• Follow NativePlanet
Share
» »ದಕ್ಷಿಣ ಭಾರತದ ಪ್ರಸಿದ್ಧವಾದ ಸಂಗೀತ ಸ್ತಂಭಗಳನ್ನು ಹೊಂದಿರುವ ದೇವಾಲಯಗಳು

ದಕ್ಷಿಣ ಭಾರತದ ಪ್ರಸಿದ್ಧವಾದ ಸಂಗೀತ ಸ್ತಂಭಗಳನ್ನು ಹೊಂದಿರುವ ದೇವಾಲಯಗಳು

Written By:

ಭಾರತದ ಹಿಂದೂ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾದುದು. ಪ್ರತಿ ಶಿಲ್ಪಿಯು ದೇವಾಲಯದ ಶಿಲ್ಪಕಲೆಗಳನ್ನು ತನ್ನದೇ ಆದ ಕೆತ್ತನೆಗಳಿಂದ ಸುಂದರವಾದ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾನೆ. ಇಂದಿನ ಎಂಜಿನಿಯರ್‍ಗಳು ಪುರಾತನವಾದ ದೇವಾಲಯಗಳ ನಿರ್ಮಾಣದ ಬಗ್ಗೆ ಆಶ್ಚರ್ಯ ಪಡುತ್ತಾರೆ. ಸಾವಿರ ವರ್ಷಗಳ ಹಿಂದೆ ಆಧುನಿಕ ಉಪಕರಣಗಳ ಸಹಾಯವಿಲ್ಲದೇ ಹೇಗೆ ಅಂಥಹ ಅದ್ಭುತವಾದ ದೇವಾಲಯಗಳನ್ನು ನಿರ್ಮಾಣ ಮಾಡುತ್ತಿದ್ದರು ಎಂಬುದು ಇಂದಿಗೂ ಬಗೆ ಹರಿಸಲಾಗದ ಪ್ರಶ್ನೇ ಆಗಿಯೇ ಉಳಿದಿದೆ.

ವಿಶೇಷವೆನೆಂದರೆ ದಕ್ಷಿಣ ಭಾರತದ ದೇವಾಲಯಗಳು ಪ್ರಸಿದ್ಧಿಯನ್ನು ಪಡೆದಿದೆ. ವಿಜಯನಗರ ಸಾಮ್ರಾಜ್ಯದ ನಾಯಕ್ ರಾಜರು ಹಿಂದೆ ದಕ್ಷಿಣ ಭಾರತದ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದ ರಾಜವಂಶವಾಗಿದೆ. ಆಶ್ಚರ್ಯವೆನೆಂದರೆ 5 ಕ್ಕಿಂತ ಹೆಚ್ಚಿನ ದೇವಾಲಯದಲ್ಲಿ ಕಂಡು ಬರುವ ಸಂಗೀತ ಸ್ತಂಭಗಳನ್ನು ನೀಡಿರುವುದು ರಾಜ ನಾಯಕ್‍ರವರೇ ಆಗಿದ್ದಾರೆ. ಅತ್ಯಂತ ಪ್ರಸಿದ್ಧವಾದ ಮ್ಯೂಸಿಕಲ್ ಸ್ತಂಭಗಳು ಕರ್ನಾಟಕದ ಹಂಪಿಯಲ್ಲಿರುವ ಶ್ರೀ ವಿಠಲ ದೇವಾಲಯದಲ್ಲಿದೆ.

ಇನ್ನು ಉಳಿದ ದೇವಾಲಯಗಳೆಂದರೆ ಅವು ಮೀನಾಕ್ಷಿ ದೇವಾಲಯ, ತಿರುನೆಲ್ವೇಲಿಯ ನೆಲ್ಲಯ್ಯಪರ್ ದೇವಾಲಯ, ಸುಚಿಂದ್ರಂನ ತನುಮಲಯನ್ ದೇವಾಲಯ ಮತ್ತು ತಮಿಳುನಾಡಿನ ಅಲ್ವಾರ್ತಿರುನಾಗರಿಯಲ್ಲಿರುವ ಆದಿನಾಥರ್ ದೇವಾಲಯಗಳಲ್ಲಿ ಸಂಗೀತ ಸ್ತಂಭಗಳನ್ನು ಕಾಣಬಹುದಾಗಿದೆ.

ಹಂಪಿ

ಹಂಪಿ

ಹಂಪಿ ವಿಠಲ ದೇವಾಲಯವು ಪುರಾತನವಾದ ದೇವಾಲಯಗಳಲ್ಲಿ ಒಂದಾಗಿದೆ. ಇದರ ವಾಸ್ತುಶಿಲ್ಪ ಮತ್ತು ಸರಿಸಾಟಿಯಿಲ್ಲದ ಕಲೆಗಾರಿಕೆಗೆ ಹೆಸರುವಾಸಿಯಾಗಿದೆ. ಈ ಅದ್ಭುತವಾದ ದೇವಾಲಯವು ಸುಂದರವಾದ ಕಲ್ಲಿನ ರಚನೆಗಳನ್ನು ಹೊಂದಿದೆ. ದೇವಾಲಯದ ಆನೇಕ ಭಾಗಗಳನ್ನು ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ರಾಜನಾಗಿದ್ದ ಶ್ರೀ ಕೃಷ್ಣದೇವರಾಯರಿಂದ ವಿಸ್ತಾರಿಸಲಾಯಿತು.


PC: Balraj D

ಹಂಪಿ

ಹಂಪಿ

ಈ ಸಂಗೀತ ಸ್ತಂಭಗಳು ಹಿಂದೂ ಕಲೆಗೆ ಸಾಕ್ಷಿಯಾಗಿದೆ. ಶ್ರೀ ವಿಜಯ ವಿಠಲ ದೇವಾಲಯವನ್ನು 15 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಯಿತು. ಇದು ಸ.ರಿ.ಗ.ಮ.ಪ ಸ್ತಂಬಗಳು ಎಂದು ಕರೆಯಲ್ಪಡುವ 56 ಸಂಗೀತ ಸ್ತಂಭಗಳು ಈ ವಿಠಲನ ದೇವಾಲಯದಲ್ಲಿ ಕಾಣಬಹುದಾಗಿದೆ.

PC:Vinayak Kulkarni

ಮಧುರೈ ಮೀನಾಕ್ಷಿ ದೇವಾಲಯ

ಮಧುರೈ ಮೀನಾಕ್ಷಿ ದೇವಾಲಯ

ಮಧುರೈ ಮೀನಾಕ್ಷಿ ದೇವಾಲಯವನ್ನು ವಿಶ್ವದ 100 ಅದ್ಭುತಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ದೇವಾಲಯದ ಒಳಗೆ 5 ಸ್ತಂಭಗಳು ಇವೆ. ವಿಷೇಶವೆನೆಂದರೆ ಸ್ತಂಭಗಳು ಏಕಶಿಲೆಗಳಾಗಿರುವುದು. ದೊಡ್ಡ ಕೇಂದ್ರ ಸ್ತಂಭವು 22 ಸಣ್ಣ ಸ್ತಂಭಗಳಿಂದ ಅವೃತ್ತಗೊಂಡಿದೆ.


PC:Krishnamoorthy1952

ನೆಲ್ಲಿಯ್ಯಪರ್ ದೇವಾಲಯ

ನೆಲ್ಲಿಯ್ಯಪರ್ ದೇವಾಲಯ

ತಮಿಳುನಾಡಿನ ಸಣ್ಣ ಪಟ್ಟಣವಾದ ತಿರುನೆಲ್ವೇಲಿಯಲ್ಲಿರುವ ನೆಲ್ಲಯ್ಯಪಾರ್ ದೇವಾಲಯವು ಕೇಂದ್ರ ಸ್ತಂಭವನ್ನು ಹೊಂದಿದೆ. ಇಲ್ಲಿನ ಸ್ತಂಭಗಳು ಸಹ ಸಂಗೀತ ಸ್ತಂಭಗಳಾಗಿದ್ದು, ಅತ್ಯಂತ ಸುಮಧುರವಾದ ನಾದವನ್ನು ಇಲ್ಲಿ ಕೇಳಬಹುದಾಗಿದೆ. ಇಲ್ಲಿ ಒಟ್ಟು 48 ಸ್ತಂಭಗಳನ್ನು ಕಾಣಬಹುದಾಗಿದೆ.

PC:Ssriram mt

ತನುಮಲಯನ್ ದೇವಾಲಯ

ತನುಮಲಯನ್ ದೇವಾಲಯ

ತನುಮಲಯನ್ ದೇವಾಲಯ ತಮಿಳುನಾಡಿನ ಸುಚಿಬ್ರಮದಲ್ಲಿದೆ. ಈ ದೇವಾಲಯದ ಉತ್ತರ ಭಾಗದಲ್ಲಿ 2 ಗುಂಪಿನಲ್ಲಿ 24 ಸ್ತಂಭಗಳನ್ನು ಹೊಂದಿದೆ. ಹಾಗೆಯೇ ದಕ್ಷಿಣದ ಭಾಗದಲ್ಲಿ 33 ಸ್ತಂಭಗಳನ್ನು ಹೊಂದಿದೆ. ಇಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಸಪ್ತ ಸ್ವರ್ಣವನ್ನು ನುಡಿಸುತ್ತದೆ.

PC:theilr

ಅಲ್ವರ್ತಿರು ನಗರಿ ದೇವಾಲಯ

ಅಲ್ವರ್ತಿರು ನಗರಿ ದೇವಾಲಯ

ಅಲ್ವಾರ್ ತಿರುವನಾಗರಿ ದೇವಾಲಯವು ವಂದಂತ ಮಂಡಪಮ್ ಎಂಬ ಸ್ಥಳದಲ್ಲಿದೆ. ಇಲ್ಲಿ ಸಂಗೀತ ಸ್ತಂಭಗಳನ್ನು ಕಾಣಬಹುದಾಗಿದೆ. ಇದು ಸಪ್ತ ಸ್ವರಗಳನ್ನು ಉತ್ಪಾದಿಸುವ ಟ್ಯಾಪಿಂಗ್ ಪಿಲ್ಲರ್ ಇದಾಗಿದೆ. ಈ ಸ್ತಂಭಗಳಿಗೆ ಊದಲು 2 ಬದಿಗಳಲ್ಲಿ 2 ರಂಧ್ರಗಳಿರುತ್ತವೆ. ವಿಭಿನ್ನ ಸಂಗೀತಗಳು ವಿವಿಧ ರಂಧ್ರಗಳಿಂದ ತಯಾರಿಸಲಾಗುತ್ತದೆ.

PC: deangelo

ಶೆಂಪನನಲ್ಲೂರು ಪೆರುಮಾಳ್ ದೇವಾಲಯ

ಶೆಂಪನನಲ್ಲೂರು ಪೆರುಮಾಳ್ ದೇವಾಲಯ

ಶೆಮಪನನಲ್ಲೂರು ಪೆರುಮಾಳ್ ದೇವಾಲಯ ಸ್ತಂಭಗಳು ಕೂಡ ಮಧುರವಾದ ಸಂಗೀತವನ್ನು ನೀಡುತ್ತದೆ. ಈ ಸ್ತಂಭಗಳು ಗರ್ಭಗುಡಿಯ ನೈರುತ್ಯ ದಿಕ್ಕಿನಲ್ಲಿದೆ. ಸ್ತಂಭಗಳು ಒಂದು ಬದಿಯ ಚಿಕ್ಕದು ಇನ್ನೊಂದು ಬದಿ ದೊಡ್ಡದಾಗಿದ್ದರು ಕೂಡ ಒಂದೇ ವ್ಯಾಸದಲ್ಲಿ ಶಬ್ಧಗಳನ್ನು ನೀಡುತ್ತದೆ.

PC:Varun Shiv Kapur

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more