Search
  • Follow NativePlanet
Share
ಮುಖಪುಟ » ಸ್ಥಳಗಳು» ಮಲಪ್ಪುರಂ

ಮಲಪ್ಪುರಂ: ನದಿಗಳು ಮತ್ತು ಸಂಸ್ಕೃತಿಗಳ ತಾಣ

15

ಕೇರಳದ ಉತ್ತರದ ಜಿಲ್ಲೆಯಾಗಿರುವ ಮಲಪ್ಪುರಂ ತನ್ನ ಶ್ರೀಮಂತ ಸಂಸ್ಕೃತಿ, ಐತಿಹಾಸಿಕ ಮಹತ್ವ ಮತ್ತು ಗಮನಾರ್ಹ ಪರಂಪರೆಯಿಂದಾಗಿ ಬಹಳ ಹೆಸರುವಾಸಿಯಾಗಿದೆ . ಮಲಪ್ಪುರಂ ಎಂದರೆ ಮಲೆಯಾಳಂ ಭಾಷೆಯಲ್ಲಿ "ಗುಡ್ಡದ ತುದಿ " ಎಂದರ್ಥ. ಈ ಹೆಸರನ್ನು ಸಮರ್ಥಿಸಿಕೊಳ್ಳುವಂತೆ  ಮಲಪ್ಪುರಂ ಪ್ರದೇಶವು ಸಣ್ಣ ಸಣ್ಣ ಗುಡ್ಡಗಳು ಹಾಗೂ ದಿಬ್ಬಗಳಿಂದ ಕೂಡಿರುವುದು ವಿಶೇಷ . ಪ್ರಾಚೀನ ಕಾಲದಿಂದ ಇತ್ತೀಚಿನವರೆಗಿನ  ಇತಿಹಾಸವನ್ನು ನೋಡಿದಾಗ ,ಈ  ಪ್ರದೇಶವು ಸಂಸ್ಕೃತಿ, ಧರ್ಮ, ಆರ್ಥಿಕತೆ ಹಾಗೂ ಕೇರಳದ ಪ್ರವಾಸೋದ್ಯಮಕ್ಕೆ  ವ್ಯಾಪಕ ಕೊಡುಗೆ ನೀಡಿರುವುದು ತಿಳಿದುಬರುತ್ತದೆ. ಜಿಲ್ಲೆಯು ತನ್ನ  ಗಲ್ಫ್ ವಲಸಿಗರಿಂದಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆರ್ಥಿಕ ಚೇತರಿಕೆ ಕಾಣುತ್ತಿರುವ ಕಾರಣ  ದೇಶಾದ್ಯಂತ ಹಲವು ಅರ್ಥಶಾಸ್ತ್ರಜ್ಞರ ಗಮನ ಸೆಳೆಯುತ್ತಿದೆ.

ಚಾಲಿಯಾರ್ , ಭಾರತಪುಳಾ ಮತ್ತು  ಕಡಲುಂಡಿ ಎಂಬ ಮೂರು ನದಿಗಳು  ಮಲಪ್ಪುರಂನ ಭೂಮಿಯುದ್ದಕ್ಕೂ ತಮ್ಮ ಹರಿವಿನೊಂದಿಗೆ  ಮಣ್ಣು ಮತ್ತು ಸಂಸ್ಕೃತಿಗಳೆರಡನ್ನೂ  ಸಮೃದ್ಧಗೊಳಿಸುತ್ತ ಸಾಗಿವೆ. ಈ ಪ್ರದೇಶವು ಪ್ರಾಚೀನ ಕಾಲದಲ್ಲಿ ಕಲ್ಲೀಕೋಟೆ (ಕ್ಯಾಲಿಕಟ್) ಯ ರಾಜರ  ಪ್ರಬಲ ಸೇನೆಯಾದ ಜಾಮೋರಿನ್ಗಳ  ಪ್ರಧಾನ ಕಛೇರಿಯನ್ನು ಹೊಂದಿತ್ತು. ಖಿಲಾಫತ್ ಚಳವಳಿ ಮತ್ತು ಮಾಪ್ಪಿಲಾ ಬಂಡಾಯವಾಗಿದ್ದ ಸ್ಥಳವೆಂದು ಭಾರತೀಯ ರಾಷ್ಟ್ರೀಯತೆಯ ಇತಿಹಾಸದಲ್ಲಿ ಈ ಜಿಲ್ಲೆಯನ್ನು  ಗುರುತಿಸಲಾಗಿದ್ದು, ಇದು ಒಂದು ಮುಸ್ಲಿಂ ನೃತ್ಯ ಕಲೆಯಾದ ಒಪ್ಪಾನದ ಜನ್ಮಭೂಮಿಯೂ ಆಗಿದೆ.

ವಿಭಿನ್ನ ಸಂಪ್ರದಾಯಗಳು ಮತ್ತು ವಿಶಿಷ್ಟ ಆಕರ್ಷಣೆಗಳು

ಮಲಪ್ಪುರಂದ ಸಣ್ಣ ಪಟ್ಟಣಗಳು ಕೇರಳದ ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯಿಕ ಸಂಪ್ರದಾಯಗಳಲ್ಲಿ ಸಾಟಿಯಿಲ್ಲದಷ್ಟು ಕೊಡುಗೆಗಳನ್ನು ನೀಡಿವೆ. ಮಧ್ಯಕಾಲೀನ ಯುಗದಲ್ಲಿ ತಿರುನವಯವು ವೈದಿಕ ಶಿಕ್ಷಣಕ್ಕೆ ಹಾಗು ಕೊಟ್ಟಕ್ಕಲ್ ಸಂಪ್ರದಾಯಿಕ ವೈದ್ಯಕೀಯ ಆಯುರ್ವೇದ ಶಿಕ್ಷಣದ ಕೇಂದ್ರವಾಗಿದ್ದವು. ಪೊನ್ನಾನಿ (ಇಸ್ಲಾಂ ಕಲಿಕೆಯ ಪ್ರಾಚೀನ ಕೇಂದ್ರ) ಮತ್ತು ನಿಲಂಬೂರ್(ದೇಶದ ತೇಗದ ನಗರ ಎಂದು ಹೆಸರುವಾಸಿಯಾದ)ಗಳು ವಿಶ್ವಾದ್ಯಂತ ಪ್ರಶಂಸೆ ಗಳಿಸಿ ಕೊಟ್ಟಿವೆ.

ಕಡಲುಂಡಿ ಪಕ್ಷಿಧಾಮ ,ಕೇರಳದೇಶಪುರಂ ದೇವಾಲಯ ಮತ್ತು ತಿರುನವಯ ದೇವಾಲಯಗಳು ಮಲಪ್ಪುರಂನಲ್ಲಿನ ನೋಡತಕ್ಕ ತಾಣಗಳಾಗಿವೆ.  ಜುಮಾ ಮಸೀದಿ, ಮನ್ನೂರ್ ಶಿವ ದೇವಸ್ಥಾನ, ಥಿರುಪ್ಪುರಂಹಕ ದೇವಾಲಯ ಮತ್ತು  ವೆಟ್ಟಕೊರುಮಕಂ ದೇವಾಲಯ ಇವೇ ಹಲವಾರು ದೇವಾಲಯಗಳು ಹಾಗೂ ಮಸೀದಿಗಳು  ಮಲಪ್ಪುರಂನಲ್ಲಿವೆ. ಕೊಟ್ಟಕ್ಕುನ್ನುನಲ್ಲಿನ ಬೆಟ್ಟದ ಉದ್ಯಾನ, ಬಿಯ್ಯಂ ಸರೋವರ ಮತ್ತು ನದಿತಟದ ಉದ್ಯಾನವಾದ ಶಾಂತಿತೀರಂ ಗಳು ಪ್ರವಾಸೋದ್ಯಮ ದೃಷ್ಟಿಯಿಂದ ಸಾವಿರಾರು ಜನರನ್ನು ತಮ್ಮತ್ತ ಸೆಳೆಯುತ್ತವೆ.

ವರ್ಷವಿಡೀ ಪ್ರಯಾಣಕ್ಕೆ ಅನುಕೂಲವಾಗುವಂತೆ ಮಲಪ್ಪುರಂ  ರಸ್ತೆ, ರೈಲು ಮತ್ತು ವಾಯುಮಾರ್ಗಗಳ ಮೂಲಕ ವಿವಿಧ ಸ್ಥಳಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ಪ್ರದೇಶದ ಹವಾಗುಣವೂ  ಮಧ್ಯಮಸ್ಥಿತಿಯಲ್ಲಿರುವದರಿಂದ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿನೀಡಲು ಸೂಕ್ತವಾಗಿದೆ. ಮುಸ್ಲಿಂ ಜನಸಂಖ್ಯೆಯ ಪ್ರಾಬಲ್ಯ , ಅರೇಬಿಕ್ ಮತ್ತು ಸಾಂಪ್ರದಾಯಿಕ ಕೇರಳಿಗರ ರುಚಿಗಳನ್ನು ಒಗ್ಗೂಡಿಸಿ ಜಿಲ್ಲೆಯಲ್ಲಿ ಒಂದು ಅದ್ಭುತ ಆಹಾರ ಸಂಸ್ಕೃತಿ ಬೆಳೆದುಬಂದಿದೆ. ನೈಸರ್ಗಿಕ ಸೌಂದರ್ಯ, ಘಟನೆಗಳುಳ್ಳ ಇತಿಹಾಸ, ಮಲಪ್ಪುರಂದ ವಿಲಕ್ಷಣ ಪಾಕಪದ್ಧತಿಗಳು ಪ್ರಕೃತಿ ಪ್ರಿಯರ , ಇತಿಹಾಸ ಪ್ರೇಮಿಗಳ ಮತ್ತು ಭೋಜನ ಪ್ರಿಯರ ಎಲ್ಲ ನಿರೀಕ್ಷೆಗಳನ್ನೂ ಪೂರೈಸುತ್ತದೆ.

ಮಲಪ್ಪುರಂ ಪ್ರಸಿದ್ಧವಾಗಿದೆ

ಮಲಪ್ಪುರಂ ಹವಾಮಾನ

ಉತ್ತಮ ಸಮಯ ಮಲಪ್ಪುರಂ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಲಪ್ಪುರಂ

  • ರಸ್ತೆಯ ಮೂಲಕ
    ಮಲಪ್ಪುರಂ ಕ್ಯಾಲಿಕಟ್ ಮತ್ತು ಪಾಲಕ್ಕಾಡ್ ಗಳಂತಹ ಎಲ್ಲಾ ನೆರೆಯ ಜಿಲ್ಲೆಗಳಿಗೆ ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಕೇರಳ ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ಬಸ್ಸ ಸೇವೆಗಳು ಲಭ್ಯವಿವೆ. ಬಸ್ಗಳು ಜಿಲ್ಲೆಯ ಒಳಗಿನ ಪಟ್ಟಣಗಳನ್ನೂ ಬೆಸೆಯುವದರಿಂದ ಆರ್ಥಿಕವಾಗಿಯೂ ಉತ್ತಮ ಆಯ್ಕೆಯಾಗಿದೆ. ಐಷಾರಾಮಿ ಬಸ್ ಗಳೂ ಮಲಪ್ಪುರಂನಿಂದ ಬೆಂಗಳೂರು, ಕೊಚ್ಚಿ ಮತ್ತು ತಿರುವನಂತಪುರಂಗಳಿಗೆ ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮಲಪ್ಪುರಂ ಜಿಲ್ಲೆಯಲ್ಲಿ ಅಂಗಡಿಪುರಂ, ತಿರೂರ್, ತನುರ್, ಕುಟ್ಟಿಪ್ಪುರಂ ಮತ್ತು ಪರಪ್ಪನಂಗಡಿ ಸೇರಿದಂತೆ ಚಿಕ್ಕ ರೈಲ್ವೆ ನಿಲ್ದಾಣಗಳಿವೆ. ಕೇರಳದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಬೆಸೆಯುವ ಅನೇಕ ರೈಲುಗಳು ಈ ಕೇಂದ್ರಗಳ ಮೂಲಕ ಹಾದುಹೋಗುತ್ತವೆ. ನಿಯಮಿತ ರೈಲುಗಳು ತಿರುವನಂತಪುರಂ, ಕೊಚ್ಚಿ, ತ್ರಿಶೂರ್, ಕೊಟ್ಟಾಯಂ, ಕಣ್ಣೂರು ಮತ್ತು ಮಂಗಳೂರುಗಳಿಗೆ ಲಭ್ಯವಿವೆ. ರೈಲಿನ ಪ್ರಯಾಣ ಬಯಸುವವರು 50 ಕಿಮೀ ದೂರದಲ್ಲಿರುವ ಕ್ಯಾಲಿಕಟ್ ರೈಲ್ವೆ ನಿಲ್ದಾಣದಲ್ಲಿಯೂ ಇಳಿದು ಟ್ಯಾಕ್ಸಿಗಳ ಮೂಲಕ ತಮ್ಮ ಪ್ರಯಾಣವನ್ನು ಮುಂದುವರೆಸಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಲಪ್ಪುರಂದ ಹೃದಯ ಭಾಗದಿಂದ ಸುಮಾರು 25 ಕಿಮೀ ದೂರದಲ್ಲಿರುವ ಕ್ಯಾಲಿಕಟ್ ಅಂತಾರಾಷ್ಟೀಯ ವಿಮಾನ ನಿಲ್ದಾಣ (ಕರಿಪುರ್ ಅಂತಾರಾಷ್ಟೀಯ ವಿಮಾನ ನಿಲ್ದಾಣ ಎಂತಲೂ ಕರೆಯಲ್ಪಡುವುದು)ವು ಮಲಪ್ಪುರಂದ ಹತ್ತಿರದ ವಿಮಾನ ನಿಲ್ದಾಣವಾಗಿದೆ . ಕ್ಯಾಲಿಕಟ್ ವಿಮಾನ ನಿಲ್ದಾಣವು , ಭಾರತದ ಪ್ರಮುಖ ನಗರಗಳು ಮತ್ತು ಮಧ್ಯಪ್ರಾಚ್ಯದ ಕೆಲವು ನಗರಗಳಿಗೆ ಸಂಪರ್ಕಿಸುವ ಅಸಂಖ್ಯ ವಿಮಾನ ಸೇವೆಗಳನ್ನು ಹೊಂದಿದೆ. ವಾಯುಯಾನದ ಮೂಲಕ ಬಂದ ಪ್ರವಾಸಿಗರು ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದು ಮಲಪ್ಪುರಂದ ಎಲ್ಲಾ ಪ್ರಮುಖ ಪಟ್ಟಣಗಳಿಗೆ ಭೇಟಿ ನೀಡಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat