Search
  • Follow NativePlanet
Share
» »ದೆವ್ವ ಬಿಡಿಸೋಕೆ ಇಲ್ಲೂ ಇದೆಯಂತೆ ದೇವಸ್ಥಾನ, ಇಲ್ಲಿಗೆ ಹೋಗ್ಲಿಕ್ಕೆ ಗುಂಡಿಗೆ ಗಟ್ಟಿ ಬೇಕು

ದೆವ್ವ ಬಿಡಿಸೋಕೆ ಇಲ್ಲೂ ಇದೆಯಂತೆ ದೇವಸ್ಥಾನ, ಇಲ್ಲಿಗೆ ಹೋಗ್ಲಿಕ್ಕೆ ಗುಂಡಿಗೆ ಗಟ್ಟಿ ಬೇಕು

ಪ್ರೇತಾತ್ಮಗಳನ್ನು ಬಿಡಿಸಲು ರಾಜಸ್ಥಾನದಲ್ಲಿ ಒಂದು ಪ್ರಸಿದ್ಧ ದೇವಸ್ಥಾನವಿದೆ. ಈ ದೇವಸ್ಥಾನ ಬಹಳ ಪ್ರಸಿದ್ಧವಾಗಿದ್ದು ಸಾವಿರಾರು ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅದುವೇ ಮೆಹಂದಿಪುರ ಬಾಲಾಜಿ ದೇವಸ್ಥಾನ . ಈ ದೇವಸ್ಥಾನದ ವಿಶೇಷತೆ ಏನು ಎಂಬುವುದನ್ನು ಇಲ್ಲಿ ತಿಳಿಯಿರಿ.

ಈ ದೇವಾಲಯದಲ್ಲಿ ದೇವರಿಗೆ ವಿಸ್ಕೀ ಅರ್ಪಿಸ್ತಾರೆ ಜನಈ ದೇವಾಲಯದಲ್ಲಿ ದೇವರಿಗೆ ವಿಸ್ಕೀ ಅರ್ಪಿಸ್ತಾರೆ ಜನ

1000 ವರ್ಷ ಹಳೆಯ ಮೂರ್ತಿ

1000 ವರ್ಷ ಹಳೆಯ ಮೂರ್ತಿ

PC: Svenkat.iitk.ac.in
ಈ ದೇವಾಲಯದಲ್ಲಿ ಮೂರು ದೇವತೆಗಳನ್ನು ಪೂಜಿಸಲಾಗುತ್ತದೆ. ಬಾಲಾಜಿ, ಪ್ರೇತ್ ರಾಜ್ಮ ಬೈರವ. ಈ ದೇವಾಲಯದ ಒಳಗೆ ಇರುವ ಮೂರ್ತಿಯು ಸುಮಾರು ೧೦೦೦ ವರ್ಷಗಳಿಗೂ ಹಳೆಯದು. ಇದನ್ನು ಯಾವುದೇ ಕಲಾವಿದ ಕೆತ್ತಲಿಲ್ಲ. ಬದಲಾಗಿ ಅದುವೇ ತನ್ನಿಂದತಾನೇ ಪ್ರತ್ಯಕ್ಷವಾಗಿದ್ದು ಎನ್ನಲಾಗುತ್ದೆ. ಆದರೆ ಇದರ ಸುತ್ತಲು ಇರುವ ದೇವಸ್ಥಾನವನ್ನು ಸುಮಾರು ೨೦ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ.

ಸಹಸ್ರಾರು ಸಂಖ್ಯೆಯ ಜನರು

ಸಹಸ್ರಾರು ಸಂಖ್ಯೆಯ ಜನರು

ಬೆಳಗ್ಗಿನ ಜಾವ 3.30 ಗಂಟೆಗೆನೆ ಸರದಿಯಲ್ಲಿ ನಿಲ್ಲಬೇಕು. ಈ ಸಾವಿರಾರು ಜನರ ನಡುವೆ ಹೊಡೆದಾಡಿಕೊಂಡು ಕ್ಯೂನಲ್ಲಿ ನಿಲ್ಲುವುದು ಸುಲಭದ ಕೆಲಸವೇನಲ್ಲ. ಕೆಲವೊಮ್ಮೆ ಕಾಲ್ನಡಿಗೆ ಬೀಳುವುದೂ ಉಂಟು. ಕಾಲ್ತುಳಿತಕ್ಕೊಳಗಾಗುತ್ತಾರೆ. ಇಲ್ಲಿನ ಅಂಗಡಿಯವರು ಶಿಫ್ಟ್‌ಪ್ರಕಾರ ಕೆಲಸ ಮಾಡುತ್ತಾ ಇರುತ್ತಾರೆ. ಈ ಜನರು ಕೆಲವೊಮ್ಮೆ ನಿಮ್ಮನ್ನು ದೂಡಿಕೊಂಡು ಮುಂದೆ ಸಾಗುವುದೂ ಇದೆ. ಕೆಲವೊಮ್ಮೆ ನಿಮ್ಮ ಮೇಲೆಯೇ ನಡೆದುಕೊಂಢು ಹೋಗುವ ಸಂದರ್ಭ ಕೂಡಾ ಎದುರಾಗುತ್ತದೆ.

ಯಾವುದೇ ವಿಐಪಿ ದರ್ಶನವಿಲ್ಲ

ಯಾವುದೇ ವಿಐಪಿ ದರ್ಶನವಿಲ್ಲ

ಇಲ್ಲಿನ ಜನಸಂಖ್ಯೆಯನ್ನು ಕಂಡು ಬಹುತೇಕರು ತಮ್ಮ ಪ್ರಾಣದ ಮೇಲಿನ ಆಸೆಯಿಂದ ಆ ದೇವಸ್ಥಾನದ ಒಳಗೆ ಹೋಗುವುದನ್ನೇ ಬಿಟ್ಟುಬಿಡುತ್ತಾರೆ. ಬರೀ ಹೊರಗಿನಿಂದ ದೇವರ ದರ್ಶನ ಮಾಡಿ ಹೋಗುತ್ತಾರೆ. ಇತರ ದೇವಸ್ಥಾನಗಳಂತಹ ಪ್ರಸಾದ ಇಲ್ಲಿ ದೊರೆಯುವುದಿಲ್ಲ. ಇಲ್ಲಿ ಕಪ್ಪು ಬಣ್ಣದ ಬಾಲ್‌ನಂತಹ ಪ್ರಸಾದ ನೀಡಲಾಗುತ್ತದೆ. ಈ ಬಾಲ್‌ನ್ನು ತಿನ್ನುವ ಹಾಗಿಲ್ಲ. ಇದನ್ನು ದೇವಸ್ಥಾನದ ಒಳಗೆ ಉರಿಯುತ್ತಿರುವ ಬೆಂಕಿಗೆ ಎಸೆಯಬೇಕು.

ದೆವ್ವ, ಪಿಶಾಚಿಯನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು

ದೆವ್ವ, ಪಿಶಾಚಿಯನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು

PC: youtube

ಒಮ್ಮೆ ನೀವು ಈ ದೇವಸ್ಥಾನಕ್ಕೆ ಪ್ರವೇಶಿಸಿದ ನಂತರ ಹೊರಗಿನ ಪ್ರಪಂಚವೇ ಬೇರೆ ಕಾಣಿಸುತ್ತದೆ. ಈ ದೇವಸ್ಥಾನವನ್ನು ನಾಲ್ಕು ದೊಡ್ಡ ಹಾಲ್‌ಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಇತರ ದೇವಸ್ಥಾನಗಳಂತೆ ಮಂತ್ರ ಘೋಷ, ಗಂಟೆಯ ಸದ್ದು ಕೇಳಿಸೋದಿಲ್ಲ ಬದಲಾಗಿ ದೆವ್ವ ಮೈ ಮೇಲೆ ಬಂದಿರುವವರ ಕೂಗು, ಕಿರುಚಾಟ ಕೇಳಿಸುತ್ತದೆ.

ಸರಪಳಿಯಿಂದ ಕಟ್ಟಿ ಹಾಕಲಾಗಿರುತ್ತದೆ

ಸರಪಳಿಯಿಂದ ಕಟ್ಟಿ ಹಾಕಲಾಗಿರುತ್ತದೆ

PC:Youtube

ಕೊನೆಯ ಹಾಲ್‌ ಬಹಳ ಭಯಾನಕವಾಗಿದೆ. ಈ ಹಾಲ್‌ನಲ್ಲಿ ಮಕ್ಕಳನ್ನು, ಮಹಿಳೆಯರನ್ನು, ಪುರುಷರನ್ನು ಕಲ್ಲಿಗೆ, ಪಿಲ್ಲರ್‌ಗೆ ಕಬ್ಬಿಣದ ಸರಳಿನಿಂದ ಕಟ್ಟಲಾಗಿರುತ್ತದೆ. ಕೆಲವರನ್ನು ಪೂಜಾರಿಗಳು ಹೊಡೆಯುತ್ತಿರುತ್ತಾರೆ. ಅವರನ್ನು ನೋಡುವಾಗ ಬಹಳ ದಿನಗಳಿಂದ ತಿನ್ನಲೂ ಕೂಡಾ ಏನು ಸಿಕ್ಕಿಲ್ಲ ಎನ್ನುವಂತೆ ಭಾಸವಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X