Search
  • Follow NativePlanet
Share
» »ದೇವಸ್ಥಾನಗಳ ನಗರವಾದ ರಾಮೇಶ್ವರದಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳು

ದೇವಸ್ಥಾನಗಳ ನಗರವಾದ ರಾಮೇಶ್ವರದಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳು

ಪ್ರವಾಸಿಗರು ಹಾಗೂ ಯಾತ್ರಿಕರಿಂದ ರಾಮೇಶ್ವರಂ, ತಮಿಳುನಾಡಿನ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ. ಇದು ರಾಮಾಯಣದಂತಹ ಮಹಾಕಾವ್ಯದೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ ಸ್ಥಳವಾಗಿದೆ ಮತ್ತು ಇದು ಶ್ರೀಲಂಕಾದಂತಹ ದ್ವೀಪ ರಾಷ್ಟ್ರಕ್ಕೆ ಬಹಳ ಸಮೀಪದಲ್ಲಿದೆ.

ಹತ್ತು ತಲೆಯನ್ನು ಹೊಂದಿದ ರಾವಣನ ಬಂಧನದಿಂದ ಸೀತಾ ದೇವಿಯನ್ನು ಹಿಂದೆ ಕರೆದೊಯ್ಯುವ ಸಲುವಾಗಿ ರಾಮನು ಭಾರತದ ಸಮುದ್ರಕ್ಕೆ ಅಡ್ದಲಾಗಿ ಸೇತುವೆಯನ್ನು ಇಲ್ಲಿ ಕಟ್ಟಿದ್ದ ಎಂದು ಹೇಳಲಾಗುತ್ತದೆ. ತುಲನಾತ್ಮಕವಾಗಿ ಇದು ಸಣ್ಣ ಪಟ್ಟಣವಾಗಿದ್ದು,ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ ತವರು ಪಟ್ಟಣವಾಗಿದೆ.

ಅವರನ್ನು ಪ್ರೀತಿಯಿಂದ ಜನರ ಅಧ್ಯಕ್ಷರು ಎಂದು ಕರೆಯುತ್ತಾರೆ. ಈ ಪ್ರದೇಶಗಳಲ್ಲಿ ಬಹಳ ಸಂಖ್ಯೆಯಲ್ಲಿ ದೇವಸ್ಥಾನಗಳಿವೆ, ಅಲ್ಲದೆ ಸ್ವಚ್ಚವಾದ ಕಡಲ ತೀರ, ಪವಿತ್ರವಾದ ಸರೋವರಗಳು, ಗೋಸ್ಟ್ ಪಟ್ಟಣ ಮತ್ತು ಅನೇಕ ಆಸಕ್ತಿದಾಯಕ ಸ್ಥಳಗಳು ಇತ್ಯಾದಿಗಳಿವೆ. ಈ ನಗರವು ಬಹಳ ಕಡಿಮೆ ಜನಸಮುದಾಯವನ್ನು ಹೊಂದಿರುವುದು ಸ್ಥಳದ ಪ್ರಮುಖ ಲಕ್ಷಣವಾಗಿದೆ, ಇದು ಒಂದು ಪ್ರಯಾಣದ ಪಟ್ಟಿಯಲ್ಲಿ ಸೇರಿಸಬೇಕಾಗಿರುವ ಅವಶ್ಯಕವಾಗಿ ಭೇಟಿ ಕೊಡಲೇಬೇಕಾದ ಸ್ಥಳವಾಗಿದೆ.

ರಾಮನಾಥ ಸ್ವಾಮಿ ದೇವಾಲಯ

ರಾಮನಾಥ ಸ್ವಾಮಿ ದೇವಾಲಯ

ಈ ದೇವಸ್ಥಾನವು ಶಿವದೇವರಿಗೆ ಅರ್ಪಿತವಾಗಿದೆ. ಈ ದೇವಸ್ಥಾನವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಆದಿ ಶಂಕರಾಚಾರ್ಯರು ಸೂಚಿಸಿದ ಚಾರ್ ಧಾಮ ದೇವಾಲಯಗಳಲ್ಲಿ ಇದೂ ಒಂದಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಎರಡು ಶಿವಲಿಂಗಗಳನ್ನು ಕಾಣಬಹುದು.

ಇಲ್ಲಿಯ ರಾಮಲಿಂಗಂ ಅನ್ನುವ ಮುಖ್ಯದೇವರ ವಿಗ್ರಹವನ್ನು ದೇವಿ ಸೀತೆಯು ಮರಳಿನಲ್ಲಿ ಮಾಡಿದರು ಎಂದು ನಂಬಲಾಗಿದೆ. ಎರಡನೆಯದನ್ನು ವಿಶ್ವಾಲಿಂಗಂ ಎಂದು ಕರೆಯುತ್ತಾರೆ, ಇದನ್ನು ಹನುಮಾನ್ ತಂದರು ಎಂದು ಹೇಳಲಾಗುತ್ತದೆ. ಈ ದೇವಸ್ಥಾನವು ಗೋಪುರಗಳು ಮತ್ತು ಸುದೀರ್ಘವಾದ ಕಾರಿಡಾರ್ತಳಿಗೆ ಹೆಸರುವಾಸಿಯಾಗಿದೆ. ಇದು ವಿಶ್ವದಲ್ಲೇ ಅತ್ಯಂತ ಉದ್ದವಾದದ್ದು ಎಂದು ನಂಬಲಾಗಿದೆ ಮತ್ತು 22 ಪವಿತ್ರವಾದ ಸರೋವರಗಳಿಗೆ ಈ ಪ್ರದೇಶ ನೆಲೆಯಾಗಿದೆ.

PC: Offical Site

ಪಂಬನ್ ಸೇತುವೆ

ಪಂಬನ್ ಸೇತುವೆ

ಪಂಬನ್ ಸೇತುವೆ ಎಂಬುದು ರೈಲ್ವೇ ಸೇತುವೆಯಾಗಿದ್ದು, ಇದು ರಾಮೇಶ್ವರಂ ಪಟ್ಟಣವನ್ನು ಮುಖ್ಯ ಭೂಮಿಗೆ ಸಂಪರ್ಕಿಸುತ್ತದೆ. 2010 ರಲ್ಲಿ ಬಾಂದ್ರಾ-ವರ್ಲಿಯ ಸಮುದ್ರ ಸಂಪರ್ಕವನ್ನು ತೆರೆಯುವವರೆಗೂ ಇದು ದೇಶದಲ್ಲಿನ ಉದ್ದದ ಸಮುದ್ರ ಸೇತುವೆಯಾಗಿತ್ತು.

ರೈಲು ಸೇತುವೆ ಕಾಂಕ್ರೀಟ್ ನಲ್ಲಿರುವ ಸಾಮಾನ್ಯ ಸೇತುವೆಯಾಗಿದ್ದು, ಡಬಲ್-ಲೀಫ್ ಬೇಸ್ಕೂಲ್ ವಿಭಾಗದ ಮಿಡ್ವೇಯನ್ನು ಹೊಂದಿದೆ, ಇದು ಹಡಗುಗಳು ಮತ್ತು ದೋಣಿಗಳು ಹಾದುಹೋಗಲು ಅವಕಾಶ ನೀಡುತ್ತದೆ.1988 ರವರೆಗೆ, ದ್ವೀಪವನ್ನು ಮುಖ್ಯ ಭೂಮಿಗೆ ಸಂಪರ್ಕಿಸುವ ಏಕೈಕ ಸಾರಿಗೆ ಮಾರ್ಗ ಈ ಪಂಬನ್ ಸೇತುವೆಯಾಗಿತ್ತು.

PC: Picsnapr


ಹೌಸ್ ಆಫ್ ಕಲಾಂ( ಕಲಾಂ ಅವರ ಮನೆ)

ಹೌಸ್ ಆಫ್ ಕಲಾಂ( ಕಲಾಂ ಅವರ ಮನೆ)

ಹೆಸರೇ ಹೇಳುವಂತೆ ಇದು ಭಾರತದ ರಾಷ್ಟ್ರಪತಿ ದಿವಂಗತ ಡಾ.ಅಬ್ಧುಲ್ ಕಲಾಂ ಅವರ ತವರೂರಾಗಿದೆ. ಅವರ ಮನೆಯು ಮ್ಯೂಸಿಯಂ ಆಗಿ ಪರಿವರ್ತನೆಗೊಂಡಿದೆ, ಇಲ್ಲಿ ಅವರ ಬಹುಮಾನಗಳನ್ನು ಪದ್ಮ ಪ್ರಶಸ್ತಿಗಳು ಮತ್ತು ಭಾರತ ರತ್ನ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಹೊಂದಿದೆ.ಈ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುತ್ತಿರುವಾಗ ರಾಮೇಶ್ವರಂನಲ್ಲಿರುವ ಒಂದು ಚಿಕ್ಕದಾದ ರಸ್ತೆಯ ಮೇಲೆ ಅವರ ಜೀವನದ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಬಹುದು.

PC: Kaushik Kumar


ಕೋದಂಡ ರಾಮ ಸ್ವಾಮಿ ದೇವಸ್ಥಾನ

ಕೋದಂಡ ರಾಮ ಸ್ವಾಮಿ ದೇವಸ್ಥಾನ

ಧನುಷ್ಕೋಡಿಗೆ ಹೋಗುವ ಮಾರ್ಗದಲ್ಲಿ ಕೋದಂಡರಾಮ ದೇವಸ್ಥಾನವನ್ನು ಕಾಣಬಹುದು. ರಾವಣನ ತಮ್ಮನಾದ ವಿಭೀಷಣನು ತಾನಾಗಿಯೇ ರಾಮನಿಗೆ ಶರಣಾದ ಜಾಗವಿದು ಎಂದು ಹೇಳಲಾಗುತ್ತದೆ. ನಂತರ ರಾಮನು ರಾವಣನನ್ನು ಕೊಂದ ನಂತರ ವಿಭೀಷಣನನ್ನು ಈ ಪ್ರದೇಶದ ರಾಜನನ್ನಾಗಿ ಮಾಡಿದ ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ ವಿಭೀಷಣನೊಂದಿಗೆ ರಾಮ ಸೀತೆ ಮತ್ತು ಲಕ್ಶ್ಮಣನ ವಿಗ್ರಹಗಳಿವೆ.

 ಅಗ್ನಿ ತೀರ್ಥಂ

ಅಗ್ನಿ ತೀರ್ಥಂ

64 ಪವಿತ್ರ ಸರೋವರಗಳಲ್ಲಿ ಅಗ್ನಿ ತೀರ್ಥಂ ಕೂಡ ಒಂದು. ಈ ಪ್ರದೇಶವು ರಾಮನಾಥ ಸ್ವಾಮಿ ದೇವಾಲಕ್ಕೆ ಸಮೀಪದಲ್ಲಿದೆ. ಮತ್ತು ಅತೀ ಹೆಚ್ಚು ಜನರು ಭೇಟಿ ಕೊಡುವ ಸ್ಥಳಗಳಲ್ಲಿ ಇದೂ ಒಂದು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಅತೀ ಹೆಚ್ಚಿನ ಜನರು ಇಲ್ಲಿ ಬಂದು ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ.

ಹಿಂದುಗಳಿಗೆ ಇಲ್ಲಿಯ ನೀರಿನಲ್ಲಿ ಮುಳುಗಿ ಎದ್ದು ಸ್ನಾನ ಮಾಡುವುದನ್ನು ಪವಿತ್ರವಾದುದು ಎಂದು ಭಾವಿಸಲಾಗಿದೆ. ಹುಣ್ಣಿಮೆಯ ದಿನದಂದು ಈ ಸ್ಥಳಕ್ಕೆ ಭೇಟಿ ಕೊಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇತರ ಸರೋವರಗಳಂತೆ ಅಗ್ನಿ ತೀರ್ಥಂ ತನ್ನದೇ ಆದ ಪ್ರಬಲವಾದ ಸಮುದ್ರವಾಗಿದೆ.

PC: எஸ். பி. கிருஷ்ணமூர்த்தி


ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more