• Follow NativePlanet
Share
» »ಇಲ್ಲಿ ಹುಟ್ಟುವ ಮಕ್ಕಳೆಲ್ಲಾ ಅವಳಿ-ಜವಳಿ

ಇಲ್ಲಿ ಹುಟ್ಟುವ ಮಕ್ಕಳೆಲ್ಲಾ ಅವಳಿ-ಜವಳಿ

Written By:

ಪ್ರತಿಯೊಂದು ಹೆಣ್ಣಿಗೆ ತಾಯಿತನ ಜೀವನದಲ್ಲಿ ಅತಿ ಮುಖ್ಯವಾದುದು. ಒಂದು ಮಗುವಿನ ತಾಯಿಯಾಗಬೇಕಾದರೆ ಆಕೆ ಹುಟ್ಟಿ ಮತ್ತೆ ಬದುಕಬೇಕು. ತಾಯಿಯ ಕರುಳ ಬಳ್ಳಿಯ ವಾತ್ಸಾಲ್ಯ ಜೀವನದಲ್ಲಿ ಆ ಸ್ಥಾನ ಯಾರು ತುಂಬಲಾರರು. ಸಾಮಾನ್ಯವಾಗಿ ಮಕ್ಕಳೆಂದರೆ ಎಲ್ಲರಿಗೂ ಇಷ್ಟ. ಪುಟ್ಟದಾದ ಮಗು ತನ್ನ ಚಿಕ್ಕ ಚಿಕ್ಕ ಕಾಲುಗಳಿಂದ ಮನೆಯಲ್ಲಾ ಓಡಾಡುತ್ತಿದ್ದರೆ ಎಷ್ಟು ಆನಂದವಾಗುತ್ತದೆ ಅಲ್ಲವೇ? ಪ್ರತಿಯೊಂದು ಮಹಿಳೆಗು ಅವಳಿ ಮಕ್ಕಳಿದ್ದರೆ ಎಷ್ಟು ಚೆನ್ನಾ ಎಂದು ಅನ್ನಿಸದೇ ಇದರು. ಒಂದೇ ರೂಪ ಅಥವಾ ಬೇರೆ ಬೇರೆ ರೂಪಗಳನ್ನು ಹೊಂದಿದ್ದು ಒಂದೇ ಬಾರಿಗೆ ಇಬ್ಬರು ಮಕ್ಕಳ ಜನನ ಮನೆಯಲ್ಲಿ ಹಬ್ಬದ ವಾತಾವರಣವೇ ಉಂಟು ಮಾಡುತ್ತದೆ.

ನಮ್ಮ ಭಾರತ ದೇಶದಲ್ಲಿ ಒಂದು ವಿಚಿತ್ರವಾದ ಗ್ರಾಮವಿದೆ. ಆಶ್ಚರ್ಯ ಏನಪ್ಪ ಎಂದರೆ ಅ ಗ್ರಾಮದಲ್ಲಿ ಹುಟ್ಟುವ ಮಕ್ಕಳೆಲ್ಲಾ ಅವಳಿ-ಜವಳಿಗಳೇ. ಈ ಊರಿನಲ್ಲಿನ ಸೊಸೆಯಂದಿರರಿಗೆ ಹಾಗು ಈ ಊರಿನ ಹೆಣ್ಣು ಮಕ್ಕಳಿಗೆ ಕೂಡ ಅವಳಿ ಮಕ್ಕಳುಗಳು ಹುಟ್ಟುತ್ತವೆ. ಈ ವಿಶೇಷದ ಬಗ್ಗೆ ಹಲವಾರು ಸಂಶೋಧಕರು ಈ ಗ್ರಾಮವನ್ನು ಪರೀಕ್ಷಿಸಿದರೂ ಕೂಡ ಉತ್ತರ ಹುಡುಕಲು ವಿಫಲರಾದರು. ಇದು ಕೂಡ ಭಾರತದ ಅತ್ಯಂತ ರಹಸ್ಯವನ್ನು ಹೊಂದಿರುವ ಸ್ಥಳ ಇದಾಗಿದೆ. ಹಾಗಾದರೆ ಇಂಥಹ ವಿಚಿತ್ರ ಹಳ್ಳಿಯ ಬಗ್ಗೆ ಮಾಹಿತಿಯನ್ನು ಪಡೆಯಲೇಬೇಕು ಅಲ್ಲವೇ?

ಪ್ರಸ್ತುತ ಲೇಖನದಲ್ಲಿ ಅಂತಹ ವಿಚಿತ್ರವಾದ ಗ್ರಾಮದ ಬಗ್ಗೆ ಮಾಹಿತಿಯನ್ನು ಪಡೆಯೋಣ.

ಎಲ್ಲಿದೆ?

ಎಲ್ಲಿದೆ?

ಅವಳಿ ಮಕ್ಕಳ ಜನನ ಆಗುವ ವಿಚಿತ್ರವಾದ ಗ್ರಾಮವು ಕೇರಳ ರಾಜ್ಯದಲ್ಲಿದೆ. ಕೇರಳದ ಮಲ್ಲಾಪುರ ಎಂಬ ಗ್ರಾಮದಲ್ಲಿ ಕುಂದಿನಿ ಎಂಬ ಗ್ರಾಮದಲ್ಲಿ. ಈ ಗ್ರಾಮವು ತಿರುರಂಗಡಿಯ ಸಮೀಪದಲ್ಲಿದೆ. ಇಲ್ಲಿ ಸುಮಾರು 2,00 ಕುಟುಂಬಗಳು ವಾಸಿಸುತ್ತಿವೆ. ಎಲ್ಲಾ ಮನೆಗಳಲ್ಲಿಯೂ ಅವಳಿ ಮಕ್ಕಳು ಇರುವುದು ವಿಶೇಷ.

ಹೆಸರುವಾಸಿ

ಹೆಸರುವಾಸಿ

ಈ ಸುಂದರವಾದ ಗ್ರಾಮದಲ್ಲಿ ಅವಳಿ ಮಕ್ಕಳ ಪ್ರಮಾಣ ಹೆಚ್ಚಾಗಿರುವುದರಿಂದ ಪ್ರಸಿದ್ಧವಾಗಿದೆ. ಆದರೂ ಸಹ ಭಾರತ ದೇಶವು ವಿಶ್ವದಲ್ಲಿಯೇ ಅತಿ ಕಡಿಮೆ ಅವಳಿ ದರವನ್ನು ಹೊಂದಿದೆ. ಈ ಗ್ರಾಮದಲ್ಲಿನ ಅವಳಿ ಮಕ್ಕಳ ಜನನಕ್ಕೆ ಹಲವಾರು ಸಂಶೋಧನೆಗಳು ನಡೆದಿವೆ.

ಅವಳಿ ಮಕ್ಕಳು

ಅವಳಿ ಮಕ್ಕಳು

ಆಶ್ಚರ್ಯ ಏನಪ್ಪ ಎಂದರೆ ಈ ಗ್ರಾಮದಲ್ಲಿ ಒಟ್ಟು 400 ಕ್ಕಿಂತ ಹೆಚ್ಚು ಅವಳಿ ಮಕ್ಕಳು ಇದ್ದಾರೆ. ಹಾಗೆಯೇ ತ್ರಿವಳಿ ಮಕ್ಕಳು ಕೂಡ ಇರುವುದನ್ನು ಕಾಣಬಹುದು. ಈ ಗ್ರಾಮದಲ್ಲಿ ಮಾತ್ರ ಅವಳಿ ಮಕ್ಕಳು ಜನಿಸಲು ಕಾರಣವೇನು ಎಂಬ ಪ್ರೆಶ್ನೆಗೆ ಹಲವಾರು ಅಧ್ಯಯನಗಳು ನಡೆಸಿದರೂ ಕೂಡ ನಿಖರವಾದ ಕಾರಣ ಗುರುತಿಸಲಾಗಲಿಲ್ಲ.

ವೈದ್ಯರ ಪ್ರಕಾರ

ವೈದ್ಯರ ಪ್ರಕಾರ

ಈ ಗ್ರಾಮದಲ್ಲಿ ಹುಟ್ಟುವ ಅವಳಿ ಮಕ್ಕಳ ಕಾರಣದ ಕುರಿತು ವೈದ್ಯರು ಒಂದು ಅಭಿಪ್ರಾಯವನ್ನು ಹೇಳುತ್ತಾರೆ. ಅದೆನೆಂದರೆ ಕುಂದಿನಿ ಗ್ರಾಮದಲ್ಲಿ ಮುಖ್ಯವಾಗಿ ಕಂಡುಬರುವ ನೀರಿನ ರಾಸಾಯನಿಕಗಳಿಂದಲೇ ಈ ರೀತಿಯ ಮಕ್ಕಳು ಆಗುತ್ತಿವೆ ಎಂದು ಹೇಳುತ್ತಾರೆ.

ರಾಸಾಯನಿಕ ಆಹಾರ

ರಾಸಾಯನಿಕ ಆಹಾರ

ಕೆಲವು ಸಂಶೋಧನೆಯ ಪ್ರಕಾರ ಈ ಗ್ರಾಮದಲ್ಲಿನ ಮಹಿಳೆಯರು ಹೆಚ್ಚಾಗಿ ರಾಸಾಯನಿಕ ಆಹಾರಗಳನ್ನು ಸೇವಿಸುವುದರಿಂದಲೇ ಅವಳಿ ಮಕ್ಕಳಿಗೆ ಜನ್ಮ ನೀಡಲು ಕಾರಣ ಎಂದು ಹೇಳುತ್ತಾರೆ. ಭಾರತ ದೇಶದಲ್ಲಿಯೇ ಅತಿ ಹೆಚ್ಚಾಗಿ ಅವಳಿ ಮಕ್ಕಳು ಹೊಂದಿರುವ ಗ್ರಾಮ ಇದಾಗಿದೆ.

ವರದಿಗಳು

ವರದಿಗಳು

ಮತ್ತೊಂದು ಆಶ್ಚರ್ಯಕರವಾದ ಸಂಗತಿ ಏನೆಂದರೆ ಈ ಗ್ರಾಮದಲ್ಲಿನ ಸೊಸೆಗಳಿಗೆ ಅಲ್ಲದೇ ಗ್ರಾಮದ ಹೆಣ್ಣು ಮಕ್ಕಳು ಅಂದರೆ ಬೇರೆ ಗ್ರಾಮದ ಹುಡುಗನಿಗೆ ಕೊಟ್ಟು ಮದುವೆ ಮಾಡಿದರು ಕೂಡ ಸಾಕಷ್ಟು ಅವಳಿ ಮಕ್ಕಳು ಆಗಿರುವ ವರದಿಗಳಿವೆ. ಈ ಗ್ರಾಮದಲ್ಲಿ ನೀವು ಪ್ರವೇಶಿಸುತ್ತಿದ್ದಂತೆ ಹಲವಾರು ಅವಳಿ ಮಕ್ಕಳ ದರ್ಶನ ಪಡೆಯಬಹುದು.

ಪ್ರದೇಶದ ಸಂಸ್ಕøತಿ

ಪ್ರದೇಶದ ಸಂಸ್ಕøತಿ

ಈ ವಿಚಿತ್ರವಾದ ಗ್ರಾಮವನ್ನು ಕಾಣಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಈ ಗ್ರಾಮದಲ್ಲಿ ಹೆಚ್ಚಾಗಿ ಮುಸ್ಲಿಂರು ಇದ್ದು, ಹಿಂದೂಗಳು ಕಡಿಮೆ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಹಾಗಾಗಿ ಈ ಪ್ರದೇಶದ ಸಂಸ್ಕøತಿ ಮುಸ್ಲಿಂ ಸಂಪ್ರದಾಯವನ್ನು ಅನುಸರಿಸುತ್ತದೆ.

ಸಮೀಪದ ಪ್ರವಾಸಿ ತಾಣಗಳು

ಸಮೀಪದ ಪ್ರವಾಸಿ ತಾಣಗಳು

ತಿರುಮಾಂಧಾಕುಣ್ಣು ದೇವಾಲಯ
ಈ ಮಾಹಿಮಾನ್ವಿತವಾದ ದೇವಾಲಯವು ಮಲ್ಲಾಪುರಂ ಜಿಲ್ಲೆಯಲ್ಲಿದೆ. ಇದೊಂದು ಹಿಂದೂ ದೇವಾಲಯವಾಗಿದ್ದು, ಅತ್ಯಂತ ಪುರಾತನವಾದುದಾಗಿದೆ. ಇದೊಂದು ಪ್ರಮುಖವಾದ ಯಾತ್ರಾ ಕೇಂದ್ರವಾಗಿದೆ. ಈ ದೇವಾಲಯದಲ್ಲಿನ ಪಾರ್ವತಿ ದೇವಿಯು ವಿವಾಹವಾಗದೇ ಇರುವವರಿಗೆ ತ್ವರಿತವಾಗಿ ವಿವಾಹವಾಗುವಂತೆ ಹಾರೈಸುತ್ತಾಳೆ. ಭದ್ರಕಾಳಿಯ ರೂಪದಲ್ಲಿರುವ ಈ ತಾಯಿಯ ದರ್ಶನ ಕೋರಿ ನೂರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ.

PC:Rojypala

ಸಮೀಪದ ಪ್ರವಾಸಿ ತಾಣಗಳು

ಸಮೀಪದ ಪ್ರವಾಸಿ ತಾಣಗಳು

ಮಿನಿ ಊಟಿ
ಈ ಸುಂದರವಾದ ಸ್ಥಳವನ್ನು ಅರಿಂಬ್ರಾ ಬೆಟ್ಟ ಅಥವಾ ಮಿನಿ ಊಟಿ ಎಂದು ಕರೆಯುತ್ತಾರೆ. ಇದು ಮಲ್ಲಾಪುರದ ಸಮೀಪದಲ್ಲಿದೆ. ಈ ಅದ್ಭುತವಾದ ಸ್ಥಳವು ಸಮುದ್ರ ಮಟ್ಟದಿಂದ 1050 ಅಡಿ ಎತ್ತರದಲ್ಲಿದೆ. ಸುಂದರವಾದ ಪ್ರಕೃತಿ ವಾತಾವರಣವನ್ನು ಹೊಂದಿರುವ ಈ ಸ್ಥಳಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇದು ಭಾರತದ ಪ್ರಸಿದ್ಧವಾದ ಗಿರಿಧಾಮಗಳಲ್ಲಿ ಒಂದಾಗಿದೆ.


PC:Prof tpms

ಸಮೀಪದ ಪ್ರವಾಸಿ ತಾಣಗಳು

ಸಮೀಪದ ಪ್ರವಾಸಿ ತಾಣಗಳು

ಪಾಂಡಿನರೆಕಾರಾ ಬೀಚ್
ಈ ಪಾಂಡಿನರೆಕಾರಾ ಬೀಚ್ ಮಲ್ಲಾಪುರಂದ ಒಂದು ಪ್ರಮುಖವಾದ ಪ್ರವಾಸಿ ಆಕರ್ಷಣೆಯಾಗಿದೆ. ಈ ಬೀಚ್‍ಗೆ ದೇಶ, ವಿದೇಶಗಳ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ಬೀಚ್‍ನ ಭವ್ಯವಾದ ವೀಕ್ಷಣೆಯನ್ನು ಕಾಣುವುದೇ ಒಂದು ಸಂಭ್ರಮ. ಈ ಬೀಚ್‍ನ ಬಳಿ ಆರ್ಯುವೇದ ಮಸಾಜ್, ಸ್ಪಾ ಬಾತ್‍ನಂತಹ ಸೌಲಭ್ಯಗಳು ಕೂಡ ಲಭ್ಯವಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಕೊಂದಿನಿ ಗ್ರಾಮವು ಪರಪ್ಪನಂಗಡಿ ಪಟ್ಟಣವನ್ನು ಸಂಪರ್ಕಿಸುತ್ತದೆ. ರಾಷ್ಟ್ರೀಯ ಹೆದ್ದಾರಿ ನಂ 66 ರಮನಾಟ್ಟುಕರಾದ ಮಾರ್ಗದ ಮೂಲಕ ಹಾದು ಹೋಗುತ್ತದೆ. ಹಾಗೆಯೇ ಇದು ಉತ್ತರದಿಂದ ಗೋವಾ ಮತ್ತು ಮುಂಬೈಗೆ ಸಂಪರ್ಕಿಸುತ್ತದೆ. ದಕ್ಷಿಣದಿಂದ ಕೊಚ್ಚಿನ್ ಮತ್ತು ತಿರುವನಂತಪರಂಗೆ ಸಂಪರ್ಕಿಸುತ್ತದೆ. ಇದು ರಾಷ್ಟ್ರೀಯ ಹೆದ್ಧಾರಿಯಾದ 12,29 ಮತ್ತು 181ರ ಮೂಲಕ ಊಟಿ, ಮೈಸೂರು ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ