Search
  • Follow NativePlanet
Share
» »ಕುತೂಹಲಕಾರಿಯಾದ ಮರಗಳು ಎಲ್ಲಿವೆ ಗೊತ್ತ?

ಕುತೂಹಲಕಾರಿಯಾದ ಮರಗಳು ಎಲ್ಲಿವೆ ಗೊತ್ತ?

ಈ ವಿಚಿತ್ರವಾದ ಮರಗಳು ಇರುವುದು ತೆಲಂಗಾಣದ ನಲ್ಗೊಂಡದಲ್ಲಿ. ಪೂರ್ವದಲ್ಲಿ ನಲ್ಗೊಂಡಕ್ಕೆ ನೀಲಗಿರಿ ಎಂದು ಹೆಸರು ಇತ್ತು. ನಲ್ಲಗೊಂಡ ಜಿಲ್ಲೆ ಯುದ್ಧಗಳಿಗೆ ಹೆಸರುವಾಸಿ ಈ ಸ್ಥಳ. ಇಲ್ಲಿ ಸುತ್ತಲೂ ಸುಂದರವಾದ ಬೃಹತ್ ವೃಕ್ಷಗಳು ಇವೆ. ಇಲ್ಲಿ ಯಾವುದೇ

ವೃಕ್ಷಗಳಿಗೆ ನಮ್ಮ ಸನಾತನ ಧರ್ಮದಲ್ಲಿ ತನ್ನದೇ ಆದ ಮಹತ್ವವಿದೆ. ಇಲ್ಲೊಂದು ವಿಚಿತ್ರವಾದ ಮರಗಳು ಇವೆ. ಅವುಗಳನ್ನು ಕಂಡರೆ ನಿಮ್ಮ ಕುತೂಹಲ ಕೆರಳಿಸದೇ ಇರದು. ಆ ಮರಗಳ ವಿಶೇಷತೆ ಏನೆಂದರೆ ಪ್ರಾಣಿಗಳ ಸ್ವರೂಪದಿಂದ ಏರ್ಪಟ್ಟಿರುವುದು.

ಈ ವಿಚಿತ್ರವಾದ ಮರಗಳು ಇರುವುದು ತೆಲಂಗಾಣದ ನಲ್ಗೊಂಡದಲ್ಲಿ. ಪೂರ್ವದಲ್ಲಿ ನಲ್ಗೊಂಡಕ್ಕೆ ನೀಲಗಿರಿ ಎಂದು ಹೆಸರು ಇತ್ತು. ನಲ್ಲಗೊಂಡ ಜಿಲ್ಲೆ ಯುದ್ಧಗಳಿಗೆ ಹೆಸರುವಾಸಿ ಈ ಸ್ಥಳ. ಇಲ್ಲಿ ಸುತ್ತಲೂ ಸುಂದರವಾದ ಬೃಹತ್ ವೃಕ್ಷಗಳು ಇವೆ. ಇಲ್ಲಿ ಯಾವುದೇ ರೀತಿಯ ಶಬ್ಧಗಳು ಇಲ್ಲದೇ ನಿಶ್ಯಬ್ಧವಾಗಿರುತ್ತದೆ. ಆಶ್ಚರ್ಯ ಏನಪ್ಪ ಎಂದರೆ ಈ ಮರಗಳ ಸಮೀಪಕ್ಕೆ ಭೇಟಿ ನೀಡಲು ಜನರು ಭಯ ಪಡುತ್ತಾರೆ.

ಒಂದು ವೇಳೆ ಈ ಸ್ಥಳಕ್ಕೆ ಭೇಟಿ ನೀಡಿದರೆ ಇಲ್ಲಿನ ಮರಗಳನ್ನು ಮುಟ್ಟುವ ಸಾಹಸ ಮಾಡುತ್ತಾರೆ. ಹಲವಾರು ಮಂದಿ ಈ ಮರಗಳು ನಿಜವಾದುದು ಅಲ್ಲ ಎಂದು ವಾದಿಸಿದರೆ. ಅಲ್ಲಿನ ಸ್ಥಳೀಯರು ಮಾತ್ರ ಆ ಮರಗಳು ಇರುವುದೇ ಹಾಗೆ ಅದು ನೈರ್ಗಿಕವಾಗಿ ಸೃಷ್ಟಿಯಾದಂತಹದುದು ಎಂದು ಹೇಳುತ್ತಾರೆ.

ಇಷ್ಟಕ್ಕೂ ಆ ಮರಗಳು ಎಲ್ಲಿವೆ? ಅಷ್ಟು ಭಯಭ್ರಂತಿಗೊಳಿಸುವ ಆ ಮರ ನಿಜವಾಗಿಯೂ ಇವೆಯೇ? ಆ ಮರಗಳನ್ನು ಮುಟ್ಟಲು ಯಾಕೆ ಜನ ಸಾಮಾನ್ಯರು ಭಯಪಡುತ್ತಾರೆ ಎಂಬ ನಿಮ್ಮ ಹಲವಾರು ಪ್ರೆಶ್ನೆಗಳಿಗೆ ಉತ್ತರ ಲೇಖನದ ಮೂಲಕ ಪಡೆಯಿರಿ.

ಅನಕೊಂಡ

ಅನಕೊಂಡ

ಇಲ್ಲಿ ನೀವು ಅನಕೊಂಡ ದೃಶ್ಯವನ್ನು ಕಾಣಬಹುದು. ಇದು ನೈಸರ್ಗಿಕವಾದ ಮರವಾಗಿದೆ. ಇದರ ಮುಂದೆ ಹೋದರೆ ಎಲ್ಲಿ ಹಾವು ಬಾಯಿ ತೆರದು ನುಂಗುತ್ತದೆಯೋ ಎಂದು ಭಯಭೀತವಾಗುವಂತಹ ಸುಂದರವಾದ ಮತ್ತು ಭಯಾನಕವಾದ ಸ್ಥಳ ಇದಾಗಿದೆ.

ಮೊಸಳೆ

ಮೊಸಳೆ

ಮರದ ಕೊಂಬೆ ಮೇಲೆ ನೈಸರ್ಗಿಕವಾಗಿ ಮೊಸಳೆ ಇದೆಯೇನೊ ಎಂಬಂತೆ ಗೋಚರಿಸುವ ಈ ಆಕಾರ ಸೃಷ್ಟಿಯಾಗಿರುವುದು ಮರದಿಂದ. ಇದನ್ನು ಕಂಡವರು ಹೀಗೆ ಮರಗಳು ಸೃಷ್ಟಿಯಾಗಲು ಹೇಗೆ ಸಾಧ್ಯ ಎಂದು ಹೇಳುತ್ತಾರೆ.

ರಹಸ್ಯ ಮರಗಳು

ರಹಸ್ಯ ಮರಗಳು

ಇಲ್ಲಿ ಹಲವಾರು ಪ್ರಾಣಿ, ಪಕ್ಷಿಗಳ ಮರಗಳ ಆಕಾರವನ್ನು ನೋಡಬಹುದು. ಇದೊಂದು ಅದ್ಭುತವೇ ಸರಿ.

ಚಿಟ್ಟೆ

ಚಿಟ್ಟೆ

ಸಾಮಾನ್ಯವಾಗಿ ಬಣ್ಣ ಬಣ್ಣದ ಚಿಟ್ಟೆಗಳೆಂದರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಅವುಗಳನ್ನು ಹಿಡಿಯಬೇಕು ಎಂದರೆ ಎಲ್ಲರಿಗೂ ಇಷ್ಟ. ಅಂಥಹದರಲ್ಲಿ ನೈಸರ್ಗಿಕವಾದ ಚಿಟ್ಟೆಗಳು ಮರದ ಆಕಾರದಲ್ಲಿ ಕಂಡರೆ ಹೇಗೆ ಇರುತ್ತದೆ.

ಕೋತಿ

ಕೋತಿ

ಇಲ್ಲಿ ಮರಗಳಿಂದ ಅದ್ಭುತವಾಗಿ ಸೃಷ್ಟಿಯಾಗಿರುವಂತಹ ಕೋತಿಯನ್ನು ಕಾಣಬಹುದು. ಇದು ಅತ್ಯಂತ ಸುಂದರವಾಗಿದ್ದು ಎಲ್ಲರ ಚಿತ್ತ ಈ ಕೋತಿಯ ಮೇಲೆ ಇರುತ್ತದೆ.

ಚೇಳು

ಚೇಳು

ಮರದ ಕೊಂಬೆ ಮೇಲೆ ಹೋಗುತ್ತಿರುವ ಅದ್ಭುತವಾದ ಮರದ ರಚನೆ ಚೇಳನ್ನು ಒಮ್ಮೆ ಗಮನಿಸಿ.

ವಿವಿಧ ಪ್ರಾಣಿ

ವಿವಿಧ ಪ್ರಾಣಿ

ಈ ಮರಗಳ ಮೇಲೆ ಇರುವ ವಿವಿಧ ಪ್ರಾಣಿಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಾಧಾರಣವಾಗಿ ಎಲ್ಲಿರಿಗೂ ಮೂಡುವಂತಹುದು. ಇಲ್ಲಿ ವಿವಿಧ ಪ್ರಾಣಿಗಳು, ಹಾವುಗಳು, ಕೀಟಗಳನ್ನು ಕಾಣಬಹುದಾಗಿದೆ.

 ಕ್ರೂರವಾದ ಮೃಗ

ಕ್ರೂರವಾದ ಮೃಗ

ಇಲ್ಲಿ ಕ್ರೂರವಾದ ಮೃಗಗಳ ಚಿತ್ರವನ್ನು ಕೂಡ ಕಾಣಬಹುದಾಗಿದೆ.

ಜನಸಂಚಾರವಿರುವುದಿಲ್ಲ

ಜನಸಂಚಾರವಿರುವುದಿಲ್ಲ

ಈ ಮರಗಳು ದಟ್ಟವಾದ ಅರಣ್ಯ ಪ್ರದೇಶದಲ್ಲಿದೆ. ಇಲ್ಲಿ ಯಾವುದೇ ಜನಸಂಚಾರವಿರುವುದಿಲ್ಲ. ಇದೊಂದು ರಹಸ್ಯವಾದ ಮರ ಎಂದೇ ಹೇಳಬಹುದು.

ದಟ್ಟವಾದ ಅರಣ್ಯ

ದಟ್ಟವಾದ ಅರಣ್ಯ

ಈ ರಹಸ್ಯವಾದ ಮರವು ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯಲ್ಲಿನ ದಟ್ಟವಾದ ಅರಣ್ಯದಲ್ಲಿದೆ.

ನೈಸರ್ಗಿಕವಾದುದು

ನೈಸರ್ಗಿಕವಾದುದು

ಇಲ್ಲಿನ ದೃಶ್ಯವು ಕೃತಕವಾದುದು ಎಂದು ಕೆಲವರು ವಾದಿಸಿದರೆ, ಅಲ್ಲಿ ಹಲವಾರು ದಶಕಗಳಿಂದ ವಾಸಿಸುತ್ತಿರುವ ಜನರು ಮಾತ್ರ ಇದು ನೈಸರ್ಗಿಕವಾದುದು ಎಂದು ವಾದಿಸುತ್ತಾರೆ.

ತೆರಳುವ ಬಗೆ ಹೇಗೆ?

ತೆರಳುವ ಬಗೆ ಹೇಗೆ?

ಬೆಂಗಳೂರಿನಿಂದ ಆಂಧ್ರಗೆ ನೇರವಾದ ಬಸ್ಸುಗಳು, ರೈಲುಗಳು ಮತ್ತು ವಿಮಾನ ಸೌಕರ್ಯವಿದ್ದು ಸುಲಭವಾಗಿ ತೆಲಂಗಾಣಕ್ಕೆ ತಲುಪಬಹುದಾಗಿದೆ. ಅಲ್ಲಿಂದ ನಲ್ಗೊಂಡ ಎಂಬ ಜಿಲ್ಲೆಯಲ್ಲಿ ಒಂದು ದಟ್ಟವಾದ ಅರಣ್ಯವಿದೆ. ಅದೇ ನಲ್ಗೊಂಡ ಅರಣ್ಯವಾಗಿದೆ. ಅಲ್ಲಿ ತೆರಳಿದರೆ ಈ ಅದ್ಭುತವಾದ ದೃಶ್ಯವನ್ನು ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X