Search
  • Follow NativePlanet
Share
» »ಸಿನಿಮಾ ಶೂಟಿಂಗ್ಸ್‍ಗಳಿಗೆ ಸೂಕ್ತವಾದ ಜಲಪಾತಗಳಿವು..!!

ಸಿನಿಮಾ ಶೂಟಿಂಗ್ಸ್‍ಗಳಿಗೆ ಸೂಕ್ತವಾದ ಜಲಪಾತಗಳಿವು..!!

ಪ್ರಸ್ತುತ ದಿನಗಳಲ್ಲಿ ಸಿನಿಮಾ ನೋಡುವುದು ಸಾಧಾರಣವಾದುದು. ಆದರೆ ಅದರಲ್ಲಿನ ದೃಶ್ಯಗಳು ವಿವಿಧ ಪ್ರದೇಶಗಳಲ್ಲಿ ಷೋಟಿಂಗ್ ಮಾಡಲಾಗುತ್ತದೆ. ದೃಶ್ಯಗಳು ಎಷ್ಟೋ ಆಕರ್ಷಣಿಯುತವಾಗಿರುತ್ತದೆ. ಒಂದು ಸಿನಮಾ ಅದರ ಅದ್ಭುತವಾದ ದೃಶ್ಯಗಳಿಂದಲೇ ಕೆಲವೊಮ್ಮೆ ಹ

ಪ್ರಸ್ತುತ ದಿನಗಳಲ್ಲಿ ಸಿನಿಮಾ ನೋಡುವುದು ಸಾಧಾರಣವಾದುದು. ಆದರೆ ಅದರಲ್ಲಿನ ದೃಶ್ಯಗಳು ವಿವಿಧ ಪ್ರದೇಶಗಳಲ್ಲಿ ಷೋಟಿಂಗ್ ಮಾಡಲಾಗುತ್ತದೆ. ದೃಶ್ಯಗಳು ಎಷ್ಟೋ ಆಕರ್ಷಣಿಯುತವಾಗಿರುತ್ತದೆ. ಒಂದು ಸಿನಮಾ ಅದರ ಅದ್ಭುತವಾದ ದೃಶ್ಯಗಳಿಂದಲೇ ಕೆಲವೊಮ್ಮೆ ಹಿಟ್ ಆಗುವುದುಂಟು. ಸಾಕಷ್ಟು ಸಿನಿಮಾಗಳು ಆಯ್ಕೆ ಮಾಡಿಕೊಳ್ಳುವ ಸ್ಥಳಗಳಲ್ಲಿ ಜಲಪಾತಗಳ ದೃಶ್ಯಗಳು ಇರುತ್ತವೆ. ಉದಾಹರಣೆಗೆ ಮುಂಗಾರು ಮಳೆ, ಗಾಳಿಪಟ ಎಷ್ಟು ಸೊಗಸದ ಜಲಪಾತಗಳ ದೃಶ್ಯಗಳನ್ನು ಹೊಂದಿವೆ ಅಲ್ಲವೇ?

ಅದರಲ್ಲಿಯೂ ಬಾಲಿವುಡ್ ಯೂನಿಟ್‍ಗಳು ಎಷ್ಟೋ ಶ್ರಮ ವಹಿಸಿ ಅದ್ಭುತವಾದ ಜಲಪಾತಗಳನ್ನು ಆಯ್ದುಕೊಂಡು ಸಿನಿಮಾಗಳನ್ನು ವಿಜಯವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಬಾಲಿವುಡ್‍ನ ಮುಖ್ಯ ಸಿನಿಮಾ ನಟನಾದ ಷಾರುಖ್ ಖಾನ್ ಅಥವಾ ಕರೀನಾ ಕಪೂರ್‍ನಂತಹ ದೊಡ್ಡ ದೊಡ್ಡ ನಟರು ಒಂದು ಜಲಪಾತದ ಸಮೀಪದಲ್ಲಿ ರೊಮ್ಯಾನ್ಸ್ ಅಥವಾ ನೃತ್ಯ ಮಾಡುತ್ತಿರುವ ಸನ್ನೀವೇಶ ಕಂಡರೆ ಪ್ರೇಕ್ಷಕರಿಗೆ ಆ ದೃಶ್ಯ ಹಬ್ಬವೇ ಸರಿ.

ಇತರ ದೇಶಗಳಿಗಿಂತ ನಮ್ಮ ಭಾರತ ದೇಶದಲ್ಲಿಯೇ ಸಿನಿಮಾದ ಪ್ರಭಾವ ನಮ್ಮ ಜೀವನದ ಮೇಲೆ ಅಧಿಕವಾಗಿ ಕಾಣಿಸುತ್ತದೆ. ಹಾಗಾದರೆ ಬಾಲಿವುಡ್ ಸಿನಿಮಾಗಳಿಗಾಗಿ ಆಯ್ದುಕೊಳ್ಳುವ ಪ್ರದೇಶಗಳನ್ನು ಎಲ್ಲಿ ಇವೆ ಎಂಬುದನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಿನಿಮಾ ಶೂಟಿಂಗ್ಸ್‍ಗಳಿಗೆ ಸೂಕ್ತವಾದ ಜಲಪಾತಗಳಿವು..!!

ಸಿನಿಮಾ ಶೂಟಿಂಗ್ಸ್‍ಗಳಿಗೆ ಸೂಕ್ತವಾದ ಜಲಪಾತಗಳಿವು..!!

ಅತಿರಾಪಲ್ಲಿ ಜಲಪಾತವು ಭಾರತ ದೇಶದಲ್ಲಿನ ಆಗ್ನೇಯ ತೀರದಲ್ಲಿನ ಕೇರಳದಲ್ಲಿನ ತಿಸ್ಸೂರ್ ಜಿಲ್ಲೆಯಲ್ಲಿದೆ. ಈ ಜಲಪಾತವು ಪಶ್ಚಿಮ ದಿಕ್ಕಿನಲ್ಲಿರುವ ಅನಮುಡಿ ಪರ್ವತ ಶ್ರೇಣಿಗಳಿಂದ ಪ್ರವಹಿಸುವ ಚಲಕೂಡಿ ನದಿನಿಂದ ಬೀಳುತ್ತದೆ. ಅತಿರಪಲ್ಲಿ ಜಲಪಾತವನ್ನು ಭಾರತದ ನಯಾಗರ ಎಂದು ಕೂಡ ಕರೆಯುತ್ತಾರೆ. ಈ ಜಲಪಾತದ ಸೌಂದರ್ಯವನ್ನು ಕಣ್ಣಾರೆ ಕಂಡೇ ಅಸ್ವಾಧಿಸಬೇಕು. ಈ ಸುಂದರವಾದ ಸ್ಥಳದಲ್ಲಿ ಅನೇಕ ಸಿನಿಮಾ ಶೂಟಿಂಗ್ ಮಾಡಲು ಸೂಕ್ತವಾದ ಸ್ಥಳಗಳಲ್ಲಿ ಇದು ಕೂಡ ಒಂದು ಎಂದೇ ಹೇಳಬಹುದು.

ಸಿನಿಮಾ ಶೂಟಿಂಗ್ಸ್‍ಗಳಿಗೆ ಸೂಕ್ತವಾದ ಜಲಪಾತಗಳಿವು..!!

ಸಿನಿಮಾ ಶೂಟಿಂಗ್ಸ್‍ಗಳಿಗೆ ಸೂಕ್ತವಾದ ಜಲಪಾತಗಳಿವು..!!

ಅತಿರಾಪಲ್ಲಿ ಜಲಪಾತದ ಸಮೀಪದಲ್ಲಿ ಬಾಲಿವುಡ್ ಚಿತ್ರಗಳನ್ನು ಶೂಟ್ ಮಾಡುತ್ತಾರೆ. ಅವುಗಳಲ್ಲಿ ಮೊಟ್ಟ ಮೊದಲನೇಯದು ಮಣಿರತ್ನಂ ತೆಗೆದ "ದಿಲ್ ಸೆ" ಸಿನಿಮಾ. ರಾವನ್ ಸಿನಿಮಾದಲ್ಲಿನ "ಬೆಹೋ ನೆ ಡೆ" ಕೂ ಈ ಜಲಪಾತದಲ್ಲಿಯೇ ಚಿತ್ರಿಕರಣವನ್ನು ತೆಗೆದಿದ್ದಾರೆ. "ಗುರು" ಸಿನಿಮಾ ತೆಗೆದ ಸಿನಿಮಾಟೋಗ್ರಫರ್ ರಾಜೀವ್ ಮಿನನ್, ಈ ಜಲಪಾತದ ದೃಶ್ಯವನ್ನು ಅನೇಕ ಸ್ಥಳಗಳಲ್ಲಿ ಉಪಯೋಗಿಸಿದ್ದಾರೆ.

PC:isapisa

ಸಿನಿಮಾ ಶೂಟಿಂಗ್ಸ್‍ಗಳಿಗೆ ಸೂಕ್ತವಾದ ಜಲಪಾತಗಳಿವು..!!

ಸಿನಿಮಾ ಶೂಟಿಂಗ್ಸ್‍ಗಳಿಗೆ ಸೂಕ್ತವಾದ ಜಲಪಾತಗಳಿವು..!!

ಹೊಗೆನಕಲ್ ಜಲಪಾತವು, ಕಾವೇರಿ ನದಿಯಿಂದ ಹಾಲಿನ ನೊರೆಯಂತೆ ಧರೆಗೆ ಬೀಳುತ್ತದೆ. ಸುಂದರವಾದ ಈ ವಾಟರ್ ಫಾಲ್ಸ್ ತಮಿಳು ನಾಡಿನಲ್ಲಿನ ಧರ್ಮಪುರಿ ಜಿಲ್ಲೆಯಲ್ಲಿದೆ. ಷಾರುಖ್ ಖಾನ್- ಕರೀನಾ ಕಪೂರ್ ನಟಿಸಿದ ಅಶೋಕಾ ಸಿನಿಮಾದಲ್ಲಿನ ಕೆಲವು ದೃಶ್ಯಗಳನ್ನು ಹೊಗೆನಕಲ್ ಜಲಪಾತದಲ್ಲಿಯೇ ಚಿತ್ರಿಕರಿಸಿದ್ದಾರೆ. ಇದು ಕರ್ನಾಟಕದಲ್ಲಿನ ಸುಂದರವಾದ ಜಲಪಾತಗಳಲ್ಲಿ ಇದು ಕೂಡ ಒಂದಾಗಿದೆ. ಬೆಂಗಳೂರಿನಿಂದ ಸುಮರು 180 ಕಿ.ಮೀ ದೂರದಲ್ಲಿದೆ.

PC; Mithun Kundu

ಸಿನಿಮಾ ಶೂಟಿಂಗ್ಸ್‍ಗಳಿಗೆ ಸೂಕ್ತವಾದ ಜಲಪಾತಗಳಿವು..!!

ಸಿನಿಮಾ ಶೂಟಿಂಗ್ಸ್‍ಗಳಿಗೆ ಸೂಕ್ತವಾದ ಜಲಪಾತಗಳಿವು..!!

ದೂದ್ ಸಾಗರ್ ಒಂದು ಸುಪ್ರಸಿದ್ಧವಾದ ಪ್ರವಾಸಿ ತಾಣವೇ ಆಗಿದೆ. ದೂದ್ ಸಾಗರ್ ಎಂದರೆ ಹಾಲಿನ ಸಮುದ್ರ ಎಂಬ ಅರ್ಥವೇ ಆಗಿದೆ. ದೂದ್ ಸಾಗರ್ ಜಲಪಾತಗಳು ಮಂಡೋವಿ ನದಿಯಿಂದ ಹುಟ್ಟಿದೆ. ಈ ಜಲಪಾತವು ಕರ್ನಾಟಕ, ಗೋವಾ ಸರಿಹದ್ದುವಿನಲ್ಲಿದೆ. ಈ ಅದ್ಭುತವಾದ ಸ್ಥಳಕ್ಕೆ ಭೇಟಿ ನೀಡಬೇಕು ಎಂದರೆ ರೈಲಿನಲ್ಲಿಯೇ ತೆರಳಬೇಕು. ಚೆನ್ನೈ ಎಕ್ಸೆಪ್ರೆಸ್ ಸಿನಿಮಾದಲ್ಲಿನ ಕೆಲವು ಭಾಗಗಳು ಈ ಜಲಪಾತದಲ್ಲಿಯೇ ಚಿತ್ರಿಕರಣ ಮಾಡಿದ್ದಾರೆ.

ಸಿನಿಮಾ ಶೂಟಿಂಗ್ಸ್‍ಗಳಿಗೆ ಸೂಕ್ತವಾದ ಜಲಪಾತಗಳಿವು..!!

ಸಿನಿಮಾ ಶೂಟಿಂಗ್ಸ್‍ಗಳಿಗೆ ಸೂಕ್ತವಾದ ಜಲಪಾತಗಳಿವು..!!

ಎಷ್ಟೋ ವಿಜಯವನ್ನು ಸಾಧಿಸಿದ ಬಾಲಿವುಡ್ ಸಿನಿಮಾ ಆದ "ಕೊಯಲ್" ನಲ್ಲಿನ ಹಾಡುಗಳು ಈ ನೌರಂಗ್ ಜಲಪಾತದಲ್ಲಿಯೇ ಷಾರುಖ್-ಮಾಧುರಿ ಸಿನಿಮಾವನ್ನು ಚಿತ್ರಿಕರಣ ಮಾಡಿದ್ದಾರೆ. ಈ ಜಲಪಾತವನ್ನು ಅರುಣಾಚಲ ಪ್ರದೇಶದಲ್ಲಿನ ತವಾಂಗ್ ಜಿಲ್ಲೆಯಲ್ಲಿದೆ. ಇಲ್ಲಿ ಅನೇಕ ವಿದೇಶಿ ಚಿತ್ರಗಳನ್ನು ಕೂಡ ಚಿತ್ರಿಕರಿಸಿದ್ದಾರೆ. ಇದೊಂದು ಸುಂದರವಾದ ಪ್ರವಾಸಿ ಆಕರ್ಷಣೆಯಾಗಿದ್ದು, ಅನೇಕ ಮಂದಿ ಆಗಾಗ ಭೇಟಿ ನೀಡುತ್ತಿರುತ್ತಾರೆ.

PC:Easyvivek

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X