Search
  • Follow NativePlanet
Share
» »ತೀರ್ಥಹಳ್ಳಿಯಲ್ಲಿರುವ ಮೃಗಾವಧೆಗೆ ಈ ಹೆಸರು ಯಾಕೆ ಬಂತು ಗೊತ್ತಾ?

ತೀರ್ಥಹಳ್ಳಿಯಲ್ಲಿರುವ ಮೃಗಾವಧೆಗೆ ಈ ಹೆಸರು ಯಾಕೆ ಬಂತು ಗೊತ್ತಾ?

ಶಿವಮೊಗ್ಗದಲ್ಲಿ ಮೃಗಾವಧೆ ಎನ್ನುವ ಹೆಸರನ್ನು ನೀವು ಕೇಳಿರುವಿರಿ. ಇದೊಂದು ಪುಟ್ಟ ಗ್ರಾಮವಾಗಿದೆ. ಈ ಗ್ರಾಮಕ್ಕೂ ರಾಮಾಯಣಕ್ಕೂ ನಂಟಿದೆ. ಹಾಗೆಯೇ ಅಲ್ಲೊಂದು ಮಲ್ಲಿಕಾರ್ಜುನ ದೇವಸ್ಥಾನವಿದೆ. ಅದರ ಇತಿಹಾಸ ಏನು ಅನ್ನೋದು ಬಹಳಷ್ಟು ಜನರಿಗೆ ತಿಳಿದಿಲ್ಲ. ಆ ಗ್ರಾಮಕ್ಕೆ ಮೃಗಾವಧೆ ಎನ್ನುವ ಹೆಸರು ಯಾಕೆ ಬಂತು ಅನ್ನೋದು ಅಲ್ಲಿ ವಾಸಿಸುವ ಜನರನ್ನು ಹೊರತುಪಡಿಸಿ ಹೆಚ್ಚಿನವರಿಗೆ ಗೊತ್ತಿಲ್ಲದೇ ಇರಬಹುದು. ಹಾಗಾಗಿ ಇಂದು ನಾವು ಆ ಮೃಗಾವಧೆ ಎಂಬ ಪುಟ್ಟ ಊರಿನ ಬಗ್ಗೆ ತಿಳಿಸಲಿದ್ದೇವೆ.

ಎಲ್ಲಿದೆ ಈ ಮೃಗಾವಧೆ

ಎಲ್ಲಿದೆ ಈ ಮೃಗಾವಧೆ

PC: youtube
ಮೃಗಾವಧೆ ಎಂಬುದು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಇದು ಮೃಗವಧೆ ಪಂಚಾಯತ್ ಅಡಿಯಲ್ಲಿ ಬರುತ್ತದೆ. ಇದು ಬೆಂಗಳೂರು ವಿಭಾಗಕ್ಕೆ ಸೇರಿದ್ದು. ಜಿಲ್ಲೆಯ ಶಿವಮೊಗ್ಗದಿಂದ ದಕ್ಷಿಣಕ್ಕೆ 44 ಕಿ.ಮೀ. ತೀರ್ಥಹಳ್ಳಿಯಿಂದ 20 ಕಿ.ಮೀ. ರಾಜ್ಯ ರಾಜಧಾನಿ ಬೆಂಗಳೂರಿನಿಂದ 292 ಕಿ.ಮೀ. ದೂರದಲ್ಲಿದೆ.

ರಾಮಾಯಣದ ಪ್ರಕಾರ

ರಾಮಾಯಣದ ಪ್ರಕಾರ

PC: youtube
ಮೃಗಾವಧೆಯು ಸೀಮಿತ ಅರಿವಿನೊಂದಿಗೆ ಇನ್ನೂ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವ ಹೊಂದಿರುವ ಸ್ಥಳವಾಗಿದೆ. ಭಾರತೀಯ ಹಿಂದೂ ಗ್ರಂಥ "ರಾಮಾಯಣ" ದ ಪ್ರಕಾರ, ಶ್ರೀ ರಾಮನನ್ನು ಸೀತೆಯಿಂದ ಬೇರೆಡೆಗೆ ಕೊಂಡೊಯ್ಯುಲು ಚಿನ್ನದ ಜಿಂಕೆಯ ರೂಪದಲ್ಲಿ ಬಂದಿದ್ದ ಮಾರಿಚ ರಾಕ್ಷಸನನ್ನು ಸಂಹರಿಸಿದ ಸ್ಥಳವೇ ಈ ಮೃಗಾವಧೆ.

ಮಲ್ಲಿಕಾರ್ಜುನ ದೇವಸ್ಥಾನ

ಮಲ್ಲಿಕಾರ್ಜುನ ದೇವಸ್ಥಾನ

PC: youtube
ರಾಕ್ಷಸನ ಸಂಹಾರದ ನಂತರ ರಾಮ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿದರು. ಇಲ್ಲಿ ಪುರಾತನ ಮತ್ತು ಸುಂದರ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ. ಮಲಹಾನಿಕರೇಶ್ವರ ಎಂಬ ಮೂಲ ಹೆಸರಿನ ಈ ದೇವಾಲಯವೇ ಇಂದು ಮಲ್ಲಿಕಾರ್ಜುನ ದೇವಸ್ಥಾನವಾಗಿ ಪ್ರಸಿದ್ಧವಾಗಿದೆ . ಮಲ್ಲಿಕಾರ್ಜುನ ಸ್ವಾಮಿಯು ತುಂಗಾ ನದಿಯಲ್ಲಿದ್ದಾನೆ. ನಾಲ್ಕುವರೆ ಅಡಿ ಎತ್ತರದ ಶಿವಲಿಂಗ ಇಲ್ಲಿನ ವಿಶೇಷತೆಯಾಗಿದೆ.

ಇತರ ದೇವಾಲಯಗಳು

ಇತರ ದೇವಾಲಯಗಳು

PC: youtube
ಮೃಗಾವಧೆಯಲ್ಲಿರುವ ಶನೀಶ್ವರ ದೇವಾಲಯವೂ ಮಲೆನಾಡಿನಲ್ಲಿ ಪ್ರಸಿದ್ಧಿ ಹೊಂದಿದೆ. ಅತಿ ಹೆಚ್ಚು ಭಕ್ತರು ಈ ದೇವರ ದರ್ಶನಕ್ಕೆ ಬರುತ್ತಾರೆ. ಇದಲ್ಲದೇ ಈ ದೇವಸ್ಥಾನದಲ್ಲಿ ಶಂಕರೇಶ್ವರ, ಉಗ್ರ ನರಸಿಂಹ, ಆಂಜನೇಯ ಮತ್ತು ಪಂಜುರ್ಲಿ ದೇವಾಲಯಗಳೂ ಇವೆ.

 ಅಗ್ರಹಾರಗಳಿದ್ದವು

ಅಗ್ರಹಾರಗಳಿದ್ದವು

PC: youtube
ಈ ಗ್ರಾಮದಲ್ಲಿ ಅಗ್ರಹಾರಗಳಿದ್ದವು ಎನ್ನುವುದಕ್ಕೆ ಕುರುಹುಗಳಿವೆ. ಇಲ್ಲಿ ದೊರೆತಿರುವ ಕೆಲವು ನಿವೇಶನಗಳು, ಬಂಡೆಗಳ ಮೇಲಿನ ಚಿತ್ರಗಳು ಇವೆಲ್ಲಾ ದೊರೆತಿದ್ದರೂ ಸೂಕ್ತ ಸಂಶೋಧನೆ ನಡೆಯದ ಕಾರಣ ಇಲ್ಲಿನ ಇತಿಹಾಸ ಇನ್ನೂ ಬೆಳಕಿಗೆ ಬಂದಿಲ್ಲ.

ಪ್ರಸಾದ ವ್ಯವಸ್ಥೆ

ಪ್ರಸಾದ ವ್ಯವಸ್ಥೆ

PC: youtube
ಶಿವಮೊಗ್ಗದಿಂದ 60ಕಿ ಮೀ ಮತ್ತು ತೀರ್ಥಹಳ್ಳಿಯಿಂದ 26ಕಿ ಮೀ ದೂರವಿದೆ . ಒಂದು ದಿನದ ಪಿಕ್ನಿಕ್ ಗೆ ಸೂಕ್ತವಾದ ಜಾಗವಾಗಿದೆ. ಭಾನುವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಉಳಿದ ದಿನಗಳಲ್ಲಿ ಭೇಟಿ ನೀಡುವವರ ಸಂಖ್ಯೆ ಹೆಚ್ಚೇನು ಇರುವುದಿಲ್ಲ. ಭಾನುವಾರ ಮಧ್ಯಾಹ್ನ ಈ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಕೂಡ ಇದೆ .

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: youtube
ಶಿವಮೊಗ್ಗ ಟೌನ್ ರೇಲ್ ವೇ ಸ್ಟೇಶನ್ (ಶಿವಮೊಗ್ಗ ಸಮೀಪ) ರೈಲು ಮಾರ್ಗಗಳು ಪಟ್ಟಣಗಳಿಂದ ಸಮೀಪದಿಂದ ತಲುಪಬಹುದು. ತೀರ್ಥಹಳ್ಳಿ, ಶೃಂಗೇರಿ, ಶಿವಮೊಗ್ಗ ಪಟ್ಟಣಗಳು ಮೃಗಾವಧೆಗೆ ರಸ್ತೆ ಸಂಪರ್ಕವನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X