Search
  • Follow NativePlanet
Share
» »ಬೆಂಗಳೂರಿನಿಂದ ರಸ್ತೆ ಪ್ರವಾಸ ಮಾಡಬಯಸುವಿರಾ?

ಬೆಂಗಳೂರಿನಿಂದ ರಸ್ತೆ ಪ್ರವಾಸ ಮಾಡಬಯಸುವಿರಾ?

By Vijay

ಭಾರತದ ಮಹಾನಗರಗಳು ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗಳನ್ನು ಸದಾ ಆಕರ್ಷಿಸುತ್ತವೆ. ಇದಕ್ಕೆ ಕಾರಣ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಉದ್ಯೋಗ ಆಯ್ಕೆಗಳು ಮಹಾನಗರಗಳಲ್ಲಿ ಲಭ್ಯವಿರುವುದೆ ಆಗಿದೆ. ಅದರಂತೆ ಭಾರತ ಸಿಲಿಕಾನ್ ಕಣಿವೆ, ಉದ್ಯೋಗಗಳ ಕಣಜವಾದ ಬೆಂಗಳೂರು ಸಹ ಒಂದು.

ದಿನನಿತ್ಯ ನೂರಾರು ಜನರು ದೇಶದ ವಿವಿಧ ಭಾಗಗಳಿಂದ ಈ ಮಹಾನಗರಿಗೆ ಉದ್ಯೋಗ ಅರಿಸಿ ಬರುತ್ತಾರೆ. ಪ್ರಸ್ತುತ ಬೆಂಗಳೂರು ಇಂದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಹೊಂದಿರುವ ಮಹಾನಗರಗಳ ಪೈಕಿ ಒಂದಾಗಿದೆ. ಆದರೆ ಬೆಂಗಳೂರಿನಲ್ಲಿ ಜೀವನ ಅಷ್ಟೊಂದು ಸುಲಭವಾಗಿಲ್ಲ. ದಿನನಿತ್ಯ ಕೆಲಸದ ಒತ್ತಡ ಬೆಂಗಳೂರಿಗರನ್ನು ಬಳಲಿ ಬೆಂಡಾಗುವಂತೆ ಮಾಡುವುದು ಸುಳ್ಳಲ್ಲ.

ಹೀಗೆ ಒತ್ತಡ ಇದೆ ಎಂದು ಸುಮ್ಮನೆ ಕುಳಿತುಕೊಳ್ಳುವುದು ಉತ್ತಮವಲ್ಲ ಎಂದರಿತಿರುವ ಬಹುತೇಕ ಬೆಂಗಳೂರಿಗರು ಅದನ್ನು ನಿವಾರಿಸಿಕೊಳ್ಳುವ ಮಾರ್ಗವನ್ನೂ ಕಂಡುಕೊಂಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದೆ ವಾರಾಂತ್ಯದ ರಜೆಗಳಲ್ಲಿ ಅಥವಾ ಇಂದು ಜನಪ್ರೀಯವಾಗಿ ಕರೆಯಲಾಗುವ ಲಾಂಗ್ ವಿಕೆಂಡ್ ಗಳಲ್ಲಿ ರಸ್ತೆ ಪ್ರವಾಸ ಹೊರಡುವುದು.

ಪ್ರವಾಸಗಳು ನಿಜವಾಗಿಯೂ ಮನಸಿನ ಒತ್ತಡ ಕಡಿಮೆ ಮಾಡಿ ಒಂದು ಆಹ್ಲಾದಕರ ಭಾವನೆಯನ್ನು ತುಂಬಿಸುವುದು ಸುಳ್ಳಲ್ಲ. ಇನ್ನೂ ಸ್ವತಃ ಕಾರುಗಳಲ್ಲಿ ಅಥವಾ ಬೈಕುಗಳಲ್ಲಿ ಇಲ್ಲವೆ ಬಾಡಿಗೆ ಕಾರುಗಳ ಮೂಲಕ ಸ್ನೇಹಿತರೊಂದಿಗೋ ಇಲ್ಲವೆ ಕುಟುಂಬ ಸಮೇತರಾಗಿ ರಸ್ತೆ ಪ್ರವಾಸಕ್ಕೆ ಹೊರಟರೆ ಎಲ್ಲಿಲ್ಲದ ಸಂತಸ, ಹುರುಪುಗಳು ತಾನೆ ತಾನಾಗಿಯೆ ಬರುತ್ತವೆ.

ಹಾಗಾದರೆ ಬೆಂಗಳೂರಿನಿಂದ ನೀವು ರಸ್ತೆ ಪ್ರವಾಸ ಮಾಡಲಿಚ್ಛಿಸಿದ್ದರೆ ಯಾವೆಲ್ಲ ಸ್ಥಳಗಳಿಗೆ ಹೊರಡಬಹುದು ಹಾಗೂ ಅವುಗಳ ದೂರ ಬೆಂಗಳೂರಿನಿಂದ ಎಷ್ಟಿದೆ ಎಂಬುದರ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ. ನಿಮಗಿಷ್ಟವಾದ ನಗರವನ್ನು ಆಯ್ಕೆ ಮಾಡಿ, ಸಮಯ ಮಾಡಿಕೊಂಡು ಒಂದು ಸುಂದರ ಪ್ರವಾಸ ಮಾಡಿ ಬನ್ನಿ. ನಿಮ್ಮ ಪ್ರವಾಸ ಸುಖಮಯವಾಗಿರಲೆಂದು ನಾವು ಹಾರೈಸುತ್ತೇವೆ.

ರಾ.ಹೆ 275

ರಾ.ಹೆ 275

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275 ಅನ್ನು ಬಳಸಿಕೊಂಡು ಕೊಡಗನ್ನು ಬೆಂಗಳೂರಿನಿಂದ ರಾಮನಗರ-ಮೈಸೂರು-ಹುಣಸೂರು-ಕೊಡಗು ಮಾರ್ಗವಾಗಿ ತಲುಪಬಹುದಾಗಿದೆ. 240

ಚಿತ್ರಕೃಪೆ: muscicapa

450 ಕಿ.ಮೀ

450 ಕಿ.ಮೀ

ತಮಿಳುನಾಡಿನ ಆಕರ್ಷಕ ಪ್ರವಾಸಿ ತಾಣವಾದ ಕೊಡೈಕೆನಲ್ ಅನ್ನು ಬೆಂಗಳೂರಿನಿಂದ ಎರಡು ಮಾರ್ಗಗಳ ಮೂಲಕ ತಲುಪಬಹುದಾಗಿದೆ. ಒಂದು ಮಾರ್ಗವು ಬೆಂಗಳೂರು-ಹೊಸೂರು-ಧರ್ಮಪುರಿ-ಸೇಲಂ-ದಿಂಡುಕ್ಕಲ್-ಕೊಡೈಕೆನಲ್ ಆಗಿದ್ದರೆ ಇನ್ನೊಂದು ಮಾರ್ಗವು ಬೆಂಗಳೂರು-ಹೊಸೂರು-ಧರ್ಮಪುರಿ-ಪಳನಿ-ಕೊಡೈಕೆನಲ್ ಮಾರ್ಗವಿದೆ. ಎರಡನೇಯ ಮಾರ್ಗದಲ್ಲಿ ಕೊಡೈಕೆನಲ್ 435 ಕಿ.ಮೀ ಗಳಷ್ಟು ದೂರವಿದೆಯಾದರೂ ಪ್ರಯಾಣಾವಧಿ ಅಧಿಕವಾಗಿದೆ.

ಚಿತ್ರಕೃಪೆ: Ahmed Mahin Fayaz

ತಮಿಳುನಾಡು

ತಮಿಳುನಾಡು

ಕುಣ್ಣೂರು ಊಟಿಗೆ ಹತ್ತಿರದಲ್ಲಿರುವ ತಮಿಳುನಾಡಿನ ಮತ್ತೊಂದು ಸೊಗಸಾದ ಗಿರಿಧಾಮವಾಗಿದೆ. ಕುಣ್ಣೂರನ್ನು ಬೆಂಗಳೂರಿನಿಂದ ಮೈಸೂರು-ನಂಜನಗೂಡು-ಬಂಡೀಪುರ-ಮಾಸಿನಗುಡಿ-ಊಟಿ-ಕುಣ್ಣೂರು ಹೀಗೆ ತಲುಪಬಹುದಾಗಿದೆ.

ಚಿತ್ರಕೃಪೆ: Thangaraj Kumaravel

ಆಂಧ್ರಪ್ರದೇಶ

ಆಂಧ್ರಪ್ರದೇಶ

ಆಂಧ್ರಪ್ರದೇಶದ ಅದ್ಭುತ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವಪಡೆದ ಲೇಪಾಕ್ಷಿಯನ್ನು ಬೆಂಗಳೂರಿನಿಂದ ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ-ಬಾಗೆಪಲ್ಲಿ-ಕೋಡಿಕೊಂಡದ ಮೂಲಕ ತಲುಪಬಹುದಾಗಿದೆ.

ಚಿತ್ರಕೃಪೆ: Srihari Kulkarni

ಗಿರಿಧಾಮ

ಗಿರಿಧಾಮ

ಕರ್ನಾಟಕದ ಸುಂದರ ಗಿರಿಧಾಮ ಪ್ರದೇಶವಾದ ಕುದುರೆಮುಖವು ನಯನ ಮನೋಹರ ಪ್ರವಾಸಿ ತಾಣವಾಗಿದೆ. ಈ ಸುಂದರ ಗಿರಿಧಾಮವನ್ನು ಬೆಂಗಳೂರಿನಿಂದ ಕುಣಿಗಲ್-ಹಾಸನ-ಬೇಲೂರು-ಕೊಟ್ಟಿಗೆಹಾರ-ಕಳಸ-ಸಂಸೆ-ಕುದುರೆಮುಖ ಹೀಗೆ ತಲುಪಬಹುದಾಗಿದೆ.

ಚಿತ್ರಕೃಪೆ: Dhruvaraj S

ಕಾವೇರಿ ನದಿ

ಕಾವೇರಿ ನದಿ

ಬೆಂಗಳೂರಿನಿಂದ ಮೇಕೆದಾಟುವನ್ನು ತಲುಪಲು ಹಲವಾರು ಮಾರ್ಗಗಳಿವೆ. ನಿಮಗೆ ಕಾರಿನ ಮೂಲಕ ಯಾವುದೆ ಅಡೆ-ತಡೆಗಳಿಲ್ಲದೆ ಆದಷ್ಟು ಸುಗಮವಾಗಿ ಸಾಗಬೇಕೆಂದಿದ್ದರೆ ಕನಕಪುರ-ಮಳವಳ್ಳಿ-ಶಿವನಸಮುದ್ರ ಹೀಗೆ ತೆರಳಬಹುದು. ಆದರೆ ಇದು ಸುತ್ತು ಬಳಸಿ ಹೋಗುವ ಮಾರ್ಗವಾಗಿ ಒಟ್ಟಾರೆ ದೂರ ಹೆಚ್ಚಾಗುತ್ತದೆ. ಬೈಕಿನಲ್ಲಿ ತೆರಳಬೇಕೆಂದಿದ್ದಲ್ಲಿ ಕನಕಪುರದವರೆಗೆ ಉತ್ತಮವಾದ ರಸ್ತೆಯಲ್ಲಿ ತೆರಳಿ ನಂತರ ಅಲ್ಲಿಂದ ಎಡ ತಿರುವು ಪಡೆದು ಸಂಗಮ-ಮೇಕೆದಾಟು ಹೀಗೆ ತಲುಪಬಹುದು. ಹೆಚ್ಚು ಕಡಿಮೆ ಈ ದೂರ ಬೆಂಗಳೂರಿನಿಂದ ಸುಮಾರು ನೂರು ಕಿ.ಮೀ ಗಳಷ್ಟಾಗಬಹುದು.

ಚಿತ್ರಕೃಪೆ: Renjith Sasidharan

ರಾಷ್ಟ್ರೀಯ ಉದ್ಯಾನ

ರಾಷ್ಟ್ರೀಯ ಉದ್ಯಾನ

ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ರಸ್ತೆಯ ಮೂಲಕ ಬೆಂಗಳೂರಿನಿಂದ ಮೈಸೂರು ಮಂಡ್ಯ-ಮೈಸೂರು-ನಂಜನಗೂಡು-ಬಂಡೀಪುರ ರಾಷ್ಟ್ರೀಯ ಉದ್ಯಾನ ಹೀಗೆ ತಲುಪಬಹುದಾಗಿದೆ.

ಚಿತ್ರಕೃಪೆ: Sarath Kuchi

ನಂದಿಬೆಟ್ಟದ ಮುಂದೆ

ನಂದಿಬೆಟ್ಟದ ಮುಂದೆ

ನಂದಿಬೆಟ್ಟದಂತೆ ಇರುವ ನೋಡಲು ಬಲು ಸೊಗಸಾಗಿರುವ ಬೆಂಗಳೂರಿಗೆ ಹತ್ತಿರದಲ್ಲೆ ಇರುವ ಆವಲಬೆಟ್ಟವನ್ನು ಬೆಂಗಳೂರಿನಿಂದ ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ-ಮಂಡಿಕಲ್-ಆವಲಬೆಟ್ಟ ಹೀಗೆ ಪ್ರಯಾಣಿಸಿ ತಲುಪುವುದು ಉತ್ತಮವಾಗಿದೆ.

ಚಿತ್ರಕೃಪೆ: Akshata Vinayak

ಕೇರಳ

ಕೇರಳ

ಕೇರಳದ ಆಕರ್ಷಕ ಪ್ರವಾಸಿ ಸ್ಥಳಗಳಲ್ಲೊಂದಾದ ವಯನಾಡ್ ಅನ್ನು ಬೆಂಗಳೂರಿನಿಂದ ಮೈಸೂರು-ನಂಜನಗೂಡು-ಬಂಡೀಪುರ ರಾಷ್ಟ್ರೀಯ ಉದ್ಯಾನ-ಸುಲ್ತಾನ್ ಬತೇರಿ-ವಯನಾಡ್ ಹೀಗೆ ಪ್ರಯಾಣಿಸಿ ತಲುಪಬಹುದಾಗಿದೆ.

ಚಿತ್ರಕೃಪೆ: Dhruvaraj S

ಆಕರ್ಷಕ

ಆಕರ್ಷಕ

ಕಾವೇರಿ ನದಿಯು ಸುಶ್ರಾವಯ್ವಾಗಿ ಹರಿಯುತ್ತ, ಅದ್ಭುತ ಪ್ರಾಕೃತಿಕ ಸೊಬಗನ್ನು ಹೊಂದಿರುವ, ಆಕರ್ಷಕ ರಿಸಾರ್ಟುಗಳಿರುವ ಭೀಮೇಶ್ವರಿಯನ್ನು ಬೆಂಗಳೂರಿನಿಂದ ಕನಕಪುರ-ಸತನೂರು-ಭೀಮೇಶ್ವರಿ ಈ ರೀತಿಯಾಗಿ ಪ್ರಯಾಣಿಸಿ ತಲುಪಬಹುದಾಗಿದೆ.

ಚಿತ್ರಕೃಪೆ: Ashwin Kumar

ಮೈಸೂರು ಬಳಿ

ಮೈಸೂರು ಬಳಿ

ಮೈಸೂರು ರಸ್ತೆಯಲ್ಲಿ ಮದ್ದೂರಿನವರೆಗೆ ಕ್ರಮಿಸಿ ನಂತರ ಅಲ್ಲಿಂದ ಎಡ ತಿರುವು ಪಡೆದು ಕೆ ಎಂ ದೊಡ್ಡಿಯ ಮೂಲಕ ಕೊಳ್ಳೆಗಾಲ ಪ್ರವೇಶಿಸಿ ಬಿಳಿಗಿರಿರಂಗನ ಬೆಟ್ಟ ತಲುಪುವುದು ಒಂದು ಮಾರ್ಗವಾದರೆ ಸುಗಮವಾಗಿ ಹಾಗೂ ಚಾಲ್ತಿಯಲ್ಲಿರುವ ಮಾರ್ಗವೆಂದರೆ ಬೆಂಗಳೂರಿನಿಂದ ಕನಕಪುರ-ಮಳವಳ್ಳಿ-ಕೊಳ್ಳೆಗಾಲ-ಬಿಳಿಗಿರಿರಂಗನ ಬೆಟ್ಟ.

ಚಿತ್ರಕೃಪೆ: Shveta

ಬಂದರು ನಗರಿ

ಬಂದರು ನಗರಿ

ದಕ್ಷಿಣ ಕನ್ನಡ ಜಿಲ್ಲೆಯ ಆಕರ್ಷಕ ಬಂದರು ನಗರಿ ಮಂಗಳೂರನ್ನು ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿಗಳಾದ 75 ಹಾಗೂ 73 ಗಳನ್ನು ಬಳಸಿಕೊಂಡು ಕುಣಿಗಲ್-ಹಾಸನ-ಸಕಲೇಶಪುರ-ಪುತ್ತೂರು-ಮಂಗಳೂರು ಹೀಗೆ ಪ್ರಾಯಣ ಮಾಡಿ ತಲುಪಬಹುದು. ರಾಷ್ಟ್ರೀಯ ಹೆದ್ದಾರಿ 73 ರಲ್ಲೆ ಸಾಗಬೇಕಿದ್ದಲ್ಲಿ ಹಾಸನದಿಂದ ಸಕಲೇಶಪುರದ ಬದಲು ಬಲಕ್ಕೆ ತಿರುಗಿ ಬೇಲೂರು-ಮುಡಿಗೆರೆ ಮೂಲಕವಾಗಿಯೂ ಮಂಗಳೂರನ್ನು ತಲುಪಬಹುದು.

ಚಿತ್ರಕೃಪೆ: spykster

ಸಾಂಸ್ಕೃತಿಕ ನಗರ

ಸಾಂಸ್ಕೃತಿಕ ನಗರ

ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರನ್ನು ಬೆಂಗಳೂರಿನಿಂದ ಪ್ರಸಿದ್ಧವಾದ ಮೈಸೂರು ರಸ್ತೆ ಬಳಸಿ ರಾಮನಗರ-ಚೆನ್ನಪಟ್ಟಣ-ಮದ್ದೂರು-ಮಂಡ್ಯದ ಮುಲಕ ಸಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Spiros Vathis

ನೋಡಲೇಬೇಕಾದ

ನೋಡಲೇಬೇಕಾದ

ಬೆಂಗಳೂರು ಬಳಿಯಿರುವ ಜನಪ್ರೀಯ ಪ್ರವಾಸಿ ಅಕರ್ಷಣೆಯಾದ ನಂದಿಬೆಟ್ಟವನ್ನು ಬೆಂಗಳೂರು-ಹೈದರಾಬಾದ್ ರಸ್ತೆ ಬಳಸಿಕೊಂಡು ಯಲಹಂಕ-ದೇವನಹಳ್ಳಿ ನಂತರ ಕೆಲ ದೂರದವರೆಗೆ ಅದೆ ರಸ್ತೆಯಲ್ಲಿ ಕ್ರಮಿಸಿ ಮುಂದೆ ಎಡ ತಿರುವು ಪಡೆದು ನಂದಿಬೆಟ್ಟ ಮುಖ್ಯ ರಸ್ತೆಯನ್ನು ಸೇರಿ ತಲುಪಬಹುದಾಗಿದೆ.

ಚಿತ್ರಕೃಪೆ: Harsha K R

ಗಿರಿಧಾಮಗಳ ರಾಣಿ

ಗಿರಿಧಾಮಗಳ ರಾಣಿ

ಗಿರಿಧಾಮಗಳ ರಾಣಿ ಊಟಿಯನ್ನು ಬೆಂಗಳೂರಿನಿಂದ ಮಂಡ್ಯ-ಮೈಸೂರು-ನಂಜನಗೂಡು-ಮಾಸಿನಗುಡಿ-ಊಟಿ ಹೀಗೆ ಪ್ರಯಾಣಿಸಿ ತಲುಪಬಹುದಾಗಿದೆ.

ಚಿತ್ರಕೃಪೆ: Big Eyed Sol

ಅದ್ಭುತ ಶಿವ ಪ್ರತಿಮೆ

ಅದ್ಭುತ ಶಿವ ಪ್ರತಿಮೆ

ಉತ್ತರ ಕನ್ನಡ ಜಿಲ್ಲೆಯ ಆಕರ್ಷಕ ಶಿವ ಪ್ರತಿಮೆಯ, ಕಡಲ ತಡಿಯ ಪ್ರವಾಸಿ ಕೇಂದ್ರವಾದ ಮುರುಡೇಶ್ವರವನ್ನು ಬೆಂಗಳೂರು-ಶಿವಮೊಗ್ಗ ರಸ್ತೆ ಇಲ್ಲವೆ ಹಾವೇರಿಯವರೆಗೆ ರಾಷ್ಟ್ರೀಯ ಹೆದ್ದಾರಿ ನಾಲ್ಕನ್ನು (ಪುಣೆ-ಬೆಂಗಳೂರು ರಸ್ತೆ) ಬಳಸಿಕೊಂಡು ತೆರಳಿ ನಂತರ ಅಲ್ಲಿಂದ ಶಿರಸಿ-ಕುಮಟಾ-ಹೊನ್ನಾವರದ ಮಾರ್ಗವಾಗಿ ಮುರುಡೇಶ್ವರ ತಲುಪಬಹುದು. ಶಿವಮೊಗ್ಗ-ಬೆಂಗಳೂರು ರಸ್ತೆ ಬಳಸಿದಾಗ ಶಿವಮೊಗ್ಗ-ಸಾಗರ-ಹೊನ್ನಾವರದ ಮೂಲಕ ಮುರುಡೇಶ್ವರ ತಲುಪಬಹುದು.

ಚಿತ್ರಕೃಪೆ: varun suresh

ಪಕ್ಷಿಧಾಮ

ಪಕ್ಷಿಧಾಮ

ರಂಗನತಿಟ್ಟು ಒಂದು ಆಕರ್ಷಕ ಪಕ್ಷಿಧಾಮ ಹಾಗೂ ಜನಪ್ರೀಯ ಪ್ರವಾಸಿ ತಾಣ. ಮೈಸೂರಿಗೆ ಬಲು ಹತ್ತಿರದಲ್ಲಿರುವ ರಂಗನತಿಟ್ಟುವಿಗೆ ಮಂಡ್ಯ-ಶ್ರೀರಂಗಪಟ್ಟಣ ಮಾರ್ಗವಾಗಿ ತೆರಳಿ ಅಲ್ಲಿಂದ ಮೈಸೂರಿನ ಬದಲು ಬಲಕ್ಕೆ ಹೊರಳಿ ರಂಗನತಿಟ್ಟುವನ್ನು ಪ್ರವೇಶಿಸಬಹುದು.

ಚಿತ್ರಕೃಪೆ: Sissssou2

ಹಾಸನ

ಹಾಸನ

ಹಾಸನ ಜಿಲ್ಲೆಯ ಹಸಿರಿನ ಸೊಬಗುಳ್ಳ ಸುಂದರ ಸಕಲೇಶಪುರವನ್ನು ಬೆಂಗಳೂರಿನಿಂದ ಕುಣಿಗಲ್-ಹಾಸನ-ಸಕಲೇಶಪುರ ಹೀಗೆ ಪ್ರಯಾಣ ಮಾಡಿ ತಲುಪಬಹುದಾಗಿದೆ.

ಚಿತ್ರಕೃಪೆ: sai prasad

ಕಾವೇರಿ-ಅರ್ಕಾವತಿ

ಕಾವೇರಿ-ಅರ್ಕಾವತಿ

ಕಾವೇರಿ-ಅರ್ಕಾವತಿ ನದಿಗಳು ಸೇರುವ ಸ್ಥಳವಾಗಿ ಸಂಗಮವು ಸಾಕಷ್ಟು ಜನಪ್ರೀಯತೆಗಳಿಸಿರುವ ತಾನವಾಗಿದೆ. ಸಂಗಮವನ್ನು ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Vikram Vetrivel

ಐತಿಹಾಸಿಕ

ಐತಿಹಾಸಿಕ

ಅದ್ಭುತ ಐತಿಹಾಸಿಕ ಸ್ಮಾರಕಗಳುಳ್ಳ ಭವ್ಯ ಇತಿಹಾಸ ಸಾರುವ ವಿಜಯಪುರವನ್ನು (ಹಿಂದಿನ ಬಿಜಾಪುರ) ಬೆಂಗಳೂರಿನಿಂದ ತುಮಕೂರು-ಚಿತ್ರದುರ್ಗ-ಹೊಸಪೇಟೆ-ಇಳಕಲ್ ಮಾರ್ಗವಾಗಿ ತಲುಪಬಹುದಾಗಿದೆ. ಇನ್ನೊಂದು ಮಾರ್ಗವೆಂದರೆ ತುಮಕೂರು-ಹುಬ್ಬಳ್ಳಿ-ಬಾಗಲಕೋಟೆ-ವಿಜಯಪುರ.

ಚಿತ್ರಕೃಪೆ: Ajithpsalim

ದೈತ್ಯ ಬೆಟ್ಟ

ದೈತ್ಯ ಬೆಟ್ಟ

ಏಷಿಯಾದ ಅತಿ ದೊಡ್ಡ ಏಕಶಿಲಾ ದೈತ್ಯ ಬೆಟ್ಟ ಎಮ್ದೆ ಪರಿಗಣಿಸಲಾಗಿರುವ ಹಾಗೂ ಪರ್ವತಾರೋಹಣಕ್ಕಾಗಿ ಸಾಕಷ್ಟು ಹೆಸರುವಾಸಿಯಾಗಿರುವ ಸಾವನದುರ್ಗವನ್ನು ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆ ಈ ಎರಡು ಮಾರ್ಗಗಳಿಂದ ತಲುಪಬಹುದಾಗಿದೆ. ಮೈಸೂರು ರಸ್ತೆಯ ಮೂಲಕ ಹೆಜ್ಜಾಲ-ದೊಡ್ಡೇರಿ-ಮಂಚನಬೆಲೆಯ ಮುಲಕ ತಲುಪಬಹುದಾಗಿದ್ದು ಮಾಗಡಿ ರಸ್ತೆ ಬಳಸಿಕೊಂಡು ಸುಂಕದಕಟ್ಟೆ, ತಾವರೆಕೆರೆ ಮುಲಕ ಮಾಗಡಿ ಬಳಿ ತಿರುವು ಪಡೆದು ಸಾವನದುರ್ಗ ತಲುಪಬಹುದು.

ಚಿತ್ರಕೃಪೆ: Prashant Dobhal

ಜಲಪಾತಗಳು

ಜಲಪಾತಗಳು

ಅದ್ಭುತ ಪ್ರವಾಸಿ ತಾಣ ಹಾಗೂ ಆಕರ್ಷಕ ಜಲಪಾತಗಳುಳ್ಳ ಶಿವನಸಮುದ್ರವನ್ನು ಮೈಸೂರು ರಸ್ತೆ ಬಳಸಿಕೊಂಡು ಮದ್ದೂರಿನವರೆಗೆ ನಂತರ ಅಲ್ಲಿಂದ ಎಡ ತಿರುವು ಪಡೆದು ಮಳವಳ್ಳಿಯ ಮೂಲಕ ಶಿವನಸಮುದ್ರ ತಲುಪುವುದು ಒಂದು ಮಾರ್ಗವಾದರೆ ಇನ್ನೊಂದು ಮಾರ್ಗವು ಬೆಂಗಳೂರಿನಿಂದ ಕನಕಪುರ-ಸತನೂರು-ಮಳವಳ್ಳಿ ಮಾರ್ಗವಾಗಿಯೂ ಶಿವನಸಮುದ್ರಕ್ಕೆ ತೆರಳಬಹುದಾಗಿದೆ.

ಚಿತ್ರಕೃಪೆ: Ashwin06k

ಚಾರಣ

ಚಾರಣ

ಸ್ಕಂದಗಿರಿ ಬೆಟ್ಟ ಚಾರಣಯೋಗ್ಯ ಅದ್ಭುತ ತಾಣವಾಗಿದ್ದು ಬೆಂಗಳೂರಿನಿಂದ ದೇವನಹಳ್ಳಿ-ಕೊತನೂರು-ಸತ್ಯಸಾಯಿ ಗ್ರಾಮ-ಕಲಾವರದ ಮುಲಕವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: commons.wikimedia

ಪ್ರವಾಸಿ ಕೇಂದ್ರ

ಪ್ರವಾಸಿ ಕೇಂದ್ರ

ರಾಷ್ಟ್ರೀಯ ಹೆದ್ದಾರಿ 75 ಅನ್ನು ಬಳಸಿಕೊಂಡು ಉಡುಪಿಯನ್ನು ಬೆಂಗಳೂರಿನಿಂದ ಕುಣಿಗಲ್-ಹಾಸನ-ಬೇಲೂರು-ಮುಡಿಗೆರೆ-ಕಾರ್ಕಳ ಮಾರ್ಗವಾಗಿ ಉಡುಪಿಯನ್ನು ತಲುಪಬಹುದಾಗಿದೆ.

ಚಿತ್ರಕೃಪೆ: Subhashish Panigrahi

ಅದ್ಭುತ

ಅದ್ಭುತ

ಶ್ರೀಮಂತ ಚರಿತ್ರೆ, ಆಕರ್ಷಕ ಬಂಡೆಯಲ್ಲಿ ಕಡೆಯಲಾದ ಗುಹೆಗಳುಳ್ಳ ಅದ್ಭುತ ಪ್ರವಾಸಿ ತಾಣವಾದ ಬಾಗಲಕೋಟೆ ಜಿಲ್ಲೆಯ ಬಾದಾಮಿಯನ್ನು ಬೆಂಗಳೂರಿನಿಂದ ತುಮಕೂರು-ಚಿತ್ರದುರ್ಗ-ಹೊಸಪೇಟೆ-ಗಜೇಂದ್ರಗಡ್ ಮಾರ್ಗವಾಗಿ ತಲುಪುವುದು ಒಂದು ಮಾರ್ಗವಾದರೆ, ಇನ್ನೊಂದು ಮಾರ್ಗವು ತುಮಕೂರು-ದಾವಣಗೆರೆ-ಹುಬ್ಬಳ್ಳಿ-ನವಲಗುಂದ-ನರಗುಂದ ಮಾರ್ಗವಾಗಿಯೂ ತಲುಪಬಹುದಾಗಿದೆ.

ಚಿತ್ರಕೃಪೆ: Shubham.g.w

ಅತಿ ಪ್ರಾಚೀನ

ಅತಿ ಪ್ರಾಚೀನ

ಪ್ರಾಯಶಃ ಭಾರತದಲ್ಲಿ ಮೊದ ಮೊದಲಿಗೆ ದಾಖಲಿಸಲಾದ ಅತ್ಯಂತ ಪುರಾತನ ದೇವಾಲಯಗಳ ಪೈಕಿ ಒಂದಾಗಿದೆ ಪಟ್ಟದಕಲ್ಲು ಹಾಗೂ ಐಹೊಳೆಯ ದೇವಾಲಯಗಳು. ಪಟ್ಟದಕಲ್ಲು ಹಾಗೂ ಐಹೊಳೆ ತಾಣಗಳು ಬಾಗಲಕೋಟೆ ಜಿಲ್ಲೆಯಲ್ಲಿದ್ದು ಬೆಂಗಳೂರಿನಿಂದ ಚಿತ್ರದುರ್ಗ-ಹೊಸಪೇಟೆ-ಕುಷ್ಟಗಿ-ಇಳಕಲ್-ಅಮೀನಗಡ್ ಮಾರ್ಗವಾಗಿ ತಲುಪಬಹುದಾಗಿದೆ. ಅಲ್ಲದೆ ಬಾದಾಮಿಯಿಂದಲೂ ಸಹ ಪಟ್ಟದಕಲ್ಲು ಮತ್ತು ಐಹೊಳೆ ಬಲು ಹತ್ತಿರದಲ್ಲಿವೆ. ಐಹೊಳೆ ಮತ್ತು ಪಟ್ಟದಕಲ್ಲುವಿನ ಮಧ್ಯೆ ಇರುವ ಅಂತರ ಕೇವಲ 15 ಕಿ.ಮೀ.

ಚಿತ್ರಕೃಪೆ: Mrnayak1992

ಆತ್ಮಲಿಂಗ

ಆತ್ಮಲಿಂಗ

ಅದ್ಭುತ ಕಡಲ ತೀರ ಹಾಗೂ ಶಿವನ ಆತ್ಮಲಿಂಗವಿರುವ ಪ್ರಮುಖ ಧಾರ್ಮಿಕ ಸ್ಥಳವಾಗಿ ಗೋಕರ್ಣವು ಹೆಸರುವಾಸಿಯಾಗಿದ್ದು ಬೆಂಗಳೂರಿನಿಂದ ಗೋಕರ್ಣವನ್ನು ತುಮಕೂರು-ದಾವಣಗೆರೆ-ಹಾವೇರಿ-ಶಿರಸಿ-ಮಿರ್ಜಾನ್ ಮೂಲಕ ತಲುಪಬಹುದಾಗಿದೆ.

ಚಿತ್ರಕೃಪೆ: Infoayan

ಕೊಂಕಣ ಕರಾವಳಿ

ಕೊಂಕಣ ಕರಾವಳಿ

ಕರ್ನಾಟಕದ ಕೊಂಕಣ ಕರಾವಳಿಯ ರಾಣಿ ಎಂದೆ ಪ್ರಸಿದ್ಧಿಗಳಿಸಿರುವ ಕಾರವಾರ ಪಟ್ಟಣವು ಒಂದು ಸುಮಧುರ ಪ್ರವಾಸಿ ತಾಣವಾಗಿದೆ. ಬೆಂಗಳೂರಿನಿಂದ ಕಾರವಾರವನ್ನು ತುಮಕೂರು-ದಾವಣಗೆರೆ-ಹಾವೇರಿ-ಮುಂಡಗೋಡ-ಯಲ್ಲಾಪುರ ಮಾರ್ಗವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Ayan Mukherjee

 375 km

375 km

ಗ್ರಾಮೀಣ ಪರಿಸರವನ್ನು, ಜೀವನಶೈಲಿಯನ್ನು ಕಣ್ಣಿಗೆ ಕಟ್ಟಿ ಕೊಡುವ ಅತ್ಯದ್ಭುತ ಉದ್ಯಾನವಾದ ಉತ್ಸವ ರಾಕ್ ಗಾರ್ಡನ್ ಇರುವುದು ಗೊಟಗೋಡಿ ಎಂಬ ಗ್ರಾಮದ ಬಳಿ. ವೈವಿಧ್ಯಮಯ ಪ್ರತಿಮೆಗಳು, ಮಾದರಿ ಚಿತ್ರಗಳು, ಗುಡಿಸಲುಗಳು, ಎಮ್ಮೆ-ಕರುಗಳು, ಹಳ್ಳಿ ಪರಿಸರ ಹೀಗೆ ಹಲವು ಸುಂದರ ಉದಾಹ್ರಣೆಗಳನ್ನು ಇಲ್ಲಿ ನೋಡಬಹುದಾಗಿದೆ. ಈ ಉದ್ಯಾನವನ್ನು ಬೆಂಗಳೂರಿನಿಂದ ತುಮಕೂರು-ದಾವಣಗೆರೆ-ಹಾವೇರಿ-ಬಂಕಾಪುರ ಮಾರ್ಗವಾಗಿ ಗೊಟಗೋಡಿ ತಲುಪಿ ತಲುಪಬಹುದಾಗಿದೆ.

ಅಮೋಘ ಜಲಪಾತ

ಅಮೋಘ ಜಲಪಾತ

ವಿಶ್ವ ವಿಖ್ಯಾತ ಜಲಪಾತಗಳಲ್ಲೊಂದಾಗಿರುವ ಹಾಗೂ ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಸ್ಥಾನ ಪಡೆದಿರುವ ಜೋಗದ ಮೈಸಿರಿ ನೋಡಲು ಎರಡು ಕಣ್ಣುಗಳೂ ಸಾಲದು ಎನ್ನುವಂತಿರುತ್ತದೆ. ಈ ಸುಂದರ ಜೋಗ ಜಲಪಾತವು ಶಿವಮೊಗ್ಗ ಜಿಲ್ಲೆಯಲ್ಲಿದ್ದು ಶರಾವತಿ ನದಿಯಿಂದ ರೂಪಗೊಂಡಿದೆ. ಇದನ್ನು ಬೆಂಗಳೂರಿನಿಂದ ತುಮಕೂರು-ದಾವಣಗೆರೆ-ಹರಿಹರ-ಸಿದ್ದಾಪುರ ಮಾರ್ಗವಾಗಿ ತಲುಪಬಹುದು. ಇನ್ನೊಂದು ಮಾರ್ಗವೆಂದರೆ ಬೆಂಗಳೂರಿನಿಂದ ಬೆಂಗಳೂರು-ಶಿವಮೊಗ್ಗ ರಸ್ತೆಯ ಮುಲಕ ಶಿವಮೊಗ್ಗ ತಲುಪಿ ಅಲ್ಲಿಂದ ಸಾಗರದ ಮಾರ್ಗವಾಗಿ ಕ್ರಮಿಸುತ್ತ ಜೋಗ ಜಲಪಾತಕ್ಕೆ ತೆರಳಬಹುದಾಗಿದೆ.

ಚಿತ್ರಕೃಪೆ: Vmjmalali

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more