Search
  • Follow NativePlanet
Share
» »ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ಕೆಲವು ಲಕ್ಷ ವರ್ಷಗಳ ಹಿಂದಿನಿಂದ ಇರುವ ಎಲ್ಲಾ ಶಕ್ತಿಯನ್ನು ಮನುಷ್ಯನು ತಿಳಿದುಕೊಂಡು ಅವುಗಳ ಮೇಲೆ ಅಧಿಪತ್ಯ ಸಾಧಿಸುತ್ತಿದ್ದಾನೆ. ಮನುಷ್ಯರ ಹುಟ್ಟಿಗಿಂತ ಮೊದಲಿನಿಂದಲೇ ಇರುವ ಪ್ರಕೃತಿಯ ಮೇಲೆ ಪ್ರಯೋಗವನ್ನು ಹಾಗು ಪರಿಣಾಮವನ್ನು ಬೀರುತ್ತಿದ್ದಾನೆ. ಅತೀತ ಶಕ್ತಿಗಳು ಯಾವುದು ಇಲ್ಲ ಎಂದೂ, ತಾನೇ ಎಲ್ಲದಕ್ಕಿಂತ ಮೇಲು ಎಂದು ನಿರೂಪಿಸಲು ಹೊರಟಾಗ ಪ್ರತಿ ಬಾರಿಯು ಎಡುವುತ್ತಿದ್ದಾನೆ.

ಇಂದಿಗೂ ಉತ್ತರಗಳು ದೊರೆಯದೇ ಇರುವ ಎಷ್ಟೊ ರಹಸ್ಯಗಳು ನಮ್ಮ ಭಾರತದಲ್ಲಿ ಅಡಗಿವೆ. ನಮ್ಮ ಭಾರತ ದೇಶದಲ್ಲಿ ಅನೇಕ ಪರಿಷ್ಕರಣೆ ಮಾಡಿದರು ಕೂಡ ಉತ್ತರ ಕಂಡುಹಿಡಿಯಲು ಸಾಧ್ಯವಾಗದೇ ಇರುವ ಹಲವಾರು ರಹಸ್ಯಗಳು ಇಲ್ಲಿವೆ. ಹಾಗಾದರೆ ಆ ರಹಸ್ಯತ್ಮಾಕ ಪ್ರದೇಶಗಳು ಯಾವುವು ಎಂಬುದನ್ನು ಪ್ರಸ್ತುತ ಲೇಖನದಲ್ಲಿ ಸಂಕ್ಷೀಪ್ತವಾಗಿ ತಿಳಿಯೋಣ. ನಿಮ್ಮಿಂದ ಸಾಧ್ಯವಾದರೆ ರಹಸ್ಯಗಳನ್ನು ಬಗೆಹರಿಸಬಹುದು.

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ಅವಳಿ ಮಕ್ಕಳು

ಕೇರಳದ ಕೊದಿನಿ ಎಂಬ ಗ್ರಾಮದಲ್ಲಿ ಅವಳಿ ಮಕ್ಕಳೇ ಹೆಚ್ಚು. ಅವಳಿ ಮಕ್ಕಳ ಕಾರಣವಾಗಿಯೇ ಈ ಗ್ರಾಮವು ಹೆಚ್ಚು ಪ್ರಸಿದ್ಧವಾಗಿದೆ. ಈ ಗ್ರಾಮದಲ್ಲಿ ನಡೆಯುವ ಆಶ್ಚರ್ಯವೆನೆಂದರೆ ಈ ಗ್ರಾಮದಲ್ಲಿ ಜನಿಸುವ ಮಕ್ಕಳೆಲ್ಲಾ ಅವಳಿ ಮಕ್ಕಳೇ. ಈ ಗ್ರಾಮದ ಹೆಣ್ಣು ಮಗಳನ್ನು ಮತ್ತೊಂದು ಗ್ರಾಮಕ್ಕೆ ವಿವಾಹವನ್ನು ಮಾಡಿಕೊಟ್ಟರೆ ಅವರಿಗೂ ಅವಳಿ ಮಕ್ಕಳೇ ಆಗಿವೆ ಎಂದು ವರದಿಯಾಗಿದೆ.

ಈ ಗ್ರಾಮವು ಅಂತರ್‍ಜಾತಿ ಖ್ಯಾತಿ ಪಡೆದಿದೆ. 2000 ಸಾವಿರ ಕುಟುಂಬಗಳು ನಿವಾಸಿಸುವ ಈ ಗ್ರಾಮದಲ್ಲಿ ಒಟ್ಟು 400 ಜೋಡಿ ಅವಳಿ ಮಕ್ಕಳು ಇದ್ದಾರೆ ಎಂದರೆ ನಂಬುತ್ತೀರಾ? ಇದರ ಬಗ್ಗೆ ಎಷ್ಟೇ ಪರಿಶೋಧನೆಗಳನ್ನು ಮಾಡಿದರು ಕೂಡ ಕೇವಲ ಈ ಗ್ರಾಮದಲ್ಲಿ ಮಾತ್ರ ಏಕೆ ಅವಳಿ ಮಕ್ಕಳು ಜನಿಸುತ್ತಿದ್ದಾರೆ ಎಂಬುದಕ್ಕೆ ಕಾರಣ ಮಾತ್ರ ಇಂದಿಗೂ ರಹಸ್ಯವಾಗಿಯೇ ಉಳಿದಿದೆ.

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ತಾಜ್ ಮಹಲ್

ಅಜರಾಮರ ಪ್ರೇಮದ ಸಂಕೇತವಾಗಿ ನೆಲೆಸಿರುವ ತಾಜ್ ಮಹಲ್ ನಮ್ಮ ದೇಶದ ಹೆಮ್ಮೆ. ಷಹಜಾಹನ್ ತನ್ನ ಪತ್ನಿಯಾದ ಮೊಮ್‍ತಾಜ್‍ಳ ಮೇಲೆ ಇದ್ದ ಪ್ರೇಮದ ಸಂಕೇತವಾಗಿ ನಿರ್ಮಾಣ ಮಾಡಿರುವ ಅದ್ಭುತವಾದ ಕಟ್ಟಡ. ಇದು ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ. ಆದರೆ ಅದು ನಿಜವಲ್ಲ ಎಂದು ಹೇಳುತ್ತಿದ್ದಾರೆ ದೆಹಲಿಗೆ ಸೇರಿದ ಒಬ್ಬ ಪ್ರೋಫೆಸರ್ ಪಿ.ಎನ್.ಓ. ಅದೆನೆಂದರೆ ತಾಜ್ ಮಹಲಿನ ನಿಜವಾದ ಹೆಸರು ತೇಜುಮಹಲ್ಯಾ ಎಂದು, ಅದೊಂದು ಶಿವಾಲಯವೆಂದೂ ಹೇಳುತ್ತಿದ್ದಾರೆ.

ಅಲ್ಲಿರುವ ದೇವಾಲಯವನ್ನೇ ಅಮೃತಶಿಲೆಯಿಂದ ಪುನರ್ ನಿರ್ಮಾಣ ಮಾಡಿ ತಾಜ್ ಮಹಲ್ ಆಗಿ ಮಾರ್ಪಟು ಮಾಡಿದರು ಎಂದು ಹೇಳುತ್ತಿದ್ದಾರೆ. ಆದರೆ ಈ ವಿಷಯ ಇನ್ನು ಬಗೆಹರಿಯಲಿಲ್ಲ. ಏಕೆಂದರೆ 2 ಪಕ್ಷದ ಸಾಕ್ಷಿಗಳು ಇಲ್ಲಿ ಸಮಾನವಾಗಿಯೇ ಇದೆ. ಇದರಲ್ಲಿ ನಿಜ ಯಾವುದು ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದುಬಿಟ್ಟಿದೆ.

pc:Asitjain

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ರಾಜಸ್ಥಾನದ ಕುಲ್ಧಾರ

ಒಂದೇ ರಾತ್ರಿಯಲ್ಲಿ ಊರೆಲ್ಲಾ ಖಾಲಿ, ಖಾಲಿ. ಈ ಗ್ರಾಮ ಇರುವುದು ರಾಜಸ್ಥಾನದಲ್ಲಿನ ಒಂದು ಶಾಪಗ್ರಸ್ತವಾದ ಗ್ರಾಮ ಕುಲ್ಧಾರ. ಈ ಗ್ರಾಮದಲ್ಲಿ ಆ ಘಟನೆ ನಡೆದು ಸುಮಾರು ನೂರಾರು ವರ್ಷವಾದರೂ ಕೂಡ ಇಂದಿಗು ಆ ಗ್ರಾಮದಲ್ಲಿ ನೆಲೆಸಲು ಯಾರು ಕೂಡ ಧೈರ್ಯ ಮಾಡುತ್ತಿಲ್ಲ. ಹಾಗೆ ಪ್ರಯತ್ನಿಸಿದವರೆಲ್ಲಾ ಭಯಾನಕವಾದ ಅನುಭವಗಳಾಗಿವೆಯಂತೆ. ನಿಜವಾಗಿಯೂ ಆ ಗ್ರಾಮಕ್ಕೆ ಶಾಪವಿದೆಯೇ ಅಥವಾ ಗ್ರಾಮಸ್ಥರ ಮೂಢ ನಂಬಿಕೆ ಇರಬಹುದೇ ಎಂಬುದು ಇಂದಿಗೂ ರಹಸ್ಯವಾಗಿಯೇ ಇರುವ ತಾಣವಾಗಿದೆ.

PC:timeflicks

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ಕಾಂಕಲ ಪಾಸ್

ಕಾಂಕಲ ಪಾಸ್ ಅನ್ನು ಗ್ರಹಾಂತರವಾಸಿಗರ ಸ್ಥಳ ಎಂದೇ ಪ್ರಸಿದ್ಧಿ ಹೊಂದಿದೆ. ಅನೇಕ ಬಾರಿ ರಾತ್ರಿಯ ಸಮಯದಲ್ಲಿ ಇದ್ದಕ್ಕಿದ್ದಂತೆ ಆಕಾಶದಿಂದ ಬಣ್ಣ-ಬಣ್ಣದ ಲೈಟ್‍ಗಳಿಂದ ಕೆಲವು ವಸ್ತುಗಳು ಕಾಣಿಸುತ್ತವೆ. ಅವು ಭೂಮಿಯ ಮೇಲೆ ರಭಸವಾಗಿ ಬಂದು ಮಂಜಿನಲ್ಲಿ ಕಣ್ಮರೆಯಾಗುತ್ತದೆ. ಬೆಳಗಿನ ಜಾವ ನೋಡಿದರೆ ಅವು ಕೆಳಗೆ ಇಳಿಯುವ ಹಾಗೆ ಕಾಣುವ ಸ್ಥಳದಲ್ಲಿ ಯಾವುದೋ ವೃತ್ತಾಕಾರದಲ್ಲಿರುವ ವಾಹನವು ಇಳಿದ ಹಾಗೆ ಕಾಣಿಸುತ್ತವೆ. ಇಂಡೋ-ಚೈನಾ ಬಾರ್ಡ್‍ರ್‍ನಲ್ಲಿರುವ ಕಾಂಕಲ ಪಾಸ್ ಅನ್ನು ಗ್ರಹಾಂತರ ವಾಸಿಗಳ ತಾಣವೆಂದೇ ಸ್ಥಳೀಯರು ಕರೆಯುತ್ತಾರೆ. ಇದರ ಹಿಂದೆ ಇರುವ ರಹಸ್ಯವೇನು ಎಂಬುದು ಇಂದಿಗೂ ತಿಳಿಯದೇ ಆಗಿದೆ.

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ಬುಲೆಟ್ ಬಾಬಾ

ದೇವರಂತೆ ಭಾವಿಸಿದ ಮನುಷ್ಯರಿಗೆ ದೇವಾಲಯವನ್ನು ನಿರ್ಮಾಣ ಮಾಡುವುದು ನಾವು ನೋಡಿದ್ದೇವೆ. ಒಂದು ಬೈಕ್‍ಗೆ ದೇವಾಲಯವಿರುವುದು ಆಶ್ಚರ್ಯವೇ ಸರಿ. ಆ ಬೈಕ್ ಅನ್ನು ಬಾಬಾ ಎಂದು ಕರೆಯುವುದು ಮತ್ತೊಂದು ವಿಚಿತ್ರ. ರಾಜಸ್ಥಾನದಲ್ಲಿನ ಚೋಟಿಯಾ ಎಂಬ ಗ್ರಾಮಕ್ಕೆ ಸೇರಿದ ಬನ್ನ ಬಾಬಾ ಒಂದು ದಿನ ಬುಲೆಟ್ ಬೈಕ್ ಅನ್ನು ಕೊಂಡುಕೊಂಡನು. ಆದರೆ ಒಂದು ಕರಾಳ ದಿನ ಆತನಿಗೆ ಅಫಘಾತವಾಗಿ ಮರಣ ಹೊಂದಿದನು. ಆಶ್ಚರ್ಯ ಏನಪ್ಪ ಏನೆಂದರೆ ಆ ಬೈಕ್‍ಅನ್ನು ಪೊಲೀಸ್ ಸ್ಟೇಷನ್ನಿಗೆ ಚೈನ್‍ನಿಂದ ಬಂಧಿಸಿದರು ಕೂಡ ಆ ಬೈಕ್ ಮತ್ತೇ ಅಪಘಾತವಾದ ಸ್ಥಳದಲ್ಲಿಯೇ ಅದೇ ಸ್ಥಿತಿಯಲ್ಲಿಯೇ ಇರುತ್ತಿತ್ತಂತೆ. ಬೈಕ್‍ನಲ್ಲಿ ಪೆಟ್ರೋಲ್ ಇಲ್ಲದೇ ಇದ್ದರು ಕೂಡ ಬೈಕ್ ತನ್ನಷ್ಟಕ್ಕೆ ತಾನೇ ಓಡಾಡುವುದು ಎಲ್ಲರಿಗೂ ಆಶ್ಚರ್ಯಕ್ಕೆ ಗುರಿಯಾಗಿತ್ತು. ಇದು ಕೂಡ ಇಂದಿಗೂ ರಹಸ್ಯವಾಗಿಯೇ ಉಳಿದಿರುವ ಮತ್ತೊಂದು ದೇವಾಲಯವಾಗಿದೆ.

PC:Sentiments777

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ಮಿಸ್ಟರಿ ಮಾನವ

ಪ್ರಪಂಚದಲ್ಲಿಯೇ ಇಂದಿಗೂ ರಹಸ್ಯಾತ್ಮಕ ಮಾನವ ಎಂದರೆ ಅದು ಪ್ರಹ್ಲಾದ್ ಜೈನ್. ಮಾತಾಜೀಯಾಗಿ ಪ್ರಸಿದ್ಧವಾಗಿರುವ ಆತ, ಸುಮಾರು ತನ್ನ 70 ವರ್ಷಗಳಿಂದ ಆಹಾರವನ್ನು ಸೇವಿಸದೇ ಪೂರ್ತಿ ಆರೋಗ್ಯವಾಗಿ ಜೀವಿಸುತ್ತಿದ್ದಾನೆ. ಅನೇಕ ಮಂದಿ ಶಾಸ್ತ್ರಜ್ಞರು ಇತನನ್ನು ಪರೀಕ್ಷೆ ಮಾಡಿದರೂ ಕೂಡ ಉತ್ತರ ದೊರೆಯುತ್ತಿಲ್ಲ. ಎಷ್ಟೊ ದಿನಗಳು ಒಂದು ಕೊಠಡಿಯಲ್ಲಿ ಇಟ್ಟಿ ಪರೀಕ್ಷಿಸಿದರೂ ಕೂಡ ಆತ ಆರೋಗ್ಯವಾಗಿಯೇ ಇದ್ದ. ಶರೀರವು ಆಹಾರವಿಲ್ಲದೇ ಹೇಗೆ ಜೀವಿಸಬಲ್ಲದು ಎಂಬುದು ಭಾರತಕ್ಕೆ ಅಲ್ಲ ಇಡೀ ಪ್ರಪಂಚಕ್ಕೆ ಇದು ಸವಾಲಾಗಿದೆ.

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ಪಕ್ಷಿಗಳ ಆತ್ಮಹತ್ಯೆ

ಅಸ್ಸಾಂ ರಾಜ್ಯದ ಬೋರಾಹಿಲ್ ಪ್ರದೇಶದಲ್ಲಿನ ಚಿಕ್ಕ ಗ್ರಾಮ ಜತಿಂಗಾ. ಇಲ್ಲಿ ಪಕ್ಷಿಗಳು ಗೂಡಗಳು ಮಾಡಿಕೊಂಡು ಜೀವಿಸುತ್ತಿರುತ್ತವೆ. ಆದರೆ ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ, ಮುಖ್ಯವಾಗಿ ಸೆಪ್ಟೆಂಬರ್ ತಿಂಗಳಿಂದ ಅಕ್ಟೋಬರ್ ತಿಂಗಳ ಮಧ್ಯೆ ನೂರಾರು ಪಕ್ಷಿಗಳು ಇಲ್ಲಿ ಆತ್ಮಹತ್ಯೆಗಳು ಮಾಡಿಕೊಳ್ಳುತ್ತವೆ. ಇದರ ಬಗ್ಗೆ ಹಲವಾರು ಸಂಶೋಧನೆಗಳು ಮಾಡಿದರು ಕೂಡ ಉತ್ತರ ಕಂಡು ಹಿಡಿಯಲು ಕಷ್ಟವಾಗಿದೆ. ನೂರಾರೂ ವಲಸೆ ಪಕ್ಷಿಗಳು ರಭಸವಾಗಿ ಗೋಡೆಗಳಿಗೆ ಮರಗಳಿಗೆ ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಈ ಪಕ್ಷಿಗಳು ಈ ಸಮಯದಲ್ಲಿಯೇ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತವೆ? ಅವು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದರೂ ಏನು? ಎಂಬುದು ಇಂದಿಗೂ ಕೂಡ ರಹಸ್ಯವಾಗಿಯೇ ಉಳಿದಿದೆ.

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?

ತೇಲಾಡುವ ಕಲ್ಲಿನ ಸ್ತಂಭ

ಇದು ಬೇರೆ ಎಲ್ಲೂ ಅಲ್ಲ ಆಂಧ್ರ ಪ್ರದೇಶ ಅನಂತರಪುರ ಜಿಲ್ಲೆಯಲ್ಲಿನ ಲೇಪಾಕ್ಷಿ ದೇವಾಲಯದಲ್ಲಿ ಇದೊಂದು ಅದ್ಭುತವಾದ ದೇವಾಲಯವಾಗಿದ್ದು, ಹಲವಾರು ಶಿಲ್ಪಕಲೆಗಳಿಂದ ಕಂಗೊಳಿಸುತ್ತಿದೆ. ಇಲ್ಲಿ ಹಲವಾರು ಸ್ತಂಭಗಳಿದ್ದು, ಒಂದು ಸ್ತಂಭ ಮಾತ್ರ ಭೂಮಿಗೆ ತಾಕದೇ ತೇಲಾಡುತ್ತಿದೆ. ಹೀಗೆ ಈ ಒಂದೇ ಸ್ತಂಭ ಮಾತ್ರ ತೇಲಾಡಲು ಕಾರಣವೇನು? ಈ ಸ್ತಂಭ ಭೂಮಿಗೆ ಯಾಕೆ ತಾಕುತ್ತಿಲ್ಲ ಎಂಬ ಹಲವಾರು ಪ್ರಶ್ನೆಗೆ ಉತ್ತರ ರಹಸ್ಯವಾಗಿಯೇ ಉಳಿದಿದೆ. ಈ ಅದ್ಭುತವನ್ನು ಕಾಣಲು ಕೇವಲ ದೇಶದ ಮೂಲೆ-ಮೂಲೆಯಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more