿ ಶಿವನು ನಿರಾಕಾರನಾಗಿ ನೆಲೆಸಿದ್ದಾನೆ. ಸ್ವಾಮಿ ತನ್ನ ದಿವ್ಯವಾದ ಅವತಾರದಿಂದ ಆನಂದ ತಾಂಡವ ಮಾಡುತ್ತಿರುತ್ತಾನೆ ಎಂದು ಪ್ರತೀತಿ. ಹೀಗಾಗಿಯೇ ಆತನನ್ನು ತಾಂಡವೇಶ್ವರ ಎಂದೂ ಕೂಡ ಕರೆಯುತ್ತಾರೆ.

2.ಗರ್ಭಗುಡಿ

2.ಗರ್ಭಗುಡಿ

ಇದರ ಗರ್ಭಗುಡಿಯು ಖಾಲಿ ಸ್ಥಳದಲ್ಲಿರುವ ಒಂದು ಗೋಡೆಯ ಮೇಲೆ ಯಂತ್ರ ಎಂಬ ಚಿತ್ರವು ಪ್ರತಿಬಿಂಬಿಸುತ್ತದೆ. ಆ ಸ್ಥಳವನ್ನು ಒಂದು ತೆರೆಯು ಮುಚ್ಚಿಕೊಂಡಿರುತ್ತದೆ.

3.ಬಂಗಾರದ ಬಿಲ್ವ ಪತ್ರೆಗಳು

3.ಬಂಗಾರದ ಬಿಲ್ವ ಪತ್ರೆಗಳು

ಈ ತೆರೆಯನ್ನು ತೆಗೆದಾಗ ಭಗವಂತ ಇದ್ದಾನೆ ಎಂಬುದಕ್ಕೆ ಬಂಗಾರದ ಬಿಲ್ವ ಪತ್ರೆಗಳು ಇರುವುದನ್ನು ಕಾಣಬಹುದು. ಆ ತೆರೆಯನ್ನು ಹೊರಗೆ ಅಜ್ಞಾನವನ್ನು ಸೂಚಿಸುವ ಕಪ್ಪು ಬಣ್ಣದಲ್ಲಿ, ಒಳಭಾಗದಲ್ಲಿ ಜ್ಞಾನವನ್ನು ಸೂಚಿಸುವ ಮುಕ್ತಿಯನ್ನು ಕೆಂಪು ಬಣ್ಣದಲ್ಲಿ ಇರುತ್ತದೆಯಂತೆ.

4.ಭಗವಂತನ

4.ಭಗವಂತನ

ದೈನಂದಿನ ಪೂಜಾ ಕಾರ್ಯಕ್ರಮದ ಭಾಗವಾಗಿ ತಾನೇ ದೈವತ್ವದಿಂದ ಇರುವ ಪ್ರಧಾನವಾದ ಪೂಜಾರಿ (ಶಿವೋಹಂಭವ-ಶಿವ-ಭಗವಂತ, ಅಹಂ-ನಾನು/ನಾವು, ಭವ- ಮನಃ ಸ್ಥಿತಿ) ತೆರೆಯನ್ನು ತೆಗೆಯುತ್ತಾನೆ. ಇದು ಅಜ್ಞಾನವನ್ನು ತೊಲಗಿಸಿ ನಿರಾಕಾರನಾದ ಭಗವಂತನ ಇರುವಿಕೆಯನ್ನು ತಿಳಿಸುತ್ತದೆ.

5.ಚಿದಂಬರಂ ರಹಸ್ಯ

5.ಚಿದಂಬರಂ ರಹಸ್ಯ

ಹಾಗಾಗಿಯೇ ಚಿದಂಬರಂ ರಹಸ್ಯವು ಏನೆಂದರೆ ತನ್ನನ್ನು ತಾನೇ ಪರಿಪೂರ್ಣವಾಗಿ ಅರ್ಚನೆ ಮಾಡಿಕೊಂಡಾಗ ಭಕ್ತನು ತನ್ನ ಆಜ್ಞಾನವನ್ನು ತೊಲಗಿಸಿಕೊಂಡಿ ಆತನನ್ನು (ಸ್ವಾಮಿ) ದರ್ಶಿಸಿಕೊಳ್ಳುವುದು ಮತ್ತು ಮುಕ್ತಿಯನ್ನು ಅನುಭವಿಸುವುದೇ ಆಗಿದೆ.

6.ದೈವಸಾನಿಧ್ಯ

6.ದೈವಸಾನಿಧ್ಯ

ಶಿವ ಎಂದರೆ ದೈವ. ಅಹಂ ಎಂದರೆ ನಾನು/ನಾವು. ಭವ ಎಂದರೆ ಮನಸ್ಸು. ಆ ದೈವದಲ್ಲಿ ಮನಸ್ಸು ಏಕವಾಗುವ ಪ್ರದೇಶವೆನೆಂದರೆ ಅಲ್ಲಿ ಯಾವುದೇ ರೂಪವೇ ಇಲ್ಲದೇ ಅಜ್ಞಾನವನ್ನು ತೊಲಗಿಸಿಕೊಂಡು ದೈವಸಾನಿಧ್ಯದ ಅನುಭೂತಿಯನ್ನು ಹೊಂದುವ ಈ ಕ್ಷೇತ್ರದ ವಿಶೇಷತೆಯಾಗಿದೆ.

7.ದೇವಾಲಯದ ಗೋಪುರ

7.ದೇವಾಲಯದ ಗೋಪುರ

ಈ ದೇವಾಲಯಕ್ಕೆ ಇರುವ ಮತ್ತೊಂದು ವಿಶೇಷವೆನೆಂದರೆ ನಟರಾಜಸ್ವಾಮಿಯನ್ನು ದರ್ಶಿಸಿಕೊಂಡು ಹೊರಗೆ ಹೋಗಿ ಹಿಂದೆ ತಿರುಗಿ ನೋಡಿದರೆ ದೇವಾಲಯದ ಗೋಪುರದ ಹಿಂದೆಯೇ ಬರುತ್ತಿರುವ ಅನುಭೂತಿಯನ್ನು ಉಂಟುಮಾಡುತ್ತದೆ. ಈ ದೇವಾಲಯಕ್ಕೆ 9 ದ್ವಾರಗಳು ಇವೆ. ಆ 9 ರಲ್ಲಿ ದೊಡ್ಡ ಗಾಳಿ ಗೋಪುರಗಳು (ಪೂರ್ವ. ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕು) ಇವೆ. ಈ ನಾಲ್ಕು ಗಾಳಿ ಗೋಪುರಗಳು ಅತ್ಯಂತ ಪುರಾತನವಾದುದು.

8.ದೇವಾಲಯದ ಸಮುದಾಯ

8.ದೇವಾಲಯದ ಸಮುದಾಯ

ಪೂರ್ವದಲ್ಲಿನ ಗಾಳಿ ಗೋಪುರದ ಮೇಲೆ 108 ಮುದ್ರೆಗಳಿಂದ ಭರತನಾಟ್ಯ ಮಾಡುತ್ತಿರುವ ಶಿಲ್ಪಗಳು ಕೆತ್ತನೆ ಮಾಡಲ್ಪಟ್ಟಿದೆ. ದೇವಾಲಯದ ಸಮುದಾಯ 40 ಎಕರೆಗಳ ವಿಸ್ತೀರ್ಣವಿದೆ. ಈ ದೇವಾಲಯದ ಸಮುದಾಯದಲ್ಲಿ ಒಂದು ದೊಡ್ಡದಾದ ಶಿವಲಿಂಗ ಮತ್ತು ಚಿಕ್ಕದಾದ ಮನೆ ಕೂಡ ಇದೆ.

9.ಪಂಚಮೂರ್ತಿಗಳು

9.ಪಂಚಮೂರ್ತಿಗಳು

ಇಷ್ಟೇ ಅಲ್ಲ 5 ಸಭೆಗಳು ಅಥವಾ ವೇದಿಕೆಗಳು ಕೂಡ ಇಲ್ಲಿವೆ. ಅವು ಗರ್ಭಗುಡಿಯಲ್ಲಿ0 ಕಂಗೊಳಿಸುತ್ತಿರುವ ಅನೇಕ ಸ್ಥಳಗಳು ನಿತ್ಯ ಪೂಜೆಗಳನ್ನು ಮಾಡಿಕೊಳ್ಳುತ್ತಿವೆ. ಗರ್ಭಗುಡಿಗೆ ಎದುರಿನಲ್ಲಿಯೇ ಶಿವನು ಕಾಳಿ ಮಾತೆಯೊಂದಿಗೆ ನಾಟ್ಯ ಮಾಡಿದ ಹಾಗೆ ಹೇಳುತ್ತಾರೆ. ಭಗವಂತನು ಇದ್ದಾನೆ ಎಂದು ನಿರೂಪಿಸಿದ ಪ್ರದೇಶ ಇದಾಗಿದೆ. ರಾಜ್ಯಸಭೆ ಅಥವಾ 100 ಸ್ತಂಭಗಳ ಮಂಟಪ ಮತ್ತು ಪಂಚಮೂರ್ತಿಗಳು ನೆಲೆಸಿರುವ ದೇವ ಸ್ತಂಭ ಕೂಡ ಇಲ್ಲಿದೆ.

10.ಶಿವಾನಂದನಾಯಕಿ

10.ಶಿವಾನಂದನಾಯಕಿ

ಇಲ್ಲಿ ಅನೇಕ ವಿಗ್ರಹ ಮೂರ್ತಿಗಳಿವೆ. ಗಣೇಶನು- ವಿಘ್ನವನ್ನು ತೊಲಗಿಸುವ ಸ್ವಾಮಿ, ತನ್ನ ಪತ್ನಿಯ ಶಿವಾನಂದನಾಯಕಿಯ ಜೊತೆ ಬಲಭಾಗದಲ್ಲಿ ಕುಳಿತುಕೊಂಡಿರುವ ಭಂಗಿಯಲ್ಲಿ ದರ್ಶನವನ್ನು ನೀಡುವ ಸೋಮಸ್ಕಂದರ್ ಸ್ವಾಮಿ, ಮುರುಗಾ ಸ್ವಾಮಿ ಮತ್ತು ಚಂಡೀಕೇಶ್ವರರ್ ಸ್ವಾಮಿಯನ್ನು ಕೂಡ ಇಲ್ಲಿ ದರ್ಶನ ಮಾಡಬಹುದಾಗಿದೆ.

11.ಪಾಂಡಿಯನಾಕಂ ದೇವಾಲಯ

11.ಪಾಂಡಿಯನಾಕಂ ದೇವಾಲಯ

ಇವೇ ಅಲ್ಲದೇ ಪತಂಜಲಿ, ವ್ಯಾಘ್ರುಪಾದರ್ ಪೂಜಿಸಿದ ತಿರುಮೂಲತನೇಶ್ವರರ್ ಮತ್ತು ಆತನ ದೇವೆರಿ ಉಮಯ್ಯ ಪಾರ್ವತಿ ದೇವಾಲಯ, 63 ಪ್ರಧಾನವಾದ ಭಕ್ತರು ಅಥವಾ ಅರುಬತ್ತುಮೂವರ್ ದೇವಾಲಯ, ಜ್ಞಾನ ಶಕ್ತಿಗೆ ನಿಲಯವಾದ ಶಿವಗಾಮಿ ದೇವಾಲಯ, ವಿಘ್ನಗಳನ್ನು ತೊಲಗಿಸುವ ಗಣೇಶನ ದೇವಾಲಯ.

12.108 ವೈಷ್ಣ ಕ್ಷೇತ್ರದಲ್ಲಿ ಒಂದು

12.108 ವೈಷ್ಣ ಕ್ಷೇತ್ರದಲ್ಲಿ ಒಂದು

ದೇವಾಲಯದ ಪ್ರಾಂಗಣದಲ್ಲಿ ಗೋವಿಂದರಾಜ ಪೆರುಮಾಳ್, ಆತನ ದೇವೆರಿ ಪುಂಡರಗವಲ್ಲಿ ತಾಯರ್ ದೇವಾಲಯ ಕೂಡ ಇದೆ. ಈ ದೇವಾಲಯವನ್ನು ತಿಲ್ಲೈ ತಿರುಚಿತ್ರಕೂಡಮ್ ಎಂದು ಕರೆಯುತ್ತಾರೆ. ಇದು 108 ವೈಷ್ಣವ ದಿವ್ಯಕ್ಷೇತ್ರಗಳಲ್ಲಿ ಒಂದಾಗಿದೆ.

13.ಚಿಕ್ಕ ದೇವಾಲಯಗಳು

13.ಚಿಕ್ಕ ದೇವಾಲಯಗಳು

ದೇವಾಲಯದ ಪ್ರಾಂಗಣದಲ್ಲಿ ಇನ್ನು ಅನೇಕ ಚಿಕ್ಕ ಚಿಕ್ಕ ದೇವಾಲಯಗಳು ಕೂಡ ಇವೆ. ಹಾಗಾಗಿಯೇ ಆ ದೇವಾಲಯಕ್ಕೂ ಕೂಡ ಒಮ್ಮೆ ಭೇಟಿ ನೀಡಿ ಬನ್ನಿ.

14.ನವದ್ವಾರಗಳು

14.ನವದ್ವಾರಗಳು

ದೇವಾಲಯದಲ್ಲಿರುವ ನವದ್ವಾರಗಳು ಮಾನವನ ಶರೀರದಲ್ಲಿನ ನವರಂಧ್ರಗಳನ್ನು ಸೂಚಿಸುತ್ತದೆ. ಗರ್ಭಗುಡಿಯನ್ನು ಪಕ್ಕದಲ್ಲಿರುವ ಕನಕಸಬೈ ಎಂಬ ವೇದಿಕೆಯ ಮೇಲಿನಿಂದ 5 ಮೆಟ್ಟಿಲು ಏರಿ ಸೇರಿಕೊಳ್ಳಬೇಕು.

15.ನಟರಾಜ ಸ್ವಾಮಿ ವಿಗ್ರಹ

15.ನಟರಾಜ ಸ್ವಾಮಿ ವಿಗ್ರಹ

ಚಿದಂಬರಂ ದೇವಾಲಯಕ್ಕೆ ಒಮ್ಮೆ ದರ್ಶಿಸಿದರೆ ಮುಕ್ತಿಯನ್ನು ಹೊಂದಿತ್ತಾರೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ನಟರಾಜ ಸ್ವಾಮಿ ವಿಗ್ರಹವು, ಅದರ ಭಂಗಿ, ಅದರ ಸ್ವರೂಪ ಅದೇ ಕಾಲದ ಇತರ ಪಲ್ಲವ ಶಿಲ್ಪಗಳು ಕೂಡ ಇಲ್ಲಿ ಕಾಣಬಹುದು.

16.ಚಿದಂಬರಂ ಹೇಗೆ ಸೇರಿಕೊಳ್ಳಬೇಕು?

16.ಚಿದಂಬರಂ ಹೇಗೆ ಸೇರಿಕೊಳ್ಳಬೇಕು?

ಚಿದಂಬರಂ ತಮಿಳುನಾಡು ರಾಜ್ಯದಲ್ಲಿದೆ. ಸಮೀಪದ ವಿಮಾನ ನಿಲ್ದಾಣವೆಂದರೆ ಚೆನ್ನೈನಿಂದ 250 ಕಿ.ಮೀ ದೂರದಲ್ಲಿದೆ. ಚಿದಂಬರದಲ್ಲಿ ರೈಲ್ವೆ ನಿಲ್ದಾಣವೆಂದರೆ ಇದೆ. ಇದು ತಿರುಚ್ಚಿ-ಚೆನ್ನೈ ಮಾರ್ಗದಲ್ಲಿದೆ. ಚೆನ್ನೈನಿಂದ ಪಾಂಡಿಚೇರಿ ಮಾರ್ಗವಾಗಿ ಚಿದಂಬರಂಗೆ ತಲುಪಬಹುದು. ಪ್ರತಿದಿನ ಇಲ್ಲಿಗೆ ರೈಲುಗಳು ಸಂಪರ್ಕ ಸಾಧಿಸುತ್ತಿರುತ್ತವೆ.