Search
  • Follow NativePlanet
Share
» »ತ್ರೇತಾ ಯುಗಕ್ಕೆ ಸೇರಿದ ಈ ಶಿವಲಿಂಗದ ದರ್ಶನ ಮಾಡಿದ್ರೆ ಇಷ್ಟ ಈಡೇರುತ್ತಂತೆ

ತ್ರೇತಾ ಯುಗಕ್ಕೆ ಸೇರಿದ ಈ ಶಿವಲಿಂಗದ ದರ್ಶನ ಮಾಡಿದ್ರೆ ಇಷ್ಟ ಈಡೇರುತ್ತಂತೆ

ಕೇರಳದ ಪ್ರಸಿದ್ಧ ಶಿವಲಿಂಗಗಳಲ್ಲಿ ವೈಕೋಂ ಮಹದೇವ ಮಂದಿರ ಕೂಡಾ ಒಂದು. ಕೇರಳದಲ್ಲಿರುವ ಎಟ್ಟಮನೂರ್ ಶಿವ ಮಂದಿರ ಹಾಗೂ ಕದುತುರೂತಿ ತಲಿಯಲ್ ಮಹದೇವ ಮಂದಿರದ ಜೊತೆಗೆ ಈ ಮಂದಿರವು ಪ್ರಸಿದ್ಧವಾಗಿದೆ. ಈ ಮೂರು ಮಂದಿರಗಳು ಸೇರಿ ಶಕ್ತಿಶಾಲಿ ಸಮೂಹದ ರಚನೆ ಮಾಡುತ್ತವೆ. ಯಾವುದೇ ಪೂಜೆ ಮಾಡುವ ಮೊದಲು ಈ ಮೂರು ಶಿವ ದೇವಾಲಯದ ದರ್ಶನ ಮಾಡಿದ್ರೆ ನಿಮ್ಮ ಮನೋಕಾಮನೇ ಈಡೇರುತ್ತದೆ ಎನ್ನಲಾಗುತ್ತದೆ. ವೈಕೋಂ ಶಿವ ಮಂದಿರವು ಶೈವ ಹಾಗೂ ವೈಷ್ಣವ ಇಬ್ಬರಿಗೂ ಮುಖ್ಯವಾದ ದೇವಾಲಯವಾಗಿದೆ.

ಧೋನಿ ಯಶಸ್ಸಿಗೆ ಈ ದೇವಿಯೇ ಕಾರಣವಂತೆ...ಪತ್ನಿ ಜೊತೆ ದೇವಿಯ ದರ್ಶನ ಮಾಡೋ ಕ್ಯಾಪ್ಟನ್ ಕೂಲ್

ತ್ರೇತಾ ಯುಗಕ್ಕೆ ಸೇರಿದ ಶಿವಲಿಂಗ

ತ್ರೇತಾ ಯುಗಕ್ಕೆ ಸೇರಿದ ಶಿವಲಿಂಗ

PC:Georgekutty

ವೈಕೋಂ ಮಹದೇವನನ್ನು ವೆಕ್ಕತಪ್ಪನ್ ಎಂದೂ ಕರೆಯಲಾಗುತ್ತದೆ. ಈ ಮಂದಿರದಲ್ಲಿರುವ ಶಿವಲಿಂಗವು ತ್ರೇತಾ ಯುಗಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತದೆ. ಇದು ಕೇರಳ ಪ್ರಾಚೀನ ಮಂದಿರಗಳಲ್ಲಿ ಒಂದಾಗಿದೆ. ತೀರ್ಥಯಾತ್ರೆಯ ಹೆಸರಿನಲ್ಲಿ ಇಲ್ಲಿಗೆ ಸಾಕಷ್ಟು ಭಕ್ತರು ದೇಶ ವಿದೇಶಗಳಿಂದ ಆಗಮಿಸುತ್ತಾರೆ. ಪೂರ್ಣ ಶ್ರದ್ಧೆಯಿಂದ ಪೂಜೆ ಮಾಡಲಾಗುತ್ತದೆ. ಈ ದೇವಾಲಯವು ಕೇರಳದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ.

ಪೌರಾಣಿಕ ಕಥೆ

ಪೌರಾಣಿಕ ಕಥೆ

PC: Sivavkm

ಖಾರಾಸುರ ಮಾಲ್ಯವಲನದಿಂದ ಶೈವ ವಿದ್ಯೆಯ ಉಪದೇಶವನ್ನು ಪಡೆಯಲು ಚಿದಂಬರಮ್‌ಗೆ ಹೋಗಿದ್ದ. ಅಲ್ಲಿ ಆತ ಮೋಕ್ಷ ಪ್ರಾಪ್ತಿಗಾಗಿ ಕಠೋರ ತಪ್ಪನ್ನು ಮಾಡಿದ. ಆತನ ತಪಸ್ಸಿಗೆ ಮೆಚ್ಚಿದ ಶಿವ ಆತನಿಗೆ ದರ್ಶನ ನೀಡಿ ಆತ ಕೇಳಿದ ವರವನ್ನು ನೀಡಿದ. ಜೊತೆಗೆ ಶಿವ ಈತನಿಗೆ ಮೂರು ಶಿವಲಿಂಗವನ್ನು ನೀಡಿ ನಾನು ಯಾವಾಗಲೂ ಈ ಶಿವಲಿಂಗದಲ್ಲಿರುತ್ತೇನೆ. ಮೋಕ್ಷ ಪ್ರಾಪ್ತಿ ಮಾಡಬೇಕಾದರೆ ಈ ಮೂರು ಶಿವಲಿಂಗದ ಪೂಜೆ ಮಾಡಬೇಕು ಎಂದು ಹೇಳಿ ಮಾಯವಾಗುತ್ತಾನೆ ಶಿವ.

ಮೂರು ಶಿವಲಿಂಗ ಹೊತ್ತು ಸಾಗಿದ ಖಾರಾಸುರ

ಮೂರು ಶಿವಲಿಂಗ ಹೊತ್ತು ಸಾಗಿದ ಖಾರಾಸುರ

PC:Sivavkm

ಖಾರಾಸುರ ಒಂದು ಶಿವಲಿಂಗವನ್ನು ಬಲಗೈಯಲ್ಲಿ ಹಿಡಿದು ಇನ್ನೊಂದನ್ನು ಎಡಗೈಯಲ್ಲಿ ಹಿಡಿದು ಮೂರನೆಯದನ್ನು ಕುತ್ತಿಗೆಗೆ ಕಟ್ಟಿಕೊಂಡು ಮುಂದೆ ಸಾಗಿದನು. ಹಿಮಾಲಯದಿಂದ ಈ ಲಿಂಗಗಳನ್ನು ತೆಗೆದುಕೊಂಡು ಬರುವಾಗ ಖಾರಾಸುರ ಸುಸ್ತಾಗಿದ್ದ. ಅದನ್ನು ನೆಲದ ಮೇಲೆ ಇಟ್ಟು ಸ್ವಲ್ಪ ವಿಶ್ರಮಿಸಿದ. ಆದರೆ ಎದ್ದ ನಂತರ ಆ ಶಿವಲಿಂಗಗಳನ್ನು ಎತ್ತಲು ಪ್ರಯತ್ನಿಸಿದರೆ ಅದು ಅಲುಗಾಡಿಸಲೂ ಸಾಧ್ಯವಾಗಲಿಲ್ಲ. ಆಗಲೇ ಒಂದು ಅಶರೀರವಾಣಿ ಕೇಳಿಸುತ್ತದೆ ಮೋಕ್ಷ ಪ್ರಾಪ್ತಿಗಾಗಿ ನಾನು ಇಲ್ಲೇ ಉಪಸ್ಥಿತನಿರುವುದಾಗಿ ಹೇಳುತ್ತದೆ. ಖಾರಾಸುರ ಮೋಕ್ಷ ಪ್ರಾಪ್ತಿಯಾದ ನಂತರ ಈ ಶಿವಲಿಂಗಗಳನ್ನು ಮಹರ್ಷಿ ವ್ಯಾಘ್ರಪಾಡನಿಗೆ ಹಸ್ತಾಂತರಿಸಿದ್ದನು ಎನ್ನಲಾಗುತ್ತದೆ.

ಧಾರ್ಮಿಕ ಮಾನ್ಯತೆ

ಧಾರ್ಮಿಕ ಮಾನ್ಯತೆ

PC:Sivavkm

ಖಾರಾಸುರ ಯಾವ ಶಿವಲಿಂಗವನ್ನು ಬಲಗೈಯಲ್ಲಿ ಹಿಡಿದಿದ್ದನೋ ಅದರ ಪೂಜೆ ವಾಯಿಕಂನಲ್ಲಿ ನಡೆಯುತ್ತದೆ. ಎಡಗೈಯಲ್ಲಿ ಹಿಡಿದಿದ್ದ ಶಿವಲಿಂಗ ಎಟ್‌ಮುನ್ನಾರ್‌ ಹಾಗೂ ಕುತ್ತಿಗೆಯಲ್ಲಿದ್ದ ಶಿವಲಿಂಗ ಕತುತುರೂತಿಯಲ್ಲಿ ಪೂಜಿಸಲಾಗುತ್ತಿದೆ ಎನ್ನಲಾಗುತ್ತದೆ. ಈ ಮೂರು ಮಂದಿರಗಳು ಪ್ರತಿಯೊಂದಕ್ಕಿಂತ ಸ್ವಲ್ಪ ದೂರದಲ್ಲಿದೆ.

ವೈಕೋಂ ಅಷ್ಟಮಿ

ವೈಕೋಂ ಅಷ್ಟಮಿ

PC:RajeshUnuppally

ಇದು ಈ ಮಂದಿರದಲ್ಲಿ ಆಚರಿಸಲಾಗುವ ಮುಖ್ಯ ಹಬ್ಬವಾಗಿದೆ. ಇದು ನವಂಬರ್, ಡಿಸೆಂಬರ್ ನಡುವೆ ನಡೆಯುತ್ತದೆ. ಇದು ಮಲಯಾಳಂ ಕ್ಯಾಲೆಂಡರ್ ಮೂಲಕ ನಿರ್ಧರಿತವಾಗುತ್ತದೆ. ಇದರ ಹಿಂದೆಯೂ ಒಂದು ಪೌರಾಣಿಕ ಕಥೆ ಇದೆ. ಮಹರ್ಷಿ ವ್ಯಾಘ್ರಪದರು ಶಿವನಿಗಾಗಿ ತಪಸ್ಸು ಮಾಡುತ್ತಾರೆ. ಶಿವನು ಕೃಷ್ಣಾಷ್ಠಮಿ ದಿನ ಮಹರ್ಷಿಗೆ ದರ್ಶನ ನೀಡುತ್ತಾನೆ. ಹಾಗಾಗಿ ಈ ನೆನಪಿಗಾಗಿ ವೈಕೋಂ ಅಷ್ಠಮಿ ಆಚರಿಸಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ವೈಕೋಂ ಮಂದಿರಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಕೊಚ್ಚಿ ಏರ್ಪೋರ್ಟ್. ಇನ್ನೂ ನೀವು ರೈಲು ಮುಖಾಂತರ ಹೋಗುತ್ತೀರಾದರೆ ವಾಯಿಕಂ ರೈಲ್ವೆ ಸ್ಟೇಶನ್ ಮೂಲಕ ಹೋಗಬೇಕು. ದಕ್ಷಿಣ ಭಾರತದ ಅನೇಕ ನಗರಗಳಿಂದ ಇಲ್ಲಿಗೆ ಬಸ್ ವ್ಯವಸ್ಥೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more