Search
  • Follow NativePlanet
Share
» »ಸಂಗೀತದ ಸ್ವರಗಳನ್ನು ಹಾಡುವ ಅದ್ಭುತವಾದ ದೇವಾಲಯಗಳು ಎಲ್ಲೆಲ್ಲಿ ಇವೆ ಗೊತ್ತ?

ಸಂಗೀತದ ಸ್ವರಗಳನ್ನು ಹಾಡುವ ಅದ್ಭುತವಾದ ದೇವಾಲಯಗಳು ಎಲ್ಲೆಲ್ಲಿ ಇವೆ ಗೊತ್ತ?

ಸಂಗೀತದ ಬಗ್ಗೆ ಭಾರತದೇಶಕ್ಕೆ ತಿಳಿದಿರುವಷ್ಟು ಮತ್ತೊಂದು ದೇಶಕ್ಕೆತಿಳಿದಿರುವುದಕ್ಕೆ ಸಾಧ್ಯವೇ ಇಲ್ಲ. ಸಂಗೀತ ಎನ್ನುವುದು ಆದಿ ಪ್ರಣವನಾದದಿಂದಉದ್ಭವಿಸಿದೆ ಎಂದು ಎಲ್ಲರಿಗೂ ತಿಳಿದಿರುವುದೇ. ಸಿನಿಮಾ ಸಂಗೀತಕ್ಕೂ ಭಾರತೀಯ ಸಂಗೀತಕ್ಕೂತುಂಬ ವ್ಯ

By Sowmyabhai

ಭಾರತ ದೇಶದಲ್ಲಿ ಈ ಕಲ್ಲಿನ ಸ್ತಂಭಗಳು ಭಾರತೀಯ ಶಿಲ್ಪಕಲೆಗೆ ಸಂಕೇತಕ್ಕೆ ಒಂದು ನಿದರ್ಶನಗಳು. ಇಂತಹ ಕಲ್ಲಿನ ಸ್ತಂಭಗಳು ಸುಮಾರು ಸಾವಿರ ವರ್ಷಗಳ ಹಿಂದೆಯೇ ಉದ್ಭವಿಸಿತು. ದಕ್ಷಿಣ ಭಾರತ ದೇಶದಲ್ಲಿ ತಮಿಳುನಾಡು, ಕರ್ನಾಟಕ ರಾಜ್ಯದಲ್ಲಿ ಇವುಗಳನ್ನು ಕಾಣಬಹುದು. ದಕ್ಷಿಣ ಭಾರತ ದೇಶವನ್ನು ಆಳ್ವಿಕೆ ಮಾಡಿದ ಅನೇಕ ಮಂದಿ ರಾಜರಿಗೆ ಸಂಗೀತ ಎಂದರೆ ಮಹಾ ಇಷ್ಟ. ಕಾಲಕ್ಷೇಪ ಮಾಡುವ ಸಲುವಾಗಿ ಸಂಗೀತವನ್ನು ಕೇಳುತ್ತಾ ಅಸ್ವಾಧಿಸುತ್ತಿದ್ದರು.
ಸಂಗೀತವನ್ನು ವಿಶ್ವವ್ಯಾಪಕವಾಗಿ ವಿಸ್ತರಿಸಬೇಕು ಎಂಬ ಉದ್ದೇಶದಿಂದ ಅಂದಿನ ರಾಜರು ಕಂಕಣವನ್ನು ಕಟ್ಟಿಕೊಂಡು, ಯಾತ್ರಿಕರು ಹೆಚ್ಚಾಗಿ ದರ್ಶಿಸುವ ವಾಲಯಗಳಲ್ಲಿ ಮ್ಯೂಸಿಕಲ್ ಪಿಲ್ಲರ್ಸ್ ಏರ್ಪಾಟು ಮಾಡುತ್ತಿದ್ದರು.

ಯಾವಾಗಲಾದರೂ ರಾಜರು ದೇವಾಲಯಕ್ಕೆ ಭೇಟಿ ನೀಡಿದಾಗ ದೇವಾಲಯದ ಮಧ್ಯದಲ್ಲಿ ಕುಳಿತುಕೊಂಡು ಈ ಸ್ತಂಭಗಳ ಸಮೀಪದಲ್ಲಿ ವಿದ್ವಾಂಸರು ಮಾಡುವ ಕಛೇರಿಗಳು, ನೃತ್ಯಗಾರರ ನೃತ್ಯವನ್ನು ನೋಡುತ್ತಾ ಕಾಲಕಳೆಯುತ್ತಿದ್ದರು.

ಸಂಗೀತದ ಬಗ್ಗೆ ಭಾರತದೇಶಕ್ಕೆ ತಿಳಿದಿರುವಷ್ಟು ಮತ್ತೊಂದು ದೇಶಕ್ಕೆ ತಿಳಿದಿರುವುದಕ್ಕೆ ಸಾಧ್ಯವೇ ಇಲ್ಲ. ಸಂಗೀತ ಎನ್ನುವುದು ಆದಿ ಪ್ರಣವನಾದದಿಂದ ಉದ್ಭವಿಸಿದೆ ಎಂದು ಎಲ್ಲರಿಗೂ ತಿಳಿದಿರುವುದೇ. ಸಿನಿಮಾ ಸಂಗೀತಕ್ಕೂ ಭಾರತೀಯ ಸಂಗೀತಕ್ಕೂ ತುಂಬ ವ್ಯತ್ಯಾಸವಿದೆ. ಸಂಗೀತ ಎಂದರೆ ಶಬ್ಧವನ್ನು ಕಾಲದ ಜೊತೆ ಮೇಳವನ್ನು ಇಂಪಾಗಿ ನುಡಿಸುವ ಪ್ರಕ್ರಿಯೆಯೇ ಆಗಿದೆ. ಕಲ್ಲಿನಿಂದ ನುಡಿಸುವ ಸರಿಗಮಪ ಸ್ವರಗಳು ಭಾರತದ ನಿಜವಾದ ಅದ್ಭುತವೇ ಸರಿ.

ನಮ್ಮ ದೇಶದ ದೇವಾಲಯದಲ್ಲಿ ಕಲ್ಲನ್ನು ಕದಲಿಸಿದರೆ ಸಂಗೀತದದ್ವಾರಗಳು ಕೇಳಿಸುತ್ತವೆ.ಅದಕ್ಕೆ ಸಾಕ್ಷ್ಯಿ ಹಂಪಿಯಲ್ಲಿನ ಸಂಗೀತ ಸ್ವರಗಳು ನುಡಿಸುವ ಸ್ತಂಭಗಳು. ಕೇವಲ ಹಂಪಿಯಲ್ಲಿಯೇ ಅಲ್ಲದೇ ದೇಶದಲ್ಲಿನ ಅನೇಕ ದೇವಾಲಯದಲ್ಲಿಯೂ ಕೂಡ ಸಪ್ತಸ್ವರಗಳು ಹಾಡುವ ಸಂಗೀತ ಸ್ತಂಭಗಳು ಇವೆ. ಹಾಗಾದರೆ ಸಂಗೀತವನ್ನು ನುಡಿಸುವ ಸ್ತಂಭಗಳು ಯಾವ ಯಾವ ದೇವಾಲಯದಲ್ಲಿವೆ? ಹಾಗು ಹಿತ್ತಾಳೆಯನ್ನು ಕೂಡ ಬಂಗಾರವನ್ನಾಗಿ ಪರಿರ್ವತನೆ ಮಾಡುವ ಒಂದು ಮಹಿಮಾನ್ವಿತವಾದ ಶಿವಲಿಂಗದ ಬಗ್ಗೆ ಕೂಡ ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

1.ರಾಮಪ್ಪ ದೇವಾಲಯ

1.ರಾಮಪ್ಪ ದೇವಾಲಯ

PC:YOUTUBE

ಇನ್ನು ವರಂಗಲ್ ಜಿಲ್ಲೆಯ ರಾಮಪ್ಪ ದೇವಾಲಯದ ಮಂಟಪದ ಬಲಭಾಗದಲ್ಲಿ ಸಪ್ತ ಸ್ವರಗಳನ್ನು ನುಡಿಸುವ ಸಂಗೀತ ಸ್ತಂಭಗಳು ಎಂಬುದು ಇದೆ.

2.ಮಧುರೆ ಮೀನಾಕ್ಷಿ ದೇವಾಲಯ

2.ಮಧುರೆ ಮೀನಾಕ್ಷಿ ದೇವಾಲಯ

PC:YOUTUBE

ತಮಿಳುನಾಡಿನಲ್ಲಿನ ಮಧುರೆಯಲ್ಲಿನ ಮೀನಾಕ್ಷಿ ದೇವಾಲಯದಲ್ಲಿ ದೇವಿಯ ದೇವಾಲಯದ ಮಂಡಪದಲ್ಲಿಯೂ ಕೂಡ ಸಪ್ತಸ್ವರಗಳು ನುಡಿಸುವ ಸ್ತಂಭಗಳು ಎಂಬುದು ಇದೆ.

3.ಸ್ಥಾಯೇಶ್ವರ ದೇವಾಲಯ

3.ಸ್ಥಾಯೇಶ್ವರ ದೇವಾಲಯ

PC:YOUTUBE

ತಮಿಳುನಾಡಿನಲ್ಲಿನ ಕನ್ಯಾಕುಮಾರಿಯ ಸಮೀಪ ಸುಚಿಂದ್ರದಲ್ಲಿನ ಸ್ಥಾಯೇಶ್ವರ ದೇವಾಲಯದಲ್ಲಿಯೂ, ತಮಿಳುನಾಡಿನಲ್ಲಿನ ಕಾಂತಿಮತಿ ಅಂಬಾಲ್ ದೇವಾಲಯ ಮಂಟಪದ ಸಮೀಪದಲ್ಲಿಯೂ ಕೂಡ ಸಪ್ತಸ್ವರಗಳು ನಡಿಸುವ ಸ್ತಂಭಗಳು ಇವೆ.

4.ತಿರುನಗರ್

4.ತಿರುನಗರ್

PC:YOUTUBE

ತಮಿಳುನಾಡಿನಲ್ಲಿನ ಆಳ್ವಾರ್ ತಿರುನಗರ್‍ನಲ್ಲಿ ಆದಿನಾಥ ಸ್ವಾಮಿ ದೇವಾಲಯದಲ್ಲಿಯೂ ಕೂಡ ನಾದಸ್ವರ ನುಡಿಸುವ ಸಂಗೀತ ಸ್ತಂಭಗಳು ಇರುವುದು ವಿಶೇಷ.

5.ತಂಜಾವೂರು

5.ತಂಜಾವೂರು

PC:YOUTUBE

ತಂಜಾವೂರಿನಲ್ಲಿನ ಬೃಹದೀಶ್ವರ ದೇವಾಲಯದಲ್ಲಿ, ಕುಂಭಕೋಣಂನ ಸಮೀಪದಲ್ಲಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿಯು ಕೂಡ ಸಪ್ತಸ್ವರ ಸ್ಥಂಭಗಳು ಇವೆ. ಕರ್ನಾಟಕದ ಹಂಪಿಯಲ್ಲಿ ಸಂಗೀತದ ಸ್ತಂಭವಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ.

6.ರಾಜ್ ಮಹಲ್

6.ರಾಜ್ ಮಹಲ್

PC:YOUTUBE

ಉತ್ತರ ಪ್ರದೇಶದಲ್ಲಿನ ಆಗ್ರಾದಲ್ಲಿನ ರಾಜ್ ಮಹಲ್ ಕೂಡ ಸಂಗೀತ ಸಪ್ತಸ್ವರಗಳ ಸ್ತಂಭಗಳು ಇವೆ. ಇದೊಂದು ಅದ್ಭುತವಾದ ಮಹಲ್ ಕೂಡ ಆಗಿದೆ.

7.ಎಲ್ಲೋರಾ

7.ಎಲ್ಲೋರಾ

PC:YOUTUBE

ಮಹಾರಾಷ್ಟ್ರದಲ್ಲಿನ ಎಲ್ಲೋರಾದ ಜೈನ ದೇವಾಲಯದಲ್ಲಿಯೂ ಕೂಡ ಈ ಸಪ್ತಸ್ವರಗಳು ನುಡಿಸುವ ಸ್ತಂಭಗಳು ಇರುವುದು ವಿಶೇಷ.

8.ಅದ್ಭುತವಾದ ಶಿವಲಿಂಗವಿರುವ ದೇವಾಲಯ

8.ಅದ್ಭುತವಾದ ಶಿವಲಿಂಗವಿರುವ ದೇವಾಲಯ

PC:YOUTUBE

ಹಿತ್ತಾಳೆಯನ್ನು ಕೂಡ ಬಂಗಾರವಾಗಿ ಮಾರ್ಪಟು ಮಾಡುವ ಅದ್ಭುತವಾದ ಶಿವಲಿಂಗವಿರುವ ದೇವಾಲಯ ಬಗ್ಗೆ ನಿಮಗೆ ಗೊತ್ತ?

9.ಹನುಮಕೊಂಡ

9.ಹನುಮಕೊಂಡ

PC:YOUTUBE

ಆ ದೇವಾಲಯವು ವರಂಗಲ್ ಜಿಲ್ಲೆಯ ಹನುಮಕೊಂಡದಲ್ಲಿನ ಶ್ರೀ ಶಂಭುಲಿಂಗೇಶ್ವರ ದೇವಾಲಯವಾಗಿದೆ. 1162 ರಲ್ಲಿ ಕಾಕತೀಯದಲ್ಲಿ 2 ನೇ ಪ್ರೋಲರಾಜ ನಿರ್ಮಾಣ ಮಾಡಿದನು.

10.ಹನುಮಕೊಂಡ

10.ಹನುಮಕೊಂಡ

PC:YOUTUBE

ಈ ರಾಜ ಪರಿಪಾಲಿಸುವ ಸಮಯದಲ್ಲಿ ಒಂದು ಬಾರಿ ರೈತರು ಧಾನ್ಯವನ್ನು ಬಂಡೆಗಳ ಮೇಲೆ ತೆಗೆದುಕೊಂಡು ಬಂದಾಗ ಒಂದು ಚಕ್ರವು ಕಾಣಿಸಿತಂತೆ. ಅದನ್ನು ಭೂಮಿಯ ಕೆಳಗೆ ಇಳಿದು ಎಷ್ಟು ಕಷ್ಟ ಪಟ್ಟರು ಕೂಡ ಮೇಲೆ ಬರಲಿಲ್ಲ.

11.ಹನುಮಕೊಂಡ

11.ಹನುಮಕೊಂಡ

PC:YOUTUBE

ಆದರೆ ಮೇಲೆ ಬಂದ ಆ ಚಕ್ರವು ಬಂಗಾರದ ಕಾಂತಿಯಲ್ಲಿ ಧಗಧಗ ಕಂಗೊಳಿಸುತ್ತಾ ಎಲ್ಲರನ್ನು ಸಂಭ್ರಮಕ್ಕೆ ಗುರಿ ಮಾಡಿತು. ಈ ವಿಷಯವನ್ನು ತಿಳಿದುಕೊಂಡ ರಾಜನು...

12.ಹನುಮಕೊಂಡ

12.ಹನುಮಕೊಂಡ

PC:YOUTUBE

ಈ ವಿಷಯ ತಿಳಿದುಕೊಂಡ ರಾಜನು ಅಲ್ಲಿಗೆ ಬಂದು ಅಲ್ಲಿನ ಭೂಮಿಯನ್ನು ಅಗೆಸಿದನು. ಆಗ ಬಂಗಾರದ ಕಾಂತಿಯಿಂದ ಕಂಗೊಳಿಸುತ್ತಿದ್ದ ಶಿವಲಿಂಗವು ಕಾಣಿಸಿತು. ಆ ಲಿಂಗವನ್ನು ತೆಗೆದು ತನ್ನ ರಾಜಧಾನಿಯಾದ ಹನುಮಕೊಂಡದಲ್ಲಿ ಪ್ರತಿಷ್ಟಾಪಿಸಬೇಕು ಎಂದು ಅಂದುಕೊಳ್ಳುತ್ತಾನೆ. ಆದರೆ ಎಷ್ಟೇ ಪ್ರಯತ್ನಿಸಿದರು ಕೂಡ ಅದು ಅಸಾಧ್ಯವಾದ ಮಾತಾಗಿತ್ತು.

13.ಹನುಮಕೊಂಡ

13.ಹನುಮಕೊಂಡ

PC:YOUTUBE

ಆಗ ಆತನ ಗುರುವಾಗಿದ್ದ ಶ್ರೀ ರಾಮಾನುಜಾಚಾರ್ಯರು ಆ ಶಿವಲಿಂಗವು ಎಷ್ಟು ಮಹಿಮಾನ್ವಿತವಾದುದು ಎಂಬುದನ್ನು ತಿಳಿದುಕೊಂಡರು. ಅದನ್ನು ಅಲ್ಲಿಂದ ತೆಗೆಯಬಾರದು ಎಂದೂ ಹಿತ್ತಾಳೆಯನ್ನು ಕೂಡ ಬಂಗಾರವಾಗಿ ಪರಿರ್ವತನೆ ಮಾಡುವ ಶಕ್ತಿ ಆ ಶಿವಲಿಂಗಕ್ಕೆ ಇದೆ ಎಂದು ಹೇಳುತ್ತಾರೆ. ಆ ಶಕ್ತಿವಂತ ಮೂರ್ತಿಯನ್ನು ದೇವಾಲಯದ ಸುತ್ತ 12 ಕಿ.ಮೀ ದೂರದ ಕೋಟೆಯಲ್ಲಿ ನಿರ್ಮಾಣ ಮಾಡು ಎಂದು ಹೇಳುತ್ತಾರೆ.

14.ಹನುಮಕೊಂಡ

14.ಹನುಮಕೊಂಡ

ರಾಜ ಆ ವಿಧವಾಗಿಯೇ ಕೋಟೆಯನ್ನು ನಿರ್ಮಾಣ ಮಾಡಿದನು. ಹಾಗಾಗಿಯೇ ಓರಗಲ್ಲು ಕೋಟೆ ಎಂದು ಕರೆಯುತ್ತಾರೆ. ಕೋಟೆಗಳು ಶಿಥಿಲವಾದ ಆ ಕಾಲದಲ್ಲಿ, ರಾಜ್ಯಗಳು ಇಲ್ಲದೇ ಇದ್ದರು ಕೂಡ ಸ್ವಯಂ ಭೂವಾಗಿ ನೆಲೆಸಿದ ಲಿಂಗೇಶ್ವರ ದೇವಾಲಯ ಈ ಘಟನೆಯು ಸಜೀವ ಸಾಕ್ಷ್ಮೀಯಾಗಿ ನಿಂತಿದೆ. ಆ ಸ್ವಾಮಿಯು ಭಕ್ತರನ್ನು ಕಾಪಾಡುತ್ತಾ ಬರುತ್ತಿದ್ದಾನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X