» »ನಲ್ಲಮಲ ಅಡವಿಯಲ್ಲಿನ ಈ ಪ್ರದೇಶಗಳು ನಿಮಗೆ ಗೊತ್ತ?

ನಲ್ಲಮಲ ಅಡವಿಯಲ್ಲಿನ ಈ ಪ್ರದೇಶಗಳು ನಿಮಗೆ ಗೊತ್ತ?

Posted By:

ನಲ್ಲಮಲ ಅಡವಿಯು ಆಧ್ಯಾತ್ಮಿಕ ಪರವಾಗಿ, ಪ್ರಕೃತಿ ಪರವಾಗಿ ಪ್ರಶಾಂತವಾದ ವಾತಾವರಣವನ್ನು ಹೊಂದಿರುತ್ತದೆ. ಈ ದಟ್ಟವಾದ ಅರಣದಲ್ಲಿ ದೇವಾಲಯಗಳು, ಗೋಪುರಗಳು, ಜಲಪಾತಗಳು ಲೆಕ್ಕವಿಲ್ಲದಷ್ಟು ಇದೆ. ರಸ್ತೆ ಪಕ್ಕದಲ್ಲಿರುವ ಪ್ರದೇಶಗಳಿಗೆ ಹೋಗಬಹುದೆನೋ... ಆದರೆ ಅರಣ್ಯದಲ್ಲಿ ಅಡಗಿರುವ ಕೆಲವು ಪ್ರದೇಶಗಳಿಗೆ ಭೇಟಿ ನೀಡಬೇಕಾದರೆ ಆ ದೇವರೇ ಕಣ್ಣಿಗೆ ಕಾಣಿಸುತ್ತಾನೆ.

ಟ್ರೆಕ್ಕಿಂಗ್ ಮಾಡುತ್ತಾ...ಬೆಟ್ಟ-ಗುಡ್ಡಗಳನ್ನು ದಾಟುತ್ತಾ ಹೋಗುತ್ತಿದ್ದರೆ ಒಂದು ವಿಭಿನ್ನವಾದ ಅನುಭವ ಪಡೆಯುವುದರಲ್ಲಿ ಅನುಮಾನವೇ ಇಲ್ಲ. ಅದೊಂದು ಅದ್ಭುತವಾದ ಪ್ರದೇಶವೇ ಆಗಿದೆ. ಪೂರ್ವ ಭಾಗದಲ್ಲಿರುವ ನಲ್ಲಮಲ ಅರಣ್ಯಗಳು ಆಂಧ್ರ-ತೆಲಂಗಾಣ ರಾಜ್ಯದಲ್ಲಿನ 5 ಜಿಲ್ಲೆಗಳಲ್ಲಿ (ಮೆಹೆಬೂಬ್ ನಗರ, ಕರ್ನೂಲು, ಪ್ರಕಾಶಂ, ಗುಂಟೂರು, ಕಡಪ) ವಿಸ್ತರಿಸಿಕೊಂಡಿದೆ.

ನಲ್ಲಮಲ ಬೆಟ್ಟಗಳು ಸರಾಸರಿ 520 ಮೀ ಎತ್ತರ, ಇವುಗಳಲ್ಲಿ 923 ಮೀ ಎತ್ತರದ ಬೈರಾನಿ ಬೆಟ್ಟ ಮತ್ತು 903 ಮೀ ಎತ್ತರದ ಗುಂಡ್ಲ ಬ್ರಹ್ಮೇಶ್ವರ ಕೊಂಡ (ಬೆಟ್ಟ) ಕೂಡ ಇದೆ. ಈ ಅರಣ್ಯಗಳಲ್ಲಿ ಹುಲಿಗಳು ಸಮೃದ್ಧಿಯಾಗಿರುವ ಕಾರಣ ಈ ಪ್ರದೇಶವನ್ನು ಟೈಗರ್ ರಿರ್ಜವ್ ಎಂದು ಪ್ರಕಟಿಸಿದೆ.

1.ಸಲೇಶ್ವರ ಕ್ಷೇತ್ರ

1.ಸಲೇಶ್ವರ ಕ್ಷೇತ್ರ

PC:telangana tourism

ನಲ್ಲಮಲ ಅರಣ್ಯದಲ್ಲಿ ಮೊದಲು ಮೆಹುಬೂಬ್ ನಗರದ ಸಮೀಪದಲ್ಲಿ ಒಂದು ದೇವಾಲಯವಿದೆ. ಆ ದೇವಾಲಯವೇ ಸಲೇಶ್ವರ ಕ್ಷೇತ್ರ. ಆಕಾಶದಿಂದ ಬೀಳುತ್ತಿರುವ ಹಾಲಿನ ಹಾಗೆ ಭಾಸವಾಗುವ ಜಲಪಾತವನ್ನು ಇಲ್ಲಿ ಕಣ್ಣು ತುಂಬಿಕೊಳ್ಳಬಹುದಾಗಿದೆ. ಆ ಬೆಟ್ಟದ ಮೇಲೆ ಮಹಾ ಶಿವನು ನೆಲೆಸಿದ್ದಾನೆ. ಸುತ್ತಲೂ ಇರುವ ಪ್ರಕೃತಿಯು ನಿಜವಾಗಿಯೂ ಸ್ವರ್ಗದಂತೆ ಅನುಭವವನ್ನು ಉಂಟು ಮಾಡುತ್ತದೆ.

2.ಸಲೇಶ್ವರಕ್ಕೆ ತೆರಳುವ ಬಗೆ ಹೇಗೆ?

2.ಸಲೇಶ್ವರಕ್ಕೆ ತೆರಳುವ ಬಗೆ ಹೇಗೆ?

PC:telangana tourism

ಹೈದ್ರಾಬಾದ್‍ನಿಂದ ಶ್ರೀ ಶೈಲಂ ಪ್ರಧಾನವಾದ ರಹದಾರಿಯ ಮೇಲೆ ಪರಹಾಬಾದ್‍ನಿಂದ ಕೇವಲ 16 ಕಿ.ಮೀ ದೂರದಲ್ಲಿ ಅರಣ್ಯ ಮಾರ್ಗದ ಮೂಲಕ ಪ್ರಯಾಣಿಸಿದರೆ ರಾಂಪುರ್ ಸಿಗುತ್ತದೆ. ಅಲ್ಲಿಂದ ಕೇವಲ 6 ಕಿ.ಮೀ ದೂರದವರೆಗೆ ಕಾಲ್ನಿಡಿಗೆಯ ಮೂಲಕ ಸಲೇಶ್ವರ ಕ್ಷೇತ್ರಕ್ಕೆ ತಲುಪಬಹುದಾಗಿದೆ.

3.ಉಮಾಮಹೇಶ್ವರ ಸ್ವಾಮಿ ದೇವಾಲಯ

3.ಉಮಾಮಹೇಶ್ವರ ಸ್ವಾಮಿ ದೇವಾಲಯ

PC:B Venkata Reddy

ಅಹೊಬಿಲಂಗೆ ಅನೇಕ ಮಂದಿ ಭೇಟಿ ನೀಡುತ್ತಿರುತ್ತಾರೆ. ಆದರೆ ಅದರ ಪಕ್ಕದಲ್ಲಿಯೇ ಇರುವ ಉಲ್ಲೆಡ ಕ್ಷೇತ್ರದ ಬಗ್ಗೆ ಮಾತ್ರ ಯಾರಿಗೂ ತಿಳಿದಿಲ್ಲ. ಈ ಕ್ಷೇತ್ರದಲ್ಲಿ ಉಮಾಮಹೇಶ್ವರ ಲಿಂಗಮಯ್ಯ ರೂಪದಲ್ಲಿ ಪೂಜೆಗಳನ್ನು ಮಾಡಿಕೊಳ್ಳುತ್ತಿದ್ದಾನೆ. ಅಲ್ಲಿಗೆ ಭೇಟಿ ನೀಡಿದರೆ ಅಮರನಾಥ ಮಂಜಿನ ಲಿಂಗವನ್ನು ದರ್ಶನವನ್ನು ಮಾಡಿದ ಹಾಗೆ ಎಂದು ಭಕ್ತರು ಭಾವಿಸುತ್ತಾರೆ.

4.ಉಲ್ಲೆಡು ಉಮಾಮಹೇಶ್ವರ ಕ್ಷೇತ್ರಕ್ಕೆ ಹೇಗೆ ಸೇರಬೇಕು?

4.ಉಲ್ಲೆಡು ಉಮಾಮಹೇಶ್ವರ ಕ್ಷೇತ್ರಕ್ಕೆ ಹೇಗೆ ಸೇರಬೇಕು?

PC:B Venkata Reddy

ಅಹೊನಿಲಾಗೆ ಕೇವಲ 3 ಕಿ.ಮೀ ದೂರದಲ್ಲಿ ಬೆಟ್ಟದ ಪಕ್ಕದ ದಾರಿಯಲ್ಲಿಯೇ ಇದೆ. ಒಂದು ಕಾಲದಲ್ಲಿ ಕಾಲ್ನಡಿಗೆ ಮಾರ್ಗವಾಗಿ 20 ಕಿ.ಮೀ ಕಲ್ಲು, ಮುಳ್ಳು ಎನ್ನದೇ ಉಮಾಮಹೇಶ್ವರ ದರ್ಶನ ಪಡೆಯಲು ಹೋಗುದೇ ಇರಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇಲ್ಲಿಗೆ ಭೇಟಿ ನೀಡುವ ಪ್ರಜೆಗಳು, ಭಕ್ತರು, ಅರಣ್ಯದ ಸೌಂದರ್ಯವನ್ನು ಕಾಣಲು ಬರುವ ಪ್ರವಾಸಿಗರು ಹೆಚ್ಚಾದ್ದರಿಂದ ಸಾರಿಗೆ ಸಂಪರ್ಕ ಮೊದಲಿಗಿಂತಲೂ ಈಗ ಪರವಾಗಿಲ್ಲ ಎಂದೇ ಹೇಳಬಹುದು.

5.ಉಲ್ಲೆಡು ಉಮಾಮಹೇಶ್ವರ ಕ್ಷೇತ್ರಕ್ಕೆ ಹೇಗೆ ಸೇರಬೇಕು?

5.ಉಲ್ಲೆಡು ಉಮಾಮಹೇಶ್ವರ ಕ್ಷೇತ್ರಕ್ಕೆ ಹೇಗೆ ಸೇರಬೇಕು?

PC:B Venkata Reddy

ಉಮಾಮಹೇಶ್ವರ ಸ್ವಾಮಿ ದೇವಾಲಯದ ಒಳಗೆ ವಾಹನಗಳು ಹೋಗುವ ಹಾಗೆ ಚಿಕ್ಕ-ಚಿಕ್ಕ ಕಲ್ಲಿನ ರಸ್ತೆಗಳನ್ನು ಕಾಣಬಹುದು. ಅಲ್ಲಿ ಇಳಿದು ಗಟ್ಟಿಯಾದ ದಾರವನ್ನು ಹಿಡಿದುಕೊಂಡು ಕೆಳಗೆ ಇಳಿಯಬೇಕು. ಕೆಲವು ಕಠಿಣವಾದ ದಾರಿಗಳನ್ನು ದಾಟಿ ಮತ್ತೆ ಮೇಲೆ ಏರಬೇಕು. ಹೀಗೆ ಸಾಹಸಗಳು ಮಾಡುತ್ತಾ ಹೋದರೆ ಮಾತ್ರವೇ ಸ್ವಾಮಿ ದರ್ಶನ ಪಡೆಯಲು ಸಾಧ್ಯ.

6.ಬ್ರಹ್ಮಂಗಾರಿ ಮಠದ ಸಮೀಪ

6.ಬ್ರಹ್ಮಂಗಾರಿ ಮಠದ ಸಮೀಪ

PC:B Venkata Reddy

ಕಡಪ ಜಿಲ್ಲೆ ಬ್ರಹ್ಮಂ ಅವರು ಮಠದ ಸಮೀಪ ನಲ್ಲಮಲ್ಲ ಬೆಟ್ಟದಲ್ಲಿರುವ ದಾರಿಯ ಮಾರ್ಗದಲ್ಲಿ ಸ್ವಲ್ಪ ದೂರ ಹೋದರೆ (ಸುಮಾರು 2 ಮೈಲಿ ಹೋದರೆ) ಕೆಲವು ಗುಹೆಗಳು ಕಾಣಿಸುತ್ತವೆ. ಆ ಗುಹೆಗಳು ಸುಮಾರು 100 ಇರಬಹುದು. ಅಲ್ಲಿನ ಗುಹೆಗಳಲ್ಲಿ ಶಿವನು ಗವಿ ಮಲ್ಲೇಶ್ವರನಾಗಿ ಪೂಜೆಗಳನ್ನು ಮಾಡಿಕೊಳ್ಳುತ್ತಿದ್ದಾನೆ.

7.ನೆಮಲಿಗುಂಡಂ ರಂಗನಾಥ ಸ್ವಾಮಿ ದೇವಾಲಯ

7.ನೆಮಲಿಗುಂಡಂ ರಂಗನಾಥ ಸ್ವಾಮಿ ದೇವಾಲಯ

PC:wikipedia.org

ಪ್ರಕಾಶ ಜಿಲ್ಲೆ ಗಿದ್ದಲೂರಿನಿಂದ ಒಂದುವರೆ ಕಿ.ಮೀ ದೂರದಲ್ಲಿ ದಟ್ಟವಾದ ಅರಣ್ಯ ಮಾರ್ಗದಲ್ಲಿದೆ ನೆಮಲಿಗುಂಡಂ. ಇಲ್ಲಿನ ದೇವಾಲಯವನ್ನು ಶನಿವಾರದಂದು ಬಿಟ್ಟರೆ ಬೇರೆ ಯಾವುದೇ ದಿನಗಳಲ್ಲಿಯೂ ಕೂಡ ತೆರೆಯುವುದಿಲ್ಲ. ಸಂಜೆ 6 ಆದರೆ ಸಾಕು ಅಲ್ಲಿಯಾರು ಕೂಡ ಇರುವುದಿಲ್ಲ. ಪಕ್ಕದಲ್ಲಿಯೇ ಗುಂಡ್ಲಕಮ್ಮ ನದಿಯ ಮೇಲಿನಿಂದ ಜಲಪಾತವು ಧಾರೆಯ ರೂಪದಲ್ಲಿ ಕೆಳಗೆ ಬೀಳುತ್ತಿರುತ್ತದೆ. ಈ ಜಲಪಾತವು ವರ್ಷಾದಾದ್ಯಂತ ತುಂಬಿ ವಾತಾರಣವನ್ನು ಆಹ್ಲಾದಕರವನ್ನಾಗಿಸುತ್ತದೆ.

8.ನೆಮಲಿಗುಂಡಕ್ಕೆ ಹೇಗೆ ಸೇರಿಕೊಳ್ಳಬೇಕು?

8.ನೆಮಲಿಗುಂಡಕ್ಕೆ ಹೇಗೆ ಸೇರಿಕೊಳ್ಳಬೇಕು?

PC:: Ramireddy

ನೆಮಲಿಂಗುಂಡಕ್ಕೆ ತೆರಳಬೇಕಾದರೆ ಗಿದ್ದಲೂರು, ಮಾರ್ಕಾಪುರಂ, ನಂದ್ಯಾಲದಿಂದ ಶನಿವಾರದಲ್ಲಿ ಬಸ್ಸುಗಳು ಸಂಚಾರ ಮಾಡುತ್ತವೆ. ಗಿದ್ದಲೂರಿನಿಂದ ಶೇರ್ ಆಟೋ ಗಳ ಸೌಕರ್ಯ ಕೂಡ ಇದೆ. ಪ್ರಕೃತಿ ಸೌಂದರ್ಯವನ್ನು ಅಸ್ವಾಧಿಸುತ್ತಾ.... ಇಲ್ಲಿಗೆ ತಲುಪಬಹುದು.

9.ಕೊಲನುಭಾರತಿ

9.ಕೊಲನುಭಾರತಿ

PC:: Ramireddy

ನಲ್ಲಮಲ ಅರಣ್ಯದಲ್ಲಿ ಆನೇಕ ಮಂದಿಗೆ ತಿಳಿಯದ ಮತ್ತೊಂದು ಕ್ಷೇತ್ರವೇ ಕೊಲನುಭಾರತಿ, ಕರ್ನೂಲು ಜಿಲ್ಲೆಯ ಆತ್ಮಕೂರು ಶಿವಪುರದ ನಂತರ ನಲ್ಲಮಲ ಅರಣ್ಯದಲ್ಲಿ ಈ ಕ್ಷೇತ್ರವಿದೆ. ಇಲ್ಲಿನ ಪ್ರಧಾನ ದೈವ ಸರಸ್ವತಿ ದೇವಿಯದ್ದರಿಂದ ಸಮೀಪದಲ್ಲಿಯೇ ಸಪ್ತ ಶಿವಾಲಯಗಳಿವೆ.

10.ಗುಂಡ್ಲ ಬ್ರಹ್ಮೇಶ್ವರ

10.ಗುಂಡ್ಲ ಬ್ರಹ್ಮೇಶ್ವರ

PC:: wikipedia.org

ಗುಂಡ್ಲ ಬ್ರಹ್ಮೇಶ್ವರ ಕರ್ನೂಲು ಜಿಲ್ಲೆಯ ನಂದ್ಯಾಲ, ಆತ್ಮಕೂರು ಸರಿಹದ್ದು ಮಂಡಲದಲ್ಲಿ ನಲ್ಲಮಲ ಅರಣ್ಯದಲ್ಲಿದೆ. ಈ ಪ್ರದೇಶದಲ್ಲಿ ಆಶ್ವತ್ಥಾಮ ( ದ್ರೋಣಾಚಾರ್ಯರ ಕುಮಾರ ) ಸ್ವಯಂ ಶಿವಲಿಂಗವನ್ನು ಪ್ರತಿಷ್ಟಾಪಿಸಿದನು. ಅಬ್ಬರಗೊಳಿಸುವ ಪ್ರಾಕೃತಿಕ ಸೌಂದರ್ಯದಿಂದ ತುಂಬಿರುವ ಈ ಕ್ಷೇತ್ರದಲ್ಲಿ ಅಭಯಾರಣ್ಯ, 2 ಚಿಕ್ಕದಾದ ಕೊಳಗಳು, ಪ್ರಾಚೀನವಾದ ವಿಗ್ರಹಗಳನ್ನು ಕಾಣಬಹುದು.

11.ಗುಂಡ್ಲ ಬ್ರಹ್ಮೇಶ್ವರಕ್ಕೆ ಹೇಗೆ ಸೇರಬೇಕು?

11.ಗುಂಡ್ಲ ಬ್ರಹ್ಮೇಶ್ವರಕ್ಕೆ ಹೇಗೆ ಸೇರಬೇಕು?

PC:: our nandyal

ಗುಂಡ್ಲ ಬ್ರಹ್ಮೇಶ್ವರ ಕ್ಷೇತ್ರಕ್ಕೆ ಸೇರಿಕೊಳ್ಳಬೇಕಾದರೆ ಮೊದಲು ನೀವು ಕರ್ನೂಲಿಗೆ ಅಥವಾ ನಂದ್ಯಾಲಕ್ಕೆ ಸೇರಿಕೊಳ್ಳಬೇಕು. ಕರ್ನೂಲಿನ ರೈಲ್ವೆ ನಿಲ್ದಾಣದಿಂದ 100 ಕಿ.ಮೀ ದೂರದಲ್ಲಿ, ನಂದ್ಯಾಲ ರೈಲ್ವೆ ಸ್ಟೇಷನ್‍ನಿಂದ 30 ಕಿ.ಮೀ ದೂರದಲ್ಲಿರುವ ಗುಂಡ್ಲ ಬ್ರಹ್ಮೇಶ್ವರ ಕ್ಷೇತ್ರಕ್ಕೆ ಶಿವರಾತ್ರಿಯ ಪರ್ವದಿನಗಳಂದು ವಿಶೇಷವಾಗಿ ಬಸ್ಸುಗಳು ದೊರೆಯುತ್ತವೆ.

12.ನಿತ್ಯ ಪೂಜ ಕೊನ ಕ್ಷೇತ್ರ

12.ನಿತ್ಯ ಪೂಜ ಕೊನ ಕ್ಷೇತ್ರ

PC:: Paul Bayfield

ಕಡಪ ಜಿಲ್ಲೆಯ ನಲ್ಲಮಲ ಅರಣ್ಯದಲ್ಲಿ ಕಲ್ಲು-ಮುಳ್ಳು ದಾಟಿಕೊಳ್ಳುತ್ತಾ ತೆರಳಿದರೆ ಅಲ್ಲಿ ಮತ್ತೊಂದು ಕ್ಷೇತ್ರ ಕಾಣಿಸುತ್ತದೆ. ಆ ಕ್ಷೇತ್ರವೇ ನಿತ್ಯ ಪೂಜಾ ಕೋನ. ಒಂದು ಭಾಗದಲ್ಲಿ ಆಳ ಮತ್ತೊಂದು ಭಾಗದಲ್ಲಿ ಬಂಡೆಕಲ್ಲುಗಳ ಮಧ್ಯೆ ನಿತ್ಯ ಪೂಜ ಸ್ವಾಮಿಯು ಲಿಂಗರೂಪದಲ್ಲಿ ದರ್ಶನವನ್ನು ನೀಡುತ್ತಿದ್ದಾನೆ. ಹಾಗೆಯೇ ಸ್ವಲ್ಪ ದೂರ ಮುಂದೆ ಹೋದರೆ ಅಕ್ಕ ದೇವತೆಗಳ ಕೊನಕ್ಕೂ ಸೇರಿಕೊಳ್ಳಬಹುದು.

13.ನಿತ್ಯ ಪೂಜ ಕೋನ ಕ್ಷೇತ್ರಕ್ಕೆ ಹೇಗೆ ಸೇರಬೇಕು?

13.ನಿತ್ಯ ಪೂಜ ಕೋನ ಕ್ಷೇತ್ರಕ್ಕೆ ಹೇಗೆ ಸೇರಬೇಕು?

PC:మా రాయలసీమ

ಕಡಪದಿಂದ ಸಿದ್ಧವಟಂ 33 ಕಿ.ಮೀ ದೂರದಲ್ಲಿದೆ. ಅಲ್ಲಿಂದ ದಟ್ಟವಾದ ಅರಣ್ಯ ಮಾರ್ಗದ ಮೂಲಕ ತೆರಳಿದರೆ, ನಿತ್ಯ ಪೂಜ ಕೋನ ಕ್ಷೇತ್ರಕ್ಕೆ ಸೇರಿಕೊಳ್ಳಬಹುದು. ಬೆಟ್ಟದ ಕೆಳಗೆ ಇರುವ ಪಂಚ ಲಿಂಗಗಳವರೆವಿಗೂ ಬಸ್ಸುಗಳು, ಶೇರ್ ಆಟೋಗಳು ಕೂಡ ತಿರುಗುತ್ತಿರುತ್ತವೆ.

ಪಂಚಲಿಂಗಗಳಿಂದ ಪ್ರಧಾನವಾದ ಗುಡಿಗೆ ಕಾಲ್ನಡಿಯ ಮುಖಾಂತರ ತೆರಳಬೇಕು. ದೊಡ್ಡ-ದೊಡ್ಡ ಬಂಡೆಕಲ್ಲುಗಳ ಮಧ್ಯ ಸಾಗುವ ಈ ನಡಿಗೆಯ ಮಾರ್ಗವು ಅತ್ಯಂತ ಆಹ್ಲಾದಕರವಾಗಿ ಇದ್ದು, ಟ್ರೆಕ್ಕಿಂಗ್‍ನ ಅನುಭವವನ್ನು ಉಂಟು ಮಾಡುತ್ತದೆ.