Search
  • Follow NativePlanet
Share
» »ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುವ ಮಹಿಮಾನ್ವಿತ ಸರ್ಪ ದೇವಾಲಯ

ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುವ ಮಹಿಮಾನ್ವಿತ ಸರ್ಪ ದೇವಾಲಯ

ನಮ್ಮ ಭಾರತ ದೇಶದಲ್ಲಿನ ಒಂದೊಂದು ದೇವಾಲಯಕ್ಕೆ ತನ್ನದೇ ಆದ ಮಹತ್ವವಿರುತ್ತದೆ. ಆದರೆ ವರ್ಷಕ್ಕೆ ಕೆಲವೇ ದಿನಗಳು ಮಾತ್ರ ದೇವಾಲಯದ ದ್ವಾರವನ್ನು ತೆಗೆಯುತ್ತಾರೆ ಎಂಬ ಹಲವಾರು ದೇವಾಲಯಗಳ ಮಾಹಿತಿಯನ್ನು ನೀವು ಈಗಾಗಲೇ ಪಡೆದುಕೊಂಡಿದ್ದೀರಾ. ಆದರೆ ವರ್

ನಮ್ಮ ಭಾರತ ದೇಶದಲ್ಲಿನ ಒಂದೊಂದು ದೇವಾಲಯಕ್ಕೆ ತನ್ನದೇ ಆದ ಮಹತ್ವವಿರುತ್ತದೆ. ಆದರೆ ವರ್ಷಕ್ಕೆ ಕೆಲವೇ ದಿನಗಳು ಮಾತ್ರ ದೇವಾಲಯದ ದ್ವಾರವನ್ನು ತೆಗೆಯುತ್ತಾರೆ ಎಂಬ ಹಲವಾರು ದೇವಾಲಯಗಳ ಮಾಹಿತಿಯನ್ನು ನೀವು ಈಗಾಗಲೇ ಪಡೆದುಕೊಂಡಿದ್ದೀರಾ. ಆದರೆ ವರ್ಷಕ್ಕೆ ಒಮ್ಮೆ ಮಾತ್ರ ದೇವಾಲಯಗಳು ತೆರೆಯುವ ಬಗ್ಗೆ ನಿಮಗೆಷ್ಟು ಗೊತ್ತು.

ಆಶ್ಚರ್ಯ ಏನಪ್ಪ ಎಂದರೆ ಅಂಥಹ ದೇವಾಲಯ ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಇರುವುದು. ಹಾಗೆಯೇ ಇನ್ನೊಂದು ದೇವಾಲಯ ಎಂದರೆ ಉಜ್ಜಯಿನಿಯಲ್ಲಿನ ಒಂದು ಸರ್ಪ ದೇವಾಲಯ. ಹಾಗಾದರೆ ಲೇಖನದ ಮೂಲಕ ಆ 2 ದೇವಾಲಯದ ಬಗ್ಗೆ ಮಾಹಿತಿಯನ್ನು ಪಡೆಯೋಣ.

ವರ್ಷಕ್ಕೆ ಕೇವಲ ಒಂದು ದಿನ ಮಾತ್ರ ತೆರಯುವ ಆ ದೇವಾಲಯಗಳಿಗೆ ಏನಾದರೂ ವಿಶೇಷತೆ ಇರಲೇಬೇಕು ಅಲ್ಲವೇ? ಹಾಗಾದರೆ ಆ ವಿಶೇಷವೇನು? ಎಂಬುದರ ಬಗ್ಗೆ ತಿಳಿಯಿರಿ.

ಉಜ್ಜಯಿನಿಯ ದೇವಾಲಯ

ಉಜ್ಜಯಿನಿಯ ದೇವಾಲಯ

ಈ ಉಜ್ಜಯಿನಿಯಲ್ಲಿನ ನಾಗಚಂದ್ರಶ್ವೇರ ದೇವಾಲಯವು ವರ್ಷದಲ್ಲಿ ಒಂದು ದಿನ ಮಾತ್ರ ತೆರದಿರುತ್ತದೆ. ಆ ದೇವಾಲಯ ವಿಶೇಷವನ್ನು ಒಮ್ಮೆ ತಿಳಿಯೋಣ. ಹೆಸರೇ ಸೂಚಿಸುವಂತೆ ಇಲ್ಲಿ ನೆಲೆಸಿರುವುದು ನಾಗ ಸರ್ಪಗಳು. ನಮ್ಮ ಹಿಂದೂ ಧರ್ಮದಲ್ಲಿ ನಾಗಗಳಿಗೆ ಅದರದೇ ಆದ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಭಕ್ತರು ಅತ್ಯಂತ ಶ್ರದ್ಧೆ, ಭಕ್ತಿಯಿಂದ ನಾಗದೇವತೆಗಳನ್ನು ಪೂಜಿಸುತ್ತಾರೆ.

ಉಜ್ಜಯಿನಿಯ ದೇವಾಲಯ

ಉಜ್ಜಯಿನಿಯ ದೇವಾಲಯ

ನಾಗಗಳನ್ನು ನಮ್ಮ ಹಿಂದೂ ದೇವತೆಗಳ ಅಭರಣಗಳಾಗಿ ಬಳಸಲಾಗುತ್ತದೆ. ನಮ್ಮ ಭಾರತ ದೇಶದಲ್ಲಿ ಹಲವಾರು ನಾಗದೇವತೆಗಳ ಪುಣ್ಯಕ್ಷೇತ್ರಗಳು ಇವೆ. ಅವುಗಳಲ್ಲಿ ಪ್ರಮುಖವಾದುದು ಹಾಗು ವಿಭಿನ್ನವಾದುದು ಎಂದರೆ ಉಜ್ಜಯಿನಿಯಲ್ಲಿನ ನಾಗಚಂದ್ರೇಶ್ವರ ದೇವಾಲಯ. ಉಜ್ಜಯಿನಿಯಲ್ಲಿನ ಮಹಾಕಾಲ ಮಂದಿರದಲ್ಲಿನ 3 ನೇ ಹಂತದದಲ್ಲಿ ನಾಗಚಂದ್ರೇಶ್ವರ ದೇವಾಲಯವು ಇದೆ.

ಉಜ್ಜಯಿನಿಯ ದೇವಾಲಯ

ಉಜ್ಜಯಿನಿಯ ದೇವಾಲಯ

ಈ ವಿಭಿನ್ನ ಹಾಗು ವಿಶೇಷವಾದ ದೇವಾಲಯವು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯಲಾಗುತ್ತದೆ. ಆ ದಿನ ಯಾವುದು ಎಂದರೆ ಶ್ರಾವಣ ಶುಕ್ಲ ಪಂಚಮಿಯ ದಿನದಂದು ಮಾತ್ರ. ಆ ಒಂದು ದಿನ ಮಾತ್ರ ಭಕ್ತರಿಗೆ ದೇವಾಲಯಕ್ಕೆ ಪ್ರವೇಶವನ್ನು ನೀಡುತ್ತಾರೆ. ಆ ಒಂದು ದಿನ ಸರ್ಪ ರಾಜ ಎಂದು ಭಾವಿಸುವ ತಕ್ಷಕನು ಆ ದೇವಾಲಯದಲ್ಲಿಯೇ ಇರುತ್ತಾನೆ ಎಂದು ಭಕ್ತರ ನಂಬಿಕೆಯಾಗಿದೆ.

ಉಜ್ಜಯಿನಿಯ ದೇವಾಲಯ

ಉಜ್ಜಯಿನಿಯ ದೇವಾಲಯ

ನಾಗಚಂದ್ರೇಶ್ವರ ದೇವಾಲಯದಲ್ಲಿ 11 ನೇ ಶತಮಾನಕ್ಕೆ ಸೇರಿದ ಅದ್ಭುತವಾದ ಪ್ರತಿಮೆ ಇದೆ. ಇದರಲ್ಲಿ ಹೆಡೆಯನ್ನು ಎತ್ತಿರುವ ಹಾವಿನ ಪ್ರತಿಮೆಯ ಮೇಲೆ ಹಾಸನವಾಗಿ ಕುಳಿತಿರುವ ಶಿವ ಮತ್ತು ಪಾರ್ವತಿಯನ್ನು ಕಾಣಬಹುದು. ಈ ಅಪ್ರತಿಮ ಪ್ರತಿಮೆಯನ್ನು ನೇಪಾಳ ದೇಶದಿಂದ ತರಿಸಲಾಯಿತು ಎಂದು ಹೇಳಲಾಗುತ್ತದೆ.

ಉಜ್ಜಯಿನಿಯ ದೇವಾಲಯ

ಉಜ್ಜಯಿನಿಯ ದೇವಾಲಯ

ಉಜ್ಜಯಿನಿಯಲ್ಲಿ ಬಿಟ್ಟು ಇಂಥಹ ವಿಗ್ರಹ ಪ್ರಪಂಚದಲ್ಲಿ ಬೇರೆಲ್ಲೂ ಇಲ್ಲ ಎಂದು ಹೇಳುತ್ತಾರೆ. ಸಾಧರಣಾವಾಗಿ ನಾಗ ಸರ್ಪದ ಮೇಲೆ ಶ್ರೀ ಮಹಾ ವಿಷ್ಣು ಮಾತ್ರ ಪವಣಿಸಿರುತ್ತಾನೆ. ಆದರೆ ಪರಮಶಿವನು ಪವಣಿಸಿದ ದಾಖಲೆಗಳು ಎಲ್ಲಿಯೂ, ಎಂದಿಗೂ ಕೇಳಿಸಿಕೊಂಡಿಲ್ಲ. ಆದರೆ ಉಜ್ಜಯಿನಿಯಲ್ಲಿ ಪ್ರಪಂಚದಲ್ಲಿ ಬೇರೆಲ್ಲೂ ಕಾಣಲಾಗದ ವಿಗ್ರಹವನ್ನು ಇಲ್ಲಿ ಕಾಣಬಹುದು.

ಉಜ್ಜಯಿನಿಯ ದೇವಾಲಯ

ಉಜ್ಜಯಿನಿಯ ದೇವಾಲಯ

ನಾಗ ಸರ್ಪದ ಹಾಸನದ ಮೇಲೆ ಕೇವಲ ಶಿವಪಾರ್ವತಿಯೇ ಅಲ್ಲದೇ ಮುದ್ದು ಮಗನಾದ ಗಣಪತಿಯು ಕೂಡ ಇರುವುದನ್ನು ಕಾಣಬಹುದು. ಈ ಅದ್ಭುತವಾದ ದೃಶ್ಯವನ್ನು ಕಾಣಲು 2 ಕಣ್ಣುಗಳು ಸಾಲದು.

ಉಜ್ಜಯಿನಿಯ ದೇವಾಲಯ

ಉಜ್ಜಯಿನಿಯ ದೇವಾಲಯ

ನಾಗ ಸರ್ಪದ ಮೇಲೆ ಮಹಾಶಿವನು ಪವಣಿಸಿದ ಹಿಂದೆ ಒಂದು ಸುಂದರವಾದ ಕಥೆಯು ಪ್ರಚಾರದಲ್ಲಿದೆ. ಅದೆನೆಂದರೆ ಸರ್ಪರಾಕನಾದ ತಕ್ಷಕನು ಪರಮೇಶ್ವರನ ಅನುಗ್ರಹಕ್ಕಾಗಿ ಕಠಿಣವಾದ ತಪಸ್ಸನ್ನು ಆಚರಿಸುತ್ತಾನೆ. ಪ್ರಸನ್ನನಾದ ಮಹಾ ಶಿವನು ತಕ್ಷನಿಗೆ ಅಮರತ್ವವನ್ನು ಪ್ರಸಾದಿಸಿದನಂತೆ.

ಉಜ್ಜಯಿನಿಯ ದೇವಾಲಯ

ಉಜ್ಜಯಿನಿಯ ದೇವಾಲಯ

ಅಂದಿನಿಂದ ತಕ್ಷಕನು ಶಿವನ ಸಾನಿಧ್ಯದಲ್ಲಿಯೇ ಇದ್ದುಬಿಟ್ಟನೆಂದು ಹೇಳುತ್ತಾರೆ. 1050 ವರ್ಷದಲ್ಲಿ ಭೋಜರಾಜ ಈ ಮಂದಿರವನ್ನು ನಿರ್ಮಾಣ ಮಾಡಿದನು. ತದನಂತರ ಸಿಂದಿಯ ವಂಶಕ್ಕೆ ಸೇರಿದ ರಾಣೋಜಿ ಮಹಾರಾಜ್ ದೇವಾಲಯದ ಜೀರ್ಣೋಧಾರಣೆ ಮಾಡಿದನು. ಈ ದೇವಾಲಯವನ್ನು ಒಮ್ಮೆ ದರ್ಶನ ಭಾಗ್ಯ ಪಡೆದರೆ ಸಾಕು ಸರ್ಪ ದೋಷಗಳೆಲ್ಲವೂ ತೊಲಗಿ ಹೋಗುತ್ತದೆ ಎಂತೆ.

ಉಜ್ಜಯಿನಿಯ ದೇವಾಲಯ

ಉಜ್ಜಯಿನಿಯ ದೇವಾಲಯ

ಹಾಗಾಗಿಯೇ ನಾಗ ಪಂಚಮಿಯಂದು ಈ ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ನಾಗಚಂದ್ರೇಶ್ವರನನ್ನು ದರ್ಶನ ಮಾಡಿ ಪುನೀತರಾಗುತ್ತಾರೆ. ಈ ಒಂದೇ ದಿನ ಸುಮಾರು 2 ಲಕ್ಷಕ್ಕಿಂತ ಹೆಚ್ಚು ಮಂದಿ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಉಜ್ಜಯಿನಿಯ ದೇವಾಲಯ

ಉಜ್ಜಯಿನಿಯ ದೇವಾಲಯ

ಎಲ್ಲಿದೆ?
ಈ ಮಾಹಿಮಾನ್ವಿತ ದೇವಾಲಯವು ಮಧ್ಯಪ್ರದೇಶದಲ್ಲಿನ ಸಮೀಪ ಇಡೋರ್ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ದೇವಾಲಯಕ್ಕೆ ಕೇವಲ 55 ಕಿ.ಮೀ ದೂರದಲ್ಲಿದೆ. ಭೋಪಾಲ್ ವಿಮಾನ ನಿಲ್ದಾಣದಿಂದ 172 ಕಿ.ಮೀ ದೂರದಲ್ಲಿದೆ.

ಕರ್ನಾಟಕದ ಹಾಸನಾಂಭ ದೇವಾಲಯ

ಕರ್ನಾಟಕದ ಹಾಸನಾಂಭ ದೇವಾಲಯ

ವರ್ಷಕ್ಕೆ ಒಮ್ಮೆ ತೆರೆಯುವ ಮಾಹಿಮಾನ್ವಿತ ದೇವಾಲಯ ನಮ್ಮ ಕರ್ನಾಟಕದಲ್ಲಿ ಹಾಸನ ಜಿಲ್ಲೆಯಲ್ಲಿಯೂ ಇದೆ. ಆ ಮಹಿಮಾನ್ವಿತವಾದ ದೇವಾಲಯವೇ ಹಾಸನಾಂಭ ದೇವಾಲಯವಾಗಿದೆ. ಬೆಂಗಳೂರಿನಿಂದ ಈ ದೇವಾಲಯಕ್ಕೆ ಸುಮಾರು 185 ಕಿ.ಮೀ ದೂರವಿದೆ. ಸುಮಾರು 3 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ.

ಕರ್ನಾಟಕದ ಹಾಸನಾಂಭ ದೇವಾಲಯ

ಕರ್ನಾಟಕದ ಹಾಸನಾಂಭ ದೇವಾಲಯ

ಈ ಹಾಸನಾಂಭ ದೇವಾಲಯವನ್ನು ಕ್ರಿ.ಶ 12 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು. ಅತ್ಯಂತ ಪ್ರಾಚೀನವಾದುದು ಎಂದು ಹೇಳಬಹುದಾಗಿದೆ. ಇಲ್ಲಿನ ಗರ್ಭಗುಡಿಯಲ್ಲಿ ಹಾಸನಾಂಭ ಎಂಬ ದೇವತೆಯನ್ನು ಭಕ್ತಿ, ಶ್ರದ್ಧೆಯಿಂದ ಆರಾಧಿಸುತ್ತಾರೆ. ಈ ದೇವಾಲಯವನ್ನು 1 ವರ್ಷಕ್ಕೆ ಮಾತ್ರ ತೆರೆಯುತ್ತಾರೆ. ಈ ಹಾಸನಾಂಭ ದೇವಾಲಯವನ್ನು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುತ್ತಾರೆ. ಆ ವಿಶೇಷವಾದ ದಿನ ಯಾವುದು ಎಂದರೇ ದೀಪಾವಳಿ ಹಬ್ಬದಂದು. ದೀಪಾವಳಿ ಹಬ್ಬದ ಸಮಯದಲ್ಲಿ ಒಂದು ದಿನದ ಮಟ್ಟಿಗೆ ಮಾತ್ರ ದೇವಾಲಯವನ್ನು ತೆರೆಯುತ್ತಾರೆ.

ಕರ್ನಾಟಕದ ಹಾಸನಾಂಭ ದೇವಾಲಯ

ಕರ್ನಾಟಕದ ಹಾಸನಾಂಭ ದೇವಾಲಯ

ದೀಪಾವಳಿ ಹಬ್ಬದಂದು ಮಾತ್ರ ತೆರೆದಿರುವ ಈ ದೇವಾಲಯವು ವರ್ಷವೆಲ್ಲಾ ಮುಚ್ಚಿರುತ್ತದೆ. ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯದಲ್ಲಿ ದೀಪ ಬೆಳಗುವುದು. ಇದರಲ್ಲಿ ಏನು ವಿಷೇಶ ಎಂದು ಅಂದುಕೊಳ್ಳುತ್ತಿದ್ದೀರಾ? ಇಲ್ಲಿನ ಆಶ್ಚರ್ಯಕರವಾದ ಸಂಗತಿ ಏನೆಂದರೆ ಹಾಸನಂಭ ದೇವಾಲಯ ಗರ್ಭಗುಡಿಯಲ್ಲಿ ದೀಪಾವಳಿ ಹಬ್ಬದ ರಾತ್ರಿಯಂದು ದೀಪಗಳನ್ನು ಬೆಳಗಿ ಅಲ್ಲಿಂದ ಪೂಜಾರಿಗಳು ಹೊರಡುತ್ತಾರೆ.

ಕರ್ನಾಟಕದ ಹಾಸನಾಂಭ ದೇವಾಲಯ

ಕರ್ನಾಟಕದ ಹಾಸನಾಂಭ ದೇವಾಲಯ

ದೀಪವನ್ನು ಬೆಳಗಿ ಒಂದು ವರ್ಷಕ್ಕೆ ಸರಿಯಾಗಿ ಅಂದರೆ ಮತ್ತೊಂದು ದೀಪಾವಳಿಯ ದಿನದಂದು ದೇವಾಲಯದ ಗರ್ಭ ಗುಡಿಯ ಬಾಗಿಲನ್ನು ತೆರೆದರೆ ಕಳೆದ ವರ್ಷ ಬೆಳಗಿದ ದೀಪವು ಇನ್ನೂ ಹಾಗೆಯೇ ಬೆಳಗುತ್ತಾ ಇರುತ್ತದೆ. ಎಣ್ಣೆಯಿಂದ ಬೆಳಗಿದ ದೀಪವು ತಾಯಿಯ ಗರ್ಭಗುಡಿಯಲ್ಲಿ ಒಂದು ವರ್ಷಗಳ ಕಾಲ ಬೆಳಗುತ್ತಾ ಇರಲು ಯಾವ ಶಕ್ತಿ ಸಹಾಯ ಮಾಡುತ್ತಿರುವುದು ಎಂಬುದು ಆ ಹಾಸನಾಂಭ ದೇವಿಯೊಬ್ಬಳಿಗೆ ಮಾತ್ರ ಗೊತ್ತ.

ಕರ್ನಾಟಕದ ಹಾಸನಾಂಭ ದೇವಾಲಯ

ಕರ್ನಾಟಕದ ಹಾಸನಾಂಭ ದೇವಾಲಯ

ವಿಮಾನ ನಿಲ್ದಾಣ
ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮೈಸೂರು ವಿಮಾನ ನಿಲ್ದಾಣ. ಇಲ್ಲಿಂದ ಹಾಸನಕ್ಕೆ ಸುಮಾರು 136 ಕಿ.ಮೀ ದೂರದಲ್ಲಿದೆ.

ರಸ್ತೆ ಮಾರ್ಗವಾಗಿ
ಬೆಂಗಳೂರಿನಿಂದ ಹಾಸನಕ್ಕೆ ನೇರವಾದ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಸೌಕರ್ಯವಿದೆ. ಮೈಸೂರಿನಿಂದ 115 ಕಿ.ಮೀ ದೂರ, ಬೆಂಗಳೂರಿನಿಂದ 186 ಕಿ.ಮೀ ದೂರ, ಮಂಗಳೂರಿನಿಂದ 172 ಕಿ.ಮೀ ದೂರದಲ್ಲಿದೆ.

ರೈಲ್ವೆ ನಿಲ್ದಾಣ
ಹಾಸನಾಂಭ ದೇವಾಲಯಕ್ಕೆ ಸಮೀಪವಾದ ರೈಲ್ವೆ ನಿಲ್ದಾಣವೆಂದರೆ ಹರಸಿಕೆರೆ ರೈಲ್ವೆ ಸ್ಟೇಷನ್. ಇಲ್ಲಿಂದ 38 ಕಿ.ಮೀ ದೂರದಲ್ಲಿದೆ.

ಇದು ಅದ್ಭುತ ವಾಸ್ತುಶಿಲ್ಪವನ್ನು ಹೊಂದಿರುವ ಭೋಗ ನಂದೀಶ್ವರ ದೇವಾಲಯಇದು ಅದ್ಭುತ ವಾಸ್ತುಶಿಲ್ಪವನ್ನು ಹೊಂದಿರುವ ಭೋಗ ನಂದೀಶ್ವರ ದೇವಾಲಯ

<strong></strong>ಶಿಲೆಯಾದ ಶ್ರೀ ಮಹಾವಿಷ್ಣುವಿನ ಮೂರ್ತಿ ಎಲ್ಲಿದೆ ಗೊತ್ತ?ಶಿಲೆಯಾದ ಶ್ರೀ ಮಹಾವಿಷ್ಣುವಿನ ಮೂರ್ತಿ ಎಲ್ಲಿದೆ ಗೊತ್ತ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X