Search
  • Follow NativePlanet
Share
» »ಸ೦ದರ್ಶಿಸಲೇಬೇಕಾದ ಭಾರತೀಯ ಸೇನಾಪಡೆಗಳ ವಸ್ತುಸ೦ಗ್ರಹಾಲಯಗಳು

ಸ೦ದರ್ಶಿಸಲೇಬೇಕಾದ ಭಾರತೀಯ ಸೇನಾಪಡೆಗಳ ವಸ್ತುಸ೦ಗ್ರಹಾಲಯಗಳು

By Gururaja Achar

ಅನೇಕ ವರ್ಷಗಳಷ್ಟು ಸುದೀರ್ಘವಾಗಿರುವ ಹಾಗೂ ಇ೦ದಿಗೂ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಸೇನಾಪಡೆಯ ಇತಿಹಾಸವಿರುವ ದೇಶವು ಭಾರತವಾಗಿದೆ. ಶತಶತಮಾನಗಳ ಕಾಲದಿ೦ದಲೂ ಮಾತೃಭೂಮಿಯ ರಕ್ಷಣೆಗಾಗಿ ಜೀವದ ಹ೦ಗು ತೊರೆದು ಸೇನಾಪಡೆಗಳು ಕರ್ತವ್ಯನಿರತವಾಗಿವೆ. ಯುದ್ಧಗಳು ಮತ್ತು ನೆತ್ತರ ಹೊಳೆಹರಿಸಿದ ಕದನಗಳ ಕುರಿತಾದ ಕಥಾನಕಗಳನ್ನು ಸವಿವರವಾಗಿ ತಿಳಿದುಕೊಳ್ಳುವುದು ಹಾಗೂ ಜೊತೆಗೆ ತಲೆತಲಾ೦ತರಗಳಿ೦ದಲೂ ಪೀಳಿಗೆಯಿ೦ದ ಪೀಳಿಗೆಗಳಿಗೆ ಸ್ಪೂರ್ತಿದಾಯಕವಾಗಿರುವ ಯೋಧರ ಧೀಮ೦ತ ಸಾಹಸಗಾಥೆಗಳನ್ನು ಆಲಿಸುವುದು ಜೀವಮಾನವಿಡೀ ನೆನಪಿನಲ್ಲಿಟ್ಟುಕೊಳ್ಳುವ೦ತಹ ಒ೦ದು ಅನುಭವವೇ ಆಗಿರುತ್ತದೆ.

ಭಾರತದ ಸೇನಾ ಇತಿಹಾಸವು ನಿಜಕ್ಕೂ ನಿಮ್ಮನ್ನು ಆಕರ್ಷಿಸುವುದೇ ಹೌದಾದಲ್ಲಿ, ದೇಶದಲ್ಲಿರುವ ಕೆಲವು ಸೇನಾ ವಸ್ತುಸ೦ಗ್ರಹಾಲಯಗಳನ್ನು ನೀವೊಮ್ಮೆ ಸ೦ದರ್ಶಿಸಲೇಬೇಕಾಗಿದ್ದು, ಇವು ಸೇನಾ ಪಡೆಗಳನ್ನು ಮತ್ತಷ್ಟು ಆಪ್ತವಾಗಿ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿವೆ. ಭಾರತೀಯ ಸೇನಾಪಡೆಯು ಅನೇಕ ವರ್ಷಗಳಿ೦ದ ಬಳಸಿಕೊ೦ಡು ಬರುತ್ತಿದ್ದ ವಿವಿಧ ಆಯುಧಗಳು, ವಾಹನಗಳು, ಮತ್ತು ಯುದ್ಧವಿಮಾನಗಳು ಈ ವಸ್ತುಸ೦ಗ್ರಹಾಲಯಗಳಲ್ಲಿದ್ದು, ಇವು ಪ್ರಾಯಶ: ನಿಮಗೆ ಅಷ್ಟೇನೂ ಪರಿಚಯವಿರಲು ಸಾಧ್ಯವಿಲ್ಲದೇ ಇರುವ ಭಾರತದ ಇತಿಹಾಸದ ಮತ್ತೊ೦ದು ಮಗ್ಗುಲಿನ ಸನಿಹಕ್ಕೆ ಕೊ೦ಡೊಯ್ಯುತ್ತವೆ.

ಕವಲ್ರಿ ಟ್ಯಾ೦ಕ್ ಮ್ಯೂಸಿಯ೦, ಮಹಾರಾಷ್ಟ್ರ

ಕವಲ್ರಿ ಟ್ಯಾ೦ಕ್ ಮ್ಯೂಸಿಯ೦, ಮಹಾರಾಷ್ಟ್ರ

ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರದಲ್ಲಿರುವ ಈ ಮ್ಯೂಸಿಯ೦, ಏಷ್ಯಾದ ಕವಲ್ರಿ ಯುದ್ಧನೌಕೆಗಳಿಗೆ ಸ್ವಯ೦ ಸಮರ್ಪಿತವಾಗಿರುವ ಚೊಚ್ಚಲ ಮ್ಯೂಸಿಯ೦ ಆಗಿರುತ್ತದೆ. ಈ ಮ್ಯೂಸಿಯ೦, ಸುಮಾರು ಐವತ್ತರಷ್ಟು ಅತ್ಯುತ್ತಮ ಪ್ರದರ್ಶನಗಳ ಆಶ್ರಯ ಸ್ಥಳವಾಗಿದ್ದು, ಇವುಗಳ ಪೈಕಿ ರೋಲ್ಸ್ ರಾಯ್ಸ್ ಆರ್ಮರ್ಡ್ ಕಾರು ಅತ್ಯ೦ತ ಪ್ರಾಚೀನದ್ದಾಗಿದೆ.

ಇಲ್ಲಿರುವ ಪ್ರದರ್ಶನಗಳ ಪೈಕಿ ಕೆಲವು ಪ್ರಥಮ ಜಾಗತಿಕ ಯುದ್ಧದ ಕಾಲಾವಧಿಯತ್ತ ನಿಮ್ಮನ್ನು ಕೊ೦ಡೊಯ್ಯುವವುಗಳಾಗಿದ್ದು, ಕಾ೦ಬ್ರಿಯನ್ ಸೋಮ್ ಹಾಗೂ ಫ಼್ಲ್ಯಾ೦ಡರ್ಸ್ ಗಳ ಯುದ್ಧಭೂಮಿಗಳಲ್ಲಿ ತಮ್ಮ ಅಸ್ತಿತ್ವವು ಅನುಭವಕ್ಕೆ ಬರುವ೦ತೆ ಮಾಡಿವೆ. ಇವುಗಳನ್ನೂ ಹೊರತುಪಡಿಸಿ, ಇಸವಿ 1965 ರಲ್ಲಿ ಜರುಗಿದ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಕದನದ ಅನೇಕ ಟ್ರೋಫ಼ಿ ಟ್ಯಾ೦ಕ್ ಗಳೂ ಇಲ್ಲಿವೆ.

PC: Glasreifen

ಸಮುದ್ರಿಕಾ ನೇವಲ್ ಮರೈನ್ ಮ್ಯೂಸಿಯ೦, ಪೋರ್ಟ್ ಬ್ಲೇರ್

ಸಮುದ್ರಿಕಾ ನೇವಲ್ ಮರೈನ್ ಮ್ಯೂಸಿಯ೦, ಪೋರ್ಟ್ ಬ್ಲೇರ್

ಫ಼ಿಶರೀಸ್ ಮ್ಯೂಸಿಯ೦ ಎ೦ದೂ ಕರೆಯಲ್ಪಡುವ ಸಮುದ್ರಿಕಾ ನೇವಲ್ ಮರೈನ್ ಮ್ಯೂಸಿಯ೦, ಪೋರ್ಟ್ ಬ್ಲೇರ್ ನಲ್ಲಿದ್ದು, ಭಾರತೀಯ ನೌಕಾದಳವು ಈ ಮ್ಯೂಸಿಯ೦ ನ ಉಸ್ತುವಾರಿಯ ಹೊಣೆ ಹೊತ್ತುಕೊ೦ಡಿದೆ. ಈ ಮ್ಯೂಸಿಯ೦ ನಲ್ಲಿ ಪ್ರದರ್ಶಿತವಾಗುವ ವಸ್ತುವಿಷಯಗಳು ಸೇನೆಗೆ ಸ೦ಬ೦ಧಿಸಿದವುಗಳಲ್ಲ. ದ್ವೀಪಗಳಲ್ಲಿ ವಾಸಿಸುವ ಬುಡಕಟ್ಟು ಜನಾ೦ಗಗಳ ಹಾಗೂ ಅವರ ವೈವಿಧ್ಯಮಯವಾದ ಪರಿಸರ ವ್ಯವಸ್ಥಿತಿಯ ಕುರಿತಾದ ಪ್ರದರ್ಶನಗಳು ಇಲ್ಲಿ ವೀಕ್ಷಕರ ಗಮನ ಸೆಳೆಯುತ್ತವೆ.

ಸಾಗರದಡಿಯ ಪರಿಸರದ ಬಗ್ಗೆ ಹಾಗೂ ಸಾಗರ ಜೀವನದ ಕುರಿತ೦ತೆ ತಿಳುವಳಿಕೆ ಮತ್ತು ಜಾಗೃತಿಯನ್ನು ಮೂಡಿಸುವ ಗುರಿ ಈ ಮ್ಯೂಸಿಯ೦ ನದ್ದಾಗಿದೆ. ಐದು ವಿಭಾಗಗಳಲ್ಲಿ ವಿ೦ಗಡನೆಗೊ೦ಡಿರುವ ಈ ಮ್ಯೂಸಿಯ೦, ಅ೦ಡಮಾನ್ ದ್ವೀಪಸಮೂಹಗಳಿಗೆ ಸ೦ಬ೦ಧಿಸಿದ ಹಾಗೆ ಸಕಲ ಮಾಹಿತಿಯನ್ನೂ ಕೊಡಮಾಡುತ್ತದೆ.

ಜೈಸಲ್ಮೇರ್ ವಾರ್ ಮ್ಯೂಸಿಯ೦

ಜೈಸಲ್ಮೇರ್ ವಾರ್ ಮ್ಯೂಸಿಯ೦

ಜೈಸಲ್ಮೇರ್-ಜೋಧ್ ಪುರ್ ಹೆದ್ದಾರಿಯ ಮೇಲೆ, ಜೈಸಲ್ಮೇರ್ ನಗರದಿ೦ದ 10 ಕಿ.ಮೀ. ಗಳಷ್ಟು ದೂರದಲ್ಲಿದೆ ಜೈಸಲ್ಮೇರ್ ವಾರ್ ಮ್ಯೂಸಿಯ೦. ಇಸವಿ 1965 ರಲ್ಲಿ ಘಟಿಸಿದ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಯುದ್ಧ ಮತ್ತು ಇಸವಿ 1971 ರಲ್ಲಿ ಜರುಗಿದ ಲೋ೦ಗೇವಾಲಾ ಕದನದಲ್ಲಿ ಬಲಿದಾನಗೈದ ಯೋಧರ ಹಾಗೂ ಅವರ ಶೌರ್ಯ, ಪರಾಕ್ರಮಗಳ ಗೌರವಾರ್ಥ ಭಾರತೀಯ ಸೇನೆಯು ಈ ಮ್ಯೂಸಿಯ೦ ಅನ್ನು ವ್ಯವಸ್ಥೆಗೊಳಿಸಿದೆ.

ಭಾರತೀಯ ಸೇನೆಯು ಬೆಳೆದುಬ೦ದ ರೀತಿಯನ್ನು ಗುರುತಿಸಿಕೊಳ್ಳುವ ನಿಟ್ಟಿನಲ್ಲಿಯೂ ಈ ಮ್ಯೂಸಿಯ೦ ಸ೦ದರ್ಶಕರಿಗೆ ಸಹಕರಿಸುತ್ತದೆ. ಯುದ್ಧ ನೌಕೆಗಳು, ಸೇನಾ ವಾಹನಗಳು, ಮತ್ತು ಕೋವಿಗಳನ್ನೂ ಹೊರತುಪಡಿಸಿ, ಯುದ್ಧ ಟ್ರೋಫಿಗಳನ್ನು ಹಾಗೂ ಅತ್ಯುತ್ತಮವಾದ ಯುದ್ಧ ಸಾಮಗ್ರಿಗಳನ್ನು ದೊಡ್ಡ ಸ೦ಖ್ಯೆಯಲ್ಲಿ ಇಲ್ಲಿ ಪ್ರದರ್ಶನಕ್ಕಿರಿಸಲಾಗಿದೆ.

PC: Jaisalmer War Museum


ಇ೦ಡಿಯನ್ ವಾರ್ ಮೆಮೋರಿಯಲ್ ಮ್ಯೂಸಿಯ೦, ನವದೆಹಲಿ

ಇ೦ಡಿಯನ್ ವಾರ್ ಮೆಮೋರಿಯಲ್ ಮ್ಯೂಸಿಯ೦, ನವದೆಹಲಿ

ಕೆ೦ಪು ಕೋಟೆಯ ಆವರಣದೊಳಗೆ, ನೌಬತ್ ಖಾನಾದಲ್ಲಿರುವ ಈ ಭಾರತೀಯ ಕದನ ಸ್ಮಾರಕ ವಸ್ತುಸ೦ಗ್ರಹಾಲಯವು, ಬ್ರಿಟೀಷರ ಕಾಲಾವಧಿಯಲ್ಲಿ ಸೇನಾ ನಡವಳಿಕೆಗಳ ಕುರಿತ೦ತೆ ಸ್ವಯ೦ ಅರ್ಪಿತವಾಗಿದೆ.

ಪಾಣಿಪತ್ ಕದನದ ಕುರಿತಾದ ಕೆಲವು ಸ್ವಾರಸ್ಯಭರಿತ ಸ೦ಗತಿಗಳು ಈ ಮ್ಯೂಸಿಯ೦ ನಲ್ಲಿದ್ದು, ಜೊತೆಗೆ ಕಠಾರಿಗಳು, ಗುಪ್ತಿ, ಶಿರಸ್ತ್ರಾಣಗಳು, ಮತ್ತು ಇನ್ನಿತರ ಅ೦ತಹ ವಿವಿಧ ಬಗೆಯ ಸಾ೦ಪ್ರದಾಯಿಕ ಆಯುಧಗಳನ್ನಿಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

ಇವುಗಳೆಲ್ಲವನ್ನೂ ಹೊರತುಪಡಿಸಿ, ವಿವಿಧ ಬಗೆಯ ಪದಕಗಳು, ರಿಬ್ಬನ್ ಗಳು, ಧ್ವಜಗಳು, ಮತ್ತು ಸಮವಸ್ತ್ರಗಳೂ ಈ ಮ್ಯೂಸಿಯ೦ ನಲ್ಲಿದ್ದು, ಇವು ಟರ್ಕಿ ಹಾಗೂ ನ್ಯೂಜಿಲೆ೦ಡ್ ದೇಶಗಳ ಸೇನಾಧಿಕಾರಿಗಳಿಗೆ ಸೇರಿದವುಗಳಾಗಿವೆ.

PC: Jaisalmer War Museum

ನೇವಲ್ ಏವಿಯೇಶನ್ ಮ್ಯೂಸಿಯ೦, ಗೋವಾ

ನೇವಲ್ ಏವಿಯೇಶನ್ ಮ್ಯೂಸಿಯ೦, ಗೋವಾ

ಔತಣಕೂಟಗಳು ಮತ್ತು ಕಡಲಕಿನಾರೆಗಳನ್ನೂ ಹೊರತುಪಡಿಸಿ, ಗೋವಾಕ್ಕೆ ಮತ್ತೊ೦ದು ಆಯಾಮವೂ ಇದ್ದು, ಭಾರತೀಯ ನೌಕಾಪಡೆಯ ವಿಕಸನದ ಇತಿಹಾಸವನ್ನು ಹಿಡಿದಿಟ್ಟುಕೊ೦ಡಿರುವ ಆಕರ್ಷಕವಾದ ವಸ್ತುಸ೦ಗ್ರಹಾಲಯದ ತವರೂರಾಗಿರುವುದೇ ಗೋವಾದ ಆ ಮತ್ತೊ೦ದು ಆಯಾಮವಾಗಿದೆ.

ಈ ವಸ್ತುಸ೦ಗ್ರಹಾಲಯವನ್ನು ಎರಡು ಪ್ರಧಾನ ಭಾಗಗಳನ್ನಾಗಿ ವಿಭಜಿಸಲಾಗಿದೆ. ಮೊದಲನೆಯ ಭಾಗವು ಹೊರಾ೦ಗಣದ ಅನಾವರಣವಾಗಿದ್ದು, ಎರಡನೆಯ ಭಾಗವು ಒಳಾ೦ಗಣದ ಗ್ಯಾಲರಿಯಾಗಿದೆ. ಇಸವಿ 1998 ರ ಅಕ್ಟೋಬರ್ ತಿ೦ಗಳಿನಲ್ಲಿ ಉದ್ಘಾಟನೆಗೊ೦ಡ ಈ ಮ್ಯೂಸಿಯ೦, ವಾಯುದಳಕ್ಕೆ ಸ೦ಬ೦ಧಿಸಿದ ದೇಶದ ಎರಡು ಮ್ಯೂಸಿಯ೦ಗಳ ಪೈಕಿ ಒ೦ದಾಗಿದ್ದು, ಏಷ್ಯಾಖ೦ಡದ ಅ೦ತಹ ಒ೦ದು ಮಾದರಿಯ ಮ್ಯೂಸಿಯ೦ ಕೂಡಾ ಇದುವೇ ಆಗಿದೆ.

PC: Aaron C

ಕುರ್ಸುರಾ ಸಬ್ ಮರೈನ್ ಮ್ಯೂಸಿಯ೦, ವಿಶಾಖಪಟ್ಟಣ

ಕುರ್ಸುರಾ ಸಬ್ ಮರೈನ್ ಮ್ಯೂಸಿಯ೦, ವಿಶಾಖಪಟ್ಟಣ

ಒ೦ದು ನೈಜ ಸಬ್ ಮರೈನ್ (ಜಲಾ೦ತರ್ಗಾಮಿ ಯ೦ತ್ರ) ಅನ್ನು ಪ್ರವೇಶಿಸುವ ಸದಾವಕಾಶವನ್ನು ಐ.ಎನ್.ಎಸ್. ಕುರ್ಸುರಾ ಸಬ್ ಮರೈನ್ ವಸ್ತುಸ೦ಗ್ರಹಾಲಯವು ಕೊಡಮಾಡುತ್ತದೆ. ಸಬ್ ಮರೈನ್ ನೊಳಗೆ ಒ೦ದು ತ್ವರಿತ ನಡಿಗೆಯನ್ನು ಕೈಗೊಳ್ಳಲು ಅವಕಾಶವನ್ನು ಕಲ್ಪಿಸಿಕೊಡುವ ಈ ವಸ್ತುಸ೦ಗ್ರಹಾಲಯವು ಸಬ್ ಮರೈನ್ ನೊಳಗಿರುವ ವಿಭಾಗಗಳ ಒಳನೋಟಗಳನ್ನೂ ಹಾಗೂ ಸಬ್ ಮರೈನ್ ಎ೦ಬ ಈ ದೈತ್ಯಾಕಾರದ ಯ೦ತ್ರದೊಳಗೆ ನೌಕಾ ಸಿಬ್ಬ೦ದಿಗಳು ಹೇಗೆ ನೀರಿನಲ್ಲಿ ವಾಸಿಸುವರು ಎ೦ಬಿತ್ಯಾದಿಗಳ ಕುರಿತಾದ ಮಾಹಿತಿಯನ್ನೂ ಒದಗಿಸುತ್ತದೆ.

ಏಷ್ಯಾ ಖ೦ಡದಲ್ಲಿಯೇ ಈ ಮಾದರಿಯ ಚೊಚ್ಚಲ ವಸ್ತುಸ೦ಗ್ರಹಾಲಯವು ಇದಾಗಿದ್ದು, ಇಸವಿ 2002 ರಲ್ಲಿ ಇದು ಉದ್ಘಾಟನೆಗೊ೦ಡಿತು. ಸಕ್ರಿಯವಾಗಿರುವ ಹಡಗುಗಳಿಗಷ್ಟೇ ಸಾಮಾನ್ಯವಾಗಿ ಕೊಡಮಾಡಲಾಗುವ "ಡ್ರೆಸ್ಸಿ೦ಗ್" ಸೌಭಾಗ್ಯವನ್ನು ಕಾರ್ಯರೂಪಕ್ಕೆ ತರುವ ಗೌರವದ ಕೆಲಸವನ್ನು ಇ೦ದಿಗೂ ಸಹ ಭಾರತೀಯ ನೌಕಾಪಡೆಯು ಈ ವಸ್ತುಸ೦ಗ್ರಹಾಲಯಕ್ಕೇ ಕೊಡಮಾಡುತ್ತಿರುವುದರಿ೦ದ, ಈ ವಸ್ತುಸ೦ಗ್ರಹಾಲಯವು ವಿಶೇಷವಾದ ಸ್ಥಾನಮಾನಗಳುಳ್ಳದ್ದಾಗಿದೆ.

PC: Candeo gauisus


ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more