Search
  • Follow NativePlanet
Share
» »ಕಣ್ಮನ ಸೆಳೆಯುವ ಕಣ್ಣೂರಿನ ತೀರಗಳು!

ಕಣ್ಮನ ಸೆಳೆಯುವ ಕಣ್ಣೂರಿನ ತೀರಗಳು!

By Vijay

ಕೇರಳ ರಾಜ್ಯದ ಉತ್ತರ ಮಲಬಾರ್ ಭಾಗದ ಅತಿ ದೊಡ್ಡ ನಗರವಾಗಿ ಗಮನಸೆಳೆಯುತ್ತದೆ ಕಣ್ಣೂರು. ಕೇರಳ ರಾಜ್ಯದ ನಾಲ್ಕನೇಯ ದೊಡ್ಡ ನಗರ ಎಂಬ ಖ್ಯಾತಿಗೆ ಪಾತ್ರವಾಗಿರುವ ಕಣ್ಣೂರು ಒಂದು ಮಿಲಿಯನ್ ಗಿಂತಲೂ ಅಧಿಕ ಜನಸಂಖ್ಯೆಯಿರುವ ಭಾರತದ ನಗರಗಳಲ್ಲಿ ಒಂದಾಗಿದೆ.

ಕಣ್ಣೂರು ನಗರವನ್ನು ಕೇರಳದ ಕೈಮಗ್ಗ ಹಾಗೂ ಜನಪದ ಸಂಸ್ಕೃತಿಯ ರಾಯಭಾರಿ ಎಂತಲೂ ಸಹ ಕರೆಯಲಾಗುತ್ತದೆ. ಪ್ರವಾಸಿ ದೃಷ್ಟಿಯಿಂದಲೂ ಸಹ ಕಣ್ಣೂರು ಹೆಸರುವಾಸಿಯಾಗಿದೆ. ಮುಖ್ಯವಾಗಿ ಇಲ್ಲಿನ ಕಡಲ ತೀರಗಳು ಪ್ರವಾಸಿಗರ ಮನಸೂರೆಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿವೆ.

ಇವೆ ಭಾರತದ "ಸಿಕ್ರೆಟ್" ಕಡಲ ತೀರಗಳು!

ಕಣ್ಣೂರು ಬೆಂಗಳೂರಿನಿಂದ 320 ಕಿ.ಮೀ ದೂರದಲ್ಲಿದ್ದು ತಲುಪಲು ಉತ್ತಮವಾದ ರೈಲು ಹಾಗೂ ರಸ್ತೆ ಸಮ್ಪರ್ಕ ಜಾಲವನ್ನು ಹೊಂದಿದೆ. ತಲಚೇರಿ-ಕೊಡಗು-ಮೈಸೂರು ಮೂಲಕ ಕರ್ನಾಟಕದ ಬೆಂಗಳೂರಿನೊಂದಿಗೆ ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು ಮಂಗಳೂರು ನಗರದೊಂದಿಗೂ ಸಹ ರಸ್ತೆ ಸಂಪರ್ಕ ಹೊಂದಿದೆ.

ಕಣ್ಣೂರಿನಲ್ಲಿರುವ ಕೆಲವು ಅದ್ಭುತ ಹಾಗೂ ಮನಮೋಹಕ ಕಡಲ ತೀರಗಳ ಕುರಿತು ಪ್ರಸ್ತುತ ಲೇಖನದ ಮೂಲಕ ತಿಳಿಯಿರಿ. ಸಮಯ ಹಾಗೂ ಅವಕಾಶಗಳು ಸಿಕ್ಕರೆ ಖಂಡಿತವಾಗಿಯೂ ಈ ಕಡಲ ತೀರಗಳಿಗೆ ಭೇಟಿ ನೀಡಿ. ವಿಶೇಷವಾಗಿ ಚಳಿಗಾಲದ ಸಂದರ್ಭದಲ್ಲಿ ಈ ತೀರಗಳಿಗೆ ಭೇಟಿ ನೀಡಿದಾಗ ಸಿಗುವ ಸಂತಸವೆ ವಿಶೇಷ.

ಕಿಳುನ್ನಾ

ಕಿಳುನ್ನಾ

ಕಣ್ಣೂರಿನಲ್ಲಿ ಹಲವಾರು ಏಕಾಂತದ ಕಡಲ ತೀರಗಳಿವೆ. ಏಕಾಂತತೆಯನ್ನು ಇಷ್ಟಪಡುವ ಪ್ರವಾಸಿಗರಿಗೆ ಈ ಕಡಲ ತೀರಗಳು ಹೇಳಿ ಮಾಡಿಸಿದಂತಿವೆ ಅಂತಹ ಒಂದು ಕಡಲ ತೀರವಾಗಿದೆ ಕಿಳುನ್ನಾ ಎಳಾರಾ ಕಡಲ ತೀರ.

ಚಿತ್ರಕೃಪೆ: Ks.mini

ಹನ್ನೆರಡು ಕಿ.ಮೀ

ಹನ್ನೆರಡು ಕಿ.ಮೀ

ಕಣ್ಣೂರು ಪಟ್ಟಣದಿಂದ ಹನ್ನೆರಡು ಕಿ.ಮೀ ಗಳಷ್ಟು ದೂರದಲ್ಲಿರುವ ಈ ಕಡಲ ತೀರವನ್ನು ರಿಕ್ಷಾಗಳ ಮೂಲಕ ಸುಲಭವಾಗಿ ತಲುಪಬಹುದಾಗಿದ್ದು ಇದರ ಪ್ರಶಾಂತತೆಯು ಭೇಟಿ ನೀಡಿದ ಕ್ಷಣದಲ್ಲೆ ಅನಾವರಣಗೊಂಡು ನಿಮಗಿಷ್ಟವಾಗುವಂತೆ ಮಾಡುತ್ತದೆ.

ಚಿತ್ರಕೃಪೆ: Shagil Kannur

ಸೂರ್ಯಾಸ್ತ

ಸೂರ್ಯಾಸ್ತ

ಈ ಕಡಲ ತೀರದ ತಾಣದಲ್ಲಿ ಆಸ್ವಾದಿಸಬಹುದಾದ ಒಂದು ಅಂಶವೆಂದರೆ ಇಲ್ಲಿನ ಸುಂದರ ಸೂರ್ಯಾಸ್ತ. ಅರಬ್ಬಿ ಸಮುದ್ರ ವಿಶಾಲತೆಯಲ್ಲಿ ಸೂರ್ಯನು ಮುಳುಗುತ್ತಿರುವ ಹಾಗೆ ಕಂಡುಬರುವ ನೋಟವು ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ.

ಚಿತ್ರಕೃಪೆ: Ks.mini

ಅಳಿಕೋಡ್

ಅಳಿಕೋಡ್

ಕಣ್ಣೂರಿನಿಂದ ಐದು ಕಿ.ಮೀ ದೂರದಲ್ಲಿರುವ ಅಳಿಕೋಡ್ ಅಥವಾ ಅಳಿಕ್ಕಲ್ ಎಂತಲೂ ಕರೆಯಲ್ಪಡುವ ಗ್ರಾಮದಲ್ಲಿ ಈ ಸುಂದರ ಕಡಲ ತೀರವಿದೆ.

ಚಿತ್ರಕೃಪೆ: Sreejithk2000

ದಕ್ಷಿಣಕ್ಕೆ

ದಕ್ಷಿಣಕ್ಕೆ

ಕಣ್ಣೂರಿನ ಅಳಿಕೋಡ್ ಗ್ರಾಮದ ದಕ್ಷಿಣಕ್ಕೆ ನೀರ್ಕ್ಕಾಡವು ಕಡಲ ತೀರವು ಸ್ಥಿತವಿದ್ದು ಏಕಾಂತತೆಗೆ ಹೆಸರುವಾಸಿಯಾಗಿದೆ. ಪ್ರಶಾಂತ ಕಡಲ ತೀರದಲ್ಲಿ ಅಲೆಗಳ ಶಬ್ದವು ಒಂದು ವಿಶಿಷ್ಟ ಅನುಭೂತಿಯನ್ನು ಪ್ರವಾಸಿಗರಿಗೆ ಕರುಣಿಸುತ್ತದೆ.

ಚಿತ್ರಕೃಪೆ: Deepa Chandran2014

ಐದು

ಐದು

ಕಣ್ಣೂರು ತೀರ ಎಂಬುದು ಮೂಲತಃ ಐದು ವಿವಿಧ ತೀರಗಳ ಒಟ್ಟಾರೆ ಸಮೂಹವಾಗಿದೆ. ಕಣ್ಣೂರಿನ ಪಶ್ಚ್ಮ ಭಾಗದಲ್ಲಿ ಈ ಐದು ಅದ್ಭುತ ಕಡಲ ತೀರಗಳನ್ನು ಕಾಣಬಹುದಾಗಿದೆ. ಅವುಗಳೆಂದರೆ ಪಯ್ಯಾಂಬಲಂ, ಮೀನ್ಕುಣ್ಣು, ಅಡಿಕಡಲಾಯಿ, ಬೇಬಿ ಹಾಗೂ ತಾಯಿಲ್ ತೀರ. ಸಾಕಷ್ಟು ಪ್ರವಾಸಿಗರನ್ನು ಈ ತೀರಗಳು ಆಕರ್ಷಿಸುತ್ತವೆ.

ಚಿತ್ರಕೃಪೆ: MANOJTV

ಎರಡು ಕಿ.ಮೀ

ಎರಡು ಕಿ.ಮೀ

ಕಣ್ಣೂರು ನಗರ ಕೇಂದ್ರದಿಂದ ಕೇವಲ ಎರಡು ಕಿ.ಮೀ ಗಳಷ್ಟು ದೂರದಲ್ಲಿರುವ ಪಯ್ಯಾಂಬಲಂ ಕಡಲ ತೀರವು ಸಾಕಷ್ಟು ಗಮನಸೆಳೆವ ಕಡಲ ತೀರವಾಗಿದೆ. ಸಂಜೆಯ ಸಮಯದ ಸುತ್ತಾಟಕ್ಕೆ, ವಾಯು ವಿಹಾರಕ್ಕೆ ಹೇಳಿ ಮಾಡಿಸಿದಂತಹ ಪ್ರಶಾಂತ ತೀರ ಇದಾಗಿದೆ.

ಚಿತ್ರಕೃಪೆ: Nisheedh

ರೈಡ್ ಮಾಡಿ!

ರೈಡ್ ಮಾಡಿ!

ಹೌದು, ನಿಮ್ಮ ಬಳಿ ಬೈಕಿದ್ದಲ್ಲಿ ಅತ್ಯದ್ಭುತವಾಗಿ ಈ ಕಡಲ ತೀರದಗುಂಟ ಬೈಕ್ ಓಡಿಸಿ ಆನಂದಿಸಬಹುದು. ಭಾರತದಲ್ಲೆ ಬೈಕ್ ಓಡಿಸಲು ಅತಿ ಉಉದನೆಯ ತೀರ ಹೊಂದಿರುವ ಕಡಲ ಕಿನಾರೆ ಎಂಬ ಹೆಗ್ಗಳಿಕೆ ಇದು ಪಾತ್ರವಾಗಿದೆ.

ಚಿತ್ರಕೃಪೆ: Neon

ರಸ್ತೆಯ ಸಮಾನಾಂತರ

ರಸ್ತೆಯ ಸಮಾನಾಂತರ

ಕಣ್ಣೂರು-ತಲಚೇರಿ ಪಟ್ಟಣಗಳ ಮಧ್ಯದ ರಸ್ತೆಯ ಸಮಾನಾಂತರವಾಗಿ ಈ ಕಡಲ ತೀರವು ಸ್ಥಿತವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತದೆ. ಇಲ್ಲಿನ ಅದ್ಭುತ ಸೂರ್ಯಾಸ್ತವನ್ನು ನೋಡುವುದೆ ಒಂದು ಚೆಂದದ ಅನುಭವ.

ಚಿತ್ರಕೃಪೆ: Kerala Tourism

ನೆಚ್ಚಿನ ತಾಣ

ನೆಚ್ಚಿನ ತಾಣ

ಮನಮೋಹಕ ದೃಶ್ಯ ಹೊಂದಿರುವ ಈ ಕಡಲ ಕಿನಾರೆಯು ಹದಿಹರೆಯದವರ ನೆಚ್ಚಿನ ತಾಣವಾಗಿದ್ದು ಸುಂದರ ಅನುಭವವನ್ನು ನೀಡುತ್ತದೆ.

ಚಿತ್ರಕೃಪೆ: Uberscholar

ಎಂಟು ಕಿ.ಮೀ

ಎಂಟು ಕಿ.ಮೀ

ಕಣ್ಣೂರು ರೈಲು ನಿಲ್ದಾಣದಿಂದ ಎಂಟು ಕಿ.ಮೀ ಗಳಷ್ಟು ದೂರದಲ್ಲಿರುವ ತೊಟ್ಟದ ಎಂಬ ಹಳ್ಳಿಯಲ್ಲಿ ಈ ಸುಂದರ ಕಡಲ ಕಿನಾರೆಯು ಸ್ಥಿತವಿದೆ. ವಿಶೇಷವಾಗಿ ಈ ಕಡಲ ತೀರವು ಮೈಕಾಯಿಸಲು (ಸೂರ್ಯ ಸ್ನಾನ ಅಥವಾ ಸನ್ ಬಾತ್) ಹಾಗೂ ಕಡಲವು ಈಜಲು ಯೋಗ್ಯವಾಗಿವೆ.

ಚಿತ್ರಕೃಪೆ: Arjunmangol

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more