Search
  • Follow NativePlanet
Share
» »ಮುಲ್ಲಾಕ್ಕಲ್ ರಾಜ ರಾಜೇಶ್ವರಿ ಅಮ್ಮನ ದೇವಸ್ಥಾನದ ದರ್ಶನ ಪಡೆಯಿರಿ

ಮುಲ್ಲಾಕ್ಕಲ್ ರಾಜ ರಾಜೇಶ್ವರಿ ಅಮ್ಮನ ದೇವಸ್ಥಾನದ ದರ್ಶನ ಪಡೆಯಿರಿ

ದೇವರ ನಾಡು ಎಂದೇ ಪ್ರಸಿದ್ಧವಾಗಿರುವ ಕೇರಳವು ಅನೇಕ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಅವುಗಳಲ್ಲಿ ಮುಲ್ಲಕ್ಕಲ್ ರಾಜ ರಾಜೇಶ್ವರಿ ದೇವಾಲಯವೂ ಒಂದು. ಅಲಪುಳ ರೈಲು ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿ, ಮುಲ್ಲಕ್ಕಲ್ ರಾಜ ರಾಜೇಶ್ವರಿ ದೇವಾಲಯವು ದುರ್ಗಾ ದೇವಿಗೆ ಸಮರ್ಪಿತವಾದ ಆಳಪ್ಪಿಯಲ್ಲಿರುವ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಬನ್ನಿ ಈ ದೇವಾಲಯದ ವಿಶೇಷತೆ ಬಗ್ಗೆ ತಿಳಿಯೋಣ.

ಮುಲ್ಲಕ್ಕಲ್ ರಾಜ ರಾಜೇಶ್ವರಿ

ಮುಲ್ಲಕ್ಕಲ್ ರಾಜ ರಾಜೇಶ್ವರಿ

PC: Ajeshunnithan

ಮಲಯಾಳಂನಲ್ಲಿ ಮಲ್ಲಿಗೆ ಹೂವನ್ನು ಮುಲ್ಲಾಕ್ಕಲ್ ಎಂದು ಕರೆಯಲಾಗುತ್ತದೆ . ಮಲ್ಲಿಗೆ ಹೂವನ್ನು ಆರೈಕೆ ಮಾಡಲು ಈ ಸ್ಥಳದಲ್ಲಿ ರಾಜ ರಾಜೇಶ್ವರಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಈ ದೇವಾಲಯವು ಎರಡು ವಾರ್ಷಿಕ ಉತ್ಸವಗಳನ್ನು ಆಚರಿಸುತ್ತದೆ. ಅಕ್ಟೋಬರ್ /ನವೆಂಬರ್ ತಿಂಗಳಲ್ಲಿ ನವರಾತ್ರಿ ಉತ್ಸವ ಮತ್ತು ನವೆಂಬರ್ / ಡಿಸೆಂಬರ್ ತಿಂಗಳಲ್ಲಿ ಥೈಪೂಯಕಾವಾಡಿ ಉತ್ಸವ.

ಸಾಂಸ್ಕೃತಿಕ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮ

PC:Facebook

ಥೈಪೂಯಕಾವಾಡಿ ಉತ್ಸವದ ಕೊನೆಯ ಎರಡು ದಿನಗಳು ಅತ್ಯಂತ ಮಂಗಳಕರ ದಿನಗಳಾಗಿವೆ. ಒಂಬತ್ತು ಆನೆಗಳು ಭಾಗವಹಿಸುವ ವರ್ಣರಂಜಿತ ಮೆರವಣಿಗೆಗಳು ಸಂಜೆ ನಡೆಯುತ್ತವೆ. ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಒಟ್ಟಾಂತ್ಯಲ್ಲಾಲ್ ಮತ್ತು ಕಥಕ್ಕಳಿ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯುತ್ತವೆ.

ಥೈಪೂಯಕಾವಡಿ ಉತ್ಸವ

ಥೈಪೂಯಕಾವಡಿ ಉತ್ಸವ

PC: Akhilan

ಥೈಪೂಯಕಾವಡಿ ಉತ್ಸವವನ್ನು ನವೆಂಬರ್ / ಡಿಸೆಂಬರ್‌ನಲ್ಲಿ 41 ದಿನಗಳ ಕಾಲ ಆಚರಿಸಲಾಗುತ್ತದೆ. ಇಡೀ ಪಟ್ಟಣವು ದೀಪಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿರುತ್ತದೆ. ಕೊನೆಯ ಹತ್ತು ದಿನಗಳನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ.

ಇತರ ದೇವರುಗಳು

ಇತರ ದೇವರುಗಳು

PC: Facebook

ದೇವಾಲಯದಲ್ಲಿ ಇತರ ದೇವರುಗಳೂ ಇವೆ, ಅವುಗಳೇಂದರೆ ಹನುಮಾನ್ , ಗಣೇಶ, ಸುಬ್ರಹ್ಮಣ್ಯ ಸ್ವಾಮಿ, ನಾಗರಾಜ, ನವಗ್ರಹ, ಶ್ರೀ ಕೃಷ್ಣ ಮತ್ತು ಅಯ್ಯಪ್ಪ ಸ್ವಾಮಿ. ದೇವಸ್ಥಾನದ ಆವರಣದಲ್ಲಿರುವ ಆಲದ ಮರದ ಕೆಳಗೆ ಶಿವ ಲಿಂಗವನ್ನು ಇರಿಸಲಾಗಿದೆ.

500 ವರ್ಷ ಹಳೆಯದು

500 ವರ್ಷ ಹಳೆಯದು

PC: Facebook

ದೇವಾಲಯವು ಸುಮಾರು 500 ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ದೇವಾಲಯದ ಮೂಲಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಥೆಗಳು ಕೇಳಿಬರುತ್ತವೆ. ಒಂದು ಕಥೆಯ ಪ್ರಕಾರ ಮುಲ್ಲಕ್ಕಲ್ ದೇವಿಯ ವಿಗ್ರಹವನ್ನು ತೇಕುಕುರ್ ಪ್ರದೇಶದಿಂದ ಗಡೀಪಾರು ಮಾಡಿದ ಸೈನಿಕರ ಗುಂಪಿನಿಂದ ಇಲ್ಲಿಗೆ ತರಲಾಯಿತು. ಮುಖ್ಯವಾಗಿ ಅವರು ಈ ಮೂರ್ತಿಯನ್ನು ಮಲ್ಲಿಗೆ ತೋಟದಲ್ಲಿ ಇರಿಸಿದ್ದರು. ನಂತರ ಚೆಂಬಾಗಸೇರಿಯ ರಾಜ ದೇವನಾರಾಯಣರ ಪೋಷಣೆಯ ಮೂಲಕ ಮಲ್ಲಿಗೆ ತೋಟದಲ್ಲಿ ದೇವಾಲಯವನ್ನು ನಿರ್ಮಿಸಲಾಯಿತು.

ದಂತಕಥೆಯ ಪ್ರಕಾರ

ದಂತಕಥೆಯ ಪ್ರಕಾರ

PC: Facebook

ದೇವಸ್ಥಾನದ ಅಡಿಪಾಯಕ್ಕೆ ಸಂಬಂಧಿಸಿದ ಮತ್ತೊಂದು ಪ್ರಸಿದ್ಧ ಕಥೆ ಇದೆ. ಮೈಸೂರಿನ ಟಿಪ್ಪು ಸುಲ್ತಾನರಿಂದ ಕೇರಳದ ವಿಜಯದ ಸಮಯದಲ್ಲಿ, ನಂಬೂದರಿ ಬ್ರಾಹ್ಮಣರ ಗುಂಪು ಮಾತಾ ಅನ್ನಪೂರ್ಣೇಶ್ವರಿಯ ಮಹೋನ್ನತ ವಿಗ್ರಹವನ್ನು ತೆಗೆದುಕೊಂಡು ಮಲಬಾರ್ ಸಾಮ್ರಾಜ್ಯದಿಂದ ತಪ್ಪಿಸಿಕೊಂಡಿದ್ದರು. ಈ ಗುಂಪನ್ನು ಮಲ್ಲಿಗೆ ಹೂವಿನ ಉದ್ಯಾನವನ್ನು ಈ ದೇವಾಲಯವನ್ನು ನಿರ್ಮಿಸಲು ಸೂಕ್ತ ಸ್ಥಳವೆಂದು ಗುರುತಿಸಿ ದೇವಾಲಯದ ಸ್ಥಾಪಿಸಲಾಯಿತು.

ಮಾತಾ ಅನ್ನಪೂರ್ಣೇಶ್ವರಿ

ಮಾತಾ ಅನ್ನಪೂರ್ಣೇಶ್ವರಿ

PC: Facebook

ಇಲ್ಲಿನ ಮುಖ್ಯ ದೇವತೆಯು ಮಾತಾ ಅನ್ನಪೂರ್ಣೇಶ್ವರಿ. ಒಂದು ಕೈಯಲ್ಲಿ ಸೌಟು ಹಾಗೂ ಇನ್ನೊಂದು ಕೈಯಲ್ಲಿ ಮಡಿಕೆಯನ್ನು ಹಿಡಿದಿದ್ದಾಳೆ. ಈ ದೇವಸ್ಥಾನವು ಮಲ್ಲಿಗೆಯ ಗಾರ್ಡನ್‌ನಲ್ಲಿ ಇರಿಸಲ್ಪಟ್ಟದ್ದರಿಂದ ಆಕೆ ಮುಲ್ಲಕ್ಕಲ್ ಭಗವತಿ ಎಂಬ ಹೆಸರನ್ನು ಪಡೆದಳು. ದೇವಸ್ಥಾನದಲ್ಲಿ ಪಶ್ಚಿಮಾಭಿಮುಖವಾಗಿರುವ ನಿಂತಿರುವ ಭಂಗಿಗಳಲ್ಲಿ ಇಲ್ಲಿನ ವಿಗ್ರಹವನ್ನು ಕಾಣಬಹುದು.

ಮಹಿಳಾ ಉತ್ಸವ

ಮಹಿಳಾ ಉತ್ಸವ

PC: Facebook

ಡಿಸೆಂಬರ್ ಮೊದಲ ಭಾನುವಾರದಂದು ಮಹಿಳಾ ಉತ್ಸವವನ್ನು ಆಚರಿಸಲಾಗುತ್ತದೆ. ಈ ದಿನದಂದು ಎಲ್ಲಾ ಆಚರಣೆಗಳು ಮತ್ತು ಆರಾಧನೆಗಳು ಮಹಿಳೆಯರಿಂದ ಮಾತ್ರ ಮಾಡಲಾಗುತ್ತದೆ. ವಿವಿಧ ಪ್ರದೇಶಗಳಿಂದ ಆಗಮಿಸಿದ ಮಹಿಳೆಯರು ಈ ದೇವಾಲಯದ ದೀಪಗಳನ್ನು ಬೆಳಗಿಸುವ ಮೂಲಕ ಪ್ರಾರ್ಥನೆ ಸಲ್ಲಿಸುತ್ತಾರೆ.

ದೇವಿಗೆ ನೈವೇದ್ಯ

ದೇವಿಗೆ ನೈವೇದ್ಯ

PC: Facebook

ಈ ದೇವಿಯು ಮುಳ್ಳಕ್ಕಾಲ್ ರಾಜರಾಜೇಶ್ವರಿ ಅಥವಾ ಮುಳ್ಳಕ್ಕಾಲ್ ದುರ್ಗಾದೇವಿ ಎಂದೆ ಪ್ರಸಿದ್ಧಳಾಗಿದ್ದಾಳೆ. ಹಿಂದೆ ಅನ್ನಪೂರ್ಣೇಶ್ವರಿಯ ವಿಗ್ರಹವಿದ್ದಾಗಲೆ ಈ ದೇವಾಲಯದ ಹತ್ತಿರದಲ್ಲಿರುವ ಬಾಹ್ಮಣನೋರ್ವನ ಮನೆಯಿಂದ ತರಲಾಗುತ್ತಿದ್ದ ಕಪ್ಪು ಉದ್ದಿನ ಬೇಳೆಯಿಂದ ಮಾಡಲಾದ ವಡೆಯನ್ನು ನೈವೇದ್ಯವಾಗಿ ದೇವಿಗೆ ಸಮರ್ಪಿಸಲಾಗುತ್ತಿತ್ತು. ಆ ಆಚರಣೆಯು ಇಂದಿಗೂ ಪ್ರಚಲಿತದಲ್ಲಿದ್ದು ರಾಜರಾಜೇಶ್ವರಿ ದೇವಿಗೆ ರಾತ್ರಿಯ ಪೂಜೆ ವೇಳೆಗೆ ಕಪ್ಪು ಉದ್ದಿನಿಂದ ಮಾಡಲಾದ ವಡೆಯನ್ನೆ ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ. ಈ ದೇವಾಲಯವನ್ನು ತಲುಪುವುದು ಸುಲಭವಾಗಿದ್ದು ಅಲೆಪ್ಪಿ ನಗರ ಕೇಂದ್ರದಿಂದ ಸಾಕಷ್ಟು ಬಾಡಿಗೆ ಆಟೋಗಳು ಹಾಗೂ ಕಾರುಗಳು ಇಲ್ಲಿಗೆ ತೆರಳಲು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more