Search
  • Follow NativePlanet
Share
» »ಮನಸೂರೆಗೊಳ್ಳುವ ಮಸ್ಸೂರಿಯ ಮೈಸಿರಿ

ಮನಸೂರೆಗೊಳ್ಳುವ ಮಸ್ಸೂರಿಯ ಮೈಸಿರಿ

By Vijay

ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಮಸ್ಸೂರಿಯು ಪ್ರವಾಸಿ ಆಕರ್ಷಣೆಯುಳ್ಳ ಅದ್ಭುತ ಗಿರಿಧಾಮವಾಗಿದೆ. ಇದು ಹಿಮಾಲಯದ ತಪ್ಪಲಿನಲ್ಲಿ ಸಮುದ್ರ ಮಟ್ಟದಿಂದ ಸುಮಾರು 1880 ಮೀ ಎತ್ತರದಲ್ಲಿದೆ. ಈ ಸ್ಥಳವು ಶಿವಾಲಿಕ್ ಕಣಿವೆ ಮತ್ತು ಡೂನ್ ಕಣಿವೆಗಳ ಅದ್ಭುತವಾದ ದೃಶ್ಯಾವಳಿಗಳನ್ನು ನೀಡುವಲ್ಲಿ ಪ್ರಸಿದ್ಧವಾಗಿದೆ.

ಅಲ್ಲದೆ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಯಮುನೋತ್ರಿ ಮತ್ತು ಗಂಗೋತ್ರಿಗಳಿಗೆ "ಪ್ರವೇಶ ದ್ವಾರ" ವಾಗಿ ಮಸ್ಸೂರಿ ಪ್ರಸಿದ್ಧವಾಗಿದೆ. ಈ ಭಾಗಕ್ಕೆ ಸೀಮಿತವಾದ ಅತ್ಯಧಿಕ ಪ್ರಮಾಣದಲ್ಲಿ ಬೆಳೆಯುವ "ಮನ್ಸೂರ್" ಎಂಬ ಕುರುಚಲು ಪೊದೆಯ ಕಾರಣದಿಂದ ಈ ಪ್ರದೇಶಕ್ಕೆ ಮಸ್ಸೂರಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿದೆ.

ಕೆಲ ಜನರು ಈ ಸ್ಥಳವನ್ನು ಮನ್ಸೂರಿ ಎಂಬ ಹೆಸರಿನಿಂದಲೂ ಸಹ ಕರೆಯುತ್ತಾರೆ. ಈ ಸುಂದರವಾದ ಗಿರಿಧಾಮವು ತನ್ನಲ್ಲಿರುವ ಹಳೆಯ ಕಾಲದ ದೇವಸ್ಥಾನಗಳು, ಬೆಟ್ಟಗಳು, ಜಲಪಾತಗಳು, ಕಣಿವೆಗಳು, ಅರಣ್ಯಧಾಮ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದಾಗಿ ಪ್ರಸಿದ್ಧವಾಗಿದೆ. ಜ್ವಾಲಾ ದೇವಿ ದೇವಾಲಯ, ನಾಗ ದೇವತಾ ದೇವಸ್ಥಾನ ಮತ್ತು ಭದ್ರಾಜ್ ದೇವಸ್ಥಾನ ಇಲ್ಲಿನ ಕೆಲವು ಪ್ರಮುಖವಾದ ದೇವಸ್ಥಾನಗಳಾಗಿವೆ.

ಮಸ್ಸೂರಿ:

ಮಸ್ಸೂರಿ:

ಮಸ್ಸೂರಿಯು ಮನೋಹರವಾದ ಬೆಟ್ಟಗಳಿಗೆ ಹೆಸರುವಾಸಿ ಅವುಗಳಲ್ಲಿ ಮುಖ್ಯವಾದುವುಗಳೆಂದರೆ ಗನ್ ಹಿಲ್, ಲಾಲ್ ಟಿಬ್ಬಾ ಮತ್ತು ನಾಗ್ ಟಿಬ್ಬಾ. ಗನ್ ಹಿಲ್ ಸಮುದ್ರಮಟ್ಟದಿಂದ ಸುಮಾರು 2122 ಮೀ ಎತ್ತರದಲ್ಲಿದೆ. ಮಸ್ಸೂರಿಯ ಎರಡನೆ ಅತೀ ಎತ್ತರದ ಬೆಟ್ಟವಾಗಿರುವ ಇದು ತನ್ನ ಐತಿಹಾಸಿಕ ಪ್ರಾಮುಖ್ಯತೆಯ ಕಾರಣದಿಂದ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಲಾಲ್ ಟಿಬ್ಬಾ ಮಸ್ಸೂರಿಯ ಅತ್ಯಂತ ಎತ್ತರವಾದ ಬೆಟ್ಟವಾಗಿದ್ದು ಇದನ್ನು ಇಲ್ಲಿ ಇರುವ ಡಿಪೋ ದ ಕಾರಣದಿಂದ ಡಿಪೋ ಬೆಟ್ಟ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

1967 ರಲ್ಲಿ ಪ್ರವಾಸಿರಗಿಗೆ ನೆರವಾಗುವ ಉದ್ದೇಶದಿಂದ ದೂರದರ್ಶಕವನ್ನು ಈ ಬೆಟ್ಟದಲ್ಲಿ ಅಳವಡಿಸಲಾಗಿದೆ. ಈ ದೂರದರ್ಶಕದ ಸಹಾಯದಿಂದ ಜನರು ಇಲ್ಲಿನ ಸಮೀಪದ ಬೆಟ್ಟಗಳಾದ ಬಂದೇರ್ಪಂಚ್, ಕೇದಾರನಾಥ್ ಮತ್ತು ಬದ್ರಿನಾಥ್ ಗಳನ್ನು ನೋಡಬಹುದಾಗಿದೆ.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಕೇವಲ ಬೆಟ್ಟಗಳಷ್ಟೆ ಅಲ್ಲ, ಮಸ್ಸೂರಿಯು, ತನ್ನಲ್ಲಿರುವ ಹಲವಾರು ಜಲಪಾತಗಳಿಗಾಗಿಯೂ ಪ್ರಸಿದ್ಧವಾಗಿದೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ ಕೆಂಪ್ಟಿ ಜಲಪಾತ, ಝಾರಿಪಾನಿ ಜಲಪಾತ, ಭತ್ತಾ ಜಲಪಾತ ಮತ್ತು ಮೊಸ್ಸಿ ಜಲಪಾತ. ಕೆಂಪ್ಟಿ ಜಲಪಾತ ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿದೆ. ಇದು ಮಸ್ಸೂರಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಬಹಳ ಪ್ರಮುಖವಾಗಿದೆ. ಕೆಂಪ್ಟಿ ಜಲಪಾತ.

ಚಿತ್ರಕೃಪೆ: KuwarOnline

ಮಸ್ಸೂರಿ:

ಮಸ್ಸೂರಿ:

ಹಿಂದೆ ಬ್ರಿಟೀಷ್ ರಾಜ್ ಸಮಯದಲ್ಲಿ ಈ ಪ್ರದೇಶದ ಸೌಂದರ್ಯಕ್ಕೆ ಮನಸೋತು 'ಜಾನ್ ಮೆಕಿನಾನ್' ಎಂಬ ಬ್ರಿಟೀಷ್ ಅಧಿಕಾರಿ ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದನು. ಝಾರಿಪಾನಿ ಜಲಪಾತ ಕೂಡ ಪ್ರವಾಸಿಗರಲ್ಲಿ ಬಹಳ ಆಕರ್ಷಣೆ ಹೊಂದಿರುವ ಜಲಪಾತವಾಗಿದೆ. ಇದು ಝಾರಿಪಾನಿ ಎಂಬ ಹಳ್ಳಿಯಲ್ಲಿ ಇದ್ದು, ಅತ್ಯಂತ ಪ್ರಸಿದ್ಧ ಮತ್ತು ಸಾಹಸಿಗಳಿಗೆ ಹೇಳಿ ಮಾಡಿಸಿದ ಪ್ರದೇಶವಾಗಿದೆ. ಭತ್ತಾ ಜಲಪಾತ ಮತ್ತು ಮೊಸ್ಸಿ ಜಲಪಾತ ಮಸ್ಸೂರಿಯಿಂದ ಸುಮಾರು 7 ಕಿ.ಮೀ ದೂರದಲ್ಲಿವೆ.

ಚಿತ್ರಕೃಪೆ: Michael Scalet

ಮಸ್ಸೂರಿ:

ಮಸ್ಸೂರಿ:

ಪ್ರವಾಸಿ ತಾಣಗಳ ಹೊರತಾಗಿ ಮಸ್ಸೂರಿಯು ತನ್ನಲ್ಲಿರುವ ಶೈಕ್ಷಣಿಕ ಸಂಸ್ಥೆಗಳ ಕಾರಣದಿಂದಾಗಿಯೂ ಬಹಳ ಪ್ರಸಿದ್ಧವಾಗಿದೆ. ಇಲ್ಲಿ ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಸ್ಥಾಪಿಸಲಾದ ಹಲವು ಯುರೋಪಿಯನ್ ಶಾಲೆಗಳಿವೆ. ಇಲ್ಲಿ ಬಹಳ ಪ್ರಸಿದ್ಧವಾದ ಮತ್ತು ಅತ್ಯಂತ ಹಳೆಯದಾದ ಸೈಂಟ್ ಜಾರ್ಜ್, ಓಕ್ ಗ್ರೋವ್ ಮತ್ತು ವೈನ್ಬರ್ಗ್ ಆಲನ್ ಮುಂತಾದ ವಸತಿ ಶಾಲೆಗಳಿವೆ.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಇದು ಚಾರಣ ಪ್ರಿಯರಲ್ಲೂ ಅತ್ಯಂತ ಪ್ರಸಿದ್ಧವಾದ ಪ್ರದೇಶವಾಗಿದೆ. ಇಲ್ಲಿ ನಿಸರ್ಗದ ನಡುವೆ ನಡೆಯಬಯಸುವ ಪ್ರವಾಸಿಗಳಿಗೆ ಸೂಕ್ತವಾದ ಹಲವು ಕಾಲುದಾರಿಗಳಿವೆ.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಇಲ್ಲಿ ವರ್ಷಪೂರ್ತಿ ಇರುವ ಆಹ್ಲಾದಕರವಾದ ವಾತಾವರಣ ಎಲ್ಲಾ ವರ್ಷಗಳಲ್ಲೂ ಎಲ್ಲಾ ಕಾಲದಲ್ಲೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಗಿರಿಧಾಮಗಳು ಎಲ್ಲಾ ಋತುಮಾನಗಳಲ್ಲೂ ಸುಂದರವಾಗಿ ಕಾಣುತ್ತವೆ. ಆದರೂ ಮಾರ್ಚ್ ನಿಂದ ಜೂನ್ ಮತ್ತು ಸೆಪ್ಟೆಂಬರ್ ನಿಂದ ನವೆಂಬರ್ ಇಲ್ಲಿಗೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಸಮಯವಾಗಿದೆ.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಅಲ್ಲದೆ ಡಿಸೆಂಬರ್ ತಿಂಗಳಿನಿಂದ ಫೆಬ್ರುವರಿ ಮಧ್ಯದವರೆಗೆ ಮಸ್ಸೂರಿಯು ಹಿಮಪಾತವನ್ನು ಅನುಭವಿಸುತ್ತದೆ. ಈ ಸಂದರ್ಭದಲ್ಲಿ ದಟ್ಟ ಹಸಿರಿನ ಗಿಡ ಮರಗಳ ಮೇಲೆ ಶುಭ್ರ ಬಿಳಿ ಹಾಸಿಗೆ ಹಾಸಿದಂತೆ ಕಂಗೊಳಿಸುತ್ತದೆ ಮಸ್ಸೂರಿ ಪಟ್ಟಣ.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಮಸ್ಸೂರಿಯು ವಾಯುಮಾರ್ಗ, ರೈಲು ಮಾರ್ಗ ಮತ್ತು ರಸ್ತೆ ಮಾರ್ಗವಾಗಿ ದೇಶದ ಇತರ ನಗರಗಳಿಗೆ ಸಮರ್ಪಕವಾಗಿ ಸಂಪರ್ಕ ಸಾಧಿಸುತ್ತದೆ. ಇಲ್ಲಿಗೆ ಸಮೀಪವಿರುವ ವಿಮಾನ ನಿಲ್ದಾಣವೆಂದರೆ ಡೆಹ್ರಾಡೂನ್ ನಲ್ಲಿರುವ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ. ಇದು ಸುಮಾರು 60 ಕಿ.ಮೀ ದೂರದಲ್ಲಿದೆ. ಡೆಹ್ರಾಡೂನ್ ರೈಲ್ವೆ ನಿಲ್ದಾಣ ಇಲ್ಲಿಗೆ ಸಮೀಪವಿರುವ ರೈಲ್ವೆ ನಿಲ್ದಾಣವಾಗಿದೆ.

ಚಿತ್ರಕೃಪೆ: Rohan Babu

ಮಸ್ಸೂರಿ:

ಮಸ್ಸೂರಿ:

ಮನಸೂರೆಗೊಳ್ಳುವ ಸುಂದರ ಮೈಸಿರಿಯ ಮಸ್ಸೂರಿ ಚಿತ್ರಗಳು.

ಚಿತ್ರಕೃಪೆ: Michael Scalet

ಮಸ್ಸೂರಿ:

ಮಸ್ಸೂರಿ:

ಮನಸೂರೆಗೊಳ್ಳುವ ಸುಂದರ ಮೈಸಿರಿಯ ಮಸ್ಸೂರಿ ಚಿತ್ರಗಳು.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಮನಸೂರೆಗೊಳ್ಳುವ ಸುಂದರ ಮೈಸಿರಿಯ ಮಸ್ಸೂರಿ ಚಿತ್ರಗಳು.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಮನಸೂರೆಗೊಳ್ಳುವ ಸುಂದರ ಮೈಸಿರಿಯ ಮಸ್ಸೂರಿ ಚಿತ್ರಗಳು.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಮನಸೂರೆಗೊಳ್ಳುವ ಸುಂದರ ಮೈಸಿರಿಯ ಮಸ್ಸೂರಿ ಚಿತ್ರಗಳು.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಮನಸೂರೆಗೊಳ್ಳುವ ಸುಂದರ ಮೈಸಿರಿಯ ಮಸ್ಸೂರಿ ಚಿತ್ರಗಳು.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಮನಸೂರೆಗೊಳ್ಳುವ ಸುಂದರ ಮೈಸಿರಿಯ ಮಸ್ಸೂರಿ ಚಿತ್ರಗಳು.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಮನಸೂರೆಗೊಳ್ಳುವ ಸುಂದರ ಮೈಸಿರಿಯ ಮಸ್ಸೂರಿ ಚಿತ್ರಗಳು.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಮನಸೂರೆಗೊಳ್ಳುವ ಸುಂದರ ಮೈಸಿರಿಯ ಮಸ್ಸೂರಿ ಚಿತ್ರಗಳು.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಮನಸೂರೆಗೊಳ್ಳುವ ಸುಂದರ ಮೈಸಿರಿಯ ಮಸ್ಸೂರಿ ಚಿತ್ರಗಳು.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಮನಸೂರೆಗೊಳ್ಳುವ ಸುಂದರ ಮೈಸಿರಿಯ ಮಸ್ಸೂರಿ ಚಿತ್ರಗಳು.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಮನಸೂರೆಗೊಳ್ಳುವ ಸುಂದರ ಮೈಸಿರಿಯ ಮಸ್ಸೂರಿ ಚಿತ್ರಗಳು.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಮನಸೂರೆಗೊಳ್ಳುವ ಸುಂದರ ಮೈಸಿರಿಯ ಮಸ್ಸೂರಿ ಚಿತ್ರಗಳು.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಮನಸೂರೆಗೊಳ್ಳುವ ಸುಂದರ ಮೈಸಿರಿಯ ಮಸ್ಸೂರಿ ಚಿತ್ರಗಳು.

ಚಿತ್ರಕೃಪೆ: Paul Hamilton

ಮಸ್ಸೂರಿ:

ಮಸ್ಸೂರಿ:

ಮನಸೂರೆಗೊಳ್ಳುವ ಸುಂದರ ಮೈಸಿರಿಯ ಮಸ್ಸೂರಿ ಚಿತ್ರಗಳು.

ಚಿತ್ರಕೃಪೆ: Paul Hamilton

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more