Search
  • Follow NativePlanet
Share
» »ಒಬ್ಬ ಬೇಡಿದ್ದನ್ನು ಕೊಟ್ಟರೆ ಇನ್ನೊಬ್ಬ ಬೇಡವಾದ್ದನ್ನು ತೆಗೆಯುತ್ತಾನೆ!

ಒಬ್ಬ ಬೇಡಿದ್ದನ್ನು ಕೊಟ್ಟರೆ ಇನ್ನೊಬ್ಬ ಬೇಡವಾದ್ದನ್ನು ತೆಗೆಯುತ್ತಾನೆ!

By Vijay

ಇದನ್ನು ಕಂಚೀಪುರಾಣದ ಆದಿಕಂಚಿ ಅಥವಾ ಅರ್ಧಕಂಚಿ ಎಂದೆ ಉಲ್ಲೇಖಿಸಲಾಗಿದೆ. ಇಲ್ಲಿ ಒಟ್ಟು ಎರಡು ಶಿವ ಅವತಾರಗಳನ್ನು ಕಾಣಬಹುದಾಗಿದೆ. ಒಬ್ಬ ಶಿವನು ಗುಡ್ಡದ ಮೇಲೆ ನೆಲೆಸಿ ಭಕ್ತರನ್ನು ಹರಸಿದರೆ ಇನ್ನೊಬ್ಬನು ಗುಡ್ಡದ ಕೆಳಗೆ ನೆಲೆಸಿದ್ದು ಭೇಟಿ ನೀಡುವ ಭಕ್ತರನ್ನು ಆಶೀರ್ವದಿಸುತ್ತಾನೆ.

ತಮಿಳಿನ ನಯನಾರ್ ಸಂತರು ಪಟ್ಟಿ ಮಾಡಿರುವ ಪಾದಾಳ ಪೆಟ್ರ ಸ್ಥಳಂನಲ್ಲಿ ಬರುವ ಒಂದು ದೇವಾಲಯ ಇದಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ರೋಚಕವಾದ ಕಥೆಗಳಿವೆ ಹಾಗೂ ಹಿನ್ನೆಲೆಗಳಿವೆ. ಶಿವನ ಎರಡೂ ರುಪಗಳು ವಿಶಿಷ್ಟವಾಗಿದ್ದು ಸಾಕಷ್ಟು ಕುತೂಹಲ ಕೆರಳಿಸುತ್ತವೆ.

ನಿರಂತರ ಅನಾರೋಗ್ಯ, ಸಾಲಬಾಧೆಯೆ? ಇಲ್ಲಿ ಪ್ರಾರ್ಥಿಸಿ!

ಪ್ರಸ್ತುತ ಈ ಅವಳಿ ದೇವಾಲಯಗಳು ತಮಿಳುನಾಡಿನ ಕಂಚೀಪುರಂ ಜಿಲ್ಲೆಯ ತಿರುಕಾಚೂರು ಎಂಬ ಗ್ರಾಮದಲ್ಲಿದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಹಾಗಾದರೆ ಪ್ರಸ್ತುತ ಲೇಖನದ ಮೂಲಕ ಈ ಅವಳಿ ದೇವಾಲಯಗಳ ಕುರಿತು ಮಾಹಿತಿಯನ್ನು ತಿಳಿಯಿರಿ.

ಕೆಳಗೆ

ಕೆಳಗೆ

ಮೊದಲಿಗೆ ಕಚಬೇಶ್ವರರ್ ದೇವಾಲಯದ ಕುರಿತು ತಿಳಿಯೋಣ. ಶಿವನ ಈ ದೇವಾಲಯವು ಗುಡ್ಡದ ಕೆಳಗಿರುವ ದೇವಾಲಯವಾಗಿದೆ. ಇಲ್ಲಿ ಶಿವನು ಸದಾ ಪ್ರಸನ್ನಮಯ ಹಾಗೂ ಶಾಂತರೂಪಿಯಾಗಿದ್ದು ಯಾರೆ ಬಂದು ಏನೇ ಬೇಡಿದರೂ ಅದನ್ನು ಈಡೇರುವಂತೆ ಮಾಡುತ್ತಾನೆ ಎನ್ನಲಾಗಿದೆ.

ಚಿತ್ರಕೃಪೆ: Ssriram mt

ಮಂದಾರ ಪರ್ವತ

ಮಂದಾರ ಪರ್ವತ

ದಂತಕಥೆಯಂತೆ, ಸಮುದ್ರಮಂಥನ ನಡೆಯುವಾಗ ಮಂದಾರ ಪರ್ವತವನ್ನು ಕಡುಗೋಲಾಗಿ ಬಳಸಲಾಗುತ್ತಿತ್ತು. ಆದರೆ ಪರ್ವತವು ಸಮತೋಲನ ಕಾಯ್ದುಕೊಳ್ಳಲಾಗದೆ ಸಮುದ್ರದ ತಳದಲ್ಲಿ ಕುಸಿಯತೊಡಗಿತು. ಇದನ್ನು ತಡೆಯುವ ಉದ್ದೇಶದಿಂದ ಶ್ರೀಮನ್ನಾರಾಯಣನು ಕಚುವಾ ಅಂದರೆ ಆಮೆಯ ರೂಪ ತಾಳಿ ಪರ್ವತವು ಭೂತಳದಲ್ಲಿ ಕುಸಿಯದಂತೆ ಮಾಡಿದನು.

ಚಿತ್ರಕೃಪೆ: Ssriram mt

ನೀಲಕಂಠ

ನೀಲಕಂಠ

ಈ ಸಂದರ್ಭದಲ್ಲಿ ಅತ್ಯಂತ ಕಠೋರವಾದ ವಿಷ ಉತ್ಪತ್ತಿಯಾಗಿ ಶಿವನು ಅದನ್ನು ತನ್ನ ಕಂಠದಲ್ಲಿ ತೆಗೆದುಕೊಂಡು ಸರ್ವಲೋಕಕ್ಕೆ ಒಳಿತಾಗುವಂತೆ ಮಾಡಿದನು. ಇದೆಲ್ಲ ಘಟನೆಯಾದ ನಂತರ ಕಚುವಾ ಅಂದರೆ ಆಮೆ ರೂಪದಲ್ಲಿರುವ ನಾರಾಯಣನು ಶಿವನನ್ನು ಇಲ್ಲಿ ಪ್ರಾರ್ಥಿಸಿದನು. ಅದಕ್ಕೆ ಶಿವನು ಪ್ರಸನ್ನನಾಗಿ ಆಮೆಯಾಗಿ ಆಗಿದ್ದ ನೋವು ಹಾಗೂ ದಣಿವು ಶಮನವಾಗುವಂತೆ ಮಾಡಿದನು. ಹಾಗಾಗಿ ಈ ಈಶ್ವರನು ಕಚಬೇಶ್ವರನಾಗಿ ಇಲ್ಲಿ ನೆಲೆಸಿದ್ದಾನೆ.

ಚಿತ್ರಕೃಪೆ: Ssriram mt

ಸುಂದರರ್

ಸುಂದರರ್

ಇನ್ನೊಂದು ಕಥೆಯ ಪ್ರಕಾರ, ನಯನಾರ್ ಸಂತರಲ್ಲಿ ಸುಂದರರ್ ಎಂಬುವವರು ಶಿವನ ಪರಮ ಭಕ್ತರು. ಸದಾ ಶಿವನ ಭಜನೆಯಲ್ಲಿ ತಲ್ಲೀನರಾದವರು. ಅವರು ಒಂದೊಮ್ಮೆ ಯಾತ್ರೆ ಮಾಡುತ್ತ ಈ ದೇವಾಲಯದ ಸನ್ನಿಧಿಯಲ್ಲಿ ಬಂದು ಕುಳಿತರು. ಅವರಿಗೆ ತುಂಬಾ ಹಸಿವಾಗಿತ್ತು. ಅದನ್ನು ಮನಗಂಡ ಶಿವನು ಬ್ರಾಹ್ಮಣನ ವೇಷದಲ್ಲಿ ಬಂದು ಭೀಕ್ಷಾಟನೆ ಮಾಡಿ ಅದರಿಂದ ತಂದ ಆಹಾರವನ್ನು ಅವರಿಗೆ ಕೊಟ್ಟ.

ಚಿತ್ರಕೃಪೆ: Ssriram mt

ಆಹಾರ ಸ್ವೀಕರಿಸಿದರು

ಆಹಾರ ಸ್ವೀಕರಿಸಿದರು

ಅವರು ಕಿಂಚಿತ್ತೂ ಬೇಸರಿಸಿಕೊಳ್ಳದೆ ಬ್ರಾಹ್ಮಣನಿಗೆ ವಂದನೆಸಲ್ಲಿಸಿ ಆಹಾರ ತಿಂದರು. ಇದರಿಂದ ಪ್ರಸನ್ನನಾದ ಶಿವನು ಪ್ರತ್ಯಕ್ಷನಾಗಿ ಆಶೀರ್ವದಿಸಿದನು. ಸಂತಸಗೊಂಡ ಆ ಸಂತರು ಶಿವನನ್ನು ಕುರಿತು ಇಲ್ಲಿ ಭಜನೆಯೊಂದನ್ನು ರಚಿಸಿ ಹಾಡಿದರು.

ಚಿತ್ರಕೃಪೆ: Ssriram mt

ಇನ್ನೊಬ್ಬ ಶಿವ!

ಇನ್ನೊಬ್ಬ ಶಿವ!

ಇದು ಇಲ್ಲಿ ಅಂದರೆ ಗುಡ್ಡದ ಕೆಳಗಿರುವ ಕಚಬೇಶ್ವರ ಶಿವನ ದೇವಾಲಯದ ಕುರಿತು ತಿಳಿದು ಬರುವ ವಿಚಾರ. ಇನ್ನೂ ಗುಡ್ಡದ ಮೇಲಿರುವ ಇನ್ನೊಬ್ಬ ಈಶ್ವರನ ಕಥೆಯೂ ಸಹ ಸಾಕಷ್ಟು ರೋಚಕವಾಗಿದೆ. ಇಲ್ಲಿ ಮುಖ್ಯವಾಗಿ ಆರೋಗ್ಯದ ಸಮಸ್ಯೆಯಿಂದ ಬಳಲುವವರು ಹೆಚ್ಚಾಗಿ ಬರುತ್ತಾರೆ.

ಚಿತ್ರಕೃಪೆ: Ssriram mt

ಎಲ್ಲ ತೊಂದರೆ ದೂರ!

ಎಲ್ಲ ತೊಂದರೆ ದೂರ!

ಏಕೆಂದರೆ ಇವನು ಚಿಕಿತ್ಸಕ ಶಿವ. ಭಕ್ತಿ-ಶೃದ್ಧೆಗಳಿಂದ ಬೇಡಿದರೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸಕಲ ಸಮಸ್ಯೆಗಳನ್ನು ನಿವಾರಿಸುವ ಪರಮ ದಯಾಮಯಿ ಎಂದು ಈ ಶಿವನನ್ನು ಕೊಂಡಾಡಲಾಗುತ್ತದೆ. ಇವನೆ ಮರುಂದೀಶ್ವರ. ಮರುಂದು ಎಂದರೆ ತಮಿಳಿನಲ್ಲಿ ಚಿಕಿತ್ಸಕ ಎಂಬರ್ಥವಿದೆ.

ಚಿತ್ರಕೃಪೆ: Ssriram mt

ಯಾವುದೊ ಶಾಪ

ಯಾವುದೊ ಶಾಪ

ಮರುಂದೀಶ್ವರನ ಕುರಿತೂ ಸಹ ಒಂದು ಕುತೂಹಲಕರ ಕಥೆಯಿದೆ. ಅದೆನೆಂದರೆ ಒಂದೊಮ್ಮೆ ಯಾವುದೊ ಶಾಪಕ್ಕೆ ತುತ್ತಾಗಿ ಇಂದ್ರ ಹಾಗೂ ಇತರೆ ದೇವತೆಗಳು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ದೈವತ್ವವಿದ್ದರೂ ಸಹ ಶರೀರದ ಬಾಧೆಗಳಿಂದ ಕುಗ್ಗಿ ಹೋಗಿದ್ದರು.

ಚಿತ್ರಕೃಪೆ: Ssriram mt

ಬೃಹಸ್ಪತಿ

ಬೃಹಸ್ಪತಿ

ದೇವಲೋಕದಲ್ಲಿ ಬೃಹಸ್ಪತಿಯಾದಿಯಾಗಿ ವೈದ್ಯರಾದಂತಹ ಅಶ್ವಿನಿ ದೇವತೆಗಳು ಎಷ್ಟೆ ಪ್ರಯತ್ನಿಸಿದರೂ ಅವರಿಂದ ದೇವತೆಗಳನ್ನು ಗುಣಮುಖರನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಅಶ್ವಿನಿ ದೇವತೆಗಳು ಸಾಕಷ್ಟು ದುಖಿತರಾಗಿದ್ದರು.

ಚಿತ್ರಕೃಪೆ: Ssriram mt

ನಾರದ ಬಂದರು

ನಾರದ ಬಂದರು

ಏನು ಮಾಡುವುದೆಂದು ತೋಚದಾದಾಗ ದೇವರ್ಷಿ ನಾರದರು ಅಶ್ವಿನಿ ದೇವತೆಗಳಿಗೆ ಒಂದು ಸಲಹೆ ನೀಡಿದರು. ಅದರ ಪ್ರಕಾರವಾಗಿ ಶಿವನ ಈ ದೇವಾಲಯವಿರುವ ಸ್ಥಳದಲ್ಲಿ ಬಂದು ಶಿವನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ತಮಗೆ ಜಯವಾಗುವುದೆಂದು ಹೇಳಿ ಮುನ್ನಡದರು.

ಚಿತ್ರಕೃಪೆ: Ssriram mt

ಪ್ರಸನ್ನನಾದ

ಪ್ರಸನ್ನನಾದ

ಸಂತಸಗೊಂಡ ಅಶ್ವಿನಿ ದೇವತೆಗಳು ಪ್ರಸ್ತುತ ದೇವಾಲಯವಿರುವ ಸ್ಥಳಕ್ಕೆ ಬಂದು ಶಿವನನ್ನು ಅಪಾರ ಭಕ್ತಿಯಿಂದ ಧ್ಯಾನಿಸಿ ಪ್ರಾರ್ಥಿಸಿದರು. ಅದಕ್ಕೆ ಶಿವನು ಪ್ರಸನ್ನನಾಗಿ ಅವರಿಗೆ ನಿರ್ದಿಷ್ಟವಾದ ಗಿಡ-ಮೂಲಿಕೆಯೊಂದರ ಗುಣಲ್ಕ್ಷಣಗಳನ್ನು ತಿಳಿಸಿ ಅದು ಇಲ್ಲಿ ಲಭ್ಯವಿದ್ದು ಅದರಿಂದ ಚಿಕಿತ್ಸೆ ನೀಡುವ ಕುರಿತು ವಿಧಾನ ವಿವರಿಸಿದನು.

ಚಿತ್ರಕೃಪೆ: Ssriram mt

ಎಲ್ಲೆಡೆ ಅಂಧಕಾರ

ಎಲ್ಲೆಡೆ ಅಂಧಕಾರ

ಆದರೆ ಇಲ್ಲಿ ಒಂದು ಸಮಸ್ಯೆ ಉಂಟಾಯಿತು. ಸಮಯ ಅದಾಗಲೆ ಸಾಕಷ್ಟು ಕಳೆದುಹೋಗಿತ್ತು. ಹೆಚ್ಚಿನ ಸಮಯವಿರಲಿಲ್ಲ. ಆದರೆ ಎಲ್ಲೆಡೆ ಅಂಧಕಾರ ಉಂಟಾಗಿತ್ತು. ಈ ಸಂದರ್ಭದಲ್ಲಿ ಅವರಿಂದ ಆ ನಿರ್ದಿಷ್ಟ ಮೂಲಿಕೆ ಹುಡುಕುವುದು ಕಷ್ಟಕರವಾಗಿತ್ತು. ಶಿವನನ್ನೆ ಮತ್ತೆ ಸ್ತುತಿಸಿದರು.

ಚಿತ್ರಕೃಪೆ: Ssriram mt

ದಿವ್ಯದೃಷ್ಟಿ ನೆಟ್ಟಳು

ದಿವ್ಯದೃಷ್ಟಿ ನೆಟ್ಟಳು

ಈಗ ಶಿವನೊಂದಿಗಿದ್ದ ಪಾರ್ವತಿಯು ಇವರ ವ್ಯಥೆ ನೋಡಿ ಕನಿಕರಪಟ್ಟು ತನ್ನ ಕಣ್ಣುಗಳಿಂದ ಪ್ರಕಾಶವನ್ನು ರೂಪಿಸಿ ಎಲ್ಲೆಡೆ ಬೆಳಕಾಗುವಂತೆ ಮಾಡಿದಳು. ಆ ಬೆಳಕಿನ ಸಹಾಯದಿಂದ ಅಶ್ವಿನಿ ದೇವತೆಗಳು ಆ ಮೂಲಿಕೆಯನ್ನು ಕಂಡುಹಿಡಿದು ತಡಮಾಡದೆ ಸಕಲ ದೇವತೆಗಳಿಗೆ ಚಿಕಿತ್ಸೆ ನೀಡಿ ಅವರು ತಕ್ಷಣ ಗುಣಮುಖರಾಗುವಂತೆ ಮಾಡಿದರು.

ಚಿತ್ರಕೃಪೆ: Ssriram mt

ದರ್ಶನಕ್ಕೆ ಬಂದರು

ದರ್ಶನಕ್ಕೆ ಬಂದರು

ಹೀಗೆ ಗುಣಮುಖರಾದ ಸಕಲ ದೇವತೆಗಳು ಇಲ್ಲಿ ಸೇರಿ ಶಿವ-ಪಾರ್ವತಿಯರ ಗುಣಗಾನ ಮಾಡಿದರು. ಹಾಗಾಗಿ ಈ ಶಿವನು ಮರುಂದೀಶ್ವರರ್ ಆಗಿ ಆರೋಗ್ಯದ ಸಮಸ್ಯೆ ಇರುವ ಯಾರೆ ರೋಗಿ ಇಲ್ಲಿ ಬಂದು ಬೇಡಿದರೆ ಅವರಿಗೆ ಒಳಿತುಂಟಾಗುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಚಾಲ್ತಿಯಲ್ಲಿ ಬಂದಿದೆ.

ಚಿತ್ರಕೃಪೆ: Ssriram mt

ನಿತ್ಯಪೂಜೆ

ನಿತ್ಯಪೂಜೆ

ಪ್ರಸ್ತುತ ದೇವಾಲಯವು ತಮಿಳುನಾಡು ಸರ್ಕಾರದ ಹಿಂದು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು ಪ್ರತಿನಿತ್ಯ ಶಿವನಿಗೆ ಮೂರು ಬಾರಿ ಪೂಜೆ ನಡೆಯುತ್ತದೆ. ಅಲ್ಲದೆ ವರ್ಷದಲ್ಲಿ ನಾಲ್ಕು ಬಾರಿ ಉತ್ಸವ ಅದರಲ್ಲೂ ತಮಿಳು ಮಾಸದಲ್ಲಿ ಜರುಗುವ ಬ್ರಹ್ಮೋತ್ಸವಂ ಬಲು ವಿಶೇಷವಾಗಿರುತ್ತದೆ. ಎಂಟನೇಯ ಶತಮಾನದ ದೇವಾಲಯ ಇದಾಗಿದೆ.

ಚಿತ್ರಕೃಪೆ: Ssriram mt

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more