
ನಾವು ಬೇಸಿಗೆ ಕಾಲದಲ್ಲಿ ತಂಪಾದ ಜಾಗಗಳಿಗೋ, ಬೀಚ್‌ಗಳಿಗೋ ಪಿಕ್‌ನಿಕ್ ಹೋಗುತ್ತೇವೆ. ಅಲ್ಲಿ ನಮ್ಮ ರಜಾದಿನಗಳನ್ನು ಕಳೆಯುತ್ತೇವೆ. ಆದರೆ ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಯಾವ ರೀತಿ ಬೇಸಿಗೆಯನ್ನು ಕಳೆಯುತ್ತಿದ್ದರು ಎಲ್ಲಿಗೆ ಹೋಗುತ್ತಿದ್ದರು ಅನ್ನೋದು ನಿಮಗೆ ಗೊತ್ತಾ?
ರಾಜಸ್ಥಾನದ ಭರತ್‌ಪುರ್‌ನಲ್ಲಿನ ಡೀಗ್ ಎನ್ನುವ ಸ್ಥಳವು ಹಿಂದೆ ಬೇಸಿಗೆಗಾಲದಲ್ಲಿ ರಾಜ ಮಜಾರಾಜರ ಬೇಸಿಗೆ ರಜಾ ತಾಣಗಳಾಗಿದ್ದವಂತೆ. ಈಗ ಇದು ತನ್ನ ರಾಯಲ್ ರೆಸಾರ್ಟ್‌ಗಳ ಜೊತೆಗೆ ದೇಶ ವಿದೇಶದ ಪ್ರವಾಸಿಗಳಿಗೆ ಐಷಾರಾಮಿ ಸೇವೆಯನ್ನು ಒದಗಿಸುತ್ತದೆ. ಇಲ್ಲಿನ ಪ್ರವಾಸವು ನಿಮ್ಮನ್ನು ರಾಜ್ಯದ ಬಹುಮುಖ್ಯ ಸಾಂಸ್ಕೃತಿಕ ಪರಂಪರೆಯತ್ತ ಕೊಂಡೊಯ್ಯುತ್ತದೆ.
ವರ್ಷದಲ್ಲಿ 27 ದಿನ ಮಾತ್ರ ತೆರೆಯುವ ದೇವಾಲಯದಲ್ಲಡಗಿದೆ ದೇವಿ ಸತಿಯ ರಹಸ್ಯ

ಮೇಳಗಳನ್ನು ಆಯೋಜಿಸುತ್ತಿದ್ದರು
PC: LRBurdak
ಆ ಸಮಯದಲ್ಲಿ ಇಲ್ಲಿ ವಿಭಿನ್ನ ಮೇಳಗಳು ಉತ್ಸವಗಳನ್ನು ಆಯೋಜಿಸಲಾಗುತ್ತಿತ್ತು. ಈ ಮೂಲಕ ಜನರು ಇಲ್ಲಿನ ಸಾಂಸ್ಕೃತಿಕತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿತ್ತು. ಇಲ್ಲಿ ಸುತ್ತಾಡಲು ಅನೇಕ ಸ್ಥಳಗಳಿವೆ ಇವುಗಳು ಇಲ್ಲಿನ ಇತಿಹಾಸದ ಜೊತೆಗೆ ಸಾಂಸ್ಕೃತಿಕ ಮಹತ್ವದ ಬಗ್ಗೆಯೂ ತಿಳಿಸುತ್ತದೆ.

ಡೀಗ್ ಕೋಟೆ
PC: LRBurdak
ಡೀಗ್‌ನ್ನು ಸುತ್ತಾಡಬೇಕಾದರೆ ನೀವು ಮೊದಲು ಇಲ್ಲಿನ ಡೀಗ್ ಕೋಟೆಯಿಂದ ಪ್ರಾರಂಭಿಸಿ. ಮೊಘಲ್ ಶೈಲಿಯಲ್ಲಿ ನಿರ್ಮೀಸಲಾಗಿರುವ ಈ ಕೋಟೆಯು ವಿಶಾಲವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಈ ಐತಿಹಾಸಿಕ ಕೋಟೆಯನ್ನು 1700ರ ನಂತರ ನಿರ್ಮಿಸಲಾಗಿದೆ. ಈ ಕೋಟೆಯು ಇಲ್ಲಿಯ ಸ್ಥಳೀಯ ನದಿಗಳಾದ ರೂಪ್ ಸಾಗರ್ ಹಾಗೂ ಗೋವಿಂದ್ ಸಾಗರ್ ನಿಂದ ಸುತ್ತುವರಿದೆ. ಇದು ಕೋಟೆಯ ಸೌಂದರ್ಯವನ್ನು ಹೆಚ್ಚಿಸಿರುವುದಲ್ಲದೆ. ಕೋಟೆಯ ತಾಪಮಾನವನ್ನೂ ಕಡಿಮೆ ಮಾಡಿದೆ. ಇಲ್ಲಿ 70ಫೀಟ್ ಎತ್ತರದ ವಾಚ್ ಟವರ್ ಕೂಡಾ ಇದೆ.

ಭರತಪುರ ಅಭಯಾರಣ್ಯ
PC: LRBurdak
ಹಳೆಯ ಕೋಟೆಗಳನ್ನು ಹೊರತುಪಡಿಸಿ ಇಲ್ಲಿ ಸುಂದರವಾದ ಭರತಪುರ ಪಕ್ಷಿಗಳ ಅಭಯಾರಣ್ಯವೂ ಇದೆ. ಇದು ಪ್ರವಾಸಿಗರ ನಡುವೆ ಬಹಳ ಪ್ರಸಿದ್ಧವಾಗಿದೆ. ವಿವಿಧ ಗಿಡಮೂಲಿಕೆಗಳು ಹಾಗೂ ಪಕ್ಷಿಗಳ ವಿಶ್ರಾಮ ಸ್ಥಳವು ಈ ಅಭಯಾರಣ್ಯ ಪ್ರಕೃತಿ ಪ್ರೇಮಿಗಳಿಗೆ ಉತ್ತಮ ತಾಣವಾಗಿದೆ. ಇಲ್ಲಿ ಸುಮಾರು 230 ಪ್ರಜಾತಿಯ ಪಕ್ಷಿಗಳಿವೆ. ಪಕ್ಷಿವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದ್ದು, ನೀವು ನಿಮ್ಮ ಫ್ಯಾಮಿಲಿ ಜೊತೆ ಹೋಗಬಹುದು.
ಬೆಂಗಳೂರು ಸುತ್ತಮುತ್ತ ವಾರಾಂತ್ಯ ಕಳೆಯಲು ಬೆಸ್ಟ್ ಸಾಹಸಮಯ ತಾಣಗಳಿವು

ಗೋಪಾಲ್ ಭವನ್
PC: Bornav27may
ಡೀಗ್ ಅರಮನೆಯು ಬಹುತೇಕ ಸುಂದರ ಭವನಗಳಿಂದ ಕೂಡಿದೆ. ಅಲಂಕರಿಸಲಾಗಿರುವ ಬಾಲ್ಕನಿ, ವಿಶಾಲವಾದ ಹಾಲ್, ಆಕರ್ಷಕ ಹಚ್ಚ ಹಸಿರುನಿಂದ ಕೂಡಿದೆ. ಇವುಗಳಲ್ಲೆಲ್ಲಾ ಅತ್ಯಂತ ದೊಡ್ಡ ಭವನವೆಂದರೆ ಗೋಪಾಲ್ ಭವನ. ರಾಜಸ್ಥಾನದ ಈ ಅರಮನೆಯ ಕೇಂದ್ರೀಯ ಹಾಲ್ ಅದ್ಭುತ ವಾಸ್ತುಕಲೆಗೆ ಉದಾಹರಣೆಯಾಗಿದೆ. ಇದು ಇಡೀ ಭವನವನ್ನು ಪ್ರತಿಬಿಂಬಿಸುತ್ತದೆ.
ಈ ಐತಿಹಾಸಿಕ ಕಟ್ಟಡವು ಅಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

ಸೂರಜ್ ಭವನ
PC:Vu2sga
ಡೀಗ್ ಅರಮನೆಯ ಒಳಗೆ ನೀವು ಸೂರಜ್ ಭವನವನ್ನೂ ನೋಡಬಹುದು. ಈ ಭವನವು ತನ್ನ ಹೊರಗಿನ ಶೈಲಿ ಹಾಗೂ ಒಳಗಿನ ಶೈಲಿಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಂಗಮರ್‌ಮರ್‌ನಿಂದ ನಿರ್ಮಿಸಲಾಗಿರುವ ಈ ಕಟ್ಟಡವು ಯಾರನ್ನು ಬೇಕಾದರೂ ಆಶ್ಚರ್ಯಚಕಿತಗೊಳಿಸುವುದುರಲ್ಲಿ ಸಂಶಯವೇ ಇಲ್ಲ.
ಈ ಭವನವು ಸಮತಲ ಮಹಡಿಯನ್ನು ಹೊಂದಿದ್ದು ಒಂದೇ ಮಹಡಿಯ ಕಟ್ಟಡವಾಗಿದೆ. ಇದರ ವಾಸ್ತುಕಲೆಯು ಈ ಕಟ್ಟಡವನ್ನು ಇತರ ಕಟ್ಟಡಗಳಿಗಿಂತ ಭಿನ್ನವಾಗಿಸುತ್ತದೆ.

ಹರ್‌ದೇವ್ ಭವನ್
PC:Vu2sga
ಈ ಮೇಲೆ ಹೇಳಲಾಗಿರುವ ಭವನಗಳನ್ನು ಹೊರತುಪಡಿಸಿ ಡೀಗ್ ಮಹಲ್‌ನಲ್ಲಿ ಹರ್‌ದೇವ್ ಭವನ್ ಕಟ್ಟಡವನ್ನು ವೀಕ್ಷಿಸಬಹುದು. ಸೂರಜ್ ಭವನದ ಹಿಂದೆ ಇರುವ ಈ ಕಟ್ಟಡವು ಮೊಘಲ್ ಶೈಲಿಯಲ್ಲಿದೆ. ಹರ್‌ದೇವ್ ಭವನದ ಹಾಲ್‌ನ್ನು ಮೆಹರಾಬ್ ಹಾಗೂ ಕಂಬಗಳಿಂದ ನಿರ್ಮಿಸಲಾಗಿದೆ. ಹಿಂಬದಿಯಲ್ಲಿ ತಿರುಗುವ ಮಹಡಿ ಇದೆ. ಇದು ಈ ಭವನವನ್ನು ಇನ್ನೂ ಆಕರ್ಷಣೀಯವಾಗಿಸುತ್ತದೆ. ಹಾಗಾಗಿ ರಾಜಸ್ಥಾನದ ಡೀಗ್‌ಗೆ ಹೋದಾಗ ನೀವು ಇದನ್ನೆಲ್ಲಾ ಮಿಸ್ ಮಾಡುವಂತೆಯೇ ಇಲ್ಲ.