• Follow NativePlanet
Share
» »ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

Written By:

ಚಂಡೆಲಾ ರಾಜವಂಶಗಳ ಕಾಲದಲ್ಲಿ ಕ್ರಿ.ಶ 9 ನೇ ಶತಮಾನದಿಂದ 11 ನೇ ಶತಮಾನದವರೆಗೆ 85 ದೇವಾಲಯಗಳ ಸಮುದಾಯವನ್ನು ಹೊಂದಿದ್ದ ಈ ದೇವಾಲಯದ ಪ್ರಾಂಗಣವು, ಪ್ರಸ್ತುತ 25 ದೇವಾಲಯಗಳೇ ಇವೆ. ಇದೊಂದು ವಿಸ್ಮಯಕಾರಿ ದೇವಾಲಯಗಳೇ ಆಗಿದೆ. ಹಾಗೆಯೇ ಭಾರತದಲ್ಲಿ ಆಗ್ರಾದ ನಂತರ ಹೆಚ್ಚಾಗಿ ಪ್ರವಾಸಿಗರು ಭೇಟಿ ನೀಡುವ ಪ್ರದೇಶದಲ್ಲಿ ಖಜುರಾಹೋ ಕೂಡ ಒಂದು. ಇದು ಆಗ್ರಾಗೆ ಸುಮಾರು 400 ಕಿ.ಮೀ ದೂರದಲ್ಲಿದೆ. ಇಂಡೋ-ಆರ್ಯನ್ ಶಿಲ್ಪಕಲೆಗೆ ಕನ್ನಡಿಯಂತೆ ಎಷ್ಟೋ ಕಲಾಕೃತಿಗಳನ್ನು ಹೊಂದಿರುವ ಶಿಲ್ಪಕಲೆಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ. ಖಜುರಾಹೋ ಮಧ್ಯ ಪ್ರದೇಶದಲ್ಲಿನ ಬುಂದೇಲ್ಖಂಡ್ ಪ್ರದೇಶದಲ್ಲಿದೆ.

ಇದು ವಿಂಧ್ಯ ಪರ್ವತ ಶ್ರೇಣಿಯಲ್ಲಿರುವ ಒಂದು ಕುಗ್ರಾಮ ಸಮುದಾಯವಾಗಿದೆ. ಖಜುರಾಹೋ ಒಂದು ದೊಡ್ಡದಾದ ದೇವಾಲಯವಾಗಿದ್ದು, ಆ ಗ್ರಾಮದ ಹೆಸರು ವಿಶ್ವ ಮಟ್ಟದಲ್ಲಿ ಹೆಸರುವಾಸಿಯನ್ನು ಪಡೆದಿದೆ. ಇಲ್ಲಿ ಮರಳಿನಿಂದ ನಿರ್ಮಾಣ ಮಾಡಿದ ದೇವಾಲಯಗಳು, ಹಾಗೆಯೇ ಪ್ರತ್ಯೇಕವಾದ ಶೃಂಗಾರ ಭಂಗಿಗಳನ್ನು ಹೊಂದಿರುವ ಶಿಲ್ಪಗಳಿಂದ ಖಜುರಾಹೋ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಾ ಇದೆ.

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಮಾತಾನಾಗೇಶ್ವರ ದೇವಾಲಯ
ಇದೊಂದು ಅದ್ಭುತವಾದ ದೇವಾಲಯವಾಗಿದ್ದು, ಇದು ಮಧ್ಯ ಪ್ರದೇಶದ ಖಜುರಾಹೋದಲ್ಲಿದೆ. ಈ ದೇವಾಲಯವನ್ನು ಸುಮಾರು 900 ರಿಂದ 925 ರ ಮಧ್ಯ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗಿದೆ. ಪ್ರಸ್ತುತ ಈ ದೇವಾಲಯವನ್ನು ಆರ್ಕಿಯಾಲಜಿಕಲ್ ಅವರ ಅಧೀನದಲ್ಲಿದೆ. ಮೈಥಾಲಜಿ ಪ್ರಕಾರ ಈ ಶಿವಾಲಯವು ಕೇದಾರ ನಾಥ, ವಾರಣಾಸಿ, ಗಯದಂತಹ ಪ್ರಸಿದ್ಧವಾದ ಪುಣ್ಯ ಕ್ಷೇತ್ರಗಳಂತೆ ಪವಿತ್ರವಾದುದು ಎಂದು ಭಕ್ತರು ಭಾವಿಸುತ್ತಾರೆ.

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಈ ದೇವಾಲಯದಲ್ಲಿ 2.5 ಮೀಟರ್ ಎತ್ತರವಾದ ಶಿವಲಿಂಗವನ್ನು ಪ್ರತಿಷ್ಟಾಪಿಸಿದ್ದಾರೆ. ಈ ಶಿವಲಿಂಗದ ಅಗಲವು ಸುಮಾರು 1.1 ಮೀ ಇರುತ್ತದೆ. ಹಾಗೆಯೇ ಇದರ ಕೆಳಗಿನ ಬೇಸ್ ಎನ್ನವುದು 1.2 ಮೀಟರ್ ಎತ್ತರವನ್ನು ಹೊಂದಿದೆ. ವಿಶೇಷವೆನೆಂದರೆ ಇಲ್ಲಿ ಪರ್ಶಿಯನ್ ಶಾಸನಗಳನ್ನು ಕೂಡ ಕಾಣಬಹುದು. ಹಾಗೆಯೇ ಖಜುರಾಹೋದಲ್ಲಿನ ಇತರ ದೇವಾಲಯದಲ್ಲಿನ ಮಾದರಿಯಾ ಹಾಗೆ ಶಿಲ್ಪಗಳ ಕೆತ್ತನೆಗಳನ್ನು ಈ ದೇವಾಲಯದಲ್ಲಿ ಇರುವುದಿಲ್ಲ.

ಚಂಡೆಲಾ ವಂಶಕ್ಕೆ ಸೇರಿದ ಚಂದ್ರದೇವ ಈ ದೇವಾಲಯವನ್ನು ನಿರ್ಮಾಣ ಮಾಡಿದನು. ಆದರೆ ಆ ರಾಜ ಮಾತಾಂ ಎಂಬ ಗುರುವನ್ನು ಭಕ್ತಿಯಿಂದ ಆರಾಧಿಸುತ್ತಿದ್ದನಂತೆ. ಅತನ ಹೆಸರಿನ ಮೇಲೆಯೇ ಈ ದೇವಾಲಯವನ್ನು ಮಾತಾಂಗೇಶ್ವರ ದೇವಾಲಯವಾಗಿ ನಿರ್ಮಾಣ ಮಾಡಿದನು. 1100 ವರ್ಷಗಳಿಗಿಂತ ಹಿಂದೆ ನಿರ್ಮಾಣ ಮಾಡಲಾದ ದೇವಾಲಯ ಇದಾಗಿದ್ದು, ಅತಿ ದೊಡ್ಡದಾದ ಶಿವಲಿಂಗವನ್ನು ಕೂಡ ಇಲ್ಲಿ ಕಾಣಬಹುದಾಗಿದೆ.

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಈ ಶಿವಲಿಂಗದ ನಂತರವೇ ಭೋಜ್‍ಪೂರ್‍ನಲ್ಲಿ ಇರುವ ಅತಿ ದೊಡ್ಡದಾದ ಶಿವಲಿಂಗವು ಹೆಸರುವಾಸಿಯಾಗಿದೆ. ಉತ್ತರ ಭಾರತವನ್ನು ಅತಿ ಹೆಚ್ಚು ಕಾಲ ಆಳ್ವಿಕೆ ಮಾಡಿದ ರಾಜವಂಶಿಕರಲ್ಲಿ ಒಬ್ಬನಾದ ಚಂಡೆಲಾ ರಾಜರು ಇಂತಹ ಅದ್ಭುತವಾದ ವಾಸ್ತು ಶಿಲ್ಪ ಹಾಗು ಶಿಲ್ಪ ಕಲೆಗಳನ್ನು ಹೊಂದಿರುವ ದೇವಾಲಯವನ್ನು ನಿರ್ಮಾಣ ಮಾಡಿದನು. ಮಧ್ಯ ಪ್ರದೇಶದಲ್ಲಿನ ಛತ್ತರ್ ಪೂರ್ ಜಿಲ್ಲೆಯಲ್ಲಿ ಖಜುರಾಹೋ ಗ್ರಾಮವಿದೆ.

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ನರ್ಮದಾ ನದಿ ಚಂಬಲ್ ನದಿ ಪ್ರಾಂತ್ಯದಲ್ಲಿ ವಿಂಧ್ಯ ಪರ್ವತ ಶ್ರೇಣಿಗಳಿವೆ. ಖಜುರಾಹೋ ದೇವಾಲಯ ನಿರ್ಮಾಣಕ್ಕೆ ಸುಮಾರು 100 ವರ್ಷಗಳಿಗಿಂತ ಹೆಚ್ಚು ತೆಗೆದುಕೊಂಡಿರಬಹುದು ಎಂದು ಭಾವಿಸಲಾಗುತ್ತಿದೆ. ಹಾಗೆಯೇ ಒಟ್ಟು 85 ದೇವಾಲಯಗಳಲ್ಲಿ ಪ್ರಸ್ತುತ ಇರುವುದು ಮಾತ್ರ 25 ದೇವಾಲಯಗಳು ಮಾತ್ರ.

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಖಜುರಾಹೋ ಸುತ್ತ 8 ದ್ವಾರಗಳನ್ನು ಹೊಂದಿದೆ. ಇದು ಸುಮಾರು 8 ಚದರ ಮೈಲಿ ಎಂದರೆ 21 ಚದರ ಕಿ.ಮೀ ವಿಸ್ತೀರ್ಣದಲ್ಲಿದೆ. 80 ಕ್ಕಿಂತ ಹೆಚ್ಚು ಹಿಂದೂ ದೇವಾಲಯವು ಇಲ್ಲಿ ಕಾಣಬಹುದು. ಈ ಪುರಾತನವಾದ ಖಜುರಾಹೋ ದೇವಾಲಯವು ಯೊನೆಸ್ಕೊನ ವಿಶ್ವ ಪಾರಂಪರಿಕ ಪ್ರದೇಶ ಎಂಬ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಇಲ್ಲಿ ನಿರ್ಮಾಣ ಮಾಡಲಾದ ದೇವಾಲಯಗಳಲ್ಲಿ ಹಿಂದೂ ಮತ್ತು ಜೈನ ದೇವಾಲಯಗಳ ಸಮೂಹವೇ ಅಧಿಕ. ಹಿಂದಿಯಲ್ಲಿ ಖಜುರಾಹೋ ಎಂದರೆ ಖರ್ಜುರ ಎಂಬ ಅರ್ಥವೇ ಆಗಿದೆ. ಸುಮಾರು 1000 ವರ್ಷಗಳ ಚರಿತ್ರೆಯನ್ನು ಹೊಂದಿರುವ ಈ ದೇವಾಲಯವನ್ನು ಎಷ್ಟೊ ಪ್ರಾಕೃತಿಕ ವೈಪರಿತ್ಯಕ್ಕೆ ಹಾಗು ದಾಳಿಗಳಿಗೆ ಒಳಗಾಗಿದೆ.

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಉಳಿದ ದೇವಾಲಯಗಳಲ್ಲಿ ಮಾತ್ರ ಇಂದಿಗೂ ಜೀವವನ್ನು ಹೊಂದಿರುವ ಶಿಲ್ಪಕಲಾ ಸಂಪತ್ತಗಳು ಪ್ರವಾಸಿಗರಿಗೆ ಮಂತ್ರಮುಗ್ಧರನ್ನಾಗಿಸದೇ ಬಿಡದು. 16 ನೇ ಶತಮಾನದಲ್ಲಿನ ರಮಣೀಯವಾಗಿ ಕಂಗೊಳಿಸುತ್ತಿದೆ ಖಜುರಾಹೋ. ಬ್ರಿಟೀಷರ್ ಕಾಲದಲ್ಲಿ ಅಂದರೆ 1839 ರಲ್ಲಿ ಬೆಳಕಿಗೆ ಬಂತು. ಚಂಡೆಲಾ ರಾಜರು ನಿರ್ಮಾಣ ಮಾಡಿದ ಈ ದೇವಾಲಯಗಳ ಶಿಲ್ಪಗಳು ಅಪರೂಪವಾದುದು.

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಶೃಂಗಾರಕ್ಕೆ ಪ್ರತೀಕವಾಗಿ ಈ ದೇವಾಲಯದಲ್ಲಿನ ಶಿಲ್ಪಗಳನ್ನು ಕಾಣಬಹುದು. ಖಜುರಾಹೋ ಪ್ರದೇಶವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮಧ್ಯ ಪ್ರದೇಶದ ಸರ್ಕಾರವು ಪ್ರಪಂಚ ವ್ಯಾಪಕವಾಗಿ ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸುತ್ತಿದೆ. ಹೀಗಾಗಿಯೇ ಈ ಚಿಕ್ಕದಾದ ಗ್ರಾಮವು ವಿಮಾನ ನಿಲ್ದಾಣವನ್ನು ಹೊಂದಿರುವುದು ಮತ್ತೊಂದು ವಿಶೇಷವೇ ಸರಿ.

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಆದಿನಾಥ ದೇವಾಲಯ
ಜೈನ ತೀರ್ಥಂಕರ ಆಧಿನಾಥನಿಗೆ ಅಂಕಿತವಾದ ದೇವಾಲಯ ಇದಾಗಿದೆ. ದೇವಾಲಯದ ಗೋಡೆಯ ಮೇಲೆ ಸಂಗೀತಕಾರರು ಚಿತ್ರಗಳು, ಭಂಗಿಗಳನ್ನು ವರ್ಣಿಸುವ ಸುಂದರವಾದ ಶಿಲ್ಪಗಳನ್ನು ಸುಂದರವಾಗಿ ಕೆತ್ತನೆ ಮಾಡಿದ್ದಾರೆ.

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಗಂಟಾಯಿಗುಡಿ
ಇದು ಕೂಡ ಜೈನ ದೇವಾಲಯವಾಗಿದೆ. ಇದರಲ್ಲಿ ವರ್ಥಮಾನ ಮಹಾವೀರನ ತಾಯಿಯ 16 ಸ್ವಪ್ನಗಳು ಆವಿಷ್ಕರಿಸುವ ಚಿಹ್ನೆಗಳು ಇಲ್ಲಿವೆ. ಗರುಡ ಪಕ್ಷಿ ಮೇಲೆ ಇರುವ ಜೈನ ದೇವತೆಯ ಶಿಲ್ಪಗಳು ಕೂಡ ಇಲ್ಲಿ ಕಾಣ ಹುದಾಗಿದೆ.

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪಾಶ್ವನಾಥ ದೇವಾಲಯ
ಇಲ್ಲಿರುವ ಜೈನದೇವಾಲಯದಲ್ಲಿ ಅತ್ಯಂತ ದೊಡ್ಡದಾದ ದೇವಾಲಯವೆಂದರೆ ಅದೇ ಪಾಶ್ವನಾಥ ದೇವಾಲಯ. ಇದು ಉತ್ತರ ದಿಕ್ಕಿಗೆ ಇರುವ ಕುಡ್ಯಾಲದಲ್ಲಿನ ಚಿತ್ರಗಳು ಎಷ್ಟೊ ಆಕರ್ಷಣೆಯುತವಾಗಿದೆ. ನಿಜ ಜೀವನದಲ್ಲಿ ಕಾರ್ಯಕ್ರಮಗಳನ್ನು ಇವು ಪ್ರತಿಬಿಂಬಿಸುತ್ತವೆ.

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಖಜುರಾಹೋಗೆ ಭೇಟಿ ನೀಡಲು ಉತ್ತಮವಾದ ಕಾಲಾವಧಿ
ಈ ಸುಂದರವಾದ ದೇವಾಲಯಗಳಿಗೆ ಭೇಟಿ ನೀಡಲು ಅತ್ಯುತ್ತಮವಾದ ಕಾಲಾವಧಿ ಎಂದರೆ ಅದು ಮಾರ್ಚ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ. ಈ ಕಾಲವು ಅತ್ಯಂತ ಸೂಕ್ತವಾದ ಕಾಲಾವಧಿಯಾಗಿದೆ. ಈ ಸಮಯದಲ್ಲಿ ವಾತಾವರಣವು ಅತ್ಯಂತ ಆಹ್ಲಾದಕರವಾಗಿರುತ್ತದೆ. ಶೀತಕಾಲದಲ್ಲಿ ಇಲ್ಲಿ ನಡೆಯುವ ಡ್ಯಾನ್ಸ್ ಫೆಸ್ಟಿವಲ್ ಆಫ್ ಖಜುರಾಹೋ ಪ್ರಪಂಪ ವ್ಯಾಪಕವಾಗಿ ಪ್ರಸಿದ್ಧಿಯನ್ನು ಹೊಂದಿದೆ. ಹಾಗಾಗಿ ಇದನ್ನು ಭೇಟಿ ಮಾಡಬೇಕಾದರೆ ಶೀತಕಾಲವು ಅನುಕೂಲಕರವಾಗಿರುತ್ತದೆ.

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಖಜುರಾಹೋಗೆ ಹೇಗೆ ಸೇರಿಕೊಳ್ಳಬೇಕು?
ಖಜುರಾಹೋವಿಗೆ ಎಲ್ಲಾ ಮಾರ್ಗದಿಂದಲೂ ತೆರಳಲು ಸಾರಿಗೆ ಸಂಪರ್ಕ ಮಾರ್ಗವಿದೆ. ಈ ಪಟ್ಟಣದಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಬಸ್ಸುಗಳ ದೊರೆಯುತ್ತವೆ. ಪಟ್ಟಣವೆಲ್ಲಾ ಸುತ್ತಾಡಿ ನೋಡುವುದಕ್ಕೆ ಟ್ಯಾಕ್ಸಿಗಳು, ರಿಕ್ಷಾಗಳು ಮತ್ತು ಸೈಕಲ್‍ಗಳು ದೊರೆಯುತ್ತವೆ.

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ರೈಲು ಮಾರ್ಗದ ಮೂಲಕ
ಖಜುರಾಹೋ ರೈಲ್ವೆ ನಿಲ್ದಾಣವು ಝಾನ್ಸಿ ಎಂಬ ಚಿಕ್ಕದಾದ ಗ್ರಾಮಕ್ಕೆ ಮತ್ತು ಕೆಲವು ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಖಜುರಾಹೋದಿಂದ 73 ಕಿ.ಮೀ ದೂರದಲ್ಲಿ ರೈಲ್ವೆ ನಿಲ್ದಾಣವಿದೆ. ಮಹೋಬಾದಿಂದ ಖಜುರಾಹೋವಿಗೆ ಟ್ಯಾಕ್ಸಿಯ ಮುಖಾಂತರ ಸೇರಿಕೊಳ್ಳಲು ರೂ.1200 ಆಗುತ್ತದೆ.

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ಪ್ರಪಂಚವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ದೇವಾಲಯ !

ವಿಮಾನ ಮಾರ್ಗ ಮೂಲಕ
ಖಜುರಾಹೋದಲ್ಲಿಯೇ ವಿಮಾನ ನಿಲ್ದಾಣವಿದೆ. ಪಟ್ಟಣಕ್ಕೆ ಸುಮಾರು 5 ಕಿ.ಮೀ ದೂರದಲ್ಲಿ ಈ ವಿಮಾನ ನಿಲ್ದಾಣವಿದೆ. ಪ್ರಧಾನವಾದ ವಿಮಾನ ಸಂಸ್ಥೆಗಳು ದೇಶದಲ್ಲಿಯೇ ಅತ್ಯಂತ ಪ್ರಧಾನವಾದ ನಗರಗಳಿಂದ ಇಲ್ಲಿಗೆ ವಿಮಾನದ ಪ್ರಯಾಣದ ಸೇವೆಯನ್ನು ಒದಗಿಸುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ