Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಾನಾ » ಹವಾಮಾನ

ಮಲಾನಾ ಹವಾಮಾನ

ಬೇಸಿಗೆ ಕಾಲವು ಮಲಾನಾ ಭೇಟಿಗೆ ಆದರ್ಶ ಸಮಯವಾಗಿದ್ದು, ಈ ಸಮಯದಲ್ಲಿ ತಾಪಮಾನವು ಹವಾಮಾನವನ್ನು ಆಹ್ಲಾದಕರಗೊಳಿಸುವುದಲ್ಲದೆ ಸುತ್ತಣ ದೃಶ್ಯಗಳ ವೀಕ್ಷಣೆಗೆ ಇದು ಪರಿಪೂರ್ಣ ಕಾಲವಾಗಿದೆ.

ಬೇಸಿಗೆಗಾಲ

(ಏಪ್ರಿಲ್-ಜೂನ್ ): ಏಪ್ರಿಲ್ ತಿಂಗಳಿನಲ್ಲಿ ಬೇಸಿಗೆ ಆರಂಭವಾಗುತ್ತಿದ್ದು, ಈ ಸಮಯದಲ್ಲಿ ಈ ಸ್ಥಳದಲ್ಲಿ ತಾಪಮಾನ 10°C ಮತ್ತು 20°C ನ ಆಸುಪಾಸಿನಲ್ಲಿರುತ್ತದೆ. ಆದರೆ ರಾತ್ರಿ ತಾಪಮಾನ ಕಡಿಮೆಯಾಗಿ ಸ್ವಲ್ಪಮಟ್ಟಿಗೆ ಚಳಿಯಾಗುವದರಿಂದ ಪ್ರವಾಸಿಗರಿಗೆ ಬೆಚ್ಚಗಿನ ಬಟ್ಟೆಗಳನ್ನು ಕೊಂಡೊಯ್ಯಲು  ಸೂಚಿಸಲಾಗಿದೆ.

ಮಳೆಗಾಲ

(ಜುಲೈ- ಆಗಸ್ಟ್ ): ಮಲಾನಾದಲ್ಲಿ ಮಳೆಗಾಲವು ಜುಲೈಯಲ್ಲಿ ಪ್ರಾರಂಭವಾಗಿ ಆಗಸ್ಟ್ ಅಂತ್ಯದವರೆಗೂ ಮುಂದುವರೆಯುತ್ತದೆ. ಈ ಅವಧಿಯಲ್ಲಿ, ಸಂಪೂರ್ಣ ಪ್ರದೇಶವು ಸಮೃದ್ಧ ಹಸಿರಿನಿಂದ ತುಂಬಿದ್ದು ಭೂದೃಶ್ಯಗಳು ಕಣ್ಮನತಣಿಸುವಂತಿರುತ್ತವೆ. ಪ್ರವಾಸಿಗರು ಈ ಕಾಲದಲ್ಲಿ ಮಲಾನಾ ಭೇಟಿಗೆ ಮೊದಲು ರಸ್ತೆಯ ಸ್ಥಿತಿಗತಿಗಳನ್ನರಿಯುವುದು ಒಳ್ಳೆಯದು.

ಚಳಿಗಾಲ

(ನವೆಂಬರ್ - ಫೆಬ್ರವರಿ): ಚಳಿಗಾಲದಲ್ಲಿ ಮಲಾನಾದಲ್ಲಿ  ತಾಪಮಾನವು ಕನಿಷ್ಠ 0°C ನಿಂದ ಗರಿಷ್ಠ 10°C ವರೆಗೂ ದಾಖಲಾಗುತ್ತದೆ. ವಸಂತ (ಮಾರ್ಚ್): ಮಾರ್ಚ್ ತಿಂಗಳಲ್ಲಿ ಮಲಾನಾದಲ್ಲಿ ವಸಂತ ಋತುವಿನ ಆರಂಭ. ಈ ಸಮಯದಲ್ಲಿ ಈ ಸ್ಥಳದಲ್ಲಿ ಸರಾಸರಿ ತಾಪಮಾನವು ಸುಮಾರು 15°C ನ ಆಸುಪಾಸಿನಲ್ಲಿರುತ್ತದೆ.