
ಕೇರಳದಲ್ಲಿ ಒಂದು ಶಿವನ ದೇವಾಲಯವಿದೆ. ಈ ದೇವಾಲಯದ ಪ್ರವೇಶ ದ್ವಾರದ ಬಳಿ ಇರುವ ದೀಪ ಸ್ಥಂಭವು ಸುಮಾರು 450 ವರ್ಷಗಳಿಂದ ಉರಿಯುತ್ತಲಿದೆಯಂತೆ. ಕೇರಳದ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಇದೂ ಒಂದಾಗಿದೆ. ಇಲ್ಲಿ ಚಿನ್ನದ ಆನೆಯೂ ಇದೆಯಂತೆ. ಈ ವಿಶೇಷ ದೇವಾಲಯದ ನಾವಿಂದು ತಿಳಿಸಲಿದ್ದೇವೆ.

ಎಲ್ಲಿದೆ ಈ ದೇವಾಲಯ
ಕೊಟ್ಟಾಯಂ ರೈಲು ನಿಲ್ದಾಣದಿಂದ 11 ಕಿ.ಮೀ ದೂರದಲ್ಲಿ, ಎಟ್ಟಮನೂರ್‌ನಲ್ಲಿರುವ ಮಹಾದೇವ ದೇವಸ್ಥಾನ ಕೇರಳದ ಅತ್ಯಂತ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಒಂದಾಗಿದೆ. ಕೊಟ್ಟಾಯಂ ಮತ್ತು ಕೊಚ್ಚಿ ಬಳಿ ಭೇಟಿ ನೀಡಲು ಇದು ಒಂದು ಜನಪ್ರಿಯ ಪ್ರವಾಸಿ ಯಾತ್ರಾ ಸ್ಥಳವಾಗಿದೆ.
ಕೋಲಾರದಲ್ಲಿನ ಕೈಗಾಲ್ ಜಲಪಾತ, ಅವನಿ ತಾಣಗಳಿಗೆ ಹೋಗಿದ್ದೀರಾ?

ವಾಸ್ತುಶಿಲ್ಪಗಳಿಗೆ ಹೆಸರುವಾಸಿಯಾಗಿದೆ
ಈ ದೇವಾಲಯವು ಅಸಾಧಾರಣವಾದ ಭಿತ್ತಿಚಿತ್ರಗಳು ಮತ್ತು 16 ನೇ ಶತಮಾನದಲ್ಲಿ ಮಾಡಲಾದ ವಾಸ್ತುಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಹಿಂದೂ ಮಹಾಕಾವ್ಯಗಳು, ರಾಮಾಯಣ ಮತ್ತು ಮಹಾಭಾರತ ಮತ್ತು ಪುರಾಣಗಳ ಭಿತ್ತಿಚಿತ್ರಗಳನ್ನು ಕಾಣಬಹುದು. ದೇವಸ್ಥಾನದ ಪ್ರವೇಶದ್ವಾರದಲ್ಲಿ ಒಂದು ತೈಲ ದೀಪವಿದೆ. ಇದು 450 ವರ್ಷಗಳಿಗೂ ಹಿಂದಿನದು ಎಂದು ನಂಬಲಾಗಿದೆ . ಇಲ್ಲಿ ದಿನನಿತ್ಯ ಭಕ್ತರು ಬಂದು ಎಣ್ಣೆಯನ್ನು ಹಾಕುತ್ತಾರೆ . 16 ನೇ ಶತಮಾನದಲ್ಲಿ ನಿರ್ಮಿಸಲಾದ 14 ಅಲಂಕಾರಿಕ ಗೋಪುರಗಳು ಈ ದೇವಸ್ಥಾನದಲ್ಲಿದೆ.

ಚಿನ್ನದ ಆನೆಗಳು
ದೇವಾಲಯದ ಮತ್ತೊಂದು ಆಕರ್ಷಣೆಯೆಂದರೆ ಈಜಾರಾ ಪುರಾನಾ (ಚಿನ್ನದ ಆನೆಗಳು) . ಇದನ್ನು ಟ್ರಾವಂಕೂರು ಮಹಾರಾಜರು ದೇವಾಲಯಕ್ಕೆ ದೇಣಿಗೆ ನೀಡಿದ್ದರು . ಗೋಲ್ಡನ್ ಆನೆಗಳನ್ನು ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ದೇವಸ್ಥಾನದ ವಾರ್ಷಿಕ ಉತ್ಸವದ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಕೇವಲ ಹಿಂದೂಗಳನ್ನು ಮಾತ್ರ ಪ್ರವೇಶಿಸಬಹುದು.
ಈ ಶಿವನ ದೇವಾಲಯದಲ್ಲಿ ಚರ್ಮದ ವಸ್ತುವನ್ನು ಧರಿಸುವಂತಿಲ್ಲ

ವಾರ್ಷಿಕ ಉತ್ಸವ
ಎಝಾರಪೋನನ್ನಾ ಎಜುನಾಲ್ಲತು ಎನ್ನುವುದು ಇಲ್ಲಿನ ಪ್ರಮುಖ ವಾರ್ಷಿಕ ಉತ್ಸವವಾಗಿದೆ. ಫೆಬ್ರವರಿ-ಮಾರ್ಚ್ ತಿಂಗಳಲ್ಲಿ 10 ದಿನಗಳ ಕಾಲ ಆಚರಿಸಲಾಗುತ್ತದೆ. ಬೆಳಗ್ಗೆ 4 ಗಂಟೆಯಿಂದ ಮಧ್ಯಾಹ್ನ12.30 ರವರೆಗೆ ಮತ್ತು ಸಂಜೆ 5 ರಿಂದ 8 ಗಂಟೆಯವರೆಗೆ ಈ ದೇವಸ್ಥಾನವು ತೆರೆದಿರುತ್ತದೆ.

ದಂತಕಥೆಯ ಪ್ರಕಾರ
ಈ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ. ದಂತಕಥೆಯ ಪ್ರಕಾರ, ಖುರಾ ಎಂದು ಕರೆಯಲ್ಪಡುವ ಅಸುರನು ಶಿವನಿಂದ ಮೂರು ಶಿವಲಿಂಗಗಳನ್ನು ಪಡೆದುಕೊಂಡಿದ್ದ. ಅಸುರನು ಆ ಶಿವಲಿಂಗಗಳನ್ನು ಕೇರಳಕ್ಕೆ ಕೊಂಡೊಯ್ದನು, ಒಂದು ಶಿವಲಿಂಗವನ್ನು ಹಲ್ಲಿನಲ್ಲಿ ಇನ್ನೊಂದನ್ನು ಎಡ ಕೈಯಲ್ಲಿ ಹಿಡಿದಿಟ್ಟು ಮತ್ತೊಂದನ್ನು ತನ್ನ ಬಲ ಗೈಯಲ್ಲಿ ಹಿಡಿದಿದ್ದರು. ತನ್ನ ಹಲ್ಲುಗಳಿಂದ ಹಿಡಿದಿದ್ದ ಲಿಂಗವನ್ನು ಕತುತುರುತಿನಲ್ಲಿ, ಬಲಗೈಯಲ್ಲಿ ಹಿಡಿದಿದ್ದ ಲಿಂಗವನ್ನು ವೈಕಮ್‌ನಲ್ಲಿ ಹಾಗೂ ಎಡಗೈಯಲ್ಲಿದ್ದದನ್ನು ಎಟ್ಟುಮನೂರಿನಲ್ಲಿ ಸ್ಥಾಪಿಸಲಾಯಿತು.
ಸವದತ್ತಿಯಲ್ಲಿರುವ ಈ ಎಲ್ಲಾ ತಾಣಗಳನ್ನು ನೋಡಿದ್ದೀರಾ?

ಪಾಂಡವರು ಪೂಜಿಸುತ್ತಿದ್ದರು
ಈ ದೇವಾಲಯದಲ್ಲಿ ಪಾಂಡವರು ಮತ್ತು ವ್ಯಾಸ ಋಷಿ ಪೂಜಿಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಕ್ರಿ.ಶ. 1542 ರಲ್ಲಿ ಪ್ರಾಚೀನ ದೇವಾಲಯವನ್ನು ಪುನರ್ನಿರ್ಮಿಸಲಾಯಿತು. ಈ ದೇವಸ್ಥಾನವನ್ನು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಗೋಡೆಗಳಲ್ಲಿ ದ್ರಾವಿಡ ಶೈಲಿಯ ವರ್ಣಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ.

ತಲುಪುವುದು ಹೇಗೆ?
ಎಟ್ಟಮನೂರ್‌ನಲ್ಲಿರುವ ಮಹಾದೇವ ದೇವಸ್ಥಾನವನ್ನು ತಲುಪಲು ಸಮೀಪದ ವಿಮಾನ ನಿಲ್ದಾಣವೆಂದರೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಸುಮಾರು 75ಕಿ.ಮೀ ದೂರದಲ್ಲಿದೆ. ಇಲ್ಲಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಮೂಲಕ ದೇವಸ್ಥಾನವನ್ನು ತಲುಪಬಹುದು. ಇನ್ನು ಸಮೀಪದ ರೈಲು ನಿಲ್ದಾಣವೆಂದರೆ ಎಟ್ಟಮನೂರು ರೈಲು ನಿಲ್ದಾಣ. ಇದು 2 ಕಿ.ಮೀ ದೂರದಲ್ಲಿದೆ. ಸಮೀಪದ ಬಸ್ ನಿಲ್ದಾಣವೆಂದರೆ ಎಟ್ಟಮನೂರು ಬಸ್ ನಿಲ್ದಾಣ. ಇದೂ ಕೂಡಾ ದೇವಸ್ಥಾನದಿಂದ 2 ಕಿ.ಮೀ ದೂರದಲ್ಲಿದೆ.
ಶಿವನ ಜಡೆಯನ್ನು ಪೂಜಿಸುವ ಈ ಕ್ಷೇತ್ರಕ್ಕೆ ಹೊಗಿದ್ದೀರಾ ?

ಕುಮಾರಕೊಮ್
ಕುಮಾರಕೊಮ್ ಎಂಬ ಹೆಸರನ್ನು ಕುಮಾರನ್ ದೇವರಿಂದ ಪಡೆಯಲಾಗಿದೆ. ಕುಮಾರಕೊಮ್ ಪಕ್ಷಿ ಧಾಮ, ಕುಮಾರಮಂಗಲಂ ದೇವಸ್ಥಾನ, ವೈಕೊಮ್, ಪತಿರಮಾನಲ್ ದ್ವೀಪ, ಅರಾನ್ಮುಲ, ವಗಮೋನ್ ಮತ್ತು ಎರುಮೆಲಿ ಕುಮರಕೊಮ್‌ನಲ್ಲಿರುವ ಪ್ರವಾಸಿ ತಾಣಗಳಾಗಿವೆ. ಕುಮಾರಕೋಮ್ ಪಕ್ಷಿ ಧಾಮವು ಒಂದು ಪ್ರಸಿದ್ಧ ಪಕ್ಷಿಧಾಮವಾಗಿದ್ದು, ಇಲ್ಲಿ ಹಲವು ಪ್ರಭೇದಗಳು ವಲಸೆ ಹೋಗುತ್ತವೆ.

ವೆಂಬನಾಡ್ ಸರೋವರ
ವೆಂಬನಾಡ್ ಸರೋವರ ಭಾರತದ ಅತ್ಯಂತ ದೊಡ್ಡ ತಾಜಾ ನೀರಿನ ಸರೋವರಗಳಲ್ಲಿ ಒಂದಾಗಿದೆ. ಕುಮರಕೊಮ್‌ನಲ್ಲಿನ ಪ್ರಮುಖ ದೃಶ್ಯಗಳ ನಡುವೆ ವೆಂಬನಾಡ್‌ನ ಹಿನ್ನೀರುಗಳಲ್ಲಿ ಬೋಟ್ ಸವಾರಿ ನಿಜಕ್ಕೂ ಉತ್ತಮ ಅನುಭವ ನೀಡುತ್ತದೆ. ಬೋಟ್ ಕ್ರೂಸ್ ಅನುಭವಕ್ಕಾಗಿ ದೋಣಿಗಳು ಮತ್ತು ಹೌಸ್ ಬೋಟ್‌ಗಳು ಇವೆ. ಕುಮಾರಕೋಮ್‌ಗೆ ಪ್ರತಿ ಪ್ರಯಾಣಿಕರಿಗೆ ಹಿನ್ನೀರಿನ ಹಾದಿಯ ದೋಣಿ ವಿಹಾರ ನಿಜವಾಗಿಯೂ ಅದ್ಭುತ ಅನುಭವವಾಗಿದೆ.
ಗೋವಾಗೆ ಹೋದ್ರೆ ಈ ಪಾಂಡವರ ಗುಹೆಯನ್ನು ನೋಡಲೇ ಬೇಕು

ಚೆರಿಯಾಪಲ್ಲಿ ಚರ್ಚ್, ಕೊಟ್ಟಾಯಂ
ಕೊಟ್ಟಾಯಂ ರೈಲ್ವೇ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿ, ಚೆರಿಯಾಪಲ್ಲಿ ಚರ್ಚ್ ತಾಯಿ ಮೇರಿಗೆ ಅರ್ಪಿತವಾಗಿದೆ. ಕೊಟ್ಟಾಯಂನಲ್ಲಿ ನಿರ್ಮಿಸಲಾದ ಮೊದಲ ಚರ್ಚ್ ಇದಾಗಿದೆ. ಇದನ್ನು 1579 ರಲ್ಲಿ ಪೋರ್ಚುಗೀಸರು ನಿರ್ಮಿಸಿದರು, ಇದು ಕೇರಳದ ಅತ್ಯಂತ ಹಳೆಯ ಚರ್ಚುಗಳಲ್ಲಿ ಒಂದಾಗಿದೆ. ಈ ದೇವಾಲಯದ ವಾಸ್ತುಶಿಲ್ಪವು ಹಿಂದೂ ದೇವಾಲಯದ ವಾಸ್ತುಶಿಲ್ಪದೊಂದಿಗೆ ಯುರೋಪಿಯನ್ ವಾಸ್ತುಶೈಲಿಯ ಮಿಶ್ರಣವಾಗಿದೆ. ಹೊರಗಿನ ದೊಡ್ಡ ಇಟ್ಟಿಗೆ ಗೋಡೆಗಳಲ್ಲಿ ಹಿಂದೂ ಪ್ರಭಾವವು ಕಂಡುಬರುತ್ತದೆ, ಇಲ್ಲಿನ ಗೋಡೆಗಳು ಮತ್ತು ಛಾವಣಿಗಳ ಮೇಲೆ ವರ್ಣಚಿತ್ರಗಳಲ್ಲಿ ಕ್ರಿಸ್ತನ ಜೀವನವನ್ನು ಚಿತ್ರಿಸಲಾಗಿದೆ.