» »90 ಡಿಗ್ರಿ ಕೋನದ ತುದಿಯಲ್ಲಿ ಪರ್ವತಾರೋಹಣ....

90 ಡಿಗ್ರಿ ಕೋನದ ತುದಿಯಲ್ಲಿ ಪರ್ವತಾರೋಹಣ....

Written By:

ಟ್ರೆಕ್ಕಿಂಗ್ ಮಾಡುವುದು ಎಂದರೆ ಯುವಕರಿಗೆ ಬಲು ಇಷ್ಟ. ಯಾವುದಾದರು ಬೆಟ್ಟ ನೋಡಿದರೆ ಸಾಕು ಆಗಲೇ ಏರಲು ಪ್ರಾರಂಭಿಸಿಬಿಡುತ್ತಾರೆ.

ಹಾಗಾದರೆ ಕೇಳಿ ನಿಮ್ಮ ಜೀವನದಲ್ಲಿ ಎಂದೂ ಕಾಣಲಾಗದಂತಹ ಟ್ರೆಕ್ಕಿಂಗ್ ನೀವು ಇಲ್ಲಿ ಪಟೆಯಬಹುದು.

ಹುಷಾರ್!! ಕಾಲು ಜಾರಿದರೆ ಶಿವನ ಪಾದಕ್ಕೆ ಸೇರುವುದಂತು ಖಂಡಿತ. ಹಾಗಾದರೆ ಅದು ಎಲ್ಲಿದೆ?

ಹರಿಹರ ಕೋಟೆ ಮಹಾರಾಷ್ಟ್ರದಲ್ಲಿನ ನಾಸಿಕ್ ಜಿಲ್ಲೆಯಲ್ಲಿನ ಒಂದು ಸುಂದರವಾದ ಕೋಟೆ.

ಈ ಹರಿಹರ ಕೋಟೆಯು ಇಗಾತ್ಪುರಿನಿಂದ 48 ಕಿ.ಮೀ ದೂರದಲ್ಲಿದೆ.

ಇದು 90 ಡಿಗ್ರಿ ಕೋನದಲ್ಲಿ ಇರುವ ಅದ್ಭುತವಾದ ಹಾಗು ಭಯಾನಕವಾದ ಪರ್ವತ ಅವರೋಹಣವಾಗಿದೆ.

ಹರಿಹರ ಕೋಟೆ

ಹರಿಹರ ಕೋಟೆ

ಇದು ಮಹಾರಾಷ್ಟ್ರ ರಾಜ್ಯದಲ್ಲಿನ ಆನೇಕ ಚಾರಿತ್ರಿಕವಾದ ಕೋಟೆಯಲ್ಲಿ ಇದು ಕೂಡ ಒಂದಾಗಿದೆ.


PC: en.wikipedia.org

ಹರಿಹರ ಕೋಟೆ

ಹರಿಹರ ಕೋಟೆ

ಇದು ಸಮುದ್ರ ಮಟ್ಟದಿಂದ ಸುಮಾರು 3676 ಅಡಿ ಎತ್ತರದಲ್ಲಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಅತ್ಯಂತ ಸುಂದರವಾಗಿದೆ.


PC:en.wikipedia.org

ಮಾರ್ಗ

ಮಾರ್ಗ

ಈ ಸುಂದರವಾದ ಪರ್ವತಕ್ಕೆ ತೆರಳಲು ಮಹಾರಾಷ್ಟ್ರದ ಪೂಣೆಯಿಂದ ನಾಸಿಕ್‍ಗೆ ಸುಮಾರು 250 ಕಿ.ಮೀ ಇರುತ್ತದೆ. ಈ ಮಾರ್ಗದ ಮುಖಾಂತರ ಹರಿಹರ ಕೋಟೆ ಸುಲಭವಾಗಿ ಸೇರಿಕೊಳ್ಳಬಹುದಾಗಿದೆ. 195 ಕಿ.ಮೀ ದೂರದಲ್ಲಿರುವ ಮುಂಬೈನಿಂದ ತ್ರಯಂಬಕ್ ಮಾರ್ಗವಾಗಿ ಕೂಡ ಈ ಕೋಟೆಯನ್ನು ತಲುಪಬಹುದಾಗಿದೆ.


PC:en.wikipedia.org

ಪರ್ವತಾರೋಹಣ

ಪರ್ವತಾರೋಹಣ

ಸುಮಾರು 7 ಕಿ.ಮೀ ದೂರ ಟ್ರೆಕ್ಕಿಂಗ್ ಮಾಡಬೇಕಾಗಿರುತ್ತದೆ. ಇದೊಂದು ದೀರ್ಘವಾದ ಹಾಗು ಭಯಾನಕವಾದ ಟ್ರೆಕ್ಕಿಂಗ್ ಆಗಿದೆ. ಆದರೆ ಇಲ್ಲಿ ಟ್ರೆಕ್ಕಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಇದಕ್ಕೆ ಸುಮಾರು 3 ಗಂಟೆಯಿಂದ 3.5 ಗಂಟೆ ತಗಲುತ್ತದೆ.

PC:en.wikipedia.org

ಚಿಕ್ಕ ಮಾರ್ಗಗಳು

ಚಿಕ್ಕ ಮಾರ್ಗಗಳು

ಇಲ್ಲಿ ಮಾರ್ಗಗಳು ಅತ್ಯಂತ ಚಿಕ್ಕದಾಗಿರುತ್ತದೆ. ಪ್ರಯಾಣ ಮಾಡುವುದು ತುಂಬ ಕಷ್ಟಕರವಾದುದು.

PC:en.wikipedia.org

ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ

ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ. ಎಷ್ಟು ಕಷ್ಟವಾದ ದಾರಿಯಲ್ಲಿ ಟ್ರೆಕ್ಕಿಂಗ್ ಮಾಡುತ್ತಾ ಇದ್ದಾರೆ ಎಂದು. ಆದರೆ ಇಲ್ಲಿನ ತಂಪಾದ ಗಾಳಿ, ಮೋಡಗಳ ಸೌಂದರ್ಯಕ್ಕೆ ಬೆರಗಾಗದೇ ಯಾರು ಇರಲಾರರು.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಸೊಲ್ಲಾಪುರ್, ಮುಂಬೈ ಮಾರ್ಗದಲ್ಲಿ 11 ಗಂಟೆ 36 ನಿಮಿಷ ಕಾಲ ತೆಗೆದುಕೊಳ್ಳುತ್ತದೆ.

ವಿಮಾನ ಮಾರ್ಗ

ವಿಮಾನ ಮಾರ್ಗ

ಬೆಂಗಳೂರಿನಿಂದ ಇಲ್ಲಿಗೆ ಸುಮಾರು 1 ಗಂಟೆ ಕಾಲವಕಾಶ ತೆಗೆದುಕೊಳ್ಳುತ್ತದೆ.

Please Wait while comments are loading...