• Follow NativePlanet
Share
Menu
» »ಧೈರ್ಯವಿದ್ದವರು ಮಾತ್ರ ಈ ಸ್ಥಳಕ್ಕೆ ಭೇಟಿ ಕೊಡಿ

ಧೈರ್ಯವಿದ್ದವರು ಮಾತ್ರ ಈ ಸ್ಥಳಕ್ಕೆ ಭೇಟಿ ಕೊಡಿ

Posted By:

ಭಾರತದಲ್ಲಿ ಏಕೈಕ ಭೂತೋಚ್ಛಟನೆ ದೇವಾಲಯವೆಂದರೆ ಅದು ಪವಿತ್ರವಾದ ಶ್ರೀ ಮೆಂಹದಿಪುರ್ ಬಾಲಾಜಿ ದೇಗುಲ. ಈ ಶಕ್ತಿಶಾಲಿ ದೇವಾಲಯವು ಹಿಂದೂ ದೇವಾಲಯವಾಗಿದ್ದು ಬಾಲಾಜಿ ಎಂದು ಕರೆಸಿಕೊಳ್ಳುವ ಹನುಮಂತನು ಈ ದೇವಾಲಯದಲ್ಲಿ ನೆಲೆಸಿದ್ದಾನೆ.

ಈ ಸ್ಥಳವು ರಾಜಸ್ಥಾನದ ದ್ವಾಸ ಜಿಲ್ಲೆಯಲ್ಲಿದೆ. ಧ್ಯೆರ್ಯ ಇದ್ದವರು ಈ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಬಹುದು. ನೂರಾರು ಭಕ್ತರು ಈ ದೇವಾಲಯದ ಮುಂದೆ ದಿನನಿತ್ಯ ಈ ಸ್ವಾಮಿ ದರ್ಶನ ಭಾಗ್ಯ ಹಾಗೂ ದುಷ್ಟ ಶಕ್ತಿಯನ್ನು ಹೋಗಲಾಡಿಸಿಕೊಳ್ಳಲು ಬರುತ್ತಾರೆ.

ಈ ಸ್ವಾಮಿಯು ಅತ್ಯಂತ ಮಾಹೀಮಾನ್ವಿತವಾಗಿದ್ದು, ಸ್ವತಃ ಬಾಲಾಜಿ ಸ್ವಾಮಿಯೇ ಭೂತೋಚ್ಛಟನೆ ಮಾಡುವ ಆಶ್ಚರ್ಯಕರವಾದ ದೃಶ್ಯವನ್ನು ಕಾಣಬಹುದಾಗಿದೆ. ಈ ದೇವಾಲಯದ ಬಗ್ಗೆ ದೇಶ ವಿದೇಶದ ವಿಜ್ಞಾನಿಗಳು ಕೂಡ ಸಂಶೋಧನೆ ಮಾಡಿದ್ದಾರೆ.

ಪ್ರಸ್ತುತ ಲೇಖನದಲ್ಲಿ ಬಾಲಾಜಿ ಸ್ವಾಮಿಯ ಮಹಿಮೆಯ ಬಗ್ಗೆ ತಿಳಿಯೋಣ.

1.ದೇವಾಲಯವಿರುವುದು ಎಲ್ಲಿ?

1.ದೇವಾಲಯವಿರುವುದು ಎಲ್ಲಿ?

ಈ ಮಾಹಿಮಾನ್ವೀತ ದೇವಾಲಯವು ಪವಿತ್ರ ಹಿಂದೂ ದೇವಾಲಯವಾಗಿದೆ. ರಾಜಸ್ಥಾನದ ದ್ವಾಸ ಎಂಬಲ್ಲಿ ಶ್ರೀ ಬಾಲಾಜಿಯೆಂದು ಕರೆಯಲ್ಪಡುವ ಹನುಮಂತನ ದಿವ್ಯವಾದ ದೇಗುಲವಿದೆ.

ಹನುಮಂತನ ದೇವಾಲಯಗಳು ಭಾರತದಲ್ಲಿ ಹಲವಾರು ಕಡೆಗಳಲ್ಲಿ ಕಾಣಬಹುದು ಆದರೆ ಈ ದೇವಾಲಯದಲ್ಲಿರುವ ಸ್ವಾಮಿಯು ಭೂತೋಚ್ಛಟನೆ ಮಾಡುವ ಶಕ್ತಿಯುತವಾದ ದೇವತಾ ಮೂರ್ತಿ.


PC:Seoduniya,pramod kumar gupta

2. ಭೂತೋಚ್ಛಟನೆ

2. ಭೂತೋಚ್ಛಟನೆ

ಈ ದೇವಾಲಯಕ್ಕೆ ಬರುವ ಹಲವಾರು ಜನರು ದುಷ್ಟ ಶಕ್ತಿಗಳಿಂದ ತೊಂದರೆ ಒಳಗಾಗಿದ್ದರೆ ಅಥವಾ ಮಾಂತ್ರಿಕ ವಿದ್ಯೆಯಿಂದ ಹಾನಿಗೊಳಗಾಗಿದ್ದರೆ ಈ ದೇವಾಲಯಕ್ಕೆ ಬೇಟಿ ನೀಡಿ ಪರಿಹರಿಸಿಕೊಳ್ಳುತ್ತಾರೆ. ಈ ಸ್ವಾಮಿಯೇ ದುಷ್ಟ ಶಕ್ತಿಗಳನ್ನು ಹೊಡೆದು ಓಡಿಸುತ್ತಾನಂತೆ.

3.ಭಕ್ತರು

3.ಭಕ್ತರು

ಈ ಪವಿತ್ರವಾದ ಹಾಗೂ ಶಕ್ತಿ ದೇವಾಲಯಕ್ಕೆ ದಿನನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಕೇವಲ ರಾಜಸ್ಥಾನದಿಂದಲೇ ಅಲ್ಲದೇ, ದೇಶದ ವಿವಿಧ ಮೂಲೆ ಮೂಲೆಗಳಿಂದ ಬಾಲಾಜಿಯ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ಯಾವುದೇ ರೀತಿಯ ಧರ್ಮ, ಜಾತಿಗಳ ಭೇದ ಭಾವ ಮಾಡದೇ ಎಲ್ಲಾ ಮತದವರೂ ಈ ದೇವಾಲಯಕ್ಕೆ ಬರುತ್ತಾರೆ.


PC:YOUTUBE

4.ಪರ್ವತ

4.ಪರ್ವತ

ಈ ದೇವಾಲಯವು ಒಂದು ಸಾಮಾನ್ಯ ಹಳ್ಳಿಯ ಪರ್ವತದ ಮೇಲೆ ಬಾಲಾಜಿ ನೆಲೆಸಿದ್ದಾನೆ. ಈ ಹಳ್ಳಿಯು ಅಷ್ಟೇನು ಅಭಿವೃದ್ಧಿಗೊಳ್ಳದಿದ್ದರು ಕೂಡ ಬಾಲಾಜಿ ದೇವಾಲಯ ಮಾತ್ರ ಪ್ರಖ್ಯಾತಿ ಪಡೆದಿದೆ.
ಈ ಪರ್ವತದ ಮೇಲೆ ಸಾಲು ಸಾಲಾಗಿ ಭಕ್ತರು ಹೋಗುವುದನ್ನು ಕಾಣಬುದುದಾಗಿದೆ.
PC:YOUTUBE

5.ಧೈರ್ಯವಿದ್ದವರು ಮಾತ್ರ

5.ಧೈರ್ಯವಿದ್ದವರು ಮಾತ್ರ

ಈ ದೇವಾಲಯದಲ್ಲಿ ಹಲವರು ಭೂತೋಚ್ಛಟನೆ ಮಾಡಿಕೊಳ್ಳಲು ಬಂದಿರುವುದರಿಂದ, ವಿವಿಧ ರೀತಿಯ ಕಿರುಚಾಟ, ಚೀರಾಟ ಮಾಡುತ್ತಾರೆ ಇದರಿಂದ ಕೆಲವು ಭಕ್ತರು ಭಯ ಭೀತರಾಗುವುದುಂಟು.
ಹಾಗಾಗಿ ಧೈರ್ಯವಿದ್ದವರು ಮಾತ್ರ ಈ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ.
PC:YOUTUBE

6.ಗರ್ಭಗುಡಿಯ ಮುಖ್ಯ ಆರ್ಚಕರು

6.ಗರ್ಭಗುಡಿಯ ಮುಖ್ಯ ಆರ್ಚಕರು

ಈ ಬಾಲಾಜಿ ದೇವಾಲಯದಲ್ಲಿ ಇಬ್ಬರು ಪ್ರಮುಖ ಆರ್ಚಕರಿದ್ದಾರೆ. ಮೊದಲ ಮುಖ್ಯ ಆರ್ಚಕರು ಶ್ರೀ ಗಣೇಶಪುರ್‍ಜೀ ಮಹಾರಾಜ್ ಆಗಿದ್ದರು. ಪ್ರಸ್ತುತ ಮುಖ್ಯ ಆರ್ಚಕರು ಶ್ರೀ ಕಿಶೋರ್ ಪುರ್‍ಜೀ ಮಹಾರಾಜ್ ಆಗಿದ್ದಾರೆ.

ಈ ಇಬ್ಬರು ಆರ್ಚಕರು ಅತ್ಯಂತ ಭಕ್ತಿ ಹಾಗೂ ನಿಷ್ಠೆಯಿಂದ ಯಾವುದೇ ಮಾಂಸ ಆಹಾರ ಸೇವನೆ ಮಾಡದೇ ಪವಿತ್ರವಾದ ಗಂಧ್ರಗಳು ಓದುವ ಬ್ರಾಹ್ಮಣರಾಗಿದ್ದಾರೆ.
PC:YOUTUBE

7.ಶ್ರೀ ರಾಮನ ದೇವಾಲಯ

7.ಶ್ರೀ ರಾಮನ ದೇವಾಲಯ

ಬಾಲಾಜಿ ದೇವಾಲಯದ ಮುಂಭಾಗದಲ್ಲಿ ಹನುಮನಿಗೆ ಪ್ರೀಯವಾದ ರಾಮನ ದೇವಾಲಯವಿದೆ. ಈ ದೇವಾಲಯದಲ್ಲಿ ಅತ್ಯಂತ ಸುಂದರವಾದ ರಾಮನ ಮೂರ್ತಿಯನ್ನು ಕಾಣಬುದಾಗಿದೆ.


PC:YOUTUBE

8.ಕಾಣಿಕೆ

8.ಕಾಣಿಕೆ

ಭೂತೋಚ್ಛಟನೆ ಮಾಡಲು ಭಕ್ತರು ಬಾಲಾಜಿಗೆ ಅರ್‍ಜೀ, ಸ್ವಾಮಣಿ, ಧರಕಷ್ಟ್, ಬುಂದಿಯನ್ನು ಕಾಣಿಕೆಯಾಗಿ ನೀಡುತ್ತಾರೆ.

ದೇವಾಲಯದ ಒಳಭಾಗದಲ್ಲಿ ಭೈರವ ಬಾಬಾ ಕೂಡ ನೆಲೆಸಿದ್ದಾನೆ ಈತನಿಗೆ ಅನ್ನವನ್ನು ಕಾಣಿಕೆಯಾಗಿ ಸರ್ಮಪಿಸುತ್ತಾರೆ.
PC:YOUTUBE

9.ಮುಖ್ಯ ದಿನಗಳು

9.ಮುಖ್ಯ ದಿನಗಳು

ಈ ಬಾಲಾಜಿ ದೇವಾಲಯದಲ್ಲಿ ಭೂತೋಚ್ಛಟನೆ ಮಾಡಲು ಉತ್ತಮವಾದ ದಿನಗಳೆಂದರೆ ಶನಿವಾರ ಹಾಗೂ ಮಂಗಳವಾರ. ಈ ದಿನಗಳಲ್ಲಿ ಹಲವಾರು ಭಕ್ತರು ದಂಡು ಹೆಚ್ಚಾಗಿರುತ್ತದೆ.
PC:YOUTUBE

10. ಸಮೀಪವಿರುವ ದೇವಾಲಯಗಳು

10. ಸಮೀಪವಿರುವ ದೇವಾಲಯಗಳು

ಬಾಲಾಜಿ ದೇವಾಲಯದ ಸಮೀಪದಲ್ಲಿ ಹಲವಾರು ದೇವಾಲಯಗಳಿವೆ ಅವುಗಳೆಂದರೆ ಅಂಜನೆ ಮಾತಾ ದೇವಾಲಯ, ಕಾಳಿ ಮಠ, ಪಂಚಮುಖಿ ಹನುಮಾನ್ ಜೀ ದೇವಾಲಯ, ಸಮಾಧಿವಾಲೆ ಬಾಬಾ.
ಈ ಎಲ್ಲಾ ಪವಿತ್ರ ದೇವಾಲಯಗಳು ಮೆಹೆಂದಿಪುರ್‍ನಲ್ಲಿ ಕಾಣಬಹುದಾಗಿದೆ.
PC:YOUTUBE

11.ಸಂಶೋಧನೆ

11.ಸಂಶೋಧನೆ

ಈ ದೇವಾಲಯವು ಮೆಹೆಂದಿ ಪುರ್‍ನಲ್ಲಿದ್ದು ಅತ್ಯಂತ ಪುರಾತನವಾದ ದೇವಾಲಯವಾಗಿದೆ. ಇಲ್ಲಿ ನಡೆಯುವ ಭೂತೋಚ್ಛಟನೆಯ ಬಗ್ಗೆ 2013ರಲ್ಲಿ ಅಂತರಾಷ್ಟ್ರೀಯ ವಿಜ್ಞಾನಿಗಳ ತಂಡ, ಜರ್ಮನಿಯ ತಂಡ, ನೆದರ್‍ಲ್ಯಾಂಡ್, ನವದೆಹಲಿಯ ವಿಜ್ಞಾನಿಗಳೆಲ್ಲಾರು ಕೂಡ ಇಲ್ಲಿ ಸಂಶೋಧನೆ ನಡೆಸಿದ್ದಾರೆ.
PC:YOUTUBE

12.ಭಕ್ತರ ಮಡಿ

12.ಭಕ್ತರ ಮಡಿ

ಈ ದೇವಾಲಯಕ್ಕೆ ಬರುವ ಭಕ್ತರು ಸಂಪೂರ್ಣವಾಗಿ ಕೆಲವು ಕಾಲಗಳು ಮಾಂಸ ಆಹಾರ ಹಾಗೂ ಮದ್ಯವನ್ನು ಪೂರ್ಣವಾಗಿ ಸ್ಥಗಿತಗೊಳಿಸಬೇಕಾಗುತ್ತದೆ.
PC:YOUTUBE

13.ಭೂತೋಚ್ಛಟನೆ

13.ಭೂತೋಚ್ಛಟನೆ

ಭೂತೋಚ್ಛಟನೆ ಮಾಡುವ ಸಮಯದಲ್ಲಿ ದುಷ್ಟ ಶಕ್ತಿಯಿಂದ ಬಳಲುತ್ತಿರುವವರನ್ನು ಈ ದೇವಾಲಯದ ನಿರ್ದಿಷ್ಟವಾದ ಸ್ಥಳದಲ್ಲಿ ಏಕಾಂತವಾಗಿ ಬಿಟ್ಟು ಬಿಡಬೇಕು.
PC:YOUTUBE

14.ಪ್ರಸಾದ

14.ಪ್ರಸಾದ

ಇಲ್ಲಿ ನೀಡಲಾಗುವ ಪ್ರಸಾದವನ್ನು ಅಲ್ಲಿಯೇ ತಿನ್ನಬೇಕು. ಮನೆಗೆ ತೆಗೆದುಕೊಂಡು ಹೋಗಬಾರದು. ಇದರಿಂದ ಕೇಡು ಸಂಭವಿಸುತ್ತದೆ ಎಂಬುದು ಭಕ್ತರ ಅಭಿಪ್ರಾಯ.
PC:YOUTUBE

15.ದೇವಾಲಯದ ಸಮಯ

15.ದೇವಾಲಯದ ಸಮಯ

ಈ ದೇವಾಲಯವು ವಾರಾದ ಎಲ್ಲಾ ದಿನಗಳಲ್ಲೂ ತೆರೆದಿರಲಾಗುತ್ತದೆ. ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ಭೇಟಿ ನೀಡಬಹುದಾಗಿದೆ.
PC:YOUTUBE

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ