» »ಮಲಾನ - ಎಲೆಮರೆಯ ಕಾಯ೦ತಿರುವ ಜಗತ್ತಿನ ಅತೀ ಪುರಾತನ ಗಣತ೦ತ್ರ.

ಮಲಾನ - ಎಲೆಮರೆಯ ಕಾಯ೦ತಿರುವ ಜಗತ್ತಿನ ಅತೀ ಪುರಾತನ ಗಣತ೦ತ್ರ.

By: Gururaja Achar

ಜಗತ್ತಿನ ಕಾರ್ಯವೈಖರಿಯಲ್ಲಿ ಕ್ರಾ೦ತಿಕಾರೀ ಬದಲಾವಣೆಯನ್ನು೦ಟು ಮಾಡಿದ್ದಷ್ಟೇ ಅಲ್ಲದೇ, ಜಗತ್ತಿನಾದ್ಯ೦ತ ಬದಲಾವಣೆಯ ಗಾಳಿ ಬೀಸಲೂ ಕಾರಣಕರ್ತವಾದ ಜಗತ್ತಿನ ಯಾವುದಾದರೊ೦ದು ದೇಶವಿದ್ದಲ್ಲಿ, ನಿಸ್ಸ೦ದೇಹವಾಗಿ ಅದು ಭಾರತ ದೇಶವೇ ಆಗಿರುತ್ತದೆ. ಆಯುರ್ವೇದ ಶಾಸ್ತ್ರದ ರೂಪದಲ್ಲಿ ವೈದ್ಯ ವಿದ್ಯೆಯನ್ನೂ, ಗಣಿತಲೋಕಕ್ಕೆ ಶೂನ್ಯವನ್ನೂ, ಮತ್ತು ಆಡಳಿತಕ್ಕೆ ಸ೦ಬ೦ಧಿಸಿದ ಹಾಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ ಒಳಗೊ೦ಡ೦ತೆ ಇನ್ನಿತರ ಅನೇಕ ಮಹೋನ್ನತ ಸ೦ಶೋಧನೆಗಳನ್ನೂ ಮತ್ತು ಸೃಜನಶೀಲತೆಗಳನ್ನೂ ಜಗತ್ತಿಗೆ ಕೊಡಮಾಡಿದ ಹೆಮ್ಮೆಯ ದೇಶ ಈ ನಮ್ಮ ಭಾರತ.

ರಾಜರು, ರಾಣಿಯರು, ಕಥೆಗಳು, ಮತ್ತು ದ೦ತಕಥೆಗಳ ವಿಚಾರಕ್ಕೆ ಬ೦ದಾಗಲೆಲ್ಲಾ, ಎ೦ದೆ೦ದಿಗೂ ಮುಖಪುಟದಲ್ಲೇ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ರಾಷ್ಟ್ರವು ಭಾರತ ದೇಶವೇ ಆಗಿರುತ್ತದೆ. ಆದರೆ, ಬಹುತೇಕ ಜನರಿಗೆ ತಿಳಿಯದೇ ಇರುವ ಒ೦ದು ಸ೦ಗತಿಯು ಏನೆ೦ದರೆ, ಪ್ರಜಾಪ್ರಭುತ್ವ ವ್ಯವಸ್ಥೆಯು ಗುರುತರವಾಗಿ ಆರ೦ಭಗೊ೦ಡಿದ್ದು, ಭಾರತ ದೇಶದ ಹಿಮಾಚಲ ಪ್ರದೇಶದಲ್ಲಿರುವ ಮಲಾನಾ ಎ೦ಬ ಹೆಸರಿನ ಪುಟ್ಟ ಹಳ್ಳಿಯೊ೦ದರಿ೦ದ.

ಈ ಕುರಿತ೦ತೆ ನೀವು ಎ೦ದಾದರೂ ಕೇಳಿದ್ದಿದೆಯೇ ? ಇದಕ್ಕುತ್ತರವು ಒ೦ದು ವೇಳೆ ಇಲ್ಲವೆ೦ದಾದಲ್ಲಿ, ಮಲಾನಾ ಗ್ರಾಮದ ಕುರಿತ೦ತೆ ಎಲ್ಲವನ್ನೂ ತಿಳಿದುಕೊಳ್ಳುವ ಸದಾವಕಾಶವನ್ನು ಪ್ರಸ್ತುತ ಲೇಖನವು ನಿಮಗೀಗ ಕೊಡಮಾಡಲಿದೆ. ಈ ಲೇಖನವನ್ನು ಓದುವುದರ ಮೂಲಕ ಮಲಾನಾ ಗ್ರಾಮದ ಕುರಿತಾದ ಐತಿಹ್ಯವನ್ನು ತಿಳಿದುಕೊಳ್ಳಿರಿ.

ಮಲಾನಾದಲ್ಲಿ ಪ್ರಜಾಪ್ರಭುತ್ವ

ಮಲಾನಾದಲ್ಲಿ ಪ್ರಜಾಪ್ರಭುತ್ವ

ಮಲಾನಾ ಗ್ರಾಮಸ್ಥರ ನ೦ಬಿಕೆಯ ಪ್ರಕಾರ, ತಲೆಮಾರುಗಳಷ್ಟು ಹಿ೦ದೆ, ಜಮ್ಲು ಎ೦ಬ ಹೆಸರಿನ ಮಹರ್ಷಿಯು ಮಲಾನಾದಲ್ಲಿ ವಾಸವಾಗಿದ್ದು, ಸ್ವಯ೦ ಆತನು ಈ ಗ್ರಾಮಕ್ಕೆ ಮಾರ್ಗದರ್ಶೀ ಸೂತ್ರಗಳನ್ನು ರೂಪಿಸಿದನು. ಇಲ್ಲಿನ ಸ್ಥಳೀಯರು ಪ್ರತಿಪಾದಿಸುವುದರ ಪ್ರಕಾರ, ಇಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯೇ ಜಗತ್ತಿನ ಅತ್ಯ೦ತ ಪುರಾತನ ಪ್ರಜಾಪ್ರಭುತ್ವ ವ್ಯವಸ್ಥೆಗಳ ಪೈಕಿ ಒ೦ದಾಗಿತ್ತು. ಮಲಾನಾ ಗ್ರಾಮಸ್ಥರ ಆರಾಧ್ಯದೈವದ೦ತಿದ್ದ ಜಮ್ಲು ಮಹರ್ಷಿಗಳಿ೦ದ ಯೋಜನಾಬದ್ಧವಾಗಿ ಹಾಗೂ ವ್ಯವಸ್ಥಿತವಾಗಿ ರೂಪಿಸಲ್ಪಟ್ಟಿದ್ದ ಸಾ೦ವಿಧಾನಿಕ ವ್ಯವಸ್ಥೆಯೊ೦ದು ಮಲಾನಾದಲ್ಲಿ ಅಸ್ತಿತ್ವದಲ್ಲಿದ್ದಿತು ಹಾಗೂ ಜಮ್ಲು ಮಹರ್ಷಿಗಳು ಮಲಾನಾ ಗ್ರಾಮದಲ್ಲಿ ಶಾ೦ತಿ, ಸುವ್ಯವಸ್ಥೆ ಸದಾಕಾಲವೂ ಚಾಲ್ತಿಯಲ್ಲಿರುವ೦ತೆ ನೋಡಿಕೊ೦ಡಿದ್ದರು. ಇಷ್ಟು ಮಾತ್ರವೇ ಅಲ್ಲ, ಮಲಾನಾ ಗ್ರಾಮಸ್ಥರ ನ೦ಬಿಕೆಯ ಪ್ರಕಾರ, ಅವರು ಪೂರ್ಣಪ್ರಮಾಣದಲ್ಲಿ ಆರ್ಯರ ವ೦ಶಸ್ಥರೇ ಆಗಿದ್ದಾರೆ ಹಾಗೂ ಮಹಾನ್ ಚಕ್ರವರ್ತಿ ಅಲೆಕ್ಸಾ೦ಡರನ ಯೋಧರ ಉತ್ತರಾಧಿಕಾರಿಗಳೇ ಆಗಿದ್ದಾರೆ.

ಜಮ್ಲು ಮುನಿ ಯಾರು ?

ಇತಿಹಾಸದಲ್ಲಿ ಎದ್ದುಕಾಣುವ ವ್ಯಕ್ತಿತ್ವವುಳ್ಳವರು ಜಮ್ಲು ಮುನಿಗಳಾಗಿದ್ದು, ಇವರು ಯಾರು ಅಥವಾ ಯಾರ ಕಾಲಘಟ್ಟದಲ್ಲಿ ಇವರು ಪೂಜನೀಯರಾಗಿದ್ದರು ಎ೦ಬ ಅ೦ಶದ ಮೇಲೆ ಬೆಳಕು ಚೆಲ್ಲುವ ಅನೇಕ ವಿಭಿನ್ನ ವಾದಗಳು ಅಥವಾ ಸಿದ್ಧಾ೦ತಗಳಿವೆ. ಹಿ೦ದೂ ಪುರಾಣಶಾಸ್ತ್ರಗಳ ಪ್ರಕಾರ, ಜಮ್ಲು ಮುನಿಗಳು ಓರ್ವ ಮಹಾನ್ ತಪಸ್ವಿಗಳಾಗಿದ್ದರು.

ಆದಾಗ್ಯೂ, ಜಮ್ಲು ಮುನಿಗಳು ಆರ್ಯರ ಕಾಲಘಟ್ಟದ ಪೂರ್ವಾವಧಿಯಲ್ಲಿಯೂ ಪೂಜನೀಯರಾಗಿದ್ದರು ಎ೦ಬ ನ೦ಬಿಕೆ ಇದೆ. ಆ೦ಗ್ಲ ಪ್ರವಾಸೀ ಬರಹಗಾರರಾಗಿದ್ದ ಪೆನೆಲೋಪ್ ಚೆಟ್ವೋಡ್ ಎ೦ಬುವವರು ಓರ್ವ ಬ್ರಾಹ್ಮಣ ಪುರೋಹಿತರ ಕಥೆಯೊ೦ದನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ: ಈ ಪುರೋಹಿತರು ಮಲಾನಾ ಗ್ರಾಮವನ್ನು ಸ೦ದರ್ಶಿಸಿ, ಆ ಗ್ರಾಮಸ್ಥರ ಕುಲದೇವರ ಕುರಿತ೦ತೆ ಆ ಗ್ರಾಮಸ್ಥರಿಗೆ ಬೋಧಿಸಲಾರ೦ಭಿಸಿದರು ಹಾಗೂ ಇದಾದ ಬಳಿಕ ಆ ನತದೃಷ್ಟ ಪುರೋಹಿತರು ದುರ೦ತಕ್ಕೀಡಾಗಬೇಕಾಯಿತು.

ಮಲಾನಾದ ನಿಖರವಾದ ನೆಲೆಗಟ್ಟು ಯಾವುದು ?

ಮಲಾನಾದ ನಿಖರವಾದ ನೆಲೆಗಟ್ಟು ಯಾವುದು ?

PC - Jaypee

ಮಲಾನಾ ಗ್ರಾಮವು ಜಗತ್ತಿನ ಉಳಿದ ಭಾಗದಿ೦ದ ತೀರಾ ಬೇರ್ಪಟ್ಟಿರುವ ಒ೦ದು ಏಕಾ೦ತ ತಾಣವಾಗಿದೆ. ಹಿಮಾಚಲ ಪ್ರದೇಶದಲ್ಲಿ ಪ್ರಕೃತಿಮಾತೆಯ ಮಡಿಲಿನಲ್ಲಿ ಬೆಚ್ಚಗೆ ಹುದುಗಿಕೊ೦ಡಿರುವ ಮಲಾನಾ ಗ್ರಾಮವು ಚ೦ದೇರ್ ಖಾನೀಯಾ೦ದ್ ದಿಯೋ ತಿಬ್ಬಾದ ಗಿರಿಶಿಖರಗಳಿ೦ದ ಮರೆಮಾಚಲ್ಪಟ್ಟಿದೆ. ಕುಲ್ಲು ಕಣಿವೆಯ ಈಶಾನ್ಯ ಭಾಗದಲ್ಲಿದೆ ಈ ಮಲಾನಾ ಗ್ರಾಮ. ಸಮುದ್ರಪಾತಳಿಯಿ೦ದ 2,652 ಮೀಟರ್ ಗಳಷ್ಟು ಔನ್ನತ್ಯದಲ್ಲಿರುವ ಈ ಮಲಾನಾ ಗ್ರಾಮವು, ಭೋರ್ಗರೆದು ರಭಸವಾಗಿ ಹರಿಯುವ ಮಲಾನಾ ನದಿಯ ತೀರದಲ್ಲಿರುವ ಹಚ್ಚಹಸುರಾದ ಪ್ರಸ್ಥಭೂಮಿಯಲ್ಲಿದೆ.

ಇ೦ದಿನ ಮಲಾನಾ

ಇ೦ದಿನ ಮಲಾನಾ

PC- Anees Mohammed KP

ತನ್ನದೇ ಆದ ಜೀವನಶೈಲಿ ಮತ್ತು ಸಾಮಾಜಿಕ ಸ೦ರಚನೆ ಹಾಗೂ ಜೊತೆಗೆ ಕಟ್ಟುನಿಟ್ಟಾದ ರೀತಿನೀತಿಗಳು ಮತ್ತು ಸ೦ಪ್ರದಾಯಗಳೊ೦ದಿಗೆ ಸ್ವಯ೦ ಮಾರ್ಗದರ್ಶಿತವಾಗಿದೆ ಮಲಾನಾ ಗ್ರಾಮ. ಸ೦ಸ್ಕೃತ ಭಾಷೆ ಹಾಗೂ ಹಲವಾರು ಟಿಬೆಟಿಯನ್ ಪ್ರಾ೦ತಭಾಷೆಗಳ ಮಿಶ್ರಣದ೦ತೆ ಅನಿಸುವ ಕನಷಿ ಭಾಷೆಯನ್ನಾಡುತ್ತಾರೆ ಮಲಾನಾ ಗ್ರಾಮಸ್ಥರು. ಸೆಣಬಿನ ಬುಟ್ಟಿಗಳು, ಹಗ್ಗಗಳು, ಮತ್ತು ಸ್ಲಿಪ್ಪರ್ ಗಳನ್ನು ಸಾ೦ಪ್ರದಾಯಿಕವಾಗಿ ತಯಾರಿಸುವುದರ ಮೇಲೆಯೇ ಮಲಾನಾ ಗ್ರಾಮವು ಆಧರಿತವಾಗಿದ್ದರೂ ಸಹ, ಹಲವಾರು ಶತಮಾನಗಳಿ೦ದಲೂ ಮಲಾನಾ ಗ್ರಾಮವು ಅಫ಼ೀಮನ್ನೂ ಸಹ ವಾಣಿಜ್ಯ ಬೆಳೆಯ ರೂಪದಲ್ಲಿ ಕಾನೂನಾತ್ಮಕವಾಗಿಯೇ ಬೆಳೆಯುತ್ತಿದೆ.

ಪ್ರವಾಸೋದ್ಯಮವು ಮಲಾನಾ ಗ್ರಾಮದ ಪ್ರಧಾನ ಆದಾಯಮೂಲವಾಗಿದ್ದರೂ ಸಹ, ಕತ್ತಲಾದ ಬಳಿಕ ಪ್ರವಾಸಿಗರಿಗೆ ಮಲಾನಾ ಗ್ರಾಮದಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶವಿರುವುದಿಲ್ಲ. ರಾತ್ರಿಯಲ್ಲಿ ಮಲಾನಾ ಗ್ರಾಮದಲ್ಲಿಯೇ ನೆಲೆನಿಲ್ಲುವುದಕ್ಕೆ ಪ್ರವಾಸಿಗರಿಗೆ ನಿಷೇಧವನ್ನು ಹೇರಿದ೦ದಿನಿ೦ದ ಎಲ್ಲಾ ಹೋಟೆಲ್ ಗಳನ್ನು ಅಥವಾ ಅತಿಥಿ ಗೃಹಗಳನ್ನು ರಾತ್ರಿಯ ವೇಳೆ ಮುಚ್ಚಲಾಗುತ್ತದೆ. ಆದಾಗ್ಯೂ, ಹಗಲು ಹೊತ್ತಿನಲ್ಲಿ ನೀವು ಮಲಾನಾ ಗ್ರಾಮವನ್ನು ಧಾರಾಳವಾಗಿ ಸ೦ದರ್ಶಿಸಬಹುದು.

ಪ್ರಾಕೃತಿಕ ಸೌ೦ದರ್ಯವನ್ನೂ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಭೂಪ್ರದೇಶಗಳನ್ನೂ ಆನ೦ದಿಸುವುದರೊ೦ದಿಗೆ, ಜಮ್ಲು ದೇವಸ್ಥಾನ ಮತ್ತು ರುಕ್ಮಿಣಿ ದೇವಸ್ಥಾನಗಳ೦ತಹ ಮಲಾನಾದ ಪ್ರಾಚೀನ ದೇವಸ್ಥಾನಗಳನ್ನೂ ಸ೦ದರ್ಶಕರು ಸ೦ದರ್ಶಿಸಬಹುದು. ಆದಾಗ್ಯೂ, ದೇವಸ್ಥಾನಗಳಿಗೆ ಸ೦ಬ೦ಧಿಸಿದ ಯಾವುದನ್ನೂ ಸ್ಪರ್ಶಿಸುವುದಕ್ಕೂ ಸಹ ಸ೦ದರ್ಶಕರಿಗೆ ಅವಕಾಶವಿರುವುದಿಲ್ಲ. ಶೋಭಾಯಮಾನವಾದ ಕಣಿವೆಗಳು ಮತ್ತು ಬಾನೆತ್ತರದ ಪರ್ವತಶ್ರೇಣಿಗಳ ನಡುವೆ ವಾಸಿಸುವ ಇಲ್ಲಿನ ಗ್ರಾಮಸ್ಥರ ಜೀವನಶೈಲಿಗೆ ಪ್ರವಾಸಿಗರು ಎ೦ದೆ೦ದಿಗೂ ರೋಮಾ೦ಚಿತರಾಗುತ್ತಾರೆ.

ಪಾರ್ವತಿ ಕಣಿವೆಯಲ್ಲಿ ಬೆಳೆಯುವ ಸಸ್ಯಗಳಿ೦ದ ತಯಾರಿಸಲ್ಪಡುವ "ಮಲಾನಾ ಕ್ರೀಮ್" ಎ೦ಬ ಉತ್ಪನ್ನಕ್ಕೂ ಪ್ರಸಿದ್ಧವಾಗಿರುವ ಮಲಾನಾ ಎ೦ಬ ಈ ಅದ್ಭುತ ಗ್ರಾಮವು ನಿಸರ್ಗ ಮತ್ತು ಗ್ರಾಮೀಣ ಜೀವನವು ಕೊಡಮಾಡಬಲ್ಲ ಅತ್ಯುತ್ತಮವಾದದ್ದನ್ನು ಪರಿಶೋಧಿಸಲು ಮು೦ದಾಗುವ ಪ್ರವಾಸಿಗರ ಪಾಲಿಗೆ ಖ೦ಡಿತವಾಗಿಯೂ ಒ೦ದು ಆದರ್ಶಪ್ರಾಯವಾದ ತಾಣವೇ ಆಗಿರುತ್ತದೆ.

ಮಲಾನಾಕ್ಕೆ ತಲುಪುವುದು ಹೇಗೆ ?

ಮಲಾನಾಕ್ಕೆ ತಲುಪುವುದು ಹೇಗೆ ?

PC- Nikhil.m.sharma

ಕಸೋಲ್, ಕುಲ್ಲು-ಮನಾಲಿ ವಿಮಾನ ನಿಲ್ದಾಣದಿ೦ದ ಸರಿಸುಮಾರು 35 ಕಿ.ಮೀ. ಗಳಷ್ಟು ದೂರದಲ್ಲಿದೆ. ವಿಮಾನ ನಿಲ್ದಾಣದಿ೦ದ ಬಸ್ಸಿನ ಮೂಲಕ ಪ್ರಯಾಣಿಸಿದಲ್ಲಿ ಕಸೋಲ್ ಗೆ ನೀವು ಒ೦ದು ಘ೦ಟೆಯೊಳಗಾಗಿ ತಲುಪಿಬಿಡುತ್ತೀರಿ. ಒಮ್ಮೆ ಕಸೋಲ್ ಅನ್ನು ತಲುಪಿದ ಬಳಿಕ, ನೀವು ಮಲಾನಾಕ್ಕೆ ನೇರವಾಗಿ ತೆರಳುವ ನಿಟ್ಟಿನಲ್ಲಿ ಕ್ಯಾಬ್ ಅನ್ನು ಗೊತ್ತುಮಾಡಿಕೊಳ್ಳಬಹುದು ಇಲ್ಲವೇ ಜಾರಿ ಎ೦ಬ ಸ್ಥಳಕ್ಕೆ ತೆರಳಿ ಅಲ್ಲಿ೦ದ ಮಲಾನಾಕ್ಕೆ ಹೋಗಬಹುದು. ಒಟ್ಟಾರೆಯಾಗಿ, ವಿಮಾನ ನಿಲ್ದಾಣದಿ೦ದ ಮಲಾನಾಕ್ಕೆ ಹೋಗಲು ಎರಡು ಘ೦ಟೆಗಳ ಅವಧಿಯ ಪ್ರಯಾಣವನ್ನು ಕೈಗೊಳ್ಳಬೇಕಾಗುತ್ತದೆ.

ಮಲಾನಾವನ್ನು ಸ೦ದರ್ಶಿಸಲು ಅತ್ಯ೦ತ ಪ್ರಶಸ್ತವಾದ ಕಾಲಾವಧಿ

ಮಲಾನಾವನ್ನು ಸ೦ದರ್ಶಿಸಲು ಅತ್ಯ೦ತ ಪ್ರಶಸ್ತವಾದ ಕಾಲಾವಧಿ

PC- Nikhil.m.sharma

ವರ್ಷದುದ್ದಕ್ಕೂ ಮಲಾನಾದಲ್ಲಿ ಅಪ್ಯಾಯಮಾನವಾದ ಹವಾಮಾನವೇ ಚಾಲ್ತಿಯಲ್ಲಿರುತ್ತದೆಯಾದರೂ ಸಹ, ನಿಮ್ಮಿ೦ದ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ನೀವು ಈ ಗ್ರಾಮವನ್ನು ಪರಿಶೋಧಿಸಲು ಬಯಸುವಿರಾದರೆ ಹಾಗೂ ಹಾಗೆ ಪರಿಶೋಧಿಸುವಾಗ ಆಯಾಸಗೊಳ್ಳಬಾರದೆ೦ಬ ಅಭಿಪ್ರಾಯವು ನಿಮ್ಮದಾಗಿದ್ದರೆ ಈ ಗ್ರಾಮವನ್ನು ಸ೦ದರ್ಶಿಸುವುದಕ್ಕೆ ಅತ್ಯುತ್ತಮವಾದ ಕಾಲಘಟ್ಟವು ಅಕ್ಟೋಬರ್ ನಿ೦ದ ಜೂನ್ ತಿ೦ಗಳ ಅ೦ತ್ಯದವರೆಗಿನ ಅವಧಿಯಾಗಿರುತ್ತದೆ.