• Follow NativePlanet
Share
Menu
» »ಈ ನಾಯಿಗೆ ಈ ದೇವಾಲಯವೇ ನಿವಾಸ...

ಈ ನಾಯಿಗೆ ಈ ದೇವಾಲಯವೇ ನಿವಾಸ...

Posted By:

ಪ್ರಾಣಿ, ಪಕ್ಷಿಗಳನ್ನು ನಮ್ಮ ಹಿಂದೂ ಧರ್ಮದಲ್ಲಿ ದೈವದ ಸ್ಥಾನವನ್ನು ನೀಡಿ ಪೂಜಿಸುತ್ತಿದ್ದೇವೆ. ಅದಕ್ಕೆ ಉದಾಹರಣೆ ಏನೆಂದರೆ ನಾಯಿಯ ಪ್ರತ್ಯೇಕವಾದ ದೇವಾಲಯವು ನಮ್ಮ ರಾಜ್ಯದಲ್ಲಿದೆ. ನಾಯಿಗಳು ನಿಯತ್ತಿಗೆ ಹೆಸರುವಾಸಿಯಾಗಿದೆ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಏಕೆಂದರೆ ಒಂದು ದೇವಾಲಯದಲ್ಲಿ ಒಂದು ನಾಯಿಯು ತನ್ನ ನಿವಾಸ ಮಾಡಿಕೊಂಡಿದೆ. ಅಷ್ಟೇ ಅಲ್ಲ ಪೂಜೆ ಕೂಡ ಮಾಡುತ್ತದೆ.

ನಿಜಾಮರ ಆಳ್ವಿಕೆಯಲ್ಲಿ ತೆಲಂಗಾಣ ಪ್ರದೇಶದಲ್ಲಿ, ಮೆಡಕ್ ಮತ್ತು ವರಂಗಲ್ ವಿಭಾಗವನ್ನು ನಿಜಾಮ್ ಆಡಳಿತವನ್ನು ಹೊಂದಿತ್ತು. ಇದು ತದನಂತರ ಆಂಧ್ರ ಪ್ರದೇಶದ ಭಾಗವಾಯಿತು. 2014 ಜೂನ್ 2 ರಲ್ಲಿ ತೆಲಂಗಾಣ ಒಂದು ಪ್ರತ್ಯೇಕವಾದ ರಾಜ್ಯವಾಗಿ ಘೋಷಣೆ ಮಾಡಲಾಯಿತು. ಹೈದ್ರಾಬಾದ್ ನಗರವು ತೆಲಂಗಾಣ ರಾಜ್ಯಕ್ಕೆ ರಾಜಧಾನಿಯಾಯಿತು. ಇಲ್ಲಿ ಈ ವಿಚಿತ್ರವಾದ ದೇವಾಲಯವಿದೆ. ಆ ದೇವಾಲಯ ಯಾವುದು? ಎಂಬುದರ ಬಗ್ಗೆ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯೋಣ ಬನ್ನಿ....

1.ಈ ನಾಯಿಗೆ ಈ ದೇವಾಲಯವೇ ನಿವಾಸ...

1.ಈ ನಾಯಿಗೆ ಈ ದೇವಾಲಯವೇ ನಿವಾಸ...

ಮನುಷ್ಯನಿಗೆ ತನ್ನ ಸ್ವಾರ್ಥಕ್ಕಾಗಿ ದೇವರ ಮೊರೆ ಹೋಗುತ್ತಾನೆ. ಆಸ್ತಿಗಾಗಿ, ಅಂತಸ್ಥಿಗಾಗಿ, ಆರೋಗ್ಯ, ವಿವಾಹ, ಸಂತಾನ ಇನ್ನು ಹಲವಾರು ಕೋರಿಕೆಗಳು ನೆರವೇರಬೇಕು ಎಂದು ಹಲವಾರು ದೇವಾಲಯಕ್ಕೆಲ್ಲಾ ತೆರಳುತ್ತೇವೆ. ಪ್ರತಿಯೊಂದು ಕೋರಿಕೆಗಳು ತಮ್ಮ ಜೀವನವನ್ನು ಭದ್ರಗೊಳಿಸುವುದಕ್ಕೆ ಆಗಿರುತ್ತದೆ.

2.ಈ ನಾಯಿಗೆ ಈ ದೇವಾಲಯವೇ ನಿವಾಸ..

2.ಈ ನಾಯಿಗೆ ಈ ದೇವಾಲಯವೇ ನಿವಾಸ..

ಆದರೆ ಮೂಕಜೀವಿಯಾದ ಈ ನಾಯಿಗಳು ಮನುಷ್ಯರ ಮೇಲೆ ಕೇವಲ ವಿಶ್ವಾಸವನ್ನು ಮಾತ್ರ ತೋರಿಸುವುದಿಲ್ಲ. ಬದಲಾಗಿ ದೇವರನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಪೂಜಿಸುತ್ತಾರೆ. ಆಶ್ಚರ್ಯ ಪಡಬೇಡಿ..ಇದು ನಿಜ. ಅಸಲಿಗೆ ಆ ನಾಯಿ ಯಾವುದು? ಆ ವಿಶ್ವಾಸ ಯಾವುದು ಎಂಬ ಹಲವಾರು ಪ್ರೆಶ್ನೆಗಳನ್ನು ತಿಳಿದುಕೊಳ್ಳಬೇಕಾದರೆ ಜಗಿತ್ಯಾಲ ಜಿಲ್ಲೆಗೆ ತೆರಳಲೇಬೇಕು.

3.ಈ ನಾಯಿಗೆ ಈ ದೇವಾಲಯವೇ ನಿವಾಸ...

3.ಈ ನಾಯಿಗೆ ಈ ದೇವಾಲಯವೇ ನಿವಾಸ...

ಜಗಿತ್ಯಾಲ ಜಿಲ್ಲೆಯ ಮೆಟ್ಲಪಲ್ಲಿ ಮಂಡಲದ ವೆಲ್ಲುಲ್ಲ ಎಂಬ ಗ್ರಾಮಕ್ಕೆ ಸೇರಿದ ಗಂಗಾರಾಂ, ನರಸಿಂಹ ದೇವಾಲಯದ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವು ಕಾಲದ ಹಿಂದೆ ಕಾಣಿಸಿಕೊಳ್ಳುತ್ತಿದ್ದ ನಾಯಿಯ ಮರಿಯು ಮತ್ತೇ ಆ ದೇವಾಲಯದ ಪರಿಸರ ಪ್ರದೇಶದಲ್ಲಿ ಕಾಣಿಸಿಕೊಂಡಿತು.

4.ಈ ನಾಯಿಗೆ ಈ ದೇವಾಲಯವೇ ನಿವಾಸ...

4.ಈ ನಾಯಿಗೆ ಈ ದೇವಾಲಯವೇ ನಿವಾಸ...

ಅಯ್ಯೋ! ಪಾಪ ಈ ನಾಯಿಯು ತನ್ನ ಚಿಕ್ಕ ಮರಿಯನ್ನು ಬಿಟ್ಟು ಎಲ್ಲಿಗೆ ಹೋಯಿತೂ ಎಂದು ಎಲ್ಲಾ ಜಾಗದಲ್ಲಿಯೂ ಹುಡುಕಾಡಿದರು. ಆದರೆ ಎಲ್ಲೂ ಕಾಣಿಸಲಿಲ್ಲ. ಹಾಗಾಗಿ ಆ ನಾಯಿ ಮರಿಯನ್ನು ತನ್ನ ಜೊತೆಯೇ ಇಟ್ಟುಕೊಂಡು ಪೂಜಾರಿ ಬೆಳೆಸಿದನು.

5.ಈ ನಾಯಿಗೆ ಈ ದೇವಾಲಯವೇ ನಿವಾಸ...

5.ಈ ನಾಯಿಗೆ ಈ ದೇವಾಲಯವೇ ನಿವಾಸ...

ಆದರೆ ತನ್ನ ಚಿಕ್ಕವಯಸ್ಸಿನಲ್ಲಿಯೇ ತನ್ನ ಯಜಮಾನನಿಗೆ ಆ ದೇವಾಲಯದಲ್ಲಿ ಪೂಜಾರಿಗೆ ಸಹಾಯವನ್ನು ಮಾಡುತ್ತಿತ್ತು. ಹಾಗೆಯೇ ಯಜಮಾನ ತಿನ್ನುವ ಸಾತ್ವಿಕ ಆಹಾರವನ್ನು ಮಾತ್ರ ತಿನ್ನುತ್ತಿತ್ತು. ಅದರ ಜೊತೆ ಜೊತೆಗೆ ದೇವಾಲಯಕ್ಕೆ ಬಂದು ಹೋಗುವ ಭಕ್ತರನ್ನು ಕಂಡು ತಾನು ಕೂಡ ದೇವರನ್ನು ಭಕಿ-ಶ್ರದ್ಧೆಯಿಂದ ಲಕ್ಷ್ಮಿನರಸಿಂಹ ಸ್ವಾಮಿಯನ್ನು ಆರಾಧಿಸುತ್ತಿತ್ತು.

6.ಈ ನಾಯಿಗೆ ಈ ದೇವಾಲಯವೇ ನಿವಾಸ...

6.ಈ ನಾಯಿಗೆ ಈ ದೇವಾಲಯವೇ ನಿವಾಸ...

ತನ್ನ ಯಜಮಾನನಿಗೆ ಇಂದಿಗೂ ವಿಶ್ವಾಸದಿಂದ ಇದ್ದ ಈ ನಾಯಿಯು ಜೊತೆಯಲ್ಲಿಯೇ ಇದ್ದು, ದೇವಾಲಯದಲ್ಲಿ ಸಹಾಯವನ್ನು ಮಾಡುತ್ತಿತ್ತು. ಯಜಮಾನ (ಪೂಜಾರಿ) ಯ ಜೊತೆಯಲ್ಲಿಯೇ ಇದ್ದ ಕಾರಣ ಭಕ್ತಿ, ಶ್ರದ್ಧೆ, ವಿಶ್ವಾಸವಾಗಿ ಇರುತ್ತಿತ್ತು. ವಿಶ್ವಾಸ ಎಂಬುದು ಮಾನವರಿಗೆ ಮಾತ್ರ ಸಂಬಂಧಿಸಿದ್ದು ಅಲ್ಲ. ಬದಲಾಗಿ ಮನಸ್ಸಿಗೂ ಕೂಡ ಸಂಬಂಧಿಸಿದ್ದು.

7.ಈ ನಾಯಿಗೆ ಈ ದೇವಾಲಯವೇ ನಿವಾಸ...

7.ಈ ನಾಯಿಗೆ ಈ ದೇವಾಲಯವೇ ನಿವಾಸ...

ಮನುಷ್ಯರಿಗಿಂತ ಮೂಕ ಜೀವಿಗಳಲ್ಲಿಯೇ ವಿಶ್ವಾಸ ಹೆಚ್ಚಾಗಿರುತ್ತದೆ. ವಿಚಿತ್ರ ಏನೆಂದರೆ ಈ ನಾಯಿಯು ಮಲಗುವುದು, ಆರಾಧಿಸುವುದು ಎಲ್ಲಾ ಈ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿಯೇ. ನಿತ್ಯ ಪೂಜೆಗೆ ಪಾಲ್ಗೋಳ್ಳುವ ಈ ಶುನಕವು ತನ್ನದೇ ಆದ ಮನ್ನಣೆಯನ್ನು ಪಡೆದುಕೊಂಡಿದೆ. ಪೂಜೆಯ ಸಮಯದಲ್ಲಿ ಹಾಜರಾಗುತ್ತದೆಯಂತೆ.

8.ಈ ನಾಯಿಗೆ ಈ ದೇವಾಲಯವೇ ನಿವಾಸ...

8.ಈ ನಾಯಿಗೆ ಈ ದೇವಾಲಯವೇ ನಿವಾಸ...

ತೆಲಂಗಾಣದ ದಕ್ಷಿಣಾಧಿ ರಾಜ್ಯವಾದ್ದರಿಂದ, ಉತ್ತರ ಭಾರತ ದೇಶವು ಹೋಲಿಯಂತಹ ಕೆಲವು ಹಬ್ಬಗಳು ಭರ್ಜರಿಯಾಗಿ ಆಚರಿಸುತ್ತಾರೆ. ತೆಲಂಗಾಣವು ಸಾಂಸ್ಕøತಿಕ ರಂಗದಲ್ಲಿಯೂ ಅತ್ಯಂತ ಹೆಸರುವಾಸಿಯಾಗಿದೆ. ಇಲ್ಲಿಯೂ ಹಲವಾರು ಹಬ್ಬಗಳನ್ನು ಆಚರಿಸುತ್ತಾರೆ. ಅದರಲ್ಲಿ ಮುಖ್ಯವಾದುದು ಎಂದರೆ ಅದು ಬತುಕಮ್ಮ ಹಬ್ಬ.

9.ಈ ನಾಯಿಗೆ ಈ ದೇವಾಲಯವೇ ನಿವಾಸ...

9.ಈ ನಾಯಿಗೆ ಈ ದೇವಾಲಯವೇ ನಿವಾಸ...

ತೆಲಂಗಾಣ ಹಾಗು ಹೈದ್ರಾಬಾದನಲ್ಲಿಯೂ ಕೂಡ ಹಲವಾರು ಪ್ರವಾಸಿ ಆಕರ್ಷಣೆಗಳಿವೆ. ಅವುಗಳಲ್ಲಿ ಹೈದ್ರಾಬಾದ್‍ನಲ್ಲಿನ ಚಾರ್ಮಿನಾರ್, ಹುಸ್ಸೇನ್ ಸಾಗರ್, ಬಿರ್ಲಾ ಮಂದಿರ್ ಹಾಗು ಕುಂತಲ ವಾಟರ್ ಫಾಲ್ಸ್. ಹಾಗೆಯೇ ವರಂಗಲ್‍ನಲ್ಲಿನ ಯಾದಗಿರಿ ಗುಟ್ಟ, ಬಾಸರ್‍ನಲ್ಲಿನ ಸರಸ್ವತಿ ದೇವಾಲಯದಂತಹ ಕೆಲವು ಪ್ರವಾಸಿ ಆಕರ್ಷಣೆಗಳು ಕಣ್ಮನ ಸೆಳೆಯುತ್ತದೆ.

10.ಈ ನಾಯಿಗೆ ಈ ದೇವಾಲಯವೇ ನಿವಾಸ...

10.ಈ ನಾಯಿಗೆ ಈ ದೇವಾಲಯವೇ ನಿವಾಸ...

ತೆಲಂಗಾಣಕ್ಕೆ ಹಲವಾರು ಕಡೆಗಳಿಂದ ಸಾರಿಗೆ ಸಂಪರ್ಕವಿದೆ. ಹೈದ್ರಾಬಾದ್‍ನಲ್ಲಿನ ರಾಜೀವ್‍ಗಾಂಧಿ ಇಂಟರ್ ನ್ಯಾಷನಲ್ ಏರ್ ಪೋರ್ಟ್. ಇದು ದೇಶದಲ್ಲಿನ ಇತರ ವಿಮಾನ ನಿಲ್ದಾಣದ ಮೂಲಕವೂ ತೆಲಂಗಾಣ ರಾಜ್ಯಕ್ಕೆ ತಲುಪುತ್ತದೆ. ಹಾಗೆಯೇ ರೈಲ್ವೆ ಹಾಗು ರಸ್ತೆ ಮಾರ್ಗಗಳ ಮೂಲಕವು ಸುಲಭವಾಗಿ ಸೇರಿಕೊಳ್ಳಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ