Search
  • Follow NativePlanet
Share
» »ಮಹಾರಾಣ ಪ್ರತಾಪ್ ಸ್ಮಾರಕ ಎಲ್ಲಿದೆ ಗೊತ್ತಾ?

ಮಹಾರಾಣ ಪ್ರತಾಪ್ ಸ್ಮಾರಕ ಎಲ್ಲಿದೆ ಗೊತ್ತಾ?

ಮಹಾರಾಣ ಪ್ರತಾಪ್ ಸ್ಮಾರಕ ಮತ್ತು ಅದರ ಆವರಣಗಳನ್ನು ಚೆನ್ನಾಗಿ ನಿರ್ವಹಿಸಲಾಗಿದೆ. ಆದ್ದರಿಂದ ಪ್ರವಾಸಿಗರು ಸುತ್ತಮುತ್ತಲಿನ ಪ್ರದೇಶವನ್ನು ಆನಂದಿಸಬಹುದು. ಬೆಟ್ಟದ ಮೇಲಿರುವ ನೋಟವು ಅದ್ಭುತವಾಗಿದೆ.

ಮೇವಾರದ ರಾಜ ಮಹಾರಾಣ ಪ್ರತಾಪ್ ಬಗ್ಗೆ ನೀವು ಕೇಳಿರುವಿರಿ. ಹಾಗೆಯೇ ಮಹಾರಾಣ ಪ್ರತಾಪ್‌ನ ಕುದುರೆ ಚೇತಕ್ ಬಗ್ಗೆಯೂ ಕೇಳಿರುವಿರಿ. ಉಸಯ್‌ಪುರದಲ್ಲಿರುವ ಮಹಾರಾಣ ಪ್ರತಾಪ್ ಸ್ಮಾರಕವು ಮಹಾರಾಣ ಪ್ರತಾಪ್ ಸಿಂಗ್ ಮತ್ತು ಅವನ ನಿಷ್ಠಾವಂತ ಕುದುರೆ ಚೇತಕ್‌ಗೆ ಅರ್ಪಿತವಾದ ಐತಿಹಾಸಿಕ ಸ್ಥಳವಾಗಿದೆ. ಸಾರ್ವಜನಿಕ ಟ್ರಸ್ಟ್‌ನ ಸಹಾಯದಿಂದ ಮಹಾರಾಣ ಭಗವತ್ ಸಿಂಗ್ ಮೇವಾರ್ ರ ಉಸ್ತುವಾರಿಯಲ್ಲಿ ಈ ಸ್ಮಾರಕವನ್ನು 1948 ರಲ್ಲಿ ನಿರ್ಮಿಸಲಾಯಿತು.

ಚೇತಕ್ ಮೇಲೆ ಮಹಾರಾಣ ಪ್ರತಾಪ್‌ ಮೂರ್ತಿ

ಚೇತಕ್ ಮೇಲೆ ಮಹಾರಾಣ ಪ್ರತಾಪ್‌ ಮೂರ್ತಿ

PC: sanjeew singh
ಈ ಸ್ಮಾರಕವು ತನ್ನ ನೆಚ್ಚಿನ ಕುದುರೆ, ಚೇತಕ್ ಮೇಲೆ ಮಹಾರಾಣ ಪ್ರತಾಪ್‌ ಕುಳಿತಿರುವ ದೊಡ್ಡ ಗಾತ್ರದ ಕಂಚಿನ ಪ್ರತಿಮೆಯನ್ನು ಒಳಗೊಂಡಿದೆ. ಮಹಾರಾಣ ಪ್ರತಾಪ್‌ನ ಪ್ರತಿಮೆಯು 11 ಫೀಟ್‌ಗಳಷ್ಟು ಎತ್ತರದಲ್ಲಿದೆ. 7 ಟನ್ಗಳಷ್ಟು ಭಾರವಿದೆ. ಮಹಾರಾಣ ಪ್ರತಾಪ್ ಅವರ ನಿಷ್ಠಾವಂತ ಸಹಯೋಗಿ ಎಂದು ಪರಿಗಣಿಸಲ್ಪಟ್ಟ ಚೇತಕ್ 1576 ಕ್ರಿ.ಶ.ದಲ್ಲಿ ರಜಪೂತರು ಮತ್ತು ಮುಘಲರ ನಡುವೆ ಹಲ್ದಿಘಾಟಿಯ ಯುದ್ಧದಲ್ಲಿ ತನ್ನ ಕೊನೆಯ ಉಸಿರು ಇರುವ ತನಕ ಮಹಾರಾಣಾ ಪ್ರತಾಪ್‌ ಜೊತೆಗೆ ನಿಂತಿತ್ತು.

ಬೆಟ್ಟದ ಮೇಲಿನ ನೋಟ

ಬೆಟ್ಟದ ಮೇಲಿನ ನೋಟ

PC: yamarhythm
ಮಹಾರಾಣ ಪ್ರತಾಪ್ ಸ್ಮಾರಕ ಮತ್ತು ಅದರ ಆವರಣಗಳನ್ನು ಚೆನ್ನಾಗಿ ನಿರ್ವಹಿಸಲಾಗಿದೆ. ಆದ್ದರಿಂದ ಪ್ರವಾಸಿಗರು ಸುತ್ತಮುತ್ತಲಿನ ಪ್ರದೇಶವನ್ನು ಆನಂದಿಸಬಹುದು. ಬೆಟ್ಟದ ಮೇಲಿರುವ ನೋಟವು ಅದ್ಭುತವಾಗಿದೆ. ಹಲ್ಡಿಘಾಟಿ ಕದನ ಸೇರಿದಂತೆ ಚಿತ್ತೋರಘಢ ಮತ್ತು ಕುಂಭಲ್‌ಘಢದ ಇತಿಹಾಸವನ್ನು ಪ್ರದರ್ಶಿಸುವ ಮ್ಯೂಸಿಯಂ ಇದೆ. ಮಹಾರಾಣ ಪ್ರತಾಪ್ ಅವರ ಸಹಚರರು - ಹಕಿಮ್ ಖಾನ್ ಸುರ್, ಭಮಾಶಾಹ್, ಭೀಲು ರಾಜ, ಮತ್ತು ಝಾಲಾನ್ ಅವರ ಪ್ರತಿಮೆಗಳು ಇವೆ.

 ಮೋತಿ ಮಹಲ್‌ನ ಕೋಟೆ

ಮೋತಿ ಮಹಲ್‌ನ ಕೋಟೆ

PC:Vivek Shrivastava
ಆಕರ್ಷಕ ಜಪಾನೀಸ್ ರಾಕ್ ಗಾರ್ಡನ್ ಮತ್ತು ಮಹಾರಾಣ ಪ್ರತಾಪ್‌ನ ತಂದೆ ಮಹಾರಾಣ ಉದಯಿ ಸಿಂಗ್ ಅವರ ಮನೆಯಾದ ಉದಯ್‌ಪುರ್ ಮೋತಿ ಮಹಲ್‌ನ ಕೋಟೆಗಳ ಅವಶೇಷಗಳನ್ನು ಸಹ ಭೇಟಿ ನೀಡಬಹುದು. ಮೇವಾರದ ಸಾವಿರ ವರ್ಷಗಳ ಆಡಳಿತವನ್ನು ಪ್ರದರ್ಶಿಸುವ ಲೇಸರ್‌ ಲೈಟ್ ಮತ್ತು ಧ್ವನಿ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಟಿಕೇಟ್‌ ಬೆಲೆ ಎಷ್ಟು

ಟಿಕೇಟ್‌ ಬೆಲೆ ಎಷ್ಟು

PC: Arastu Gupta
ಈ ಮ್ಯೂಸಿಯಂ ಬೆಳಗ್ಗೆ 9ರಿಂದ ಸಂಜೆ 6ಗಂಟೆಯ ವರೆಗೆ ತೆರೆದಿರುತ್ತದೆ. ಒಳಗೆ ಹೋಗಲು ವಯಸ್ಕರಿಗೆ 20 ರೂ. ಹಾಗೂ ಮಕ್ಕಳಿಗೆ 10 ರೂ. ಟಿಕೇಟ್‌ ನೀಡಬೇಕು. ಈ ಲೇಸರ್‌ ಶೂ 7.30 ರಿಂದ 8.15ರವರೆಗೆ ಆಯೋಜಿಸಲಾಗುತ್ತದೆ. ಲೇಸರ್‌ ಶೋ ನಲ್ಲಿ ಭಾಗವಹಿಸ ಬೇಕಾದರೆ 35 ರೂ. ಟಿಕೇಟು ಪಡೆದುಕೊಳ್ಳಬೇಕು.

ಬಾಲಿವುಡ್ ಚಲನಚಿತ್ರಗಳಲ್ಲಿ ಚಿತ್ರೀಕರಿಸಲಾಗಿದೆ

ಬಾಲಿವುಡ್ ಚಲನಚಿತ್ರಗಳಲ್ಲಿ ಚಿತ್ರೀಕರಿಸಲಾಗಿದೆ

ಈ ಅದ್ಭುತ ಪ್ರತಿಮೆಯನ್ನು ವಿವಿಧ ಬಾಲಿವುಡ್ ಚಲನಚಿತ್ರಗಳಿಗೆ ಚಿತ್ರೀಕರಿಸಲಾಗಿದೆ. ನೀವು ಛಾಯಾಗ್ರಾಹಕರಾಗಿದ್ದರೆ ಬೆಟ್ಟದ ಆರಾಮದಾಯಕ ಎತ್ತರದಿಂದ, ನೀವು ಉದೈಪುರ್ ನಗರದ ಅತ್ಯುತ್ತಮ ಚಿತ್ರಗಳನ್ನು ಕ್ಲಿಕ್ ಮಾಡಬಹುದು. ಆಕರ್ಷಕ ಜಪಾನೀಸ್ ರಾಕ್ ಗಾರ್ಡನ್ ಮತ್ತು ಉದಯಪುರದ ಕೋಟೆಗಳ ಅವಶೇಷಗಳನ್ನು ಸಹ ಭೇಟಿ ಮಾಡಬಹುದು. ಇವುಗಳು ಈ ಬೆಟ್ಟದ ಸಮೀಪದಲ್ಲಿವೆ.

ಉದೈಪುರ್ ಸಿಟಿ ಪ್ಯಾಲೇಸ್

ಉದೈಪುರ್ ಸಿಟಿ ಪ್ಯಾಲೇಸ್

PC: Henrik Bennetsen
ಉದಯ್‌ಪುರದಲ್ಲಿ ಸುತ್ತಾಡಲು ಸಾಕಷ್ಟು ಸ್ಥಳಗಳಿವೆ. ಉದೈಪುರ್ ಸಿಟಿ ಪ್ಯಾಲೇಸ್ ರಾಜಸ್ಥಾನದ ಉದೈಪುರ್ ನಗರದಲ್ಲಿರುವ ಪಿಚೋಲಾ ಸರೋವರದ ದಂಡೆಯಲ್ಲಿರುವ ಒಂದು ಸುಂದರವಾದ ಅರಮನೆ ಸಂಕೀರ್ಣವಾಗಿದೆ. ಉದೈಪುರ್ ನಲ್ಲಿ ಭೇಟಿ ನೀಡುವ ಅತಿ ಎತ್ತರದ ಸ್ಥಳಗಳ ಪೈಕಿ ಈ ಭವ್ಯ ನಗರ ಅರಮನೆ ರಾಜಸ್ಥಾನದ ಅತಿದೊಡ್ಡ ಅರಮನೆ ಸಂಕೀರ್ಣವಾಗಿದೆ. ಮಧ್ಯಕಾಲೀನ ಯುರೋಪಿಯನ್ ಮತ್ತು ಭಾರತೀಯ ವಾಸ್ತುಶೈಲಿಯ ಶೈಲಿಗಳ ಅದ್ಭುತ ಮಿಶ್ರಣವನ್ನು ಸಿಟಿ ಪ್ಯಾಲೇಸ್ ಹೊಂದಿದೆ. ಸುಮಾರು 400 ವರ್ಷಗಳ ಅವಧಿಯಲ್ಲಿ ಈ ಅರಮನೆಯನ್ನು ಮೇವಾರದ ರಾಜವಂಶದ ಹಲವು ಆಡಳಿತಗಾರರ ಕೊಡುಗೆಗಳಿಂದ ನಿರ್ಮಿಸಲಾಯಿತು.

ಲೇಕ್ ಪ್ಯಾಲೇಸ್

ಲೇಕ್ ಪ್ಯಾಲೇಸ್

PC: Flicka
ಲೇಕ್ ಪ್ಯಾಲೇಸ್ ಅಥವಾ ತಾಜ್ ಲೇಕ್ ಪ್ಯಾಲೇಸ್ ಉದಯಪುರದ ಪಿಚೋಲಾ ಸರೋವರದ ಜಗ್ ನಿವಾಸ್ ದ್ವೀಪದಲ್ಲಿ ನೆಲೆಗೊಂಡಿದೆ. ಉದೈಪುರದ ತಾಜ್ ಲೇಕ್ ಪ್ಯಾಲೇಸ್ ಪ್ರಪಂಚದ ಅತ್ಯಂತ ರೋಮ್ಯಾಂಟಿಕ್ ಹೋಟೆಲ್ ಆಗಿದೆ. ಹಿಂದೆ ಜಗ್ ನಿವಾಸ್ ಎಂದು ಕರೆಯಲ್ಪಡುತ್ತಿದ್ದ ಲೇಕ್ ಪ್ಯಾಲೇಸ್ ಇಂದು ಉದಯಪುರದ ಭವ್ಯವಾದ ತಾಜ್ ಲೇಕ್ ಅರಮನೆಯಾಗಿದೆ. ಮಹಾರಾಣ ಜಗತ್ ಸಿಂಗ್ II ರವರು 1743 ಮತ್ತು 1746 AD ನಡುವೆ ಸಂತೋಷದ ಅರಮನೆಯಾಗಿ ಇದನ್ನು ನಿರ್ಮಿಸಿದರು.

ಜಗದೀಶ್ ದೇವಾಲಯ

ಜಗದೀಶ್ ದೇವಾಲಯ

ಜಗದೀಶ್ ದೇವಾಲಯವು ಉದೈಪುರದ ಸಿಟಿ ಪ್ಯಾಲೇಸ್ ಸಂಕೀರ್ಣದಲ್ಲಿರುವ ಹಿಂದೂ ದೇವಾಲಯವಾಗಿದೆ. ಇದು ಉದಯಪುರದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ವಿಷ್ಣು ದೇವರಿಗೆ ಅರ್ಪಿತವಾಗಿರುವ ಈ ದೇವಾಲಯವು ಉದೈಪುರ್ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ದೇವಸ್ಥಾನವನ್ನು ಇಂಡೋ-ಆರ್ಯನ್ ಶೈಲಿಯ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಮೂರು ಮಹಡಿಗಳ ದೇವಸ್ಥಾನವು ವಾಸ್ತುಶಿಲ್ಪದ ಅದ್ಭುತವಾಗಿದೆ, ಇದು ಸುಂದರವಾಗಿ ಕೆತ್ತಿದ ಸ್ತಂಭಗಳು, ಅಲಂಕೃತವಾದ ಛಾವಣಿಗಳು, ಬಣ್ಣ ಗೋಡೆಗಳು ಮತ್ತು ಸೊಂಪಾದ ಕೋಣೆಗಳು ಒಳಗೊಂಡಿದೆ.

ತಲುಪುವುದು ಹೇಗೆ?

ಮಹಾರಾಣ ಪ್ರತಾಪ್ ವಿಮಾನ ನಿಲ್ದಾಣ ಅಥವಾ ಡಬಾಕ್ ವಿಮಾನ ನಿಲ್ದಾಣ ಎಂದು ಸಹ ಕರೆಯಲ್ಪಡುವ ಉದಯ್‌ಪುರ ವಿಮಾನ ನಿಲ್ದಾಣವು ನಗರದ ಇತರ ಭಾಗಗಳಿಗೆ ಸಂಪರ್ಕವನ್ನು ಹೊಂದಿದೆ. ಏರ್ ಇಂಡಿಯಾ, ಜೆಟ್ ಏರ್‌ವೇಸ್‌ ಮತ್ತು ಸ್ಪೈಸ್ ಜೆಟ್ ಉದಯಪುರಕ್ಕೆ ಹೊಸ ದೆಹಲಿ, ಮುಂಬೈ ಮತ್ತು ಜೈಪುರದಿಂದ ನಿಯಮಿತ ವಿಮಾನಯಾನಗಳನ್ನು ನಿರ್ವಹಿಸುತ್ತವೆ. ನಗರ ಕೇಂದ್ರದಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ ಮತ್ತು ಪ್ರವಾಸಿಗರು ತಮ್ಮ ಗಮ್ಯಸ್ಥಾನವನ್ನು ತಲುಪಲು ಬಾಡಿಗೆಗೆ ವಾಹನಗಳನ್ನು ಪಡೆಯಬಹುದಾಗಿದೆ. ವಿಮಾನ ನಿಲ್ದಾಣದ ಹೊರಗಿನಿಂದ ಹಲವಾರು ಆಟೋಗಳು ಮತ್ತು ಟ್ಯಾಕ್ಸಿಗಳು ಲಭ್ಯವಿದೆ.

ಬಸ್‌ ಮೂಲಕ

ಉದಯಪುರ್ ಬಸ್ ಸೇವೆಗಳ ವ್ಯಾಪಕ ಜಾಲಗಳ ಮೂಲಕ ವಿವಿಧ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ದೆಹಲಿ, ಜೈಪುರ್, ಇಂದೋರ್ ಮತ್ತು ಕೋಟಾದಿಂದ ನಿಯಮಿತ ಬಸ್ಸುಗಳು ಈ ನಗರಗಳೊಂದಿಗೆ ಉದಯಪುರವನ್ನು ಸಂಪರ್ಕಿಸುತ್ತವೆ. ತಮ್ಮ ಬಜೆಟ್ ಮತ್ತು ಅವಶ್ಯಕತೆಗಳನ್ನು ಅವಲಂಬಿಸಿ, ಪ್ರಯಾಣಿಕರು ಹವಾನಿಯಂತ್ರಿತ , ಐಷಾರಾಮಿ ಬಸ್ಸುಗಳು ಅಥವಾ ರಾಜ್ಯ ಸಾರಿಗೆ ಬಸ್ಸುಗಳನ್ನು ಆಯ್ಕೆ ಮಾಡಬಹುದು.

ಇನ್ನು ರೈಲಿನ ಮೂಲಕ ಹೋಗುವುದಾದರೆ ಉದಯಪುರ್ ರೈಲು ನಿಲ್ದಾಣವು ದೆಹಲಿ, ಕೊಲ್ಕತ್ತಾ, ಜೈಪುರ ಮತ್ತು ಮುಂಬೈ ಮುಂತಾದ ಪ್ರಮುಖ ಭಾರತೀಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಮೇವಾರ್ ಎಕ್ಸ್ಪ್ರೆಸ್, ಅನನ್ಯ ಎಕ್ಸ್ಪ್ರೆಸ್, ಗ್ವಾಲಿಯರ್-ಉದಯಪುರ್ ಎಕ್ಸ್ಪ್ರೆಸ್ ಮತ್ತು ಚೇತಕ್ ಎಕ್ಸ್ಪ್ರೆಸ್ ಮುಂತಾದ ರೈಲುಗಳು ಪ್ರತಿದಿನವೂ ಅಹಮದಾಬಾದ್, ಸೀಲ್ದಾಹ್ ಮತ್ತು ಅಜ್ಮೀರ್‌ಗೆ ಪ್ರಯಾಣಿಸುತ್ತಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X