• Follow NativePlanet
Share
» »ಇವು ಬೆಂಗಳೂರಿನ ಭಯಾನಕವಾದ ಸ್ಥಳಗಳು

ಇವು ಬೆಂಗಳೂರಿನ ಭಯಾನಕವಾದ ಸ್ಥಳಗಳು

Written By:

ಬೆಂಗಳೂರು ನಮ್ಮ ಕರ್ನಾಟಕದ ಕೇಂದ್ರ ಬಿಂದು. ಈ ಸ್ಥಳಕ್ಕೆ ಬರುಲು ಹಲವಾರು ಜನರು ಇಷ್ಟ ಪಡುತ್ತಾರೆ. ಬೆಂಗಳೂರಿನಲ್ಲಿ ಎಲ್ಲಾ ಜಾತಿ, ಧರ್ಮ, ಪ್ರಾಂತ್ಯ ಎಂಬ ಭೇದ ಭಾವವಿಲ್ಲದೇ ಇಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬೆಂಗಳೂರನ್ನು ಗಾರ್ಡನ್ ಸಿಟಿ, ಸಿಲಿಕಾನ್ ವ್ಯಾಲಿ ಎಂದೆಲ್ಲಾ ಕರೆಯುತ್ತಾರೆ. ನಮ್ಮ ಬೆಂಗಳೂರು ಏಷ್ಯಾದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ "ಕಾಸ್ಮೋಪಾಲಿಟನ್ ನಗರ". ಇಡೀ ಭಾರತೀಯ ಖಂಡದ ಅತ್ಯಂತ ರೋಮಾಂಚನಕಾರಿ ನಗರ ಎಂದು ಕರೆಯುತ್ತಾರೆ.

4 ತಿಂಗಳ ಕಾಲ ಮಾತ್ರ ಭೂಮಿಯ ಮೇಲಿರುವ ವಿಚಿತ್ರವಾದ ದೇವಾಲಯ

ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ಈ ಸ್ಥಳಕ್ಕೆ ಬಂದು ನೆಲೆಸುತ್ತಾರೆ. ಇಲ್ಲಿನ ಸುಂದರವಾದ ವಾತಾವರಣ ಭಾರತದಲ್ಲಿನ ಎಲ್ಲಾ ನಾಗರೀಕರಿಗೂ ಪ್ರಿಯವಾದುದು. ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಮಾಲ್‍ಗಳು, ಕೈಗಾರಿಕೆಗಳು, ಸುಂದರವಾದ ಅಭಯಾರಣ್ಯಗಳು, ಪಾರ್ಕ್‍ಗಳು ಇನ್ನೂ ಹಲವಾರು ಆಕರ್ಷಣೆಗಳನ್ನು ನಾವು ದಿನನಿತ್ಯ ಕಾಣುತ್ತಲೇ ಇರುತ್ತೇವೆ. ಹಾಗೆಯೇ ಬೆಂಗಳೂರಿನಲ್ಲಿ ಈ ಸುಂದರವಾದ ಸ್ಥಳಗಳ ಜೊತೆ ಜೊತೆಗೆ ಭಯಾನಕವಾದ ಸ್ಥಳಗಳೂ ಇವೆ ಎಂದು ನಿಮಗೆ ಗೊತ್ತೆ?

ಸಾಮಾನ್ಯವಾಗಿ ಆ ಸ್ಥಳಕ್ಕೆ ತೆರಳಲು ಹಲವಾರು ಜನರು ಹೆದರುವುದಂಟು. ಅಂತಹ ಸ್ಥಳಗಳು ಯಾವುವು? ಅವು ಎಲ್ಲಿವೆ? ಆ ಕಟ್ಟಡಗಳ ಅಥವಾ ಸ್ಥಳಗಳ ಹಿಂದಿನ ಕಥೆ ಏನು? ಎಂಬ ಹಲವಾರು ಪ್ರೆಶ್ನೆಗೆ ಲೇಖನದ ಮೂಲಕ ತಿಳಿದುಕೊಳ್ಳಿ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಂತ ಪ್ರಸಿದ್ಧವಾದ ಸ್ಥಳವಾಗಿದೆ. ಈ ಸ್ಥಳವು ಸುಮಾರು 2008 ರಿಂದಲೂ ಕೂಡ ಬೆಂಗಳೂರಿನ ಅತ್ಯಂತ ಅಕರ್ಷಣೀಯ ಸ್ಥಳವಾಗಿದೆ. ಇಂತಹ ಸ್ಥಳದಲ್ಲಿ ಬಿಳಿ ಸೀರೆಯನ್ನು ಧರಿಸಿರುವ ಒಂದು ಮಹಿಳೆಯು ಕೂದಲನ್ನು ಸಡಿಲವಾಗಿ ಬಿಟ್ಟುಕೊಂಡು ಓಡಾಡುವ ದೃಶ್ಯವನ್ನು ಕಂಡಂತೆ ಸ್ವತಃ ಪೈಲೆಟ್‍ಗಳೇ ಹೇಳುತ್ತಾರೆ.


PC:Ashwin Kumar

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಹಾಗೆಯೇ ಆತ್ಮದ ಚಿತ್ರ ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿ ತಿಳಿಸುತ್ತಾರೆ. ಆಶ್ಚರ್ಯ ಏನಪ್ಪ ಎಂದರೆ ಟ್ಯಾಕ್ಯಿಯ ಚಾಲಕರಿಗೂ ಕೂಡ ಈ ಆತ್ಮ ಕಾಣಿಸಿದೆ ಎಂತೆ. ಅದು ಹೇಗೆ ಎಂದರೆ ಟ್ಯಾಕ್ಯಿಯಲ್ಲಿ ಕುಳಿತು ಇದ್ದಕ್ಕಿದ್ದ ಹಾಗೆ ಮರೆಯಾಗುವ ಅನುಭವವನ್ನು ಹಲವಾರು ಟ್ಯಾಕ್ಸಿ ಚಾಲಕರ ಅನುಭವನ್ನು ಪಡೆದಿದ್ದಾರೆ.

PC:Herry Lawford

ಸೆಂಟ್ ಜಾನ್ ಸ್ಮಶಾನ

ಸೆಂಟ್ ಜಾನ್ ಸ್ಮಶಾನ

ಸ್ಮಶಾನವೆಂದರೆ ಪ್ರತಿಯೊಂದು ಮಾನವನು ತನ್ನ ಜೀವನದ ಮುಗಿದ ನಂತರ ಕೊನೆಗೆ ಸೇರುವ ಸ್ಥಳ. ಸಾಮಾನ್ಯವಾಗಿ ಸ್ಮಶಾನಗಳು ಎಂದರೆ ಎಲ್ಲರಿಗೂ ಭಯ ಮೂಡಿಸುವಂಹದು. ಯಾವುದೇ ಒಬ್ಬ ಜೀವಿಯು ಆ ಸ್ಥಳಕ್ಕೆ ರಾತ್ರಿಯ ಸಮಯದಲ್ಲಿ ಭೇಟಿ ಮಾಡಲು ಹೆದರುತ್ತಾನೆ. ಕೆಲವು ಧೈರ್ಯವಂತರು ಇರಬಹುದು. ಆದರೆ ಈ ಸ್ಮಶಾನ ಬೇರೆ ಸ್ಮಶಾನಗಳಂತೆ ಅಲ್ಲ, ಬದಲಾಗಿ ಇದೊಂದು ಭಯಾನಕವಾದ ಸ್ಥಳವೆಂದೇ ಹೇಳಬಹುದು.


PC:Campbelltown City Council

ಸೆಂಟ್ ಜಾನ್ ಸ್ಮಶಾನ

ಸೆಂಟ್ ಜಾನ್ ಸ್ಮಶಾನ

ಆನೇಕ ಮಂದಿ ಈ ಸ್ಥಳವನ್ನು ಪರೀಕ್ಷಿಸಲು ಹೋಗಿ ಹಲವಾರು ರೀತಿಯ ಭಯಾನಕವಾದ ಅನುಭವವನ್ನು ಪಡೆದಿದ್ದಾರೆ. ಇಲ್ಲಿ ಅಗೋಚರ ಶಕ್ತಿಗಳು ತಿರುಗುತ್ತಾ ಇರುವುದನ್ನು ಸ್ವತಃ ಸಂದರ್ಶಕರು ಗಮನಿಸಿದ್ದಾರಂತೆ. ರಾತ್ರಿಯ ಸಮಯದಲ್ಲಿ ಮಾತ್ರ ಈ ಸ್ಥಳವು ಅತ್ಯಂತ ಭಯಾನಕವಾಗಿರುತ್ತದೆ ಎಂತೆ. ಇದೊಂದು ಮೋಸ್ಟ್ ಹಂಟೆಡ್ ಪ್ಲೆಸ್ ಎಂದೂ ಕೂಡ ಕರೆಯುತ್ತಾರೆ.

PC:William Murphy

ವಿಕ್ಟೋರಿಯಾ ಆಸ್ಪತ್ರೆ

ವಿಕ್ಟೋರಿಯಾ ಆಸ್ಪತ್ರೆ

ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆ ತನ್ನದೇ ಆದ ಸೇವೆಯನ್ನು ಒದಗಿಸುತ್ತಿದೆ. ಈ ಆಸ್ಪತ್ರೆಯ ಅವರಣದಲ್ಲಿ ಪ್ರೇತಾತ್ಮವು ತಿರುಗುತ್ತಿರುತ್ತಿರುತ್ತದೆ ಎಂದು ನಂಬಲಾಗಿದೆ. ಇದು ಬೆಂಗಳೂರು ನಗರದ ಮಾರುಕಟ್ಟೆ ಸಮೀಪದಲ್ಲಿರುವ ಒಂದು ಶತಮಾನಕ್ಕಿಂತ ಹಳೆಯದಾದ ಆಸ್ಪತ್ರೆಯಾಗಿದೆ. ಈ ಸ್ಥಳದಲ್ಲಿ ಹಲವಾರು ಆಗೋಚರ ಶಕ್ತಿಗಳ ಅನುಭವವನ್ನು ಅನುಭವಿಸಿದ್ದಾರೆ.


PC:Adbutha

ವಿಕ್ಟೋರಿಯಾ ಆಸ್ಪತ್ರೆ

ವಿಕ್ಟೋರಿಯಾ ಆಸ್ಪತ್ರೆ

ಇಲ್ಲಿ ಆಹಾರದ ಪ್ಯಾಕೆಟ್‍ಗಳು ಇದ್ದಕ್ಕಿದ್ದ ಹಾಗೆ ಕಳೆದು ಹೋದ ಘಟನೆಗಳು ನಡೆದಿವೆ ಎಂತೆ. ಕೇವಲ ಆಹಾರದ ಪ್ಯಾಕೆಟ್‍ಗಳೇ ಅಲ್ಲದೇ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ರಾತ್ರಿಯ ಸಮಯದಲ್ಲಿ ಒಬ್ಬ ಮಹಿಳೆ ಕಾಣಿಸಿಕೊಂಡಿರುವ ಕಹಿ ಅನುಭವವನ್ನು ಹೇಳುತ್ತಾರೆ. ಆ ಮಹಿಳೆ ಪ್ರೇತವಾಗಿದ್ದು, ಹಲವಾರು ವರ್ಷಗಳ ಹಿಂದೆ ಅದೇ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಕಾರಣ ಇಲ್ಲಿಯೇ ಇದೆ ಎಂದು ಕೆಲವರು ಹೇಳುತ್ತಾರೆ.


PC:Wiele's Studio

ಟೆರ್ರಾ ವೆರಾ

ಟೆರ್ರಾ ವೆರಾ

ಇದೊಂದು ಭಯಾನಕವಾದ ಸ್ಥಳವಾಗಿದ್ದು, ಇದೊಂದು ಬಂಗಲೆಯಾಗಿದೆ. ಬೆಂಗಳೂರಿನ ಸೇಂಟ್ ಮಾಕ್ರ್ಸ್ ರಸ್ತೆಯ ಬಳಿ ಇರುವ ಈ ಭಯಾನಕವಾದ ಕಟ್ಟಡವು ಇಂದಿಗೂ ಪಾಳು ಬಿದ್ದ ರೀತಿಯಲ್ಲಿಯೇ ಇದೆ. ಇಲ್ಲಿ ವಿಚಿತ್ರವಾದ ಶಬ್ಧಗಳು ಹಾಗು ಘಟನೆಗಳು ನಡೆಯುತ್ತಿರುತ್ತವೆ. ಈ ಕಟ್ಟಡಕ್ಕೆ ಒಂದು ಕೊಲೆಯಾದ ಯುವತಿಯ ಕಥೆ ಇದೆ. ಅದೇನೆಂದರೆ..

ಟೆರ್ರಾ ವೆರಾ

ಟೆರ್ರಾ ವೆರಾ

ಬೆಂಗಳೂರಿನ ಈ ಕಟ್ಟಡದಲ್ಲಿ ಇಬ್ಬರು ಸಹೋದರಿಯರು ವಾಸಿಸುತ್ತಿದ್ದರು. ಅವರ ಹೆಸರು ವೆರಾ ವಾಜ್ ಮತ್ತು ಡೊಲ್ಸ್ ವಾಜ್. ಇಬ್ಬರು ಸಹೋದರಿಯರಲ್ಲಿ ಒಬ್ಬಳಾದ ಡೊಲ್ಸಾ ವಾಜ್‍ಳನ್ನು 2002 ರಲ್ಲಿ ಕ್ರೂರವಾಗಿ ಹತ್ಯೆ ಮಾಡಲಾಗುತ್ತದೆ. ಈ ಹತ್ಯೆಯು ಅಪರಿಚಿತ ವ್ಯಕ್ತಿಗಳಿಂದ ಆಗಿರುತ್ತದೆ. ಕೆಲವು ಭಯಾನಕವಾದ ಘಟನೆಗಳಿಂದಾಗಿ ವೆರಾ ವಾಜ್ ಮನೆಯನ್ನು ಬಿಟ್ಟು ಹೊರ ಬರುತ್ತಾಳೆ. ಆದರೆ ಈ ಮನೆಯಲ್ಲಿ ಮಾತ್ರ ವಿಚಿತ್ರವಾದ ಘಟನೆಗಳ ಜೊತೆ ಜೊತೆಗೆ ಪ್ರೇತಾತ್ಮದ ಚಿಹ್ನೆಯನ್ನು ಕಾಣಬಹುದಾಗಿದೆ ಎಂತೆ.

ಎಮ್.ಜಿ ರೋಡ್, ಕಾಲ್ ಸೆಂಟರ್

ಎಮ್.ಜಿ ರೋಡ್, ಕಾಲ್ ಸೆಂಟರ್

ಎಮ್.ಜಿ ರೋಡ್ ಬೆಂಗಳೂರಿನ ಅತ್ಯಂತ ಹೆಸರುವಾಸಿ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಯೂ ಕೂಡ ಅತ್ಯಂತ ಭಯಾನಕವಾದ ಘಟನೆಗಳನ್ನು ಕಾಣಬಹುದಾಗಿದೆ. ಅದೆನೆಂದರೆ ಎಮ್.ಜಿ ರೋಡ್‍ನ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಓರ್ವ ಮಹಿಳೆಯು ದಾರಿಯಲ್ಲಿ ಕುಡಿದು ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಯಿಂದ ಮರಣ ಹೊಂದಿದಳು.


PC:Kprateek88

ಎಮ್.ಜಿ ರೋಡ್, ಕಾಲ್ ಸೆಂಟರ್

ಎಮ್.ಜಿ ರೋಡ್, ಕಾಲ್ ಸೆಂಟರ್

ಆದರೆ ಆ ವ್ಯಕ್ತಿಯು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ. ಇದರಿಂದಾಗಿ ಅ ಮಹಿಳೆ ಅಲ್ಲಿಯೇ ಪ್ರಾಣ ಬಿಟ್ಟಳು. ಆ ದಿನದಿಂದ ಕಾಲ್ ಸೆಂಟರ್‍ನ ಆ ಮಹಿಳೆಯು ಪ್ರತಿ ದಿನ ರಾತ್ರಿ ಮಹಿಳೆ ಅಳುವ ಧ್ವನಿಯನ್ನು ಹಲವಾರು ಸ್ಥಳೀಯ ಜನರು ಕೇಳಿಸಿಕೊಂಡಿದ್ದಾರಂತೆ. ಇದೊಂದು ಭಯಂಕರವಾದ ಸ್ಥಳವಾಗಿ ಮಾರ್ಪಾಟಾಗಿದೆ.


PC:Varun Shiv Kapur

ಎನ್.ಎಚ್ 4 ರೋಡ್

ಎನ್.ಎಚ್ 4 ರೋಡ್

ಪ್ರತಿಯೊಬ್ಬರು ಹೆದ್ದಾರಿಯಲ್ಲಿ ಪ್ರಯಾಣ ಮಾಡಿಯೇ ಮಾಡುತ್ತಾರೆ. ಆದರೆ ಎನ್.ಎಚ್ 4 ನ ಕಥೆ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿದೆ. ಇದು ಅತ್ಯಂತ ಭಯಾನಕವಾದ ಹೆದ್ದಾರಿಯಾಗಿದೆ. ಈ ಹೆದ್ದಾರಿಯಲ್ಲಿ ರಾತ್ರಿಯ ಸಮಯದಲ್ಲಿ ಪ್ರಯಾಣ ಮಾಡಲು ಹೆಸರುತ್ತಾರಂತೆ. ಒಮ್ಮೆ ಒಂದು ಮಹಿಳೆ ಮಧ್ಯರಾತ್ರಿಯಲ್ಲಿ ಪ್ರಯಾಣಿಕರಿಂದ ಒಂದು ಲಿಫ್ಟ್ ಕೇಳಿಕೊಳ್ಳುತ್ತಾಳಂತೆ.

ಎನ್.ಎಚ್ 4 ರೋಡ್

ಎನ್.ಎಚ್ 4 ರೋಡ್

ಆ ಹೆದ್ಧಾರಿಯಲ್ಲಿ ಹೋಗುವವರಿಗೆ ಮಹಿಳೆ ಈ ವಿಳಾಸಕ್ಕೆ ಹೋಗಬೇಕು ಎಂದು ಕೇಳಿಕೊಳ್ಳುತ್ತಾಳೆ. ಆಗ ಕಾರ್‍ನಲ್ಲಿ ಕುಳಿತುಕೊಳ್ಳಲು ಹೇಳುತ್ತಾರೆ. ನೋಡಿದರೆ ಅ ಮಹಿಳೆ ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗುತ್ತಾಳೆ. ಇಂಥಹ ಸನ್ನಿವೇಶ ಹಲವಾರು ಪ್ರಯಾಣಿಕರು ಈ ದಾರಿಯಲ್ಲಿ ಅನುಭವಿಸಿದ್ದಾರೆ ಎಂದು ಹೇಳುತ್ತಾರೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more