Search
  • Follow NativePlanet
Share
» »ಕೌತುಕಮಯ ಮಾಥೇರಾನ್ ಗಿರಿಧಾಮ!

ಕೌತುಕಮಯ ಮಾಥೇರಾನ್ ಗಿರಿಧಾಮ!

ಏಷಿಯಾದ ವಾಹನಮುಕ್ತ ಎಂಬ ಹೆಗ್ಗಳಿಕೆ ಪಡೆದಿರುವ ಮಾಥೇರಾನ್ ಗಿರಿಧಾಮವು ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯ ಕರ್ಜಾತ್ ತಾಲೂಕಿನಲ್ಲಿರುವ ಸುಂದರ ಹಾಗೂ ಅದ್ಭುತ ಗಿರಿಧಾಮವಾಗಿದೆ

By Vijay

ಇದೊಂದು ವಿಸ್ಮಯಕರ ಹಾಗೂ ಕುತೂಹಲ ಕೆರಳಿಸುವ ಸುಂದರ ಗಿರಿಧಾಮ. ಏಕೆಂದರೆ ಈ ಗಿರಿಧಾಮದ ವ್ಯಾಪ್ತಿಯಲ್ಲಿ ಯಂತ್ರಸಹಿತ ವಾಹನಗಳನ್ನು ಬಳಸುವಂತಿಲ್ಲ. ಬದಲಾಗಿ ಕುದುರೆ ಸವಾರಿ ಅಥವಾ ಟಾಂಗಾಗಲ ಮೂಲಕವೆ ಸಂಚರಿಸಬೇಕು. ವಾತಾವರಣದ ಶುದ್ಧತೆಯೂ ಅಪಾರ.

ಅಲ್ಲದೆ ಪ್ರಕೃತಿ ದೇವತೆಯು ಇದನ್ನು ತುಂಬು ಹೃದಯದಿಂದ ಹರಸಿರುವಂತಿದೆ. ಚಳಿಗಾಲದ ಸಮಯದಲ್ಲಿ ಮಂಜು ಮುಸುಕಿದ ವಾತಾವರಣ. ನಮ್ಮ ಕೈಗಳನ್ನು ಚಾಚಿದಾಗ ಅವು ಕೂಡ ಮಾಯವಾಗುವಂತಹ ದಟ್ಟ ಮಂಜು. ಗಡ ಗಡ ಮೈನಡಿಗಿಸುವ ಚಳಿ. ದಟ್ಟವಾದ ಹಸಿರು ವನರಾಶಿ. ಪರ್ವತ-ಕಣಿವೆಗಳ ವಿಹಂಗಮ ನೋಟಗಳು. ಇವೆಲ್ಲ ಮಾಥೇರಾನ್ ವೈಶಿಷ್ಟ್ಯ.

ಸಾಮಾನ್ಯವಾಗಿ ವರ್ಷದ ಎಲ್ಲಾ ಋತುಮಾನದಲ್ಲೂ ಭೇಟಿ ನೀಡಲು ಯೋಗ್ಯವಾದ, ಪುಟ್ಟ ಹಾಗೂ ಅಷ್ಟೆ ಸುಂದರವಾದ ಮಾಥೇರಾನ್ ಗಿರಿಧಾಮವು ಮಹಾರಾಷ್ಟ್ರ ರಾಜ್ಯದಲ್ಲಿರುವ ಪ್ರವಾಸಿ ವಿಶೇಷತೆಯುಳ್ಳ ಅದ್ಭುತ ತಾಣವಾಗಿದೆ. ಪ್ರಸ್ತುತ ಲೇಖನದಲ್ಲಿ ಈ ಸುಂದರ ಗಿರಿಧಾಮದ ಕುರಿತು ಕಿರು ಮಾಹಿತಿಯನ್ನು ನೀಡಲಾಗಿದೆ. ಒಂದೊಮ್ಮೆ ಖಂಡಿತವಾಗಿಯೂ ಭೇಟಿ ನೀಡಿ.

ರಾಯ್ಗಡ್

ರಾಯ್ಗಡ್

ಮಹಾರಾಷ್ಟ್ರ ರಾಜ್ಯದ ರಾಯ್ಗಡ್ ಜಿಲ್ಲೆಯ ಕರ್ಜಾತ್ ಎಂಬ ತಾಲೂಕಿನಲ್ಲಿ ಈ ಸುಂದರ ಗಿರಿಧಾಮವು ನೆಲೆಸಿದ್ದು ಪ್ರವಾಸಿಗರನ್ನು ಸೆಳೆಯುತ್ತದೆ.

ಚಿತ್ರಕೃಪೆ: Omkar A Kamale

ಭಾರತದಲ್ಲಿ

ಭಾರತದಲ್ಲಿ

ಭಾರತದಲ್ಲಿಯೆ ಅತಿ ಚಿಕ್ಕ ಹಾಗೂ ಚೊಕ್ಕದಾದ ಗಿರಿಧಾಮ ಪ್ರದೇಶ ಇದಾಗಿದೆ ಎನ್ನಲಾಗುತ್ತದೆ. ಪಶ್ಚಿಮಘಟ್ಟಗಲ ನಯನಮನೋಹರ ಪರ್ವತ ಶ್ರೇಣಿಗಳ ಮಧ್ಯೆ ಈ ಪುಟ್ಟ ಗಿರಿಧಾಮವಿದ್ದು ಸಮುದ್ರ ಮಟ್ಟದಿಂದ ಎರಡುವರೆ ಸಾವಿರಕ್ಕೂ ಅಧಿಕ ಅಡಿಗಳಷ್ಟು ಎತ್ತರದಲ್ಲಿ ಸ್ಥಿತವಿದೆ.

ಚಿತ್ರಕೃಪೆ: praveensagarc

ಎಷ್ಟು ದೂರ?

ಎಷ್ಟು ದೂರ?

ಇದರ ಇನ್ನೊಂದು ವಿಶೇಷತೆ ಎಂದರೆ ಮಹಾರಾಷ್ಟ್ರದ ಎರಡು ಪ್ರಮುಖ ನಗರಗಳಿಗೆ ಇದು ಹತ್ತಿರದಲ್ಲಿರುವುದು. ಹೌದು, ಮುಂಬೈ ಮಹಾನಗರಿಯಿಂದ 90 ಕಿ.ಮೀ ಹಾಗೂ ಪುಣೆ ನಗರದಿಂದ 120 ಕಿ.ಮೀ ಗಳಷ್ಟು ದೂರದಲ್ಲಿದೆ ಈ ಮಾಥೇರಾನ್.

ಚಿತ್ರಕೃಪೆ: wishwasdeep srivastav

ವಾರಾಂತ್ಯದ ರಜಾತಾಣ

ವಾರಾಂತ್ಯದ ರಜಾತಾಣ

ಮುಂಬೈ ಹಾಗೂ ಪುಣೆಗಳಿಗೆ ಇದು ಹತ್ತಿರದಲ್ಲಿರುವುದರಿಂದ ಈ ಎರಡೂ ನಗರವಾಸಿಗಳಿಗೆ ವಾರಾಂತ್ಯದ ರಜಾ ತಾಣವಾಗಿ ಮಾಥೇರಾನ್ ಸಾಕಷ್ಟು ಗಮನಸೆಳೆಯುತ್ತದೆ. ಅತ್ಯಂತ ಶಾಂತ ಹಾಗೂ ಕಲ್ಮಶರಹಿತ ಪರಿಸರ ಹೊಂದಿರುವುದರಿಂದ ಒತ್ತಡ ಕಳೆಯುವ ಅದ್ಭುತ ತಾಣವಾಗಿ ಮಾಥೇರಾನ್ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Elroy Serrao

ನಿಸರ್ಗಪ್ರೇಮಿಗಳು

ನಿಸರ್ಗಪ್ರೇಮಿಗಳು

ಕೇವಲ ಮಹಾರಾಷ್ಟ್ರ ಮಾತ್ರವಲ್ಲದೆ ಪರಿಸರ ಪ್ರವಾಸೋದ್ಯಮದ ಪ್ರಮುಖ ತಾಣವೂ ಆಗಿರುವುದರಿಂದ ಮಾಥೇರಾನ್ ದೇಶದ ವಿವಿಧ ಭಾಗಳಲ್ಲಿರುವ ಅಸಂಖ್ಯಾತ ನಿಸರ್ಗಪ್ರೇಮಿ ಪ್ರವಾಸಿಗರನ್ನೂ ಸಹ ತಕ್ಕ ಮಟ್ಟಿಗೆ ಆಕರ್ಷಿಸುತ್ತದೆ.

ಚಿತ್ರಕೃಪೆ: Elroy Serrao

ಏಷಿಯಾ ಖಂಡ

ಏಷಿಯಾ ಖಂಡ

ಈ ಗಿರಿಧಾಮದ ಮತ್ತೊಂದು ವಿಶೇಷತೆ ಎಂದರೆ ಇದು ಏಷಿಯಾ ಖಂಡದ ಏಕೈಕ "ವಾಹನರಹಿತ ಗಿರಿಧಾಮ" ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು. ಹೌದು ಈ ಗಿರಿಧಾಮವು ಪ್ರಾಕೃತಿಕವಾಗಿ ಸಾಕಷ್ಟು ಸೂಕ್ಷ್ಮವಾಗಿದ್ದು ಇದರೊಳಗಡೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಚಿತ್ರಕೃಪೆ: Elroy Serrao

ನಡೆಯುವುದು

ನಡೆಯುವುದು

ಕುದುರೆಗಳು, ತಳ್ಳುವ ಗಾಡಿ ಹಾಗೂ ಕುದುರೆಗಾಡಿಗಳನ್ನು ಮಾತ್ರವೆ ಬಳಸಿ ಓಡಾಡಬಹುದು. ಇಲ್ಲವೆ ಹಾಯಾಗಿ ನಡೆಯುತ್ತ ಸುತ್ತಲಿನ ಅಂದ ಚೆಂದವನ್ನು ಆಸ್ವಾದಿಸುತ್ತ ವಿಹರಿಸಬಹುದು. ಈ ದೃಷ್ಟಿಯಿಂದ ಇದೊಂದು ಕುತೂಹಲಕರ ತಾಣವಾಗಿಯೂ ಗಮನಸೆಳೆಯುತ್ತದೆ.

ಚಿತ್ರಕೃಪೆ: Magiceye

38 ಕೇಂದ್ರಗಳು

38 ಕೇಂದ್ರಗಳು

ಮಾಥೇರಾನ್ ಪ್ರಮುಖವಾಗಿ ವೀಕ್ಷಣಾ ಕೇಂದ್ರಗಳಿಂದಾಗಿ ಸಾಕಷ್ಟು ಹೆಸರುವಾಸಿಯಾಗಿದೆ. ಏನಿಲ್ಲವೆಂದರೂ ಇಲ್ಲಿ ಸುಮಾರು 38 ವೀಕ್ಷಣಾ ಕೇಂದ್ರಗಳಿದ್ದು ಪ್ರತಿ ಕೇಂದ್ರಗಳೂ ಅತ್ಯದ್ಭುತವಾದ ನಯನಮನೋಹರವಾದ ಪ್ರಾಕೃತಿಕ ನೋಟಗಳನ್ನು ಒದಗಿಸುತ್ತವೆ.

ಚಿತ್ರಕೃಪೆ: Elroy Serrao

ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರದಿಂದ ಮಾಥೇರಾನ್ ಅನ್ನು ಸೂಕ್ಷ್ಮ ಪರಿಸರ ಪ್ರದೇಶ ಎಂದು ಘೋಷಿಸಲಾಗಿದೆ. ಇಲ್ಲಿ ಬಲು ಅಪರೂಪದ ಹಾಗೂ ವೈವಿಧ್ಯಮಯ ಸಸ್ಯ ಸಮ್ಪತ್ತನ್ನು ಕಾಣಬಹುದಾಗಿದೆ. ಅಷ್ಟೆ ಅಲ್ಲದೆ, ಔಷಧೀಯ ಗುಣವುಳ್ಳ ಬಲು ವಿಶೇಷವಾದ ಗಿಡ ಮೂಲಿಕೆಗಳಿಗೂ ಸಹ ಆಶ್ರಯ ನೀಡಿದ ತಾಣವಾಗಿದೆ ಮಾಥೇರಾನ್.

ಚಿತ್ರಕೃಪೆ: praveensagarc

ಬೇಸಿಗೆ ರಜಾ ತಾಣ

ಬೇಸಿಗೆ ರಜಾ ತಾಣ

ಹಿಂದೆ ಬ್ರಿಟೀಷ್ ಆಡಳಿತವಿದ್ದ ಸಂದರ್ಭದಲ್ಲಿ ಬ್ರಿಟೀಷ್ ಅಧಿಕಾರಿಗಳು ಈ ಗಿರಿಧಾಮದ ಮಹತ್ವವನ್ನರಿತು ಇದನ್ನು ತಮ್ಮ ಬೇಸಿಗೆಯ ರಜಾ ತಾಣವನ್ನಾಗಿ ಮಾಡುವ ದೃಷ್ಟಿಯಿಂದ ಅಭಿವೃದ್ಧಿಗೊಳಿಸಿದರು.

ಚಿತ್ರಕೃಪೆ: Arpan Bhowmick

ಪುಟಾಣಿ ರೈಲು

ಪುಟಾಣಿ ರೈಲು

ಎರಡು ಅಡಿಗಳಷ್ಟು ಅಗಲದ ನ್ಯಾರೋ ಗೇಜ್ ಹೊಂದಿರುವ ಪುಟಾಣಿ ರೈಲು ಮಾಥೇರಾನ್ ಗಿರಿಧಾಮದ ಮತ್ತೊಂದು ಪ್ರಮುಖ ಆಕರ್ಷಣೆ. ಕೇಂದ್ರೀಯ ರೈಲ್ವೇ ಇಲಾಖೆಯ ಅಡಿಯಲ್ಲಿ ಬರುವ ಈ ಪುಟಾಣಿ ರೈಲು ಮಾಥೇರಾನ್ ಧಾಮದ ಸುಂದರ ಹಸಿರಿನ ದಟ್ಟ ಪರಿಸರದ ಮಧ್ಯೆ ಸಾಗುತ್ತದೆ.

ಚಿತ್ರಕೃಪೆ: Magiceye

ಪುಟಾಣಿ ರೈಲು ಲಭ್ಯ

ಪುಟಾಣಿ ರೈಲು ಲಭ್ಯ

ನೇರಲ್ ಎಂಬ ಗ್ರಾಮವು ಮಾಥೇರಾನ್ ಗಿರಿಧಾಮದಿಂದ ಸುಮಾರು 21 ಕಿ.ಮೀ ಗಳಷ್ಟು ದೂರವಿದ್ದು ಪುಟಾಣಿ ರೈಲು ಒಂದಕ್ಕೊಂದು ಬೆಸೆಯುತ್ತದೆ. ನೇರಲ್ ಗೆ ತೆರಳಲು ಮುಂಬೈ ಹಾಗೂ ಪುಣೆಯಿಂದ ರೈಲು ಹಾಗೂ ಬಸ್ಸುಗಳೆರಡೂ ಲಭ್ಯವಿದ್ದು ಅಲ್ಲಿಂದ ಪುಟಾಣಿ ರೈಲಿನ ಮೂಲಕ ಮಾಥೇರಾನ್ ತಲುಪಬಹುದು.

ಚಿತ್ರಕೃಪೆ: Ajay Panachickal

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X