
ದೇವರಿಗೆ ಏನೆಲ್ಲಾ ಇಷ್ಟವಾಗುತ್ತೆ ಅನ್ನೋದನ್ನು ಹೇಳೋಕೆ ಆಗೋದಿಲ್ಲ. ಕೆಲವು ದೇವಸ್ಥಾನದಲ್ಲಿ ದೇವರಿಗೆ ವಿಸ್ಕಿ ಅರ್ಪಿಸಿದ್ರೆ ಇನ್ನೂ ಕೆಲವು ದೇವಸ್ಥಾನದಲ್ಲಿ ದೇವರಿಗೆ ಬೇರೆ ಇನ್ನೇನೋ ಅರ್ಪಿಸುತ್ತಾರೆ. ಆದರೆ ನಾವಿಂದು ಹೇಳ ಹೊರಟಿರುವುದು ಕೇರಳದ ಬಾಲ ಮುರುಗನ್ ದೇವಸ್ಥಾನದ ಬಗ್ಗೆ.
ಈ ದೇವಾಲಯದಲ್ಲಿ ದೇವರಿಗೆ ವಿಸ್ಕೀ ಅರ್ಪಿಸ್ತಾರೆ ಜನ

ಮಂಚ್ ಮುರುಗನ್
PC: youtube
ಬಾಲಸುಬ್ರಹ್ಮಣ್ಯಂ ದೇವಸ್ಥಾನವು ಆಲಪ್ಪಿಯಿಂದ ಕೆಲವೇ ನಿಮಿಷ ದೂರದಲ್ಲಿರುವ ಸುಬ್ರಮಣಿಯಪುರಂದಲ್ಲಿದೆ. ಇದು ದಕ್ಷಿಣದ ಪಲನಿ ಎಂದೇ ಪ್ರಸಿದ್ಧವಾಗಿದೆ. ಇದನ್ನು ಮಂಚ್ ಮುರುಗನ್, ಬಾಲ ಮುರುಗನ್ ಎಂದೂ ಕರೆಯಲಾಗುತ್ತದೆ.

ಪರೀಕ್ಷೆ ದಿನ ವಿದ್ಯಾರ್ಥೀಗಳಿಂದ ತುಂಬುವ ದೇವಸ್ಥಾನ
PC: youtube
ಪರೀಕ್ಷೆಯ ದಿನಗಳಲ್ಲಿ ಈ ದೇವಸ್ಥಾನವು ವಿದ್ಯಾರ್ಥೀಗಳಿಂದ ತುಂಬಿ ತುಳುಕುತ್ತಿರುತ್ತದೆ. ಪರೀಕ್ಷೆ ಚೆನ್ನಾಗಿ ಆಗಲಿ ಎಂದು ದೇವರಿಗೆ ಪ್ರಾರ್ಥಿಸಿ ಮಂಚ್ ಚಾಕೊಲೇಟ್‌ನ್ನು ಅರ್ಪಿಸುತ್ತಾರೆ. ಈ ಸಂಪ್ರದಾಯ ಕೇವಲ ಮಕ್ಕಳಿಂದ ಮಾತ್ರವಲ್ಲ ದೊಡ್ಡವರೂ ಅನುಸರಿಸುತ್ತಾ ಬಂದಿದ್ದಾರೆ. ಜಾತಕದಲ್ಲಿನ ದೋಷಗಳಿಗೆ ಯಾವ್ಯಾವ ದೇವಾಸ್ಥಾನಗಳಲ್ಲಿ ಪರಿಹಾರ ಪೂಜೆ ಮಾಡಿಸ್ತಾರೆ ಗೊತ್ತಾ?

ಈ ಸಂಪ್ರದಾಯ ಪ್ರಾರಂಭವಾದದ್ದು ಹೇಗೆ?
ಈ ಸಂಪ್ರದಾಯ ಹೇಗೆ ಪ್ರಾರಂಭವಾಯಿತು ಎನ್ನುವುದು ಸರಿಯಾಗಿ ಯಾರಿಗೂ ತಿಳಿದಿಲ್ಲ. ಸುಮಾರು ೬ ವರ್ಷಗಳ ಹಿಂದಷ್ಟೇ ಈ ಸಂಪ್ರದಾಯ ಶುರುವಾಗಿದ್ದು. ಸಣ್ಣ ಹುಡುಗನೊಬ್ಬ ತನ್ನ ಇಷ್ಡವಾದ ಚಾಕೊಲೇಟ್‌ನ್ನು ಬಾಲ ಮುರುಗನಿಗೆ ಅರ್ಪಿಸುವುದಾಗಿ ಹೇಳಿದಾಗಿನಿಂದ ಇದು ಶುರುವಾಗಿದೆ. ಆ ಬಾಲಕನ ಇಚ್ಛೆ ಈಡೇರಿತು. ನಂತರ ಇದೇ ಸಂಪ್ರದಾಯವನ್ನು ಇತರ ಮಕ್ಕಳು ಅನುಸರಿಸುತ್ತಾ ಬಂದರು. ತಮ್ಮ ಕೋರಿಕೆ ಈಡೇರಿಕೆಗೆ ಚಾಕೋಲೆಟ್ ಬಾರ್ ನೀಡುವುದಾಗಿ ಕೋರಿಕೊಳ್ಳುತ್ತಾರೆ. ಅದೂ ಕೂಡಾ ವಿಶೇಷವಾಗಿ ಪರೀಕ್ಷಾ ದಿನಗಳಲ್ಲಿ ಹೆಚ್ಚು ಚಾಕೋಲೆಟ್‌ಗಳು ಬಾಲ ಮುರುಗನಿಗೆ ಸಮರ್ಪಿತವಾಗುತ್ತದೆ.

ಮಂಚ್ ತುಲಾಭಾರಾನೂ ಮಾಡ್ತಾರೆ
PC: youtube
ಈ ಸಂಪ್ರದಾಯ ಪ್ರಾರಂಭವಾಗುವುದಕ್ಕೂ ಮುನ್ನ ಇತರ ದೇವಸ್ಥಾನಗಳಂತೆ ಹೂವಿನ ಮಾಲೆಗಳು, ನಿಂಬೆಕಾಯಿಯನ್ನು ಈ ದೇವಾಲಯದಲ್ಲಿ ಸಮರ್ಪಿಸಲಾಗುತ್ತಿತ್ತು. ಈಗ ಹೂವಿನ ಮಾಲೆಯ ಬದಲಿಗೆ ಮಂಚ್ ಚಾಕೋಲೆಟ್‌ನ ಮಾಲೆ ಕಾಣ ಸಿಗುತ್ತಿದೆ. ಇನ್ನೂ ಕೆಲವು ಭಕ್ತರು ಮಂಚ್ ಪಾರವನ್ನು ಅರ್ಪಿಸುತ್ತಾರೆ. ಅದು ಸುಮಾರು ೮ ಕೆ.ಜಿ ಅಕ್ಕಿಯನ್ನು ತುಂಬ ಬಲ್ಲ ಪಾತ್ರೆಯಲ್ಲಿ ಮಂಚ್ ಚಾಕೋಲೆಟ್‌ನ್ನು ನೀಡುತ್ತಾರೆ. ಇನ್ನೂ ಕೆಲವು ಭಕ್ತರು ತಮ್ಮ ದೇಹ ತೂಕದಷ್ಟು ಮಂಚ್ ಚಾಕೋಲೆಟ್‌ನ್ನು ನೀಡುತ್ತಾರೆ. ಇದಕ್ಕೆ ಮಂಚ್ ತುಲಾಭಾರ ಎನ್ನುತ್ತಾರೆ.

ಅಷ್ಟೊಂದು ಚಾಕೋಲೆಟ್‌ನ್ನು ಏನು ಮಾಡುತ್ತಾರೆ?
PC: youtube
ಮಂಚ್ ಮುರುಗನ್ ದೇವಸ್ಥಾನ ವಿಶ್ವದಲ್ಲೆಲ್ಲಾ ಪ್ರಸಿದ್ಧವಾಗಿದೆ. ದೇಶ, ವಿದೇಶಗಳಿಂದ ಬರುವ ಭಕ್ತರು ಪಾತ್ರೆ ತುಂಬಾ ಚಾಕೋಲೆಟ್‌ನ್ನು ಅರ್ಪಿಸುತ್ತಾರೆ. ದಿನೇ ದಿನೇ ದೇವಸ್ಥಾನದಲ್ಲಿ ಚಾಕೋಲೆಟ್‌ನ ರಾಶಿಯೇ ಶೇಖರಣೆಯಾಗಲು ಶುರುವಾಯಿತು.ಆಗ ದೇವಸ್ಥಾನದ ಮೇಲ್ವಿಚಾರಕರು ಈ ಚಾಕೋಲೆಟ್‌ನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುವುದಾಗಿ ನಿರ್ಧರಿಸಿದರಿ. ಪ್ರತಿ ದಿನ ಇಲ್ಲಿ ಪುಷ್ಪಾಂಜಲಿ, ಆರತಿ ಆದ ತಕ್ಷಣ ಭಕ್ತರಿಗೆ ಪ್ರಸಾದ ರೂಪದಲ್ಲಿ ಚಾಕೋಲೆಟ್‌ನ್ನು ನೀಡುತ್ತಾರೆ.