Search
  • Follow NativePlanet
Share
» »ಕೇರಳದಲ್ಲಿ ನೋಡಲೇ ಬೇಕಾದ ಜೈನ ದೇವಾಲಯಗಳಿವು

ಕೇರಳದಲ್ಲಿ ನೋಡಲೇ ಬೇಕಾದ ಜೈನ ದೇವಾಲಯಗಳಿವು

By Manjula Balaraj Tantry

ದೇಶದಲ್ಲಿರುವ ಎಲ್ಲಾ ಮಂದಿರಗಳು, ಸ್ಮಾರಕಗಳು ಸುಂದರವಾದ ಅದ್ಬುತವಾದ ವಾಸ್ತುಶಿಲ್ಪ ಶೈಲಿಯನ್ನು ಶಿಲ್ಪಗಳನ್ನು ಹೊಂದಿವೆ. ಇವುಗಳು ನಮ್ಮನ್ನು ಗೌರವಿಸುವುದು ಹಾಗೂ ಪೂಜಿಸುವಂತೆ ಮಾಡಿವೆ. ಆದುದರಿಂದ ನೀವು ಒಬ್ಬ ಧಾರ್ಮಿಕ ವಾಸ್ತುಕಲೆಯ ಆರಾಧಕರಾಗಿದ್ದಲ್ಲಿ ಇಲ್ಲಿ ಕೆಲವು ಕೇರಳದ ಪ್ರಾಚೀನ ಜೈನ ದೇವಾಲಯಗಳ ಬಗ್ಗೆ ನೀಡಲಾಗಿದೆ. 2018ರಲ್ಲಿ ಇಲ್ಲಿಗೆ ಭೇಟಿ ಕೊಡುವುದನ್ನು ತಪ್ಪಿಸಲೇಬಾರದು.

ಜೈನ ದೇವಾಲಯ, ಸುಲ್ತಾನ್ ಬತ್ತೇರಿ

ಜೈನ ದೇವಾಲಯ, ಸುಲ್ತಾನ್ ಬತ್ತೇರಿ

PC- Joseph Lazer l

ಕಿಡಾಂಗ್ನಾಂಡ್ ನಲ್ಲಿರುವ ದೇವಾಲಯವು ದೇವ ದೇವತೆಗಳ ಕಥೆಗಳನ್ನು ಮಾತ್ರಹೊಂದಿರುವುದಲ್ಲದೆ ಅನೇಕ ಯುದ್ದ ಮತ್ತು ಶಸ್ತ್ರಾಸ್ತ್ರ ಗಳ ಕಥೆಗಳನ್ನು ಕೂಡಾ ಹೊಂದಿದೆ. ಇದು 13ನೇ ಶತಮಾನದಲ್ಲಿ ನಿರ್ಮಿಸಲಾದ ಒಂದು ಹಳೆಯ ದೇವಾಲಯಗಳಲ್ಲೊಂದಾಗಿದೆ. ಇದನ್ನು 18ನೇ ಶತಮಾನದ ಪ್ರಖ್ಯಾತ ಮತ್ತು ಅಬ್ಬರದ ಆಡಳಿತಗಾರರಾದ ಟಿಪ್ಪು ಸುಲ್ತಾನರು ಈ ದೇವಾಲಯವನ್ನು ಆಕ್ರಮಿಸಿಕೊಂಡರು.

ಸುಲ್ತಾನನು ತನ್ನ ಆಳ್ವಿಕೆಯ ಅವಧಿಯಲ್ಲಿ ಈ ದೇವಾಲಯವನ್ನು ತನ್ನ ಶಸ್ತಾಸ್ತ್ರಗಳನ್ನು ಇಡುವ ಸ್ಥಳವಾಗಿ ಉಪಯೋಗಿಸಿಕೊಂಡಿದ್ದನು. ಈಗ ಈ ದೇವಾಲಯವು ಭಾರತ ಸರಕಾರದ ಪುರಾತತ್ವ ಶಾಸ್ತ್ರದ ಆಡಳಿತದಲ್ಲಿ ನಿರ್ವಹಿಸಲ್ಪಡುತ್ತಿದೆ. ಈ ದೇವಾಲಯದ ಲ್ಲಿ ಬಳಸಿದ ಶಿಲ್ಪಕಲೆಗಳು ಮತ್ತು ವಾಸ್ತುಶಿಲ್ಪಗಳು ಭಾರತದ ಇತಿಹಾಸ, ಧರ್ಮ ಮತ್ತು ಜೈನ ಧರ್ಮದ ಬೇರುಗಳನ್ನು ಬಹಳ ರೋಮಾಂಚಕವಾಗಿ ಪ್ರತಿಬಿಂಬಿಸುತ್ತವೆ.

ಜೈನಿಮೇಡು ಜೈನ ದೇವಾಲಯ ಪಾಲಕ್ಕಾಡ್

ಜೈನಿಮೇಡು ಜೈನ ದೇವಾಲಯ ಪಾಲಕ್ಕಾಡ್

PC- Shijualex

ಜೈನ ತೀರ್ಥಂಕರರಾದ ಚಂದ್ರಪ್ರಭಾ ಅವರಿಗೆ ಸಮರ್ಪಿತವಾದ ಜೈನಿಮೇಡು ಜೈನ ದೇವಾಲಯವು 15ನೇ ಶತಮಾನದ್ದಾಗಿದ್ದು ಇದು ಜೈನಿಮೇಡುವಿನಲ್ಲಿ ನೆಲೆಸಿದೆ. ಇದು ಪಾಲಕ್ಕಾಡ್ ನಿಂದ 3 ಕಿ.ಮೀ ದೂರದಲ್ಲಿದೆ. ಈ ದೇವಾಲಯದ ಸೌಂದರ್ಯ ಹಾಗೂ ಶಾಂತಿಯುತ ವಾತಾವರಣ ಮೋಡಿ ಮಾಡುವಂತಿದ್ದು ಇದರ ಬಗ್ಗೆ ಪ್ರಖ್ಯಾತ ಮಲೆಯಾಳಂ ಕವಿ ಕುಮಾರನಾಸನ್ ಬರೆದ "ವೀಣಪೂವು" ಎಂಬ ಹೆಸರಿನ ಕವಿತೆಯಲ್ಲಿ ಉಲ್ಲೇಖಿಸಲಾಗಿದೆ.

ಈ ದೇವಾಲಯದ ಪ್ರಮುಖ ಆಕರ್ಷಣೆಯೆಂದರೆ ಇದರ ಆಕಾರ ಮತ್ತು ಜೈನ ತೀರ್ಥಂಕರರ ಮತ್ತು ಯಕ್ಷಿಣಿಗಳ ಚಿತ್ರಗಳನ್ನು ತೋರಿಸುವ ರೀತಿ. ಇದು ಅತ್ಯಂತ ಹಳೆಯ ದೇವಾಲಯವಾದುದರಿಂದ ಇದು ಹಲವಾರು ವರ್ಷಗಳಿಂದ ಶಿಥಿಲಗೊಂಡಿರುವ ಸ್ಥಿತಿಯಲ್ಲಿತ್ತು. ಆದರೂ ಇದನ್ನು ಈಗ ನವೀಕರಿಸಲಾಗಿದೆ ಮತ್ತು 2013 ರಿಂದ ಸೂಕ್ತವಾದ ಕಾಳಜಿ ಮತ್ತು ನಿರ್ವಣೆಯಲ್ಲಿದೆ.

ಅನಂತನಾಥ ಸ್ವಾಮಿ ದೇವಾಲಯ, ಪುಲಿಯಾರ್ ಮಾಲಾ

ಅನಂತನಾಥ ಸ್ವಾಮಿ ದೇವಾಲಯ, ಪುಲಿಯಾರ್ ಮಾಲಾ

PC- Ms Sarah Welch

ಈ ದೇವಾಲಯವು ಪುಲಿಯಾರ್ ಮಾಲದಲ್ಲಿರುವುದರಿಂದ ಇದು ಪುಲಿಯಾರ್ ಮಾಲಾ ಜೈನ ದೇವಾಲಯವೆಂದೂ ಕೂಡ ಕರೆಯಲ್ಪಡುತ್ತದೆ. ಇದು ವಯನಾಡಿ ಜಿಲ್ಲೆಯ ಕಲ್ಪೆಟ್ಟಾ ದಿಂದ 6 ಕಿ.ಮೀ ದೂರದಲ್ಲಿದೆ. ಈ ಜೈನ ದೇವಾಲಯವು ಜೈನ ಧರ್ಮದ 14ನೇ ತೀರ್ಥಂಕರರಾದ ಅನಂತ ಸ್ವಾಮಿಯವರಿಗೆ ಸಮರ್ಪಿತವಾದುದಾಗಿದ್ದು ಅವರ ಕಾಲಾನಂತರ ಈ ದೇವಾಲಯಕ್ಕೆ ಅವರ ಹೆಸರಿಡಲಾಗಿದೆ.

ಈ ದೇವಾಲಯವು ಅತ್ಯಂತ ಸುಂದರ ಕೆತ್ತನೆಗಳನ್ನು ಹೊಂದಿದ ಜೈನ ದೇವಾಲಯಗಳಲ್ಲಿ ಒಂದಾಗಿದ್ದು, ಇದು ಸಂಪೂರ್ಣ ದೇವಸ್ಥಾನ ಸಂಕೀರ್ಣಕ್ಕೆ ಅತ್ಯಂತ ಶಾಂತಿಯುತ ಸೆಳವು ನೀಡುತ್ತದೆ. ಕೇರಳದಲ್ಲಿ ಜೈನ ಧರ್ಮದ ಸೌಂದರ್ಯತೆಯನ್ನು ಅನ್ವೇಷಣೆ ಮಾಡುವ ಇಚ್ಚೆ ಇರುವವರಾದಲ್ಲಿ ಈ ಜೈನ ದೇವಾಲಯಕ್ಕೆ ನೀವು ಭೇಟಿ ಕೊಡಲೇ ಬೇಕು.

ಕಲ್ಲಿಲ್ ದೇವಾಲಯ ಎರ್ನಾಕುಲಂ

ಕಲ್ಲಿಲ್ ದೇವಾಲಯ ಎರ್ನಾಕುಲಂ

PC- Challiyan

23ನೇ ಹಾಗೂ 24 ನೇ ಜೈನ ತೀರ್ಥಂಕರರಾದ ಕ್ರಮವಾಗಿ ಪಾರ್ಶ್ವನಾಥ ಮತ್ತು ವರ್ಧಮಾನ ಮಹಾವೀರರ ಶಿಲ್ಪಗಳನ್ನು ಹೊಂದಿರುವ ಕಲ್ಲಿನಿಂದ ಕೆತ್ತಲಾದ ಕೇರಳದ ಕಲ್ಲೀಲ್ ದೇವಾಲಯವು ಅತ್ಯಂತ ಹಳೆಯ ದೇವಾಲಯಗಳಲ್ಲೊಂದಾಗಿದೆ. ಇದರ ಜೊತೆಗೆ ಪದ್ಮಾವತಿ ದೇವಿಯ ಶಿಲ್ಪವನ್ನೂ ಈ ದೇವಾಲಯವು ಹೊಂದಿದೆ. ಈ ದೇವಾಲಯದ ಹೆಚ್ಚಿನ ಭಾಗಗಳು ಕಲ್ಲಿನ ಶಿಲ್ಪಗಳಿಂದ ಕೆತ್ತಲ್ಪಟ್ಟಿವೆ . ಮಲೆಯಾಳಂ ನಲ್ಲಿ" ಕಲ್ಲಿಲ್ " ಎಂದರೆ "ಕಲ್ಲುಗಳು" ಎಂದು ಅರ್ಥೈಸುತ್ತದೆ.

ತ್ರಿಕ್ಕೂರ್ ಮಹಾದೇವ ದೇವಾಲಯ, ತಿಶೂರ್

ತ್ರಿಕ್ಕೂರ್ ಮಹಾದೇವ ದೇವಾಲಯ, ತಿಶೂರ್

PC- Aruna

ಇದೊಂದು ಕಲ್ಲಿನಿಂದ ಕೆತ್ತಲಾದ ಗುಹಾಂತರ ದೇವಾಲಯವಾಗಿದ್ದು ಕೇರಳದ ತ್ರಿಶೂರ್ ನಲ್ಲಿ ನೆಲೆಸಿದೆ. ಇದು ಪುರಾತತ್ವ ಶಾಸ್ತ್ರದ ಇಲಾಖೆ ಯ ಅಧಿಕಾರದಲ್ಲಿ ನಿರ್ವಹಿಸಲ್ಪಡುತ್ತಿದೆ. ಇದರ ಐತಿಹಾಸಿಕ ಮಹತ್ವದಿಂದಾಗಿ ತ್ರಿಕೂರ್ ಮಹಾದೇವ ದೇವಾಲಯವು ಪ್ರಮುಖ ಪ್ರವಾಸೀ ತಾಣವಾಗಿದೆ.

ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದ್ದರೂ ಕೂಡ ಇದು ರಾಜ್ಯದಾದ್ಯಂತ ಅನೇಕ ಜೈನ ಮತ್ತು ಬೌದ್ದ ಸನ್ಯಾಸಿಗಳನ್ನು ಆಕರ್ಷಿಸುತ್ತದೆ. ಬೌದ್ದ ಮತ್ತು ಜೈನ ಸನ್ಯಾಸಿಗಳು ಈ ಗುಹಾಂತರ ದೇವಾಲಯದಲ್ಲಿ ಹಿಂದು ಸನ್ಯಾಸಿಗಳ ಜೊತೆಗೆ ಧ್ಯಾನ ಮಾಡುತ್ತಿದ್ದರು ಎಂದು ನಂಬಲಾಗುತ್ತದೆ.

Read more about: kerala ಕೇರಳ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more