Search
  • Follow NativePlanet
Share
» »ಮಾಲಾನಾ: ಜಗತ್ತಿನ ಅತ್ಯಂತ ಹಳೆಯ ಹಾಗೂ ಗುಪ್ತವಾಗಿರುವ ಮೊದಲ ಗಣರಾಜ್ಯ

ಮಾಲಾನಾ: ಜಗತ್ತಿನ ಅತ್ಯಂತ ಹಳೆಯ ಹಾಗೂ ಗುಪ್ತವಾಗಿರುವ ಮೊದಲ ಗಣರಾಜ್ಯ

ಜಗತ್ತಿನಲ್ಲಿ ಒಂದು ದೇಶವಿದ್ದು, ಅದು ಹೇಗೆ ಕಾರ್ಯ ನಿರ್ವಹಣೆ ಮಾಡುತ್ತದೆ ಎಂಬುದರ ಬಗ್ಗೆ ಅಥವಾ ದೊಡ್ಡ ಮಟ್ಟದಲ್ಲಿ ಪ್ರಗತಿಯನ್ನು ಹೇಗೆ ತಂದಿತು ಎನ್ನುವುದಾಗಲಿ ಅಥವಾ ಎಲ್ಲೆಡೆ ಹೇಗೆ ಬದಲಾವಣೆಯನ್ನು ಪ್ರಾರಂಭಿಸಿತು, ಎಂದಾಗಲಿ ವಿಮರ್ಶೆ ಮಾಡಲು ಹೋದಲ್ಲಿ ಅದು ಖಂಡಿತವಾಗಿಯೂ ಭಾರತವು ಅದರಲ್ಲಿ ಒಂದಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಭಾರತವು ಜಗತ್ತಿಗೆ ಔಷಧ, (ಆಯುರ್ವೇದ), ಶೂನ್ಯ ಅಂಕೆ, ಪ್ರಜಾಪ್ರಭುತ್ವ ಸೇರಿದಂತೆ ಇನ್ನೂ ಅನೇಕ ಸಂಶೋಧನೆಗಳು ಮತ್ತು ಆವಿಷ್ಕಾರಗಳನ್ನು ಜಗತ್ತಿಗೆ ನೀಡಿದೆ.

ನಾವು ರಾಜರು, ರಾಣಿಯರು, ಕಥೆಗಳು ಮತ್ತು ನೀತಿಕಥೆಗಳ ಬಗ್ಗೆ ಮಾತನಾಡುವಾಗ, ಭಾರತವು ಯಾವಾಗಲೂ ಮುಖಪುಟದಲ್ಲಿ ಬರುವ ಒಂದು ದೇಶವಾಗಿದೆ. ಆದರೆ ಹೆಚ್ಚಿನ ಜನರಿಗೆ ತಿಳಿದಿಲ್ಲದೇ ಇರುವ ಸಂಗತಿಯೆಂದರೆ, ಪ್ರಜಾಪ್ರಭುತ್ವವು ಭಾರತದ ಹಿಮಾಚಲ ಪ್ರದೇಶದ ಮಲಾನಾ ಎಂಬ ಪುಟ್ಟ ಹಳ್ಳಿಯಿಂದ ಪ್ರಾರಂಭವಾಯಿತು ಎಂಬುದು.

ಇದರ ಬಗ್ಗೆ ಕೇಳಿರುವಿರಾ? ಇಲ್ಲವೆಂದಾದಲ್ಲಿ ಇದರ ಬಗ್ಗೆ ತಿಳಿದುಕೊಳ್ಳಲು ಅವಕಾಶವಿದೆ. ಇದರ ಬಗ್ಗೆ ಓದಿ ಮತ್ತು ಮಲಾನಾದ ದಂತಕಥೆಯನ್ನು ತಿಳಿದುಕೊಳ್ಳೋಣ.

ಮಾಲಾನಾದಲ್ಲಿ ಪ್ರಜಾಪ್ರಭುತ್ವ

ಮಾಲಾನಾದಲ್ಲಿ ಪ್ರಜಾಪ್ರಭುತ್ವ

ಯುಗಗಳ ಹಿಂದೆ ಜಾಮ್ಲು ಖುಷಿ ಎಂಬ ಮಹಾನ್ ಸಂತ ಈ ಸ್ಥಳದಲ್ಲಿ ವಾಸಿಸುತ್ತಿದ್ದರು ಮತ್ತು ಅವರು ತಮ್ಮದೇ ಆದ ತತ್ವಗಳನ್ನು ಪ್ರತಿಪಾದಿಸಿದ್ದರು ಎಂದು ಮಾಲಾನ ಹಳ್ಳಿಯ ಜನರು ನಂಬುತ್ತಾರೆ. ಸ್ಥಳೀಯರ ಪ್ರಕಾರ ಈ ಸ್ಥಳವು ಜಗತ್ತಿನ ಅತ್ಯಂತ ಹಳೆಯದಾದ ಪ್ರಜಾಪ್ರಭುತ್ವ ಸ್ಥಳಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.

ಅದರಂತೆ ಇಲ್ಲಿ ಯೋಜಿತವಾದ ಮತ್ತು ಸಂಘಟಿತ ಸಂಸದೀಯ ವ್ಯವಸ್ಥೆಯನ್ನು ಹೊಂದಿತ್ತು ಮತ್ತು ಈ ಸ್ಥಳವು ಅದರ ದೇವತೆ ಎನಿಸಿದ ಜಮ್ಲು ಖುಷಿಯ ಮಾರ್ಗದರ್ಶನದಲ್ಲಿತ್ತು ಮತ್ತು ಅವರು ಹಳ್ಳಿಯಲ್ಲಿ ಶಾಂತಿಯನ್ನು ಕಾಪಾಡಿಕೊಂಡರು ಎಂದು ನಂಬಲಾಗುತ್ತದೆ. ಇದಲ್ಲದೆ ಇಲ್ಲಿಯ ಜನರು ಶುದ್ಧ ಆರ್ಯನ್ ಜೀನ್‌ಗಳನ್ನು ಹೊಂದಿದ್ದಾರೆ ಮತ್ತು ಅಲೆಕ್ಸಾಂಡರ್ ದಿ ಗ್ರೇಟ್‌ನ ಸೈನಿಕರ ಉತ್ತರಾಧಿಕಾರಿಗಳು ಎಂದು ಜನರು ನಂಬುತ್ತಾರೆ.

ಜಮ್ಲು ಖುಷಿ ಯಾರು

ಜಮ್ಲು ಖುಷಿ ಇತಿಹಾಸದಲ್ಲಿ ಒಬ್ಬ ಸಾಕಷ್ಟು ಗಮನಾರ್ಹ ವ್ಯಕ್ತಿಯಾಗಿದ್ದಾರೆ ಮತ್ತು ಅವರು ಯಾರೆಂಬುದರ ಬಗ್ಗೆ ಅಥವಾ ಯಾವ ಯುಗದಲ್ಲಿ ಅವರನ್ನು ಪೂಜಿಸಲಾಗುತ್ತಿತ್ತು ಎನ್ನುವುದರ ಬಗ್ಗೆ ವಿಭಿನ್ನ ಸಿದ್ದಾಂತಗಳಿವೆ. ಹಿಂದೂ ಧರ್ಮ ಗ್ರಂಥ, ಪುರಾಣಗಳ ಪ್ರಕಾರ ಜಮ್ಲು ಖುಷಿಯನ್ನು ಸಂತ ಎಂದು ಗುರುತಿಸಲಾಗಿದೆ.

ಜಮ್ಲು ಖುಷಿಯನ್ನು ಆರ್ಯ-ಪೂರ್ವ ಕಾಲದಿಂದಲೂ ಪೂಜಿಸಲಾಗುತ್ತಿತ್ತು ಎಂದು ನಂಬಲಾಗುತ್ತದೆ. ಇಂಗ್ಲಿಷ್ ಪ್ರವಾಸ ಬರಹಗಾರ, ಪೆನೆಲೋಪ್ ಚೆಟ್ವೋಡ್, ಮಾಲಾನ ವನ್ನು ಭೇಟಿ ಕೊಟ್ಟು ಅಲ್ಲಿಯ ಜನರಿಗೆ ತಮ್ಮ ದೇವರ ಇರುವಿಕೆಯ ಬಗ್ಗೆ ತಿಳಿಸಲು ಪ್ರಯತ್ನಿಸಿದ ಒಬ್ಬ ಸಾಂಪ್ರದಾಯಿಕ ಬ್ರಾಹ್ಮಣ ಪುರೋಹಿತನ ಬಗ್ಗೆ ಹಾಗೂ ಆ ಅದೃಷ್ಟ ಹೀನ ಪುರೋಹಿತನಿಗೆ ಏನಾಯಿತು ಎಂಬುದನ್ನು ತನ್ನ ಕಥೆಯಲ್ಲಿ ವಿವರಿಸುತ್ತಾನೆ.

ನಿರ್ದಿಷ್ಟವಾಗಿ ಮಾಲಾನಾ ಎಲ್ಲಿದೆ.

ನಿರ್ದಿಷ್ಟವಾಗಿ ಮಾಲಾನಾ ಎಲ್ಲಿದೆ.

ಹಿಮಾಚಲ ಪ್ರದೇಶದ ಪಕೃತಿ ಮಾತೆಯ ಮಡಿಲಲ್ಲಿ ಹುದುಗಿರುವ ಮಾಲಾನ ಹೊರಗಿನ ಪ್ರಪಂಚದಿಂದ ಅಂದರೆ ಪ್ರಪಂಚದ ಬೇರೆ ಭಾಗಗಳಿಗಿಂತ ವಿಭಿನ್ನವಾಗಿದೆ. ಚಂದ್ರಖನಿ ಮತ್ತು ಡಿಯೋ ತಿಬ್ಬ ಶಿಖರಗಳ ಛಾಯೆಯಲ್ಲಿ ಈ ಸ್ಥಳವಿದೆ. ಕುಲು ಕಣಿವೆಯ ಈಶಾನ್ಯದಲ್ಲಿರುವ ಈ ಸ್ಥಳವು ಸಮುದ್ರ ಮಟ್ಟದಿಂದ 2,652 ಮೀಟರ್ ಎತ್ತರದಲ್ಲಿದೆ, ಮಾಲಾನವು ರಭಸವಾಗಿ ಹರಿಯುವ ಮಲಾನಾ ನದಿಯ ಪಕ್ಕದಲ್ಲಿರುವ ಸೊಂಪಾದ ಪ್ರಸ್ಥಭೂಮಿಯಲ್ಲಿದೆ.

ಮಾಲಾನಾ ಇಂದು

ಮಾಲಾನಾ ಇಂದು

ಮಾಲಾನ ಹಳ್ಳಿಯು ತನ್ನದೇ ಆದ ಜೀವನಶೈಲಿ ಮತ್ತು ಸಾಮಾಜಿಕ ರಚನೆಗಳನ್ನು ರೂಪಿಸಿಕೊಂಡಿದೆ. ಅಲ್ಲದೆ, ಇದು ಕಟ್ಟುನಿಟ್ಟಾದ ಪದ್ದತಿಗಳು ಮತ್ತು ಸಂಪ್ರದಾಯಗಳ ಮಾರ್ಗದರ್ಶನವನ್ನು ಪಾಲಿಸಿಕೊಂಡು ಬಂದಿದೆ. ಮಾಲಾನಾ ಜನರು ಕನಶಿ ಭಾಷೆಯಲ್ಲಿ ಮಾತಾಡುತ್ತಾರೆ ಈ ಭಾಷೆಯು ಸಂಸ್ಕೃತ ಮತ್ತು ಹಲವಾರು ಟಿಬೇಟಿಯನ್ ಉಪ ಭಾಷೆಗಳ ಮಿಶ್ರಣದಂತೆ ತೋರುತ್ತದೆ.

ಮಾಲಾನವು ಸಾಂಪ್ರದಾಯಿಕವಾಗಿ ಸೆಣಬಿನ ಬುಟ್ಟಿ ತಯಾರಿಕೆ, ಹಗ್ಗಗಳು ಮತ್ತು ಚಪ್ಪಲಿಗಳನ್ನು ತಯಾರಿಸುವುದನ್ನು ಆಧರಿಸಿದೆ. ಆದರೂ ಸಹ ಮಾಲಾನಾ ಮರಿಜುವಾನಾವನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದೆ.

ಪ್ರವಾಸೋದ್ಯಮದ ಪ್ರಮುಖ ಆದಾಯದ ಮೂಲವಾಗಿದ್ದರೂ, ಪ್ರವಾಸಿಗರಿಗೆ ರಾತ್ರಿಯ ನಂತರ ಮಲಾನಾದಲ್ಲಿ ಉಳಿಯಲು ಅವಕಾಶವಿಲ್ಲ. ರಾತ್ರಿಯಲ್ಲಿ ಪ್ರವಾಸಿಗರು ಅಲ್ಲಿಯೇ ಇರುವುದನ್ನು ನಿಷೇಧಿಸಿದಾಗಿನಿಂದ ಎಲ್ಲಾ ಹೋಟೆಲ್‌ಗಳು ಅಥವಾ ಅತಿಥಿ ಗೃಹಗಳನ್ನು ಮುಚ್ಚಲಾಗಿದೆ. ಆದುದರಿಂದ ನೀವು ಹಗಲಿನ ವೇಳೆಯಲ್ಲಿ ಮಲಾನಾಗೆ ಭೇಟಿ ನೀಡಬಹುದು.

ಇಲ್ಲಿಯ ನಯನ ಮನೋಹರ ಸೌಂದರ್ಯತೆ ಮತ್ತು ಸುಂದರವಾದ ಭೂದೃಶ್ಯಗಳ ಹೊರತಾಗಿಯೂ ಮಾಲಾನಾದಲ್ಲಿ ನೀವು ಪ್ರಾಚೀನ ದೇವಾಲಯಗಳಿಗೂ ಭೇಟಿ ಕೊಡಬಹುದಾಗಿದೆ. ಅವುಗಳಲ್ಲಿ ಜಾಮ್ಲು ದೇವಾಲಯ ಮತ್ತು ರುಕ್ಮಿಣಿ ದೇವಾಲಯಗಳು ಪ್ರಮುಖವಾದವುಗಳಾಗಿವೆ.

ಇಲ್ಲಿ ದೇವಾಲಯಗಳಿಗೆ ಭೇಟಿ ಕೊಡುವವರು ದೇವಾಲಯಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮುಟ್ಟುವಂತಿಲ್ಲ. ಭವ್ಯವಾದ ಕಣಿವೆಗಳು ಮತ್ತು ಎತ್ತರದ ಪರ್ವತಗಳಲ್ಲಿ ಇರುವ ಈ ಸ್ಥಳದ ಗ್ರಾಮಸ್ಥರ ಜೀವನಶೈಲಿಯಿಂದ ಇಲ್ಲಿನ ಪ್ರವಾಸಿಗರು ಯಾವಾಗಲೂ ಆಕರ್ಷಿತರಾಗುತ್ತಾರೆ.

ಪಾರ್ವತಿ ಕಣಿವೆಯಲ್ಲಿ ಬೆಳೆದ ಸಸ್ಯಗಳಿಂದ ತಯಾರಿಸಿದ ಮಲಾನಾ ಕ್ರೀಮ್‌ಗೆ ಪ್ರಸಿದ್ಧವಾದ ಈ ಅದ್ಭುತ ಗ್ರಾಮವು ಪ್ರವಾಸಿಗರಿಗೆ ಅತ್ಯುತ್ತಮವಾದ ಪ್ರಕೃತಿ ಮತ್ತು ಗ್ರಾಮೀಣ ಜೀವನವನ್ನು ಅನ್ವೇಷಿಸಲು ಯೋಗ್ಯವಾದ ತಾಣವಾಗಿದೆ.

ಮಾಲಾನವನ್ನು ತಲುಪುವುದು ಹೇಗೆ

ಮಾಲಾನವನ್ನು ತಲುಪುವುದು ಹೇಗೆ

ಕಸೋಲ್ ಕುಲ್ಲು-ಮನಾಲಿ ವಿಮಾನ ನಿಲ್ದಾಣದಿಂದ ಸುಮಾರು 35 ಕಿ.ಮೀ ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ಬಸ್ ಹಿಡಿದರೆ 1 ಗಂಟೆಯೊಳಗೆ ಕಸೋಲ್ ತಲುಪಬಹುದಾಗಿದೆ. ಕಸೋಲ್ ತಲುಪಿದ ನಂತರ, ನೀವು ನೇರವಾಗಿ ಕ್ಯಾಬ್ ಅನ್ನು ಮಲಾನಾ ಅಥವಾ ಜರಿಗೆ ಅಲ್ಲಿಂದ ಮಲಾನಾಗೆ ಬುಕ್ ಮಾಡಬಹುದು. ಒಟ್ಟಾರೆಯಾಗಿ ಇದು ವಿಮಾನ ನಿಲ್ದಾಣದಿಂದ ಮಲಾನಾಗೆ 2 ಗಂಟೆಗಳ ಪ್ರಯಾಣ.

ಮಾಲಾನಾಗೆ ಭೇಟಿ ಕೊಡಲು ಉತ್ತಮವಾದ ಸಮಯ

ಮಾಲಾನಾಗೆ ಭೇಟಿ ಕೊಡಲು ಉತ್ತಮವಾದ ಸಮಯ

ಮಾಲಾನಾವು ವರ್ಷಪೂರ್ತಿ ಅನುಕೂಲಕರವ ಹವಾಗುಣವನ್ನು ಹೊಂದಿದ್ದರೂ ಸಹ ಇಲ್ಲಿಗೆ ಭೇಟಿ ಕೊಡಲು ಉತ್ತಮ ಸಮಯವೆಂದರೆ ಅದು ಅಕ್ಟೋಬರ್ ತಿಂಗಳಿನಿಂದ ಜೂನ್ ಕೊನೆಯವರೆಗೆ. ನೀವು ಹೆಚ್ಚಿನದನ್ನು ಅನ್ವೇಷಿಸಲು ಉತ್ಸುಕರಾಗಿದ್ದರೆ ನೀವು ಯಾವುದೇ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದರೂ ಅನಾನುಕೂಲವಾಗುವುದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more