Search
  • Follow NativePlanet
Share
» »ಮಹಾರಾಷ್ಟ್ರದ ಚಕಿತಗೊಳಿಸುವ ಶಿವ ದೇವಾಲಯಗಳು!

ಮಹಾರಾಷ್ಟ್ರದ ಚಕಿತಗೊಳಿಸುವ ಶಿವ ದೇವಾಲಯಗಳು!

By Vijay

ಮಧ್ಯ ಭಾರತದ ಪಶ್ಚಿಮದೆಡೆ ನೆಲೆಸಿರುವ ಭವ್ಯ ರಾಜ್ಯ ಮಹಾರಾಷ್ಟ್ರವು ತನ್ನದೆ ಆದ ವಿಶಿಷ್ಟ ಸಂಸ್ಕೃತಿ, ಇತಿಹಾಸ ಹೊಂದಿರುವ ಪ್ರದೇಶವಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಸಾಕಷ್ಟು ಮಹತ್ವ ಪಡೆದ ರಾಜ್ಯ ಇದಾಗಿದೆ. ಬೆಟ್ಟ ಕೋಟೆಗಳು, ಚಾರಣಯೋಗ್ಯ ಸ್ಥಳಗಳು, ಪಶ್ಚಿಮಘಟ್ಟಗಳ ಸಹ್ಯಾದ್ರಿ ಶ್ರೇಣಿಗಳು, ನಯನ ಮನೋಹರ ಭೂದೃಶ್ಯಾವಳಿಗಳು ಈ ರಾಜ್ಯದ ಪ್ರವಾಸಿ ವಿಶೇಷತೆಗಳಾಗಿವೆ.

ಅದರಂತೆ ಧಾರ್ಮಿಅಕವಾಗಿಯೂ ಸಾಕಷ್ಟು ಮಹತ್ವ ಪಡೆದ ರಾಜ್ಯ ಇದಾಗಿದ್ದು ಸನಾತನ ಧರ್ಮದ ಹಲವಾರು ದೈವಿಕ ಪ್ರಸಂಗಗಗಳಿಗೆ ಹಿನ್ನೆಲೆ ಒದಗಿಸಿರುವ ರಾಜ್ಯ ಇದಾಗಿದೆ. ಹಲವಾರು ಸಾಧು ಸಂತರನ್ನು ಕಂಡಿರುವ ಈ ರಾಜ್ಯದಲ್ಲಿ ಅನೇಕ ದೇಗುಲ, ದೇವಸ್ಥಾನಗಳಿದ್ದು ಸದಾ ಕಾಲ ಭಕ್ತರಿಂದ ತುಂಬಿರುತ್ತದೆ. ಈ ರಾಜ್ಯದಲ್ಲಿ ಶಿವನಿಗೆ ಮುಡಿಪಾದ ಸಾವಿರಾರು ದೇವಾಲಯಗಳಿದ್ದು ಕೆಲವು ಸಾಕಷ್ಟು ಕುತೂಹಲ ಕೆರಳಿಸುವಂತಿವೆ.

ರಾಜ್ಯದಲ್ಲಿರುವ ಅಂತಹ ಕೆಲವು ಆಯ್ದ ಹಾಗೂ ಪ್ರವಾಸ ಮಾಡಲು ಯೋಗ್ಯವಾದಂತಹ ಕೆಲವು ವಿಶಿಷ್ಟವಾದ ಶಿವನ ದೇವಾಲಯಗಳ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಈ ಶಿವನ ದೇವಾಲಯಗಳು ಸಾಕಷ್ಟು ಪುರಾತನವಾಗಿದ್ದು ತಮ್ಮದೆ ಆದ ಹಿನ್ನೆಲೆ ಹಾಗೂ ದಂತಕಥೆಗಳನ್ನು ಹೊಂದಿದ್ದು ಇಂದಿಗೂ ಬಹು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಮಧ್ಯಕಾಲೀನ

ಮಧ್ಯಕಾಲೀನ

ಇದೊಂದು ಹ್ಲವಾರು ದಶಕಗಳ ಹಿಂದಷ್ಟೆ ಹೆಚ್ಚಾಗಿ ಶೋಧಿಸಲ್ಪಟ್ಟ ತಾಣವಾಗಿ ಇಂದು ಪ್ರವರ್ಧಮಾನಕ್ಕೆ ಬಂದಿದೆ. ಶಿವನ ಈ ದೇವಾಲಯವು ಮಧ್ಯಕಾಲೀನದಲ್ಲಿ ಅಂದರೆ 1749 ರಲ್ಲಿ ಪೇಶ್ವಾ ನಾನಾಸಾಹೇಬ್ ಎಂಬಾತರಿಂದ ನಿರ್ಮಿಸಲ್ಪಟ್ಟ ದೇವಾಲಯವಾಗಿದೆ. ಶಿವನ ಈ ದೇವಾಲಯದ ವಿಶೇಷತೆ ಎಂದರೆ ಇದು ದಟ್ಟವಾದ ಅರಣ್ಯದ ಮಧ್ಯದಲ್ಲಿ ನೆಲೆಸಿರುವುದು.

ಚಿತ್ರಕೃಪೆ: Mayur239

ಪ್ರಕೃತಿಪ್ರಿಯರ ಸ್ವರ್ಗ

ಪ್ರಕೃತಿಪ್ರಿಯರ ಸ್ವರ್ಗ

ಪ್ರಕೃತಿಪ್ರಿಯ ಪ್ರವಾಸಿಗರ ಪಾಲಿಗಂತೂ ಈ ಪ್ರದೇಶ ಸ್ವರ್ಗವೆ ಸರಿ. ಅಷ್ಟೊಂದು ಸೊಗಸಾದ, ರಮಣೀಯ ಪರಿಸರವು ಈ ದೇವಾಲಯದ ಸುತ್ತಮುತ್ತ ಕಾಣಬಹುದಾಗಿದೆ. ಬನ ಅಂದರೆ ವನದಲ್ಲಿ ನೆಲೆಸಿರುವ ಶಿವನು ಇವನಾಗಿರುವುದರಿಂದ ಈ ದೇವಾಲಯಕ್ಕೆ ಬನೇಶ್ವರ ದೇವಾಲಯ ಎಂದು ಕರೆಯಲಾಗಿದೆ.

ಚಿತ್ರಕೃಪೆ: Bsnehal

ವಿಶಿಷ್ಟ ಘಂಟೆ

ವಿಶಿಷ್ಟ ಘಂಟೆ

ಈ ದೇವಾಲಯದಲ್ಲಿ ವಿಷ್ಣು, ಲಕ್ಷ್ಮಿ ಹಾಗೂ ಶಿವನ ಸನ್ನಿಧಿಗಳಿವೆ. ಅಲ್ಲದೆ ಪವಿತ್ರವಾದ ಕೊಳವೊಂದಿದ್ದು ಅಲ್ಲಿ ಮೀನುಗಳು, ಆಮೆಗಳು ಸ್ವಚ್ಛಂದವಾಗಿ ವಿಹರಿಸುವುದನ್ನು ಕಾಣಬಹುದಾಗಿದೆ. ಈ ದೇವಾಲಯದ ಇನ್ನೊಂದು ವಿಶೇಷತೆ ಎಂದರೆ ಪೋರ್ಚುಗೀಸರು ಉಪಯೋಗಿಸುತ್ತಿದ್ದ ಚರ್ಚಿನ ಘಂಟೆ. ಬಸ್ಸೈನ್ ಯುದ್ಧದಲ್ಲಿ ಪೋರ್ಚುಗೀಸರನ್ನು ಸದೆ ಬಡೆದ ಕುರುಹು ವಾಗಿ ಈ ಘಂಟೆಯನ್ನು ಇಲ್ಲಿ ಇರಿಸಲಾಗಿದೆ.

ಚಿತ್ರಕೃಪೆ: Niraj Suryawanshi

ಜಲಧಾರೆ

ಜಲಧಾರೆ

ದೇವಾಲಯದ ಹಿಂಭಾಗದಲ್ಲಿ ಅದ್ಭುತವಾದ ದಟ್ಟ ದಟ್ಟ ಗಿಡಮರಗಳಿಂದ ಕೂಡಿದ ಸುಂದರ ಉದ್ಯಾನವಿದೆ ಹಾಗೂ ಹತ್ತಿರದಲ್ಲೆ ಜಲಧಾರೆ ಅಥವಾ ಜಲಪಾತವೊಂದಿದ್ದು ಬನೇಶ್ವರ ಜಲಪಾತ ಎಂದೆ ಹೆಸರುವಾಸಿಯಾಗಿದೆ. ಒಂದು ದಿನವನ್ನು ಹಾಯಾಗಿ ವಿಶ್ರಾಂತಿ ಪಡೆಯುತ್ತ ಹಾಗೂ ಪ್ರಕೃತಿಯ ನಡುವೆ ಕಳೆಯಬಯಸುವ ಪ್ರತಿಯೊಬ್ಬರಿಗೂ ಆದರ್ಶಮಯವಾದ ಸ್ಥಳ ಇದಾಗಿದೆ.

ಚಿತ್ರಕೃಪೆ: Bsnehal

ಪುಣೆಯಿಂದ

ಪುಣೆಯಿಂದ

ವರ್ಷದ ಎಲ್ಲಾ ಸಮಯದಲ್ಲಿ ಭೇಟಿ ನೀಡಬಹುದಾದರೂ ಮಳೆಗಾಲದ ನಂತರ ಹಾಗೂ ಚಳಿಗಾಲ ಸಮಯವು ಈ ದೇವಾಲಯ ತಾಣಕ್ಕೆ ಭೇಟಿ ನೀಡಲು ಪ್ರಶಸ್ತವಾಗಿದೆ. ಪುಣೆ-ಸತಾರಾ ಮಾರ್ಗದಲ್ಲಿ ಪುಣೆ ನಗರದಿಂದ ಸುಮಾರು 35 ಕಿ.ಮೀ ಗಳಷ್ಟು ದೂರದಲ್ಲಿರುವ ನಸ್ರಾಪುರ ಗ್ರಾಮದಲ್ಲಿ ಬನೇಶ್ವರ ದೇವಾಲಯವಿದ್ದು ತೆರಳಲು ಬಸ್ಸುಗಳು, ಟ್ಯಾಕ್ಸಿಗಳು ದೊರೆಯುತ್ತವೆ.

ಚಿತ್ರಕೃಪೆ: Bsnehal

ಎಲ್ಲೋರಾ

ಎಲ್ಲೋರಾ

ಮಹಾರಾಷ್ಟ್ರದ ಔರಂಗಾಬಾದ್ ನಿಂದ 30 ಕಿ.ಮೀ ದೂರದಲ್ಲಿರುವ ಎಲ್ಲೋರಾ ಗುಹೆಗಳ ತಾಣದಿಂದ ಒಂದು ಕಿ.ಮೀ ಒಳಗೆಯೆ ಇರುವ ಈ ಶಿವ ದೇವಾಲಯ ಶಿವಪುರಾಣದ ಪ್ರಕಾರ ಒಂದು ಜ್ಯೋತಿರ್ಲಿಂಗ ಕ್ಷೇತ್ರವಾಗಿ ಧಾರ್ಮಿಕ ಮಹತ್ವ ಪಡೆದಿದೆ.

ಚಿತ್ರಕೃಪೆ: Rashmi.parab

ಸ್ಥಳ ಪುರಾಣ

ಸ್ಥಳ ಪುರಾಣ

ಸ್ಥಳ ಪುರಾಣದಂತೆ ಶಿವನ ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಕೊನೆಯ ಅಂದರೆ ಹನ್ನೆರಡನೇಯ ಜ್ಯೋತಿರ್ಲಿಂಗ ಇದಾಗಿದ್ದು ಶಿವನ ಅನಂತ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ. ಮರಾಠಾ-ಮುಘಲ್ ದಾಳಿ ಪ್ರತಿದಾಳಿಗಳ ಸಂದರ್ಭದಲ್ಲಿ ಮುಘಲರಿಂದ ಸಾಕಷ್ಟು ಬಾರಿ ಈ ದೇವಾಲಯ ಒಳಗಾಗಿದ್ದು ಇದರ ಪ್ರಸ್ತುತ ರೂಪವನ್ನು ಇಂದೋರ್ ನ ರಾಣಿ ಅಹಲ್ಯಾಬಾಯಿಯವರಿಂದ ನಿರ್ಮಾಣ ಮಾಡಲಾಗಿದೆ.

ಚಿತ್ರಕೃಪೆ: Ms Sarah Welch

ಧಾರ್ಮಿಕ ಮಹತ್ವ

ಧಾರ್ಮಿಕ ಮಹತ್ವ

ಪ್ರಸ್ತುತ ಈ ದೇವಾಲಯವು ಸಾಕಷ್ಟು ಪ್ರಾಮುಖ್ಯತೆ ಪಡೆದಿರುವ ಶಿವ ದೇವಾಲಯವಾಗಿದ್ದು ನಿತ್ಯವೂ ಮಹಾರಾಷ್ಟ್ರದ ಹಲವು ಭಾಗಗಳಿಂದ ಶಿವನ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೇವಾಲಯವು ದಕ್ಷಿಣ ಭಾರತ ಶೈಲಿಯ ವಾಸ್ತುಶಿಲ್ಪವನ್ನು ಒಳಗೊಂಡಿದ್ದು ಮುಖ್ಯ ಗರ್ಭಗೃಹದ ದರ್ಶನ ಮಾಡುವಾಗ ಪುರುಷರು ಅಂಗಿಗಳನ್ನು ಬಿಚ್ಚಿ ಪ್ರವೇಶಿಸಬೇಕು.

ಚಿತ್ರಕೃಪೆ: G41rn8

ಬೀಡ್

ಬೀಡ್

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಬೀಡ್ ನಗರದಲ್ಲಿರುವ ಅತ್ಯಂತ ಪುರಾತನ ಶಿವ ದೇವಾಲಯ ಇದಾಗಿದೆ. ಚೌಕಾಕಾರದ ಕೊಳದ ಮಧ್ಯದಲ್ಲಿ ನಿರ್ಮಿಸಲ್ಪಟ್ಟಿರುವ ಶಿವನ ಈ ದೇವಾಲಯವನ್ನು ಕಂಕಾಲೇಶ್ವರ ಶಿವ ದೇವಾಲಯ ಎಂದು ಕರೆಯುತ್ತಾರೆ. ಬೀಡ್ ನಗರದ ಪ್ರಮುಖ ಧಾರ್ಮಿಕ ಆಕರ್ಷಣೆಗಳ ಪೈಕಿ ಒಂದಾಗಿದೆ ಈ ಕಂಕಾಲೇಶ್ವರ ದೇವಾಲಯ. ಮಹಾಶಿವರಾತ್ರಿಯನ್ನು ಇಲ್ಲಿ ಅತ್ಯಂತ ಅದ್ದೂರಿಯಿಂದ ಆಚರಿಸಲಾಗುತ್ತದೆ.

ಚಿತ್ರಕೃಪೆ: संतोष दहिवळ

ರತನ್ಗಡ್

ರತನ್ಗಡ್

ಅಹ್ಮದ್ ನಗರ ಜಿಲ್ಲೆಯ ರತನ್ವಾಡಿಯ ರತನ್ಗಡ್ ಬೆಟ್ಟ ಕೋಟೆ ತಾಣದ ಬಳಿಯಿರುವ ಅದ್ಭುತ ಕೆತ್ತನೆಯಿಂದ ಪ್ರವಾಸಿಗರನ್ನು ಆಕರ್ಷಿಸುವ ಶಿವನ ದೇವಾಲಯ ಇದಾಗಿದೆ. ಹೇಮದ್ಪಂಥಿ ವಾಸ್ತುಶೈಲಿಯಿಂದ ಶ್ರೀಮಂತವಾಗಿರುವ ಶಿವನ ಈ ಅಮೃತೇಶ್ವರ ದೇವಾಲಯವು ಪಕ್ಕದ ರತನ್ಗಡ್ ಕೋಟೆಗೆ ಬರುವ ಚಾರಣಿಗರು ಭೇಟಿ ನೀಡುವ ನೆಚ್ಚಿನ ಪ್ರಾಚೀನ ದೇವಾಲಯವಾಗಿ ಗಮನಸೆಳೆಯುತ್ತದೆ. ಇದರ ಸುತ್ತಮುತ್ತಲಿನ ಅದ್ಭುತ ಪರಿಸರದಿಂದಾಗಿಯೆ ಇದು ವಿಶೇಷವಾಗಿ ಕಂಡುಬರುತ್ತದೆ.

ಚಿತ್ರಕೃಪೆ: yogesh kurhe

ಬಬುಲ್ನಾಥ್

ಬಬುಲ್ನಾಥ್

ಮುಂಬೈ ನಗರದ ಗಿರ್ಗಾಂವ್ ಚೌಪಾಟಿ ಪ್ರದೇಶದಲ್ಲಿರುವ ಚಿಕ್ಕ ಗುಡ್ಡವೊಂದರ ಮೇಲೆ ನೆಲೆಸಿದೆ ಅತ್ಯಂತ ಪುರಾತನವಾದ ಈ ಶಿವ ದೇಗುಲ. ಶಿವನು ಇಲ್ಲಿ ಬಬುಲ್ ಗಿಡದ ಅಂದರೆ ಜಾಲಿ ಗಿಡದ ಅಧಿದೇವನಾಗಿ ನೆಲೆಸಿರುವ ಕಾರಣ ಇದಕ್ಕೆ ಬಬುಲ್ನಾಥ್ ಮಂದಿರ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Viraj

ಜ್ಯೋತಿರ್ಲಿಂಗ

ಜ್ಯೋತಿರ್ಲಿಂಗ

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಭೀಮಾಶಂಕರವು ತನ್ನಲ್ಲಿರುವ ಪ್ರಸಿದ್ಧ ಶಿವನ ಜ್ಯೋತಿರ್ಲಿಂಗ ಸನ್ನಿಧಿಯ ತವರಾಗಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಭೀಮಾಶಂಕರವು ಭೀಮಾ ನದಿಯ ಉಗಮ ಸ್ಥಾನವೂ ಹೌದು.

ಚಿತ್ರಕೃಪೆ: ସୁରଥ କୁମାର ପାଢ଼ୀ

ಕುತೂಹಲಕರ

ಕುತೂಹಲಕರ

ಭೀಮಾಶಂಕರ ಹಿನ್ನೆಲೆ : ಹಿಂದೆ ಡಾಕಿಣಿ ಎಂಬ ಅರಣ್ಯ ಈ ಪ್ರದೇಶವನ್ನು ಆವರಿಸಿತ್ತು. ಅದರಲ್ಲಿ ಕರ್ತಕಿ ಹಾಗೂ ಆಕೆಯ ಮಗನಾದ ಭೀಮಾ ಎಂಬ ಅಸುರರಿದ್ದರು. ಭೀಮಾ ಅತ್ಯಂತ ಬಲಶಾಲಿಯಾಗಿದ್ದನಾದರೂ ತನ್ನ ಪ್ರಸ್ತುತ ಸ್ಥಿತಿಯನ್ನು ಕುರಿತು ಸದಾ ಯೋಚಿಸುತ್ತ ಕೊರಗುತ್ತಿದ್ದನು. ಒಂದೊಮ್ಮೆ ಬೇಸರ ತಡಿಯಲಾಗದೆ ತನ್ನ ತಾಯಿಯ ಕುರಿತು ತನ್ನ ತಂದೆ ಯಾರೆಂದು, ತಾವಿಲ್ಲೇಕೆ ವಾಸಿಸುತ್ತಿದ್ದೇವೆಂದು ಕೇಳಿಯೆ ಬಿಟ್ಟ.

ಚಿತ್ರಕೃಪೆ: solarisgirl

ಕಠಿಣ ತಪಸ್ಸು

ಕಠಿಣ ತಪಸ್ಸು

ಬೆಳೆದ ಮಗನೊಂದಿಗೆ ಏನೂ ಮುಚ್ಚಿಡಲಾಗದೆ ತಾಯಿಯು ಅವನನ್ನು ಕುರಿತು, ಭೀಮಾ ಲಂಕಾಧಿಪತಿಯಾದ ರಾವಣನ ಸಹೋದರನಾದ ಕುಂಭಕರ್ಣನೆಂದು, ಯುದ್ಧದಲ್ಲಿ ವಿಷ್ಣುವಿನ ಅವತಾರವಾದ ರಾಮನಿಂದ ಆತನ ತಂದೆ ವಧೆಯಾಯಿತೆಂದು ವಿವರಿಸಿದಳು. ಇದರಿಂದ ಕೋಪಗೊಂಡ ಭೀಮಾ ತಪಸ್ಸು ಬ್ರಹ್ಮನಿಂದ ಶಕ್ತಿಯ ವರದಾನಗಳನ್ನು ಪಡೆದು ಮೂರು ಲೋಕಗಳಿಗೆ ಅಪಾಯ ಉಂಟುಮಾಡಿದನು.

ಚಿತ್ರಕೃಪೆ: Pradeep245

ಶಿವನ ಅಭಯ

ಶಿವನ ಅಭಯ

ಹೀಗೆ ಅವನ ಹೆಚ್ಚುತ್ತಿರುವ ಅತ್ಯಾಚಾರಗಳನ್ನು ದಮನಿಸುವಂತೆ ಸರ್ವ ದೇವ, ದೇವತೆಯರು ಶಿವನ ಮೊರೆ ಹೋದರು. ಶಿವನು ಅವರಿಗೆ ಅಭಯ ಹಸ್ತ ನೀಡುತ್ತಾ, ಒಂದು ಅನುಕೂಲಕರವಾದ ಸಂದರ್ಭದಲ್ಲಿ ಅವನ ಮುಂದೆ ಪ್ರತ್ಯಕ್ಷನಾಗಿ ಯುದ್ಧ ಮಾಡಿ ಕೊನೆಗೆ ಅವನನ್ನು ಬೂದಿಯನ್ನಾಗಿ ಮಾಡಿ ಸಂಹರಿಸಿದನು. ಅಂತೆಯೆ ಎಲ್ಲರೆ ಕೋರಿಕೆಯ ಮೆರೆಗೆ ಅಲ್ಲಿ ಭೀಮಾಶಂಕರನಾಗಿ ನೆಲೆಸಿದನು.

ಚಿತ್ರಕೃಪೆ: Pratik Kadam

ಯಾವತ್ ಬಳಿ

ಯಾವತ್ ಬಳಿ

ಪುಣೆಯಿಂದ 42 ಕಿ.ಮೀ ದೂರದಲ್ಲಿ ಪುಣೆ-ಸೋಲಾಪುರ ಮಾರ್ಗದಲ್ಲಿ ಭುಲೇಶ್ವರ ಬೈಪಾಸ್ ದೊರೆಯುತ್ತದೆ. ಇದರ ಬಳಿಯಲ್ಲೆ ಯಾವತ್ ಎಂಬ ಗ್ರಾಮವಿದೆ ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಗುಡ್ಡವೊಂದರ ಮೇಲೆ ಶಿವನ ದೇವಾಲಯವಿದ್ದು ಇದನ್ನು ಭುಲೇಶ್ವರ ಶಿವ ದೇವಾಲಯ ಎಂದು ಕರೆಯುತ್ತಾರೆ.

ಚಿತ್ರಕೃಪೆ: Mayur239

ಮಂಗಲ್ಗಡ್

ಮಂಗಲ್ಗಡ್

ಇತಿಹಾಸದ ಪ್ರಕಾರ, 1200 ರಲ್ಲಿ ಕೃಷ್ಣದೇವರಾಯನು ಈ ದೇವಾಲಯವನ್ನು ನಿರ್ಮಿಸಿದನು ಎಂಬ ಪ್ರತೀತಿಯಿದೆ. ಇದು ಸಾಕಷ್ಟು ಪುರಾತನ ದೇವಾಲಯವಾಗಿದ್ದು ಮಂಗಲ್ಗಡ್ ಎಂತಲೂ ಸಹ ಕರೆಯಲ್ಪಡುತ್ತಿತ್ತು. ದಂತಕಥೆಯ ಪ್ರಕಾರ, ಪಾರ್ವತಿಯು ಇದೆ ಸ್ಥಳದಲ್ಲಿ ತನ್ನ ನೃತ್ಯದಿಂದ ಶಿವನನ್ನು ಪ್ರಸನ್ನಗೊಳಿಸಿದ್ದಳು ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Glasreifen

ಶಿವರಾತ್ರಿಯ ಸಂಭ್ರಮ

ಶಿವರಾತ್ರಿಯ ಸಂಭ್ರಮ

ಇದಕ್ಕೆ ಸಂಬಂಧಿಸಿದಂತೆ ಚಾಲ್ತಿಯಲ್ಲಿರುವ ಅತಿ ಕುತೂಹಲಕಾರಿ ವಿಷಯವೆಂದರೆ ಇಲ್ಲಿ ಭಕ್ತರು ನೈವೇದ್ಯಕ್ಕೆಂದು ಅರ್ಪಿಸುವ ಪೇಢೆಗಳನ್ನು ಅರ್ಚಕರು ಒಂದು ಬಟ್ಟಲಿನಲ್ಲಿ ಹಾಕಿ ಶಿವಲಿಂಗದ ಬಳಿ ಅರ್ಪಿಸಿದಾಗ ಸ್ವಲ್ಪ ಸಮಯದ ನಂತರ ಅದರಲ್ಲಿನ ಒಂದು ಪೇಢೆ ತನ್ನಷ್ಟಕ್ಕೆ ತಾನೆ ಮಾಯವಾಗುತ್ತದೆಂದು ಹೇಳಲಾಗುತ್ತದೆ. ಮಹಾಶಿವರಾತ್ರಿಯ ಸಂದರ್ಭದಲ್ಲಿ ಈ ದೇವಾಲಯವು ಜನರಿಂದ ತುಂಬು ತುಳುಕುತ್ತಿರುತ್ತದೆ.

ಚಿತ್ರಕೃಪೆ: Gyandaan

ಹೇಮದ್ಪಂಥಿ ವಾಸ್ತುಶೈಲಿ

ಹೇಮದ್ಪಂಥಿ ವಾಸ್ತುಶೈಲಿ

ಈ ಶಿವ ದೇವಾಲಯವು ತನ್ನ ವಿಶಿಷ್ಟವಾದ ಕೆತ್ತನೆಯಿಂದ ನೋಡಲು ಬಲು ಆಕರ್ಷಕವಾಗಿ ಕಾಣುತ್ತದೆ. ಸುಮಾರು 1060 ರಲ್ಲಿ ನಿರ್ಮಿತವಾದ ದೇವಾಲಯ ಇದಾಗಿದ್ದು ಅದ್ಭುತ ಐತಿಹಾಸಿಕ ಪ್ರವಾಸಿ ಆಕರ್ಷಣೆಯಾಗಿ ಇದು ಜನರನ್ನು ಆಕರ್ಷಿಸುತ್ತದೆ. ಮುಂಬೈ ಮೆಟ್ರೊಪಾಲಿಟನ್ ಪ್ರದೇಶಕ್ಕೆ ಸೇರಿದ ಅಂಬರನಾಥ ಉಪನಗರದಲ್ಲಿ ಈ ದೇವಾಲಯವಿದೆ.

ಚಿತ್ರಕೃಪೆ: Mony Panicker

ನಾಶಿಕ್ ಬಳಿ

ನಾಶಿಕ್ ಬಳಿ

ನಾಶಿಕ್ ನಿಂದ ಸುಮಾರು ಕೇವಲ 30 ಕಿ.ಮೀ ದೂರದಲ್ಲಿ ತ್ರಿಂಬಕೇಶ್ವರವಿದ್ದು ಸುಲಭವಾಗಿ ತಲುಪಬಹುದು. ತ್ರಿಂಬಕೇಶ್ವರ ಪವಿತ್ರ 12 ಜ್ಯೋತಿರ್ಲಿಂಗ ತಾಣಗಳ ಪೈಕಿ ಒಂದಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Niraj Suryawanshi

ವಿಶಿಷ್ಟ ಶಿವಲಿಂಗ

ವಿಶಿಷ್ಟ ಶಿವಲಿಂಗ

ತ್ರಿಂಬಕೇಶ್ವರ ದೇವಸ್ಥಾನದ ವಿಶೇಷವೆಂದರೆ ಇಲ್ಲಿರುವ ಶಿವಲಿಂಗವು ಮೂರು ಮುಖಗಳದ್ದಾಗಿದ್ದು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನನ್ನು ಸಂಕೇತಿಸುತ್ತದೆ. ಹಾಗಾಗಿ ಈ ದೇವಸ್ಥಾನವು ಸಾಕಷ್ಟು ಧಾರ್ಮಿಕ ಮಹತ್ವ ಪಡೆದಿರುವ ತಾಣವಾಗಿದೆ.

ಚಿತ್ರಕೃಪೆ: Subodh98271

ಗೋದಾವರಿಯ ಮೂಲ!

ಗೋದಾವರಿಯ ಮೂಲ!

ಈ ದೇವಾಲಯದ ಸಂಕೀರ್ಣದಲ್ಲಿ ಕುಸವರ್ತಾ ಎಂಬ ನೀರಿನ ಕುಂಡವೊಂದಿದ್ದು ಇದನ್ನು ದಕ್ಷಿಣ ಭಾರತದ ಪ್ರಮುಖ ಹಾಗೂ ಪವಿತ್ರ ನದಿಗಳ ಪೈಕಿ ಒಂದಾಗಿರುವ ಗೋದಾವರಿ ನದಿಯ ಉಗಮ ಸ್ಥಾನವೆಂದು ಪರಿಗಣಿಸಲಾಗುತ್ತದೆ.

ಚಿತ್ರಕೃಪೆ: Demorphica

ಆಕರ್ಷಕ

ಆಕರ್ಷಕ

ತ್ರಿಂಬಕೇಶ್ವರ ದೇವಸ್ಥಾನದಿಂದ ಒಂದೆರಡು ಕಿ.ಮೀ ದೂರದಲ್ಲಿ ಬ್ರಹ್ಮದೇವರಿಗೆ ಮುಡಿಪಾದ ಗಿರಿ ಶಿಖರವೊಂದಿದ್ದು ಅದನ್ನು ಬ್ರಹ್ಮಗಿರಿ ಎಂದು ಕರೆಯುತ್ತಾರೆ. ಇನ್ನೊಂದು ಮೂಲದ ಪ್ರಕಾರ, ಗೊದಾವರಿ ನದಿಯು ಇಲ್ಲಿಯೆ ಉಗಮಗೊಂಡು ತ್ರಿಂಬಕೇಶ್ವರ ಪ್ರವೇಶಿಸುತ್ತಾಳೆ ಎನ್ನಲಾಗಿದೆ. ಅಲ್ಲದೆ ಇನ್ನೆರಡು ನದಿಗಳಾದ ಗೌತಮಿ ಹಾಗೂ ಪಶ್ಚಿಮ ಗಂಗೆಯು ಇಲ್ಲಿಂದಲೆ ಹರಿಯುತ್ತಾಳೆನ್ನಲಾಗಿದೆ.

ಚಿತ್ರಕೃಪೆ: Coolgama

ಮುಂಬೈ

ಮುಂಬೈ

ಮಹಾನಗರ ಮುಂಬೈ ಸಾಕಷ್ಟು ಆಧುನಿಕವಾಗಿ ಮುಂದುವರೆಯುತ್ತಿದ್ದರೂ ಕೆಲವು ಪ್ರಾಚೀನ ದೇವಾಲಯಗಳಿಗೆ ಆಶ್ರಯವಾಗಿ ಧಾರ್ಮಿಕಾಸಕ್ತರ ಗಮನಸೆಳೆಯುತ್ತದೆ. ಅಂತಹ ಕೆಲವು ಪುರಾತನ ದೇವಾಲಯಗಳ ಪೈಕಿ ಒಂದಾಗಿದೆ ಶಿವನಿಗೆ ಮುಡಿಪಾದ ವಾಲಕೇಶ್ವರ ದೇವಾಲಯ.

ಚಿತ್ರಕೃಪೆ: wikipedia

ರಾಮನಿಂದ ನಿರ್ಮಿತ

ರಾಮನಿಂದ ನಿರ್ಮಿತ

ದಂತಕಥೆಯ ಪ್ರಕಾರ, ಹಿಂದೆ ತ್ರೇತಾ ಯುಗದಲ್ಲಿ ರಾಮನು ಸೀತೆಯನ್ನು ಕರೆತರಲು ಲಂಕೆಗೆ ತೆರಳುತ್ತಿದ್ದಾಗ ಈ ಸ್ಥಳಕ್ಕೆ ಬಂದೊಡನೆಯೆ ಶಿವನನ್ನು ಪೂಜಿಸಲು ಪ್ರೇರಣೆಯಾಯಿತು. ಅದಕ್ಕಾಗಿ ಶಿವಲಿಂಗವೊಂದನ್ನು ತರಲು ರಾಮ ಲಕ್ಷ್ಮಣನಿಗೆ ಆದೇಶಿಸಿ ಕಾಯುತ್ತ ಕುಳಿತ. ಬಹಳ ಹೊತ್ತಾದರೂ ಲಕ್ಷ್ಮಣ ಮರಳದಿದ್ದಾಗ ಬೇಸರಗೊಂಡ ರಾಮ ಅಲ್ಲಿದ್ದ ಮರಳಿನಿಂದಲೆ ಶಿವಲಿಂಗ ಸ್ಥಾಪಿಸಿ ಪೂಜಿಸಿದ.

ಚಿತ್ರಕೃಪೆ: Eric Parker

ಹೆಸರಿಗೆ ಕಾರಣ

ಹೆಸರಿಗೆ ಕಾರಣ

ಈ ತಾಣವು ಸಮುದ್ರದ ಬಳಿಯಿರುವುದರಿಂದ ಯಥೇಚ್ಚವಾಗಿ ಮರಳಿತ್ತು. ಅಲ್ಲದೆ, ಸಂಸ್ಕೃತದಲ್ಲಿ ವಾಲುಕ ಎಂದರೆ ಮರಳು ಎಂದಿರುವುದರಿಂದ ಈ ಸ್ಥಳಕ್ಕೆ ಹಾಗೂ ದೇವಾಲಯಕ್ಕೆ ವಾಲ್ಕೇಶ್ವರ ನಂತರ ವಾಲಕೇಶ್ವರ ಎಂಬ ಹೆಸರು ಬಂದಿತು.

ಚಿತ್ರಕೃಪೆ: Viraj

ಅದ್ವಿತೀಯ

ಅದ್ವಿತೀಯ

ಅದ್ವಿತೀಯ, ಅಸಾಮಾನ್ಯ ಹಾಗೂ ಅಮೋಘ ಎನಬಹುದಾದ ಒಂದೆ ಬೆಟ್ಟದಲ್ಲಿ ಆಕರ್ಷಕವಾಗಿ ಕಡಿಯಲಾದ ಸುಂದರ ಶಿವ ದೇವಾಲಯ ಇದಾಗಿದೆ. ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಅತ್ಯಾಕರ್ಷಕ ಪುರಾತನ ದೇವಾಲಯ ಇದಾಗಿದೆ. ಅಂದಿನ ಶಿಲ್ಪಿಗಳ ಕೌಶಲ್ಯತೆಗೆ, ನಿಪುಣತೆಗೆ ಈ ಶಿವ ದೇವಾಲಯ ಸಾಕ್ಷಿಯಾಗಿದೆ. ಮಹಾರಾಷ್ಟ್ರದ ಪ್ರಖ್ಯಾತ ಪ್ರವಾಸಿ ತಾಣಗಳಾದ ಅಜಂತಾ ಹಾಗೂ ಎಲ್ಲೋರಾ ಗುಹೆಗಳ ಪೈಕಿ ಎಲ್ಲೋರಾ ದಲ್ಲಿದೆ ಈ ಶಿವ ದೇವಾಲಯ.

ಚಿತ್ರಕೃಪೆ: Pradeep Kumar N

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more