Search
  • Follow NativePlanet
Share
» »ಗೋವಾದ ಮಿರಾಮರ್ ಬೀಚ್‌ನಲ್ಲಿ ಅಡ್ಡಾಡಿ

ಗೋವಾದ ಮಿರಾಮರ್ ಬೀಚ್‌ನಲ್ಲಿ ಅಡ್ಡಾಡಿ

ಮಿರಾಮರ್ ಬೀಚ್ ಗೋವಾದ ಅತ್ಯಂತ ಜನಪ್ರಿಯ ಬೀಚ್‌ಗಳಲ್ಲಿ ಒಂದಾಗಿದೆ. ಪ್ರವಾಸಿಗರು ಮತ್ತು ಸ್ಥಳೀಯರು ಇದನ್ನು ಸುಲಭವಾಗಿ ತಲುಪಬಹುದು. ಪೋರ್ಚುಗೀಸರು ಪೋರ್ಟೊ ಡಿ ಗ್ಯಾಸ್ಪರ್ ಡಯಾಸ್ ಎಂದು ಹೆಸರಿಸಿದ್ದರು, ಇಂದು ಅದನ್ನು ಮಿರಮಾರ್ ಬೀಚ್ ಎಂದು ಕರೆಯಲಾಗುತ್ತದೆ. ಸ್ಥಳೀಯ ಉತ್ಸವಗಳನ್ನು ಆಚರಿಸಲು ಈ ಕಡಲತೀರಗಳು ಉತ್ತಮ ತಾಣವಾಗಿದೆ.

ಯಾವಾಗ ಭೇಟಿ ಸೂಕ್ತ

ಯಾವಾಗ ಭೇಟಿ ಸೂಕ್ತ

PC:Nikhilb239
ಮೀರಾಮರ್ ಕಡಲ ತೀರವು ಅದ್ಭುತವಾದ ಮೈಸಿರಿಯನ್ನು ಹೊಂದಿದ್ದು ನೋಡುಗರನ್ನು ಪುಳಕಿತಗೊಳಿಸುತ್ತದೆ. ಇದು ಗೋವಾದಲ್ಲಿ ಉತ್ತಮ ಸ್ಥಳದಲ್ಲಿ ರೂಪಗೊಂಡಂತಹ ಕಡಲ ತೀರಗಳಲ್ಲಿ ಒಂದಾಗಿದ್ದು, ರಾಜಧಾನಿಯಾದ ಪಣಜಿಯಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ನವಂಬರ್ ಮತ್ತು ಮಾರ್ಚ್ ಮಧ್ಯದ ಸಮಯವು ಈ ಬೀಚಿಗೆ ಭೇಟಿ ನೀಡಲು ಸೂಕ್ತವಾಗಿದ್ದು, ವಿವಿಧ ಜನಾಂಗಗಳ ಜನರ ಜೊತೆ ವಲಸೆ ಬಂದ ಹಕ್ಕಿಗಳು ಕಾಣಸಿಗುವುದರಿಂದ ಮತ್ತಷ್ಟು ಸೊಗಸಾಗಿರುತ್ತದೆ.

ಜಲ ಕ್ರೀಡೆಯನ್ನು ಆನಂದಿಸಿ

ಈ ಬೀಚ್‌ನಲ್ಲಿ ಅಂತಹ ವಿಶೇಷತೆ ಏನೂ ಇಲ್ಲ. ಅದರ ಹತ್ತಿರದಲ್ಲಿ ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾದ ಕಾಬೊ ರಾಜ್ ಭವನ ಹಿಲ್‌ ಲಾಕ್‌ ಇದೆ. ಇದು ಜಲ ಕ್ರೀಡೆಗಳಿಗೆ ಮೀಸಲಾಗಿರುವ ಒಂದು ಸ್ಥಳವಾಗಿದ್ದು, ಇಲ್ಲಿ ನೀವು ಜಲ ಕ್ರೀಡೆಗಳನ್ನು ಆನಂದಿಸಬಹುದು. ಬೀಚ್‌ ಅಂದ್ರೆ ಸಾಮಾನ್ಯವಾಗಿ ಎಲ್ಲರೂ ಮಾಡೋದೇನು? ನೀರಿನಲ್ಲಿ ಆಟವಾಡೋದು, ಸಮುದ್ರ ಕಿನಾರೆಯಲ್ಲಿ ಮರಳಿನಲ್ಲಿ ನಡೆದಾಡುವುದು.ಈಜುವುದು, ನೀವು ಕೂಡಾ ಇದರ ಮಜಾವನ್ನು ಪಡೆಯಬಹುದು.

ಮಿರಾಮರ್ ಬೀಚ್‌ನಲ್ಲಿ ಶಾಪಿಂಗ್

ಮಿರಾಮರ್ ಬೀಚ್‌ನಲ್ಲಿ ಶಾಪಿಂಗ್

PC: Nikhilb239
ಮಿರಾಮರ್‌ ಬೀಚ್‌ನಲ್ಲಿ ಶಾಪಿಂಗ್ ಮಾಡುವುದಾದರೆ ಲೋಕಲ್ ವಸ್ತುಗಳನ್ನು ಶಾಪಿಂಗ್ ಮಾಡಬಹುದು. ಹ್ಯಾಟ್, ಸ್ಕಾರ್ಫ್, ಸಮುದ್ರದ ಚಿಪ್ಪಿನ ಬಳೆಗಳು, ಡಿಸೈನರ್ ಬಟ್ಟೆ, ಜ್ಯುವೆಲ್ಲರಿ, ಶೋ ಪೀಸ್‌ಗಳನ್ನು ಖರೀದಿಸಬಹುದು. ಇವುಗಳನ್ನೆಲ್ಲಾ ಸಮುದ್ರದ ಕಿನಾರೆಯಲ್ಲಿನ ಅಂಗಡಿಗಳಲ್ಲಿ ಮಾರಾಟ ಮಾಡುತ್ತಾರೆ. ನಿಮಗೆ ಇನ್ನಷ್ಟು ವಿಭಿನ್ನ ವಾಗಿರೋ ವಸ್ತುಗಳು ಬೇಕೆಂದರೆ ನೀವು ಪಣಜಿಯಲ್ಲಿ ಹುಡುಕಬಹುದು.

ಗೋವಾದ ಫುಡ್‌ ಟ್ರೈ ಮಾಡಿ

ಗೋವಾದ ತಿನಿಸುಗಳನ್ನು ಉತ್ತಮವಾಗಿ ನಿರ್ವಹಿಸಲಾಗಿರುವ ಲೋಕಲ್ ಶಾಪ್‌ನಲ್ಲಿ ಟೇಸ್ಟ್‌ ಮಾಡಿ. ದಾರಿ ಬದಿಯ ಆಹಾರ ಸೇವಿಸುವ ಅಭ್ಯಾಸವಿದ್ದರಷ್ಟೇ ಇಲ್ಲಿಗೆ ಹೋಗಿ. ಇಲ್ಲವಾದರೆ ಉತ್ತಮವಾದ ಹೋಟೇಲ್‌ಗಳಲ್ಲೇ ಗೋವಾದ ಆಹಾರದ ರುಚಿಯನ್ನು ಸವಿಯಿರಿ.

ಬಾರ್‌, ಕ್ಲಬ್‌ಗಳೂ ಇವೆ

ಮಿರಾಮರ್‌ ಬೀಚ್‌ನಲ್ಲಿ ಕ್ಲಬ್‌ಗಳು ಮತ್ತು ಬಾರ್‌ಗಳು ಬಹಳಷ್ಟು ಇವೆ. ನೀವು ಉತ್ತಮ ರಾತ್ರಿಯ ಔತಣವನ್ನು ಹುಡುಕುತ್ತಿದ್ದರೆ, ಉತ್ತಮ ಸೇವೆಗಳನ್ನು ಒದಗಿಸುವ ಪಣಜಿ ಅಥವಾ ಡೊನಾ ಪೌಲಾಗೆ ಹೋಗಬಹುದು. ಇದು ಮಿರಾಮಾರ್ ಬೀಚ್‌ನದಕ್ಕಿಂತಲೂ ಸ್ವಲ್ಪ ದುಬಾರಿಯಾಗಿದೆ.

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC:Aruna
ಬಹಳಷ್ಟು ಸ್ಥಳಗಳು ಮಿರಮಾರ್ ಬೀಚ್‌ನ ಸುತ್ತಲೂ ಇವೆ. ಚರ್ಚ್ ಆಫ್ ಅವರ್ ಲೇಡಿ ಆಫ್ ದಿ ಇಮ್ಮ್ಯಾಕ್ಯುಲೇಟ್ ಎಂಬುದು ಒಂದು ಸುಂದರವಾದ ಚರ್ಚ್. ಈ ಚರ್ಚ್ ಇಲ್ಲಿ ನಡೆಯುವ ಆಧ್ಯಾತ್ಮಿಕ ಅರ್ಥ, ಸ್ಥಳ ಮತ್ತು ವಿವಾಹಗಳಿಗೆ ಹೆಸರುವಾಸಿಯಾಗಿದೆ. ಪೋರ್ಚುಗೀಸ್ ಯುಗದ ಪೀಠೋಪಕರಣ, ಪುರಾತನ ನಾಣ್ಯಗಳು, ಕನ್ನಡಕಗಳು, ಹಿಂದೂ ಮತ್ತು ಜೈನ ಶಿಲ್ಪಗಳು, ವಯಸ್ಸಿನ ಹಳೆಯ ಉಡುಪುಗಳು, ಚಾಕುಗಳು ಮತ್ತು ಈ ರೀತಿಯ ವಸ್ತುಗಳನ್ನು ತುಂಬಿದ ಗೋವಾ ಸ್ಟೇಟ್ ಮ್ಯೂಸಿಯಂ ಎರಡನೆಯ ಸ್ಥಾನ. ಇದು ಇತಿಹಾಸವನ್ನು ಪ್ರೀತಿಸುವವರಿಗೆ, ಪೋರ್ಚುಗೀಸ್‌ನ್ನು ಇಷ್ಟಪಡುವವರಿಗೆ ಸ್ವರ್ಗವಾಗಿದೆ. ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಯ ಕೋವೆಂಟ್ ಆವರಣದಲ್ಲಿ ಈ ಪುರಾತತ್ವ ಮ್ಯೂಸಿಯಂ ಇದೆ. ಇದು ಪ್ರವಾಸಿಗರ ನಡುವೆ ಜನಪ್ರಿಯವಾಗಿದೆ. ಸೇಂಟ್ ಲಾರೆನ್ಸ್ ಚರ್ಚ್ ಸಂಜೆ ಕಾಲಕಳೆಯಲು ಸೂಕ್ತವಾದ ತಾಣವಾಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Fredericknoronha
ಮೊದಲು ಪಣಜಿಗೆ ಬಂದು ಅಲ್ಲಿಂದ ಮಿರಾಮರ್ ಕಡಲತೀರಕ್ಕೆ ಸುಲಭವಾಗಿ ತಲುಪಬಹುದು. ಒಂದು ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು ಅಥವಾ ಸ್ಥಳೀಯ ಬಸ್ ಅನ್ನು ಕೂಡಾ ತಲುಪಬಹುದು. ಹತ್ತಿರದ ರೈಲು ನಿಲ್ದಾಣ 12 ಕಿ.ಮೀ ದೂರದಲ್ಲಿರುವ ಕರ್ಮಲಿ ರೈಲು ನಿಲ್ದಾಣ. ಇತರ ನಿಲ್ದಾಣಗಳು ಮಾರ್ಗೊ ಮತ್ತು ವಾಸ್ಕೋ ಡಾ ಗಾಮಾ ರೈಲು ನಿಲ್ದಾಣಗಳಾಗಿವೆ. ರಸ್ತೆಯ ಮೂಲಕ ಬಸ್ ನಿಲ್ದಾಣದಿಂದ ಕೇವಲ 3 ಕಿ.ಮೀ ದೂರವಿದೆ. ಬಸ್ ಮೂಲಕ ಬೀಚ್ ತಲುಪಲು ಕೇವಲ 15 ನಿಮಿಷಗಳು ಬೇಕಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X