Search
  • Follow NativePlanet
Share
» »ಬೆಂಗಳೂರಿನ ಪಿರಮಿಡ್ ವ್ಯಾಲಿಗೆ ಹೋಗಿದ್ದೀರಾ?

ಬೆಂಗಳೂರಿನ ಪಿರಮಿಡ್ ವ್ಯಾಲಿಗೆ ಹೋಗಿದ್ದೀರಾ?

ಬೆಂಗಳೂರಿಗರಿಗೆ ವೀಕ್ ಎಂಡ್ ಬಂತು ಅಂದ್ರೆ ಎಲ್ಲಿಗೆ ಹೋಗೋದು ಅನ್ನೋದೇ ಚಿಂತೆಯಾಗಿ ಬಿಡುತ್ತೆ. ಒಂದು ದಿನದಲ್ಲಿ ಎಲ್ಲಿಗೆ ಹೋಗಿ ಬರೋದು? ಬೆಂಗಳೂರಿನಲ್ಲಿರುವ ಎಲ್ಲಾ ಸ್ಥಳಗಳನ್ನು ಸುತ್ತಿಯಾಗಿದೆ ಎನ್ನುತ್ತಿದ್ದೀರಾ? ಇಡೀ ವಾರದ ಆಫೀಸ್‌ನ ಜಂಜಾಟದಿಂದ ದೂರುಳಿಯಬೇಕು, ಮನಸ್ಸಿಗೆ ನೆಮ್ಮದಿ ಸಿಗಬೇಕೆಂದರೆ ಬೆಂಗಳೂರಿನಲ್ಲಿರುವ ಪಿರಮಿಡ್ ವ್ಯಾಲಿಗೆ ಹೋಗಿ.

ಪಿರಮಿಡ್ ವ್ಯಾಲಿ

ಪಿರಮಿಡ್ ವ್ಯಾಲಿ

ನಿಮಗೆ ಧ್ಯಾನ ಮಾಡೋದಂದ್ರೆ ಇಷ್ಟ ಎಂದಾದ್ರೆ ನೀವು ಬೆಂಗಳೂರಿನಲ್ಲಿರುವ ಪಿರಮಿಡ್ ವ್ಯಾಲಿಗೆ ಭೇಟಿ ನೀಡಲೇ ಬೇಕು. ಇದು ಅಂತರಾಷ್ಟ್ರೀಯ ಧ್ಯಾನ ಕೇಂದ್ರ.ಇದನ್ನು ಹಿಂದೆ ಮೈತ್ರೇಯ ಬುದ್ಧ ವಿಶ್ವಾಲಯ ಎನ್ನುತ್ತಿದ್ದರು. ಅದನ್ನೇ ಈಗ ಪಿರಮಿಡ್ ವ್ಯಾಲಿ ಎನ್ನುತ್ತಾರೆ.

ವಿಶ್ವದ ಅತಿದೊಡ್ಡ ಪಿರಮಿಡ್

ವಿಶ್ವದ ಅತಿದೊಡ್ಡ ಪಿರಮಿಡ್

ವಿಶ್ವದ ಅತಿದೊಡ್ಡ ಧ್ಯಾನದ ಪಿರಮಿಡ್ ಇಲ್ಲಿದೆ. ಇದು ಅಂತರರಾಷ್ಟ್ರೀಯ ಧ್ಯಾನ ಕೇಂದ್ರವಾಗಿದೆ. ಈ ಪಿರಮಿಡ್‌ನಲ್ಲಿ ಸುಮಾರು 5000ಜನರು ಕುಳಿತು ಧ್ಯಾನಮಾಡುವಷ್ಟು ಸ್ಥಳವಕಾಶವಿದೆ. ಹೊರಗಿ ಪ್ರಪಂಚದಲ್ಲಿ ಆಧ್ಯಾತ್ಮಿಕತೆಯನ್ನು ಹುಡುಕುವವರಿಗೆ ಇದು ಒಳ್ಳೆಯ ಸ್ಥಳವಾಗಿದೆ. ಬ್ರಹ್ಮರ್ಷಿ ಪಂಡಿತಜಿ ಯವರಿಂದ 2003 ರಲ್ಲಿ ಸ್ಥಾಪನೆಗೊಂಡಿತು. ಕೇವಲ ಕಾರು, ಬಸ್ಸು ಮತ್ತು ಬೈಕುಗಳ ಮುಖಾಂತರ ಈ ಸ್ಥಳವನ್ನು ತಲುಪಬಹುದು.

10 ಅಂತಸ್ತಿನ ಕಟ್ಟಡದಷ್ಟು ಎತ್ತರ

10 ಅಂತಸ್ತಿನ ಕಟ್ಟಡದಷ್ಟು ಎತ್ತರ

ಉತ್ತರ ದಿಕ್ಕಿನಲ್ಲಿ ದಿಕ್ಕಿನಲ್ಲಿರುವ ಗಿಜಾ ಪಿರಮಿಡ್ ತತ್ವಗಳ ಮೇಲೆ ಇದನ್ನು ನಿರ್ಮಿಸಲಾಗಿದೆ. 10 ಅಂತಸ್ತಿನ ಈ ಕಟ್ಟಡದಷ್ಟು ಎತ್ತರವಿದೆ. ಪಿರಮಿಡ್ನಲ್ಲಿ 51 ° 51 'ನಲ್ಲಿನ ಬಾಗಿದ ಕೋನವು ಗೋಲ್ಡನ್ ಆಗಿದ್ದು ಮತ್ತು ಪಿರಮಿಡ್‌ನ 1/3 ನೇಯ ಎತ್ತರದ ಭಾಗದಲ್ಲಿ ಕಿಂಗ್ಸ್ ಚೇಂಬರ್ ಇದೆ.

ಪಿರಮಿಡ್ ವ್ಯಾಲಿಗೆ ಹೋಗೋದು ಹೇಗೆ?

ಪಿರಮಿಡ್ ವ್ಯಾಲಿಗೆ ಹೋಗೋದು ಹೇಗೆ?

ಪಿರಮಿಡ್ ವ್ಯಾಲಿ ದಕ್ಷಿಣ ಬೆಂಗಳೂರಿನಲ್ಲಿದೆ. ರೆಲ್ವೇ ಸ್ಟೇಶನ್‌ ಹಾಗೂ ಮೆಜೆಸ್ಟಿಕ್ ಬಸ್‌ಸ್ಟ್ಯಾಂಡ್‌ನಿಂದ 35 ಕಿ.ಮೀ ದೂರದಲ್ಲಿದೆ. ಬನಶಂಕರಿ ಬಸ್‌ಸ್ಟ್ಯಾಂಡ್‌ನಿಂದ ಕೇವಲ 26 ಕಿ.ಮೀ ದೂರದಲ್ಲಿದೆ. ಹಾಗೂ ನೈಸ್ ರೋಡ್‌ನಿಂದ 17 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಕನಕಪುರ ರಸ್ತೆ ಕಡೆಗೆ ಚಲಿಸಿ- ಅಲ್ಲಿಂದ ರಿಂಗ್ ರೋಡ್ ಜಂಕ್ಷನ್ ತಲುಪುತ್ತೀರಿ. ಅಲ್ಲಿಂದ ದಕ್ಷಿಣದ ಕಡೆಗೆ 25 ಕಿ.ಮೀ ಚಲಿಸಿ. ಅಲ್ಲಿಂದ ಎಡಕ್ಕೆ ಪಿರಮಿಡ್ ವ್ಯಾಲಿ ಬೋರ್ಡ್ ಇರುವತ್ತ ಹೋಗಿ.

ಯಾವುದೇ ಎಂಟ್ರಿ ಶುಲ್ಕ ಇಲ್ಲ

ಯಾವುದೇ ಎಂಟ್ರಿ ಶುಲ್ಕ ಇಲ್ಲ

PC: youtube

ಈ ಧ್ಯಾನ ಮಂದಿರದ ಒಳಗೆ ಹೋಗಲು ಯಾವುದೇ ಎಂಟ್ರಿ ಶುಲ್ಕ ಇಲ್ಲ. ಬೆಳಗ್ಗೆ 6 ಗಂಟೆಯಿಂದ ಸಂಜೆ ರಾತ್ರಿ 8 ಗಂಟೆ ವರೆಗೆ ಪಿರಮಿಡ್ ವ್ಯಾಲಿಗೆ ಪ್ರವೇಶವಿದೆ. ಆದರೆ ಪಿರಮಿಡ್ ಒಳಗೆ ಬೆಳಗ್ಗೆ 4 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಪ್ರವೇಶವಿದೆ.

Read more about: bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X