Search
  • Follow NativePlanet
Share
» »ಹೈದರಾಬಾದ್‌ನ ದೈವಿಕ ಮಹತ್ವವುಳ್ಳ ಈ ದೇವಾಲಯಗಳಿಗೆ ಭೇಟಿ ನೀಡಿ

ಹೈದರಾಬಾದ್‌ನ ದೈವಿಕ ಮಹತ್ವವುಳ್ಳ ಈ ದೇವಾಲಯಗಳಿಗೆ ಭೇಟಿ ನೀಡಿ

ಹೈದರಾಬಾದ್ ಪ್ರತೀ ಪ್ರಯಾಣಿಕರ ಗಮನಸೆಳೆಯುವಂತಹ ಒಂದು ಪ್ರವಾಸಿ ಸ್ಥಳವಾಗಿದೆ. ಇತಿಹಾಸ ಪ್ರಿಯರು, ಆಹಾರ ಪ್ರಿಯರು ಅಥವಾ ವಾಸ್ತುಶಿಲ್ಪದ ಬಗ್ಗೆ ಅರಿಯುವ ಉತ್ಸಾಹಿಗಳಾಗಿರಬಹುದು ಪ್ರತಿಯೊಬ್ಬರನ್ನು ಹೈದರಾಬಾದ್ ತನ್ನಲ್ಲಿಗೆ ಭೇಟಿ ಕೊಡುವ ಸಂದರ್ಶಕರನ್ನು ಎಂದಿಗೂ ತೃಪ್ತಿ ಪಡಿಸುವಲ್ಲಿ ಹಿಂದೆ ಬಿದ್ದಿಲ್ಲ.

ಜಗತ್ತಿನಾದ್ಯಂತದ ಜನರು ಇಲ್ಲಿಗೆ ನಿರಂತರವಾಗಿ ಭೇಟಿ ನೀಡುವುದರಿಂದ ಈ ನಗರ ಇಂತಹ ಜನಪ್ರಿಯತೆ ಗಳಿಸಿದೆ. ಒಮ್ಮೆ ನೀವು ಹೈದರಬಾದಿನ ಗಡಿಯೊಳಗೆ ಇದ್ದಲ್ಲಿ ನಿಮ್ಮನ್ನು ತೃಪ್ತಿ ಪಡಿಸುವ ಎಲ್ಲಾ ವಿಷಯಗಳೂ ಇಲ್ಲಿವೆ ಎಂಬ ವಿಷಯವನ್ನು ಅಲ್ಲಗಳೆಯುವ ಹಾಗಿಲ್ಲ. ಇಲ್ಲಿಗೆ ಭೇಟಿಕೊಡುವ ಪ್ರವಾಸಿಗರಿಗೆ ಬೇಕಾದ ಎಲ್ಲಾ ತರಹದ ಸ್ಥಳಗಳನ್ನು ಹೈದರಾಬಾದಿನಲ್ಲಿ ಕಾಣಬಹುದು.

ಆದುದರಿಂದ ಈ ವಾರಾಂತ್ಯದಲ್ಲಿ ಹೈದರಾಬಾದ್ ಗೆ ಭೇಟಿ ಕೊಡಲು ಯೋಜನೆ ಮಾಡಿ ಮತ್ತು ಪ್ರತೀ ವರ್ಷ ಸಾವಿರಾರು ಜನ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಭೇಟಿ ಕೊಡುವ ಸುಂದರವಾದ ದೇವಾಲಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.

ಇವುಗಳಲ್ಲಿ ಕೆಲವು ದೇವಾಲಯಗಳು ಹಲವಾರು ಶತಮಾನಗಳಷ್ಟು ಹಳೆಯದಾದರೆ ಇನ್ನು ಕೆಲವು ದೇವಾಲಯಗಳ ಇತಿಹಾಸವು ಕೆಲವು ದಶಕಗಳಷ್ಟು ಹಳೆಯದಾದುವುಗಳಾಗಿವೆ. ಇವುಗಳ ವರ್ಷ ಅಥವಾ ಇತಿಹಾಸಗಳ ಹೊರತಾಗಿ ಇಲ್ಲಿಯ ಮನತಣಿಸುವ ಮತ್ತು ನೈಸರ್ಗಿಕವಾದ ವಾತಾವರಣವು ನಿಮ್ಮನ್ನು ಆಹ್ಲಾದಗೊಳಿಸುತ್ತವೆ.

ಚಿಲ್ಕೂರ್ ಬಾಲಾಜಿ ದೇವಾಲಯ

ಚಿಲ್ಕೂರ್ ಬಾಲಾಜಿ ದೇವಾಲಯ

PC: Adityamadhav83

ವೀಸಾ ದೇವಾಲಯವೆಂದೂ ಕರೆಯಲ್ಪಡುವ ಚಿಲ್ಕೂರು ಬಾಲಾಜಿ ದೇವಾಲಯವು ಹೈದರಾಬಾದಿನ ಓಸ್ಮಾನ್ ಸಾಗರ್ ಸರೋವರದ ದಡದಲ್ಲಿದೆ. ಮತ್ತು ತನ್ನಲ್ಲಿಗೆ ಭೇಟಿ ಕೊಡುವ ಭಕ್ತರಿಗೆ ವೀಸಾ ಒದಗಿಸುವ ದೇವಾಲಯವೆಂದೂ ಹೆಸರುವಾಸಿಯಾಗಿದೆ. ಅಚ್ಚರಿಗೊಳ್ಳುತ್ತಿದ್ದಿರಾ? ಹೌದು ನೀವು ಓದುತ್ತಿರುವುದು ನಿಜ ಈ ದೇವಾಲಯವು ವೀಸಾಗೆ ಸಂಬಂಧಿಸಿದ ತೊಂದರೆ ಇರುವ ಭಕ್ತರಿಂದ ಹೆಚ್ಚಾಗಿ ಭೇಟಿ ನೀಡಲ್ಪಡುತ್ತದೆ.

ಈ ದೇವಾಲಯದ ಆವರಣವನ್ನು ಭಯ ಭಕ್ತಿ ಹಾಗೂ ನಿರ್ಮಲ ಭಾವದಿಂದ 11 ಬಾರಿ ಪ್ರದಕ್ಷಿಣೆ ಹಾಕಿದಲ್ಲಿ ವೀಸಾಗೆ ಸಂಬಂಧಿಸಿದ ತೊಂದರೆಯಿಂದ ಪಾರಾಗಬಹುದು. ಕೋರಿಕೆ ಈಡೇರಿದ ನಂತರ ಈ ದೇವಾಲಯದ ಆವರಣವನ್ನು 108 ಬಾರಿ ಪ್ರದಕ್ಷಿಣೆ ಹಾಕುವ ಪದ್ದತಿಯೂ ಇಲ್ಲಿದೆ. ಈ ದೇವಾಲಯವು ವಿಷ್ಣು ದೇವರ ಇನ್ನೊಂದು ರೂಪವಾದ ವೆಂಕಟೇಶ್ವರ ದೇವರಿಗೆ ಅರ್ಪಿತವಾದುದಾಗಿದ್ದು ಇದನ್ನು 14ನೇ ಶತಮಾನದಲ್ಲಿ ನಿರ್ಮಿಸಲಾಯಿತು.

ಜಗನ್ನಾಥ ದೇವಾಲಯ

ಜಗನ್ನಾಥ ದೇವಾಲಯ

PC: Hpsatapathy

ಹೈದರಬಾದಿನ ಇನ್ನೊಂದು ಸುಂದರ ದೇವಾಲಯವೆಂದರೆ ಅದು ಜಗನ್ನಾಥ ದೇವಾಲಯವಾಗಿದ್ದು, ಇದು 2009ರಲ್ಲಿ ಬಂಜಾರಾ ಹಿಲ್ಸ್‌ನಲ್ಲಿ ಹೊಸದಾಗಿ ನಿರ್ಮಿತವಾದ ಧಾರ್ಮಿಕ ತಾಣವಾಗಿದೆ. ಈ ದೇವಾಲಯವು ಜಗನ್ನಾಥ ದೇವರಿಗೆ ಅರ್ಪಿತವಾಗಿದ್ದರೂ ಕೂಡಾ ನೀವು ಇಲ್ಲಿ ಶಿವ, ಗಣೇಶ ಮತ್ತು ಹನುಮಾನ್ ದೇವರುಗಳ ದೇವಾಲಯವನ್ನು ಈ ದೇವಾಲಯದ ಆವರಣದೊಳಗೆ ಕಾಣಬಹುದಾಗಿದೆ.

ದೇಶದ ಬೇರೆ ಜಗನ್ನಾಥ ದೇವಾಲಯಗಳಲ್ಲಿ ನಡೆಸುವ ರಥಯಾತ್ರೆಯಂತೆಯೇ ಇಲ್ಲಿಯೂ ಕೂಡ ರಥಯಾತ್ರೆ ನಡೆಸುವುದು ರೂಢಿಯಲ್ಲಿದ್ದು ಜನಪ್ರಿಯತೆ ಗಳಿಸಿದೆ. ನೀವು ಹೈದರಬಾದಿನಲ್ಲಿ ನಿರ್ಮಲವೂ ಶಾಂತಿಯುತ ಹಾಗೂ ಆಹ್ಲಾದಕರವಾದ ವಾತಾವರಣವಿರುವ ದ ಸ್ಥಳವನ್ನು ನೋಡುತ್ತಿದ್ದಲ್ಲಿ, ನೀವು ಖಚಿತವಾಗಿಯೂ ಜಗನ್ನಾಥ ದೇವಾಲಯದ ಆವರಣದೊಳಗೆ ಭೇಟಿ ನೀಡಲೇ ಬೇಕು.

ಬಿರ್ಲಾ ಮಂದಿರ್

ಬಿರ್ಲಾ ಮಂದಿರ್

PC: Nikhilb239

ಹೈದರಬಾದಿನ ಒಂದು ಅತ್ಯಂತ ಜನಪ್ರಿಯ ಮತ್ತು ಅತ್ಯಂತ ಹೆಚ್ಚಾಗಿ ಭೇಟಿ ಕೊಡಲ್ಪಡುವ ದೇವಾಲಯಗಳಲ್ಲೊಂದೆನಿಸಿರುವ ಬಿರ್ಲಾ ಮಂದಿರ್ 1976ರಲ್ಲಿ ಹತ್ತಿರದಲ್ಲಿರುವ ಗುಡ್ಡದ ಮೇಲೆ ಬಿರ್ಲಾ ಸಂಸ್ಥೆಯಿಂದ ನಿರ್ಮಿಸಲಾಯಿತು. ಈ ದೇವಾಲಯದ ಮುಖ್ಯ ಆವರಣವು ಸುಮಾರು 13ಎಕರೆಗಳಷ್ಟು ಪ್ರದೇಶದಲ್ಲಿ ಹರಡಿದೆ ಮತ್ತು ಸೊಂಪಾದ ಹಸಿರುಮಯ ಸಸ್ಯವರ್ಗದಿಂದ ತುಂಬಿ ತುಳುಕುತ್ತಿದೆ. ಇದರಿಂದಾಗಿ ಇಲ್ಲಿ ಶಾಂತಿಯುತ ಮತ್ತು ಆಹ್ಲಾದಕರ ವಾತಾವರಣ ಸೃಷ್ಟಿಯಾಗಲು ಸಹಾಯವಾಗಿದೆ.

ಈ ದೇವಾಲಯವು ಜಾತಿ ,ಮತ, ಧರ್ಮ ಮತ್ತು ಪಂಗಡ ಎನ್ನದೆ ಎಲ್ಲರಿಗೂ ಮುಕ್ತವಾಗಿ ಪ್ರವೇಶಕ್ಕೆ ತೆರೆದಿರುವ ಹೈದರಾಬಾದಿನ ಕೆಲವು ದೇವಾಲಯಗಳಲ್ಲಿ ಒಂದಾಗಿದ್ದು ಬಿಳಿ ಮಾರ್ಬಲ್ ನಿಂದ ನಿರ್ಮಿಸಲಾಗಿದೆ . ಈ ದೇವಾಲಯವೂ ಕೂಡಾ ವೆಂಕಟೇಶ್ವರ ದೇವರಿಗೆ ಅರ್ಪಿತವಾದುದಾಗಿದೆ ಮತ್ತು ಶಿವದೇವರು ಲಕ್ಷ್ಮೀ ದೇವಿ ಮತ್ತು ಗಣೇಶ ಇತ್ಯಾದಿ ದೇವರುಗಳನ್ನು ಪೂಜಿಸುವ ಅನೇಕ ದೇವಾಲಯಗಳನ್ನು ಹೊಂದಿದೆ.

ಕರ್ಮಂಘತ್ ಹನುಮಾನ್ ದೇವಾಲಯ

ಕರ್ಮಂಘತ್ ಹನುಮಾನ್ ದೇವಾಲಯ

PC: Sriharsha Rao

ಹೈದರಬಾದಿನ ಕರ್ಮಾಂಘತ್ ಪ್ರಾಂತ್ಯದಲ್ಲಿರುವ ಈ ಸುಂದರವಾದ ದೇವಾಲಯವು 12 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು ಈ ಪ್ರಾಂತ್ಯವನ್ನು ಆಳುತ್ತಿದ್ದ ಕಾಕತೀಯ ಸಾಮ್ರಾಜ್ಯದ ರಾಜನಿಗೆ ಕಾಡಿನಲ್ಲಿ ಭೇಟೆಯಾಡುವಾಗ ಸಿಕ್ಕಿದ ಹನುಮಂತ ದೇವರ ಪ್ರತಿಮೆಯನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ.

ಅನೇಕ ಶತಮಾನಗಳ ನಂತರ ಮೊಘಲರುಆಳ್ವಿಕೆಯ ಅವಧಿಯಲ್ಲಿ ಅನೇಕ ಮುಸಲ್ಮಾನ ಆಡಳಿತಗಾರರಿಂದ ಈ ದೇವಾಲಯಾವನ್ನು ಹಾಳುಗೆಡವಲು ಪ್ರಯತ್ನಿಸಿದರು , ಆದರೆ ಭಗವಂತನ ದಯೆಯಿಂದ ಇದನ್ನು ಹಾಳುಗೆಡವಲ್ಲಿ ಅಸಫಲರಾದರು. ಆದ್ದರಿಂದ ಈ ದೇವಾಲಯವು ಇಂದಿಗೂ ಕೂಡಾ ತನ್ನ ಬಲಿಷ್ಟವಾದ ಮತ್ತು ಭವ್ಯವಾದ ಇತಿಹಾಸವನ್ನು ಸಾರುತ್ತಿದೆ ಮತ್ತು ಸಾವಿರಾರು ಜನ ಪ್ರವಾಸಿಗರಿಂದ ಭೇಟಿಕೊಡಲ್ಪಡುತ್ತಿದೆ.

ಅಕ್ಕಣ್ಣ ಮಾದಣ್ಣ ದೇವಾಲಯ

ಅಕ್ಕಣ್ಣ ಮಾದಣ್ಣ ದೇವಾಲಯ

PC: youtube

ಕಾಳಿ ದೇವತೆಗೆ ಅರ್ಪಿತವಾಗಿರುವ ಈ ದೇವಾಲಯವು ಅಕ್ಕಣ್ಣ ಮತ್ತು ಮಾದಣ್ಣ ಎಂಬ ಸಹೋದರರ ಹೆಸರನ್ನು ಇಡಲಾಗಿದೆ. ಇವರು ಕುತುಬ್ ಶಾಹಿ ಸಾಮ್ರಾಜ್ಯದ ಕೆಲಸಗಾರರಾಗಿದ್ದು ಮತ್ತು ಈ ದೇವಾಲಯವನ್ನು 17ನೇ ಶತಮಾನದ ಉತ್ತರಾರ್ಧದಲ್ಲಿ ನಿರ್ಮಿಸಲಾಯಿತು.

ಈ ಸಹೋದರರ ಸಾವಿನ ನಂತರ ಸ್ಥಳೀಯರು ಪತ್ತೆ ಹಚ್ಚಿ ಪುನರುಜ್ಜೀವನಗೊಳಿಸುವವರೆಗೂ ಈ ದೇವಾಲಯವು ಹೈದರಾಬಾದಿನ ಅಪರಿಚಿತ ಭಾಗವಾಗಿ ಉಳಿಯಲ್ಪಟ್ಟಿತ್ತು. ಇಂದು ಈ ದೇವಾಲಯವು ನಗರದಲ್ಲಿ ಹೆಚ್ಚು ಪೂಜಿಸಲ್ಪಡುವ ಧಾರ್ಮಿಕ ತಾಣಗಳಲ್ಲೊಂದೆನಿಸಿದೆ ಇಲ್ಲಿ ಪ್ರಮುಖವಾಗಿ ಆಚರಿಸಲ್ಪಡುವ ಹಬ್ಬಗಳಲ್ಲಿ ಬೊನಾಲು ಕೂಡಾ ಸೇರಿದೆ.

ಅಷ್ಟ ಲಕ್ಷ್ಮೀ ದೇವಾಲಯ

ಅಷ್ಟ ಲಕ್ಷ್ಮೀ ದೇವಾಲಯ

PC: sravan kumar

ಭಕ್ತಿ ಭಾವದಲ್ಲಿ ನಿಮ್ಮನ್ನು ತೇಲಿಹೋಗುವಂತೆ ಮಾಡುವ ಇನ್ನೊಂದು ಸುಂದರ ದೇವಾಲಯಗಳಲ್ಲಿ ಅಷ್ಟಲಕ್ಷ್ಮೀ ದೇವಾಲಯವೂ ಕೂಡಾ ಒಂದಾಗಿದೆ. ಇದು 1996 ರಲ್ಲಿ ನಿರ್ಮಿಸಲಾಯಿತು. ಮತ್ತು ಐಶ್ವರ್ಯದ ದೇವತೆಯಾದ ಲಕ್ಶ್ಮಿ ದೇವಿಗೆ ಅರ್ಪಿತವಾಗಿದ್ದು, ದೇವಿಯ ಎಂಟು ರೂಪಗಳನ್ನು ದೇವಾಲಯದಲ್ಲಿ ಪೂಜಿಸಲಾಗುತ್ತದೆ.

ಇದನ್ನು ಐದು ವರ್ಷಗಳ ಅವಧಿಯಲ್ಲಿ ನಿರ್ಮಿಸಲಾಯಿತು ಮತ್ತು ಒಂದು ಅದ್ಬುತವಾದ ವಾಸ್ತುಶಿಲ್ಪದ ಪ್ರತೀಕವಾಗಿದೆ. ಈ ಭವ್ಯವಾದ ದೇವಾಲಯಕ್ಕೆ ಭೇಟಿ ಕೊಟ್ಟು ಇಲ್ಲಿಯ ಧೂಪ ಅಗರಬತ್ತಿಯ ಸುವಾಸನೆ್ಗಳನ್ನು ಅನುಭವಿಸುವಲ್ಲಿ ತನ್ಮಯರಾಗಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more