Search
  • Follow NativePlanet
Share
» » ಚಪ್ಪಾಳೆ ಹೊಡೆದ್ರೆ ಸಾಕು ಕುಂಡದ ನೀರು ಮೇಲೆ ಬರುತ್ತಂತೆ!

ಚಪ್ಪಾಳೆ ಹೊಡೆದ್ರೆ ಸಾಕು ಕುಂಡದ ನೀರು ಮೇಲೆ ಬರುತ್ತಂತೆ!

ನೀವು ನಮ್ಮ ದೇಶದಲ್ಲಿರುವ ಬಹಳಷ್ಟು ತೀರ್ಥದ ಬಗ್ಗೆ ಕೇಳಿರುವಿರಿ. ಅವುಗಳಲ್ಲಿ ಕೆಲವು ಭವಿಷ್ಯದ ಆಪತ್ತಿನ ಬಗ್ಗೆ ಸೂಚನೆ ನೀಡುವಂತಹದ್ದಾಗಿದ್ದರೆ. ಇನ್ನೂ ಕೆಲವು ಔಷಧೀಯ ಗುಣಗಳನ್ನು ಹೊಂದಿರುವಂತಹದ್ದು. ಇಂತಹ ವಿಶೇಷ ತೀರ್ಥಗಳಲ್ಲಿ ಸ್ನಾನ ಮಾಡಲು ಭಕ್ತರು ದೂರದೂರದ ಊರುಗಳಿಂದ ಆಗಮಿಸುತ್ತಾರೆ. ಅಂತಹದ್ದೆ ಅನೇಕ ತೀರ್ಥಗಳು ನಮ್ಮ ದೇಶದಲ್ಲಿವೆ. ಅವುಗಳ ರಹಸ್ಯ ಇನ್ನೂ ಹಾಗೆಯೇ ಉಳಿದಿದೆ.

 ಚಪ್ಪಾಳೆ ಹೊಡೆದ್ರೆ ಸಾಕು

ಚಪ್ಪಾಳೆ ಹೊಡೆದ್ರೆ ಸಾಕು

ಇಂದು ನಾವು ಅಂತದದ್ದೇ ಒಂದು ವಿಶೇಷ ತೀರ್ಥದ ಬಗ್ಗೆ ತಿಳಿಸಲಿದ್ದೇವೆ. ಜಾರ್ಖಂಡ್‌ನ ಬುಕರ್ ಜಿಲ್ಲೆಯಲ್ಲಿ ಒಂದು ತೀರ್ಥವಿದೆ. ಇದರ ವಿಶೇಷತೆ ಎಂದರೆ ನೀವು ಚಪ್ಪಾಳೆ ಹೊಡೆದ್ರೆ ಸಾಕು ತೀರ್ಥದಿಂದ ನೀರು ಮೇಲೆ ಬರುತ್ತಂತೆ. ಬೋಕರೋ ಸಿಟಿಯಿಂದ ಸುಮಾರು 27 ಕಿ.ಮೀ ದೂರ ಇರುವ ಈ ಕುಂಡದಲ್ಲಿ ಸ್ನಾನ ಮಾಡಲು ಜನರು ದೂರದೂರದಿಂದ ಆಗಮಿಸುತ್ತಾರೆ.

ಇದು ಅಪ್ಸರೆಯರ ಲೋಕ: ದೇವಲೋಕದ ಅಪ್ಸರೆಯರಿದ್ದಾರಂತೆ ಇಲ್ಲಿ ಇದು ಅಪ್ಸರೆಯರ ಲೋಕ: ದೇವಲೋಕದ ಅಪ್ಸರೆಯರಿದ್ದಾರಂತೆ ಇಲ್ಲಿ

ಚರ್ಮರೋಗ ನಿವಾರಣೆ

ಚರ್ಮರೋಗ ನಿವಾರಣೆ

PC: youtube

ಈ ನೀರಿನಲ್ಲಿ ಒಮ್ಮೆ ಸ್ನಾನಮಾಡಿದ್ರೆ ಚರ್ಮರೋಗ ನಿವಾರಣೆಯಾಗುತ್ತಂತೆ. ಔಷಧೀಯ ಗುಣವನ್ನು ಹೊಂದಿದೆ ಎನ್ನಲಾಗುತ್ತದೆ. ಹಾಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಬೇಸಿಗೆಯಲ್ಲಿ ತಣ್ಣಗೆ ನೀರು ಹಾಗೂ ಚಳಿಗಾಲದಲ್ಲಿ ಬಿಸಿನೀರು ಬರುತ್ತಂತೆ.

 ಬಿಸಿನೀರು ಕುದಿಯುವಷ್ಟು ವೇಗ

ಬಿಸಿನೀರು ಕುದಿಯುವಷ್ಟು ವೇಗ

PC: youtube

ಈ ತೀರ್ಥದ ನೀರು ಒಂದು ಪಾತ್ರೆಯಲ್ಲಿ ಬಿಸಿನೀರು ಕುದಿಯುವಷ್ಟು ವೇಗದಲ್ಲಿ ನೀರು ಮೇಲೆ ಬರುತ್ತದಂತೆ. ಇಲ್ಲಿ ನೀರು ಎಲ್ಲಿಂದ ಬರುತ್ತದೆ ಎನ್ನುವುದು ಇನ್ನೂ ನಿಗೂಢ. ಎಷ್ಟೆಲ್ಲಾ ವೈಜ್ಞಾನಿಕತೆಯನ್ನು ಬಳಸಿದರೂ ಈ ರಹಸ್ಯವನ್ನು ಮಾತ್ರ ಭೇಧೀಸಲು ಇನ್ನೂ ಸಾಧ್ಯವಾಗಿಲ್ಲ.

ಧ್ವನಿತರಂಗಗಳ ಪ್ರಭಾವ

ಧ್ವನಿತರಂಗಗಳ ಪ್ರಭಾವ

PC: youtube

ಚಪ್ಪಾಳೆ ತಟ್ಟುವುದರಿಂದ ಈ ತೀರ್ಥದ ನೀರಿನ ಮೇಲೆ ಧ್ವನಿತರಂಗಗಳ ಪ್ರಭಾವ ಬೀರುತ್ತದೆ ಎನ್ನಲಾಗುತ್ತದೆ. ಆದರೆ ಅದು ಮೇಲಕ್ಕೆ ಹೇಗೆ ಬರುವುದು ಎನ್ನುವುದನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಈ ತೀರ್ಥದ ನೀರು ಗರ್ಗಾ ನದಿಯನ್ನು ತಲುಪುತ್ತದೆ ಎನ್ನಲಾಗುತ್ತದೆ.

ದಲಾಯಿ ಕುಂಡ

ದಲಾಯಿ ಕುಂಡ

ಈ ತೀರ್ಥದಲ್ಲಿ ನೀವು ಏನಾದರೂ ಬೇಡಿಕೊಂಡರೆ ನಿಮ್ಮ ಇಚ್ಛೆ ಈಡೇರುತ್ತದಂತೆ. ಇಲ್ಲಿ ಮಕರ ಸಂಕ್ರಾತಿ ಉತ್ಸವವೂ ನಡೆಯುತ್ತದೆ. ದಲಾಯಿ ಕುಂಡ ಎಂದು ಕರೆಯಲಾಗುತ್ತದೆ. ಇಲ್ಲಿನ ನೀರು ಬಹಳ ಶುಭ್ರವಾಗಿದೆ. ಈ ತೀರ್ಥವು ಕಾಂಕ್ರಿಟ್ ಗೋಡೆಗಳಿಂದ ಸುತ್ತುವರಿದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X