Search
  • Follow NativePlanet
Share
» »ವರ್ಷದ 365 ದಿನವೂ ಅನ್ನದಾನ ಇರುವ ಇಲ್ಲಿ ಮಸಿಯೇ ಪ್ರಸಾದ !

ವರ್ಷದ 365 ದಿನವೂ ಅನ್ನದಾನ ಇರುವ ಇಲ್ಲಿ ಮಸಿಯೇ ಪ್ರಸಾದ !

ನಮ್ಮ ದೇಶದಲ್ಲಿ ಎಷ್ಟೇಲ್ಲಾ ವಿಶೇಷ ದೇವಸ್ಥಾನಗಳಿವೆ, ವಿಶೇಷ ಪ್ರಸಾದವನ್ನು ನೀಡುವ ದೇವಾಲಯಗಳಿವೆ. ಒಂದೊಂದು ದೇವಸ್ಥಾನದ ಪ್ರಸಾದವು ವಿಭಿನ್ನವಾಗಿರುತ್ತದೆ. ಇಂದು ನಾವು ಕರ್ನಾಟಕದ ಮಂಗಳೂರಿನ ಬಂಟ್ವಾಳ ತಾಲೂಕಿನಲ್ಲಿರು ಬೋಳ್ಯಾರು ಶ್ರೀ ಮಜಿ ಮಹಾಮಾಯಿ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿನ ಪ್ರಸಾದವೇ ವಿಶೇಷ.

ಏನಿದರ ವಿಶೇಷತೆ?

ಏನಿದರ ವಿಶೇಷತೆ?

ಬಂಟ್ವಾಳ ತಾಲೂಕಿನಲ್ಲಿರುವ ಈ ದೇವಸ್ಥಾನದ ವಿಶೇಷತೆ ಎಂದರೆ ಇಲ್ಲಿ ಬಂದಿರುವ ಭಕ್ತರಿಗೆ ಪ್ರಸಾದರೂಪದಲ್ಲಿ ಮಜಿಯನ್ನೇ ನೀಡಲಾಗುತ್ತದೆ. ಮಜಿ ಎಂದರೆ ಕಟ್ಟಿಗೆ ಉರಿದ ನಂತರ ದೊರೆಯುವ ಇದ್ದಿಲಿನ ಮಸಿ.

1000 ರೂ. ಕೊಟ್ಟು ಈ ದೋಸೆ ತಿನ್ತೀರಾ? ಇದು ಬರೀ ಬೆಂಗ್ಳೂರಲ್ಲಷ್ಟೇ ಸಿಗೋದು1000 ರೂ. ಕೊಟ್ಟು ಈ ದೋಸೆ ತಿನ್ತೀರಾ? ಇದು ಬರೀ ಬೆಂಗ್ಳೂರಲ್ಲಷ್ಟೇ ಸಿಗೋದು

ದೇವಸ್ಥಾನದ ಇತಿಹಾಸ

ದೇವಸ್ಥಾನದ ಇತಿಹಾಸ

ಹಿಂದೆ ಈ ಮಹಾಮಾಯಿಯನ್ನು ಮನೆಯೊಂದರಲ್ಲಿ ಪೂಜಿಸಲಾಗುತ್ತಿತ್ತಂತೆ. ಭಕ್ತರು ದೇವಿಯ ದರ್ಶನಕ್ಕೆ ಬರುತ್ತಿದ್ದರು. ಮನೆಗೆ ಬಂದ ಭಕ್ತರಿಗೆ ಅಡುಗೆ ಮನೆಯ ಒಲೆಯಲ್ಲಿದ್ದ ಇದ್ದಿಲಿನ ಮಸಿಯನ್ನು ನೀಡುತ್ತಿದ್ದರು, ಕ್ರಮೇಣ ಅದುವೇ ಸಂಪ್ರದಾಯವಾಗಿ ಮುಂದುವರೆಯಿತು.

ಆಚರಿಸಲಾಗುವ ಹಬ್ಬಗಳು

ಆಚರಿಸಲಾಗುವ ಹಬ್ಬಗಳು

ವರಮಹಾಲಕ್ಷ್ಮೀ ಪೂಜೆ, ನವರಾತ್ರಿ ಪೂಜೆಯನ್ನು ಇಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಹೋಳಿ ಹುಣ್ಣಮೆ ಪೂಜೆ ಕೂಡಾ ಸಡಗರದಿಂದ ನಡೆಸಲಾಗುವುದು. ಹೋಳಿ ಹೊತ್ತಿಸಲು ನೇತ್ರಾವತಿ ನದಿಗೆ ಹೋಗಿ ಹೋಳಿ ಹೊತ್ತಿಸಿ , ಮರಳಿ ಬಂದು ದೇವಸ್ಥಾನದಲ್ಲಿ ಹೋಳಿ ಪೂಜೆ ಮಾಡಬೇಕು.

ದ್ರೌಪದಿಗಾಗಿ ಭೀಮ ನಿರ್ಮಿಸಿದ ಸೇತುವೆ ಎಲ್ಲಿದೆ ನೋಡಿ? ದ್ರೌಪದಿಗಾಗಿ ಭೀಮ ನಿರ್ಮಿಸಿದ ಸೇತುವೆ ಎಲ್ಲಿದೆ ನೋಡಿ?

ಪ್ರಸಾದದ ಮಹಿಮೆ

ಪ್ರಸಾದದ ಮಹಿಮೆ

ಇಲ್ಲಿನ ಗದ್ದೆಗಳಿಗೆ ಬರುವ ಕ್ರಿಮಿಕೀಟಗಳಿಗೆ ಈ ದೇವಾಲಯದ ನೈವೈದ್ಯ ತೆಗೆದುಕೊಂಡು ಪ್ರಸಾದ ಹಚ್ಚಬೇಕು . ಕ್ರಿಮೆ ಕೀಟಗಳೆಲ್ಲಾ ನಾಶವಾಗಿ ಬೆಳೆಯು ಫಲವತ್ತಾಗಿ ಬೆಳೆಯುತ್ತದೆ ಎನ್ನುವುದು ಇಲ್ಲಿನ ಸ್ಥಳೀಯರ ನಂಬಿಕೆ. ಸಣ್ಣ ಮಕ್ಕಳಿಗೆ ಕಾಯಿಲೆ ಬಂದರೆ ಇಲ್ಲಿನ ಪ್ರಸಾದವನ್ನು ಮೂರು ದಿನಗಳ ಕಾಲ ಹಚ್ಚಿದ್ರೆ ಕಾಯಿಲೆ ವಾಸಿಯಾಗುತ್ತದಂತೆ.

365 ದಿನವೂ ಅನ್ನದಾನ

365 ದಿನವೂ ಅನ್ನದಾನ

ದೇವಾಲಯದ ದಕ್ಷಿಣ ಭಾಗದಲ್ಲಿ ಬೆಟ್ಡ. ಇಲ್ಲಿ ದೇವಾಲಯದ ಸಮೀಪದಲ್ಲಿ ಒಂದು ನೀರು ಹರಿಯುತ್ತದೆ. ಈ ನೀರು ವರ್ಷವಿಡೀ ಹರಿಯುತ್ತದಂತೆ. ಇದನ್ನು ಪವಿತ್ರ ನೀರು ಎನ್ನಲಾಗುತ್ತದೆ. ಈ ದೇವಾಲಯದಲ್ಲಿ ವರ್ಷದ 365 ದಿನಗಳೂ ಅನ್ನದಾನವಿದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅನ್ನಪ್ರಸಾದವನ್ನು ಸ್ವೀಕರಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X