Search
  • Follow NativePlanet
Share
» »ವಿಗ್ರಹಾರಾಧನೆ ಇಲ್ಲದ ಏಕೈಕ ಶಕ್ತಿ ಪೀಠ.....

ವಿಗ್ರಹಾರಾಧನೆ ಇಲ್ಲದ ಏಕೈಕ ಶಕ್ತಿ ಪೀಠ.....

ಭಾರತ ದೇಶ ಅತ್ಯಂತ ಪುರಾತನ ನಗರಗಳಿಗೆ ನಿಲಯವಾಗಿದೆ ಎಂಬ ವಿಷಯ ತಿಳಿದದ್ದೆ. ಅಂತಹ ನಗರಗಳಲ್ಲಿ ಒಂದಾದ ಪ್ರಯಾಗ್‍ನಲ್ಲಿನ ಶಕ್ತಿ ಪೀಠವು ಒಂದು. ಈ ಪ್ರಯಾಗ್ ಪ್ರಸ್ತುತ ಅಲಹಾಬಾದ್ ಎಂದು ಕರೆಯುತ್ತಾರೆ. ಇಲ್ಲಿರುವ ಒಂದು ಶಕ್ತಿ ಪೀಠವು ಅತ್ಯಂತ

ಭಾರತ ದೇಶ ಅತ್ಯಂತ ಪುರಾತನ ನಗರಗಳಿಗೆ ನಿಲಯವಾಗಿದೆ ಎಂಬ ವಿಷಯ ತಿಳಿದದ್ದೆ. ಅಂತಹ ನಗರಗಳಲ್ಲಿ ಒಂದಾದ ಪ್ರಯಾಗ್‍ನಲ್ಲಿನ ಶಕ್ತಿ ಪೀಠವು ಒಂದು. ಈ ಪ್ರಯಾಗ್ ಪ್ರಸ್ತುತ ಅಲಹಾಬಾದ್ ಎಂದು ಕರೆಯುತ್ತಾರೆ. ಇಲ್ಲಿರುವ ಒಂದು ಶಕ್ತಿ ಪೀಠವು ಅತ್ಯಂತ ವಿಶೇಷವಾದದ್ದು. ಈ ಶಕ್ತಿ ಪೀಠದಲ್ಲಿ ವಿಗ್ರಹ ಆರಾಧನೆಯನ್ನು ಮಾಡುವುದಿಲ್ಲ. ಹೀಗೆ ವಿಗ್ರಹ ಆರಾಧನೆ ಇಲ್ಲದ ಶಕ್ತಿಪೀಠ ಎಂದರೆ ಭಾರತ ದೇಶದಲ್ಲಿ ಇದೊಂದೆ ಎಂದು ಹೇಳಬಹುದು.

ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮ ಪ್ರದೇಶದಲ್ಲಿನ ಅಲಹಾಬಾದ್ನನ್ನು ತ್ರಿವೇಣಿ ಸಂಗಮ ಎಂದು ಕೂಡ ಕರೆಯುತ್ತಾರೆ. ಇಲ್ಲಿನ ಪವಿತ್ರವಾದ ನದಿಗಳಲ್ಲಿ ಸ್ನಾನವನ್ನು ಆಚರಿಸಿ ಶ್ರಾದ್ಧ ಕಾರ್ಯಗಳನ್ನು ಕೂಡ ಮಾಡುತ್ತಾರೆ. ಹಾಗಾಗಿಯೇ ದೇಶದಲ್ಲಿನ ಮೂಲೆಮೂಲೆಗಳಿಂದ ಅನೇಕ ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಷ್ಟೇ ಅಲ್ಲ ಹನ್ನೆರಡು ವರ್ಷಕ್ಕೊಮ್ಮೆ ಇಲ್ಲಿ ಕುಂಭಮೇಳ ನಡೆಯುತ್ತದೆ. ಇಷ್ಟು ವಿಶಿಷ್ಟತೆಯನ್ನು ಹೊಂದಿರುವ ಈ ಶಕ್ತಿ ಪೀಠದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೇಟಿವ್ ಪ್ಲಾನೆಟ್ ನ ಮೂಲಕ ತಿಳಿದುಕೊಳ್ಳಿ.

1.ಹಿಂದೂ ಪುರಾಣಗಳ ಪ್ರಕಾರ

1.ಹಿಂದೂ ಪುರಾಣಗಳ ಪ್ರಕಾರ

PC:YOUTUBE

ಭಾರತ ದೇಶದಲ್ಲಿನ 52 ಶಕ್ತಿ ಪೀಠಗಳಲ್ಲಿ ಈ ಚಿನ್ತಪೂರ್ಣಿ ಕೂಡ ಇದೆ. ಪುರಾಣಗಳ ಪ್ರಕಾರ ದಕ್ಷ ಪ್ರಜಾಪತಿಯ ಮಗಳಾದ ದಾಕ್ಷಾಯಣಿಯು ಪರಮಶಿವನನ್ನು ಪ್ರೇಮಿಸಿ ವಿವಾಹ ಮಾಡಿಕೊಳ್ಳುತ್ತಾಳೆ.

2.ದಕ್ಷಪ್ರಜಾಪತಿ

2.ದಕ್ಷಪ್ರಜಾಪತಿ

PC:YOUTUBE

ಆದರೆ ಈ ವಿವಾಹ ದಕ್ಷಪ್ರಜಾಪತಿಗೆ ಇಷ್ಟವಿರುವುದಿಲ್ಲ. ಆದ್ದರಿಂದಲೇ ತನ್ನ ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಕೂಡ ತನ್ನ ಮಗಳಾದ ದಾಕ್ಷಾಯಣಿಗೇ ಆಗಲಿ ಆಳಿಯನಾದ ಪರಮಶಿವನಿಗೆ ಆಗಲಿ ಕರೆಯುತ್ತಿರುವುದಿಲ್ಲ.

3.ಯಾಗ

3.ಯಾಗ

PC:YOUTUBE

ಈ ಕ್ರಮದಲ್ಲಿಯೇ ಒಮ್ಮೆ ದಕ್ಷನು ಒಂದು ದೊಡ್ಡ ಯಾಗವನ್ನು ಮಾಡಬೇಕು ಎಂದು ಭಾವಿಸುತ್ತಾನೆ. ಈ ವಿಷಯವನ್ನು ತಿಳಿದುಕೊಂಡ ದಾಕ್ಷಾಯಣಿಯು ತನಗೆ ಆಹ್ವಾನ ಇಲ್ಲದೆ ಇದ್ದರು, ಪತಿಯು ಬೇಡ ಎಂದು ಹೇಳಿದರೂ ಕೇಳದೆ ತವರು ಮನೆಯ ಮೇಲೆ ಮಮಕಾರದಿಂದಾಗಿ ಯಾಗ ನಡೆಯುತ್ತಿರುವ ಸ್ಥಳಕ್ಕೆ ತೆರಳುತ್ತಾಳೆ. ದಕ್ಷಪ್ರಜಾಪತಿಯು ಆಕೆಯನ್ನು ಹಾಗು ಪರಮಶಿವನನ್ನು ಅವಮಾನಿಸುತ್ತಾನೆ. ಇದರಿಂದ ಅವಮಾನಿತಳಾಗಿ ಆತ್ಮಹೂತಿ ಮಾಡಿಕೊಳ್ಳುತ್ತಾಳೆ.

4.ವೀರಭದ್ರ

4.ವೀರಭದ್ರ

PC:YOUTUBE

.ಈ ವಿಷಯಯನ್ನು ತಿಳಿದುಕೊಂಡ ಪರಮೇಶ್ವರನು ಅತ್ಯಂತ ಕೋಪದಿಂದ ರುದ್ರನಾಗಿ ತನ್ನ ಜಠಾಜೂಟದಿಂದ ವೀರಭದ್ರನನ್ನು ಸೃಷ್ಟಿಸಿ ಆತನ ಮೂಲಕ ಯಾಗವನ್ನು ಧ್ವಂಸಗೊಳಿಸುತ್ತಾನೆ. ತನ್ನ ಪತ್ನಿಯಾದ ದಾಕ್ಷಾಯಣಿಯ ಪಾರ್ಥಿವ ಶರೀರವನ್ನು ತನ್ನ ಭುಜದ ಮೇಲೆ ಹಾಕಿಕೊಂಡು ಪ್ರಳಯ ತಾಂಡವ ಮಾಡುತ್ತಾನೆ.

5. 52 ಭಾಗ

5. 52 ಭಾಗ

PC:YOUTUBE

ಇದರಿಂದಾಗಿ ಸೃಷ್ಟಿ ಕಾರ್ಯವು ಅಲ್ಲೊಲ-ಕಲ್ಲೊಲವಾಗುತ್ತದೆ. ಸಮಸ್ಯೆ ಪರಿಷ್ಕಾರಕ್ಕಾಗಿ ವಿಷ್ಣುವು ತನ್ನ ಸುದರ್ಶನ ಚಿಕ್ರದಿಂದ ದಾಕ್ಷಾಯಣಿ ಶರೀರವನ್ನು 52 ಭಾಗಗಳಾಗಿ ಕತ್ತರಿಸುತ್ತಾನೆ. ಹೀಗೆ ಕತ್ತರಿಸಿ ಬಿದ್ದ ಶರೀರ ಭಾಗಗಳೇ ಶಕ್ತಿ ಪೀಠಗಳು. ಆ ಶಕ್ತಿಪೀಠಗಳು ಭಾರತ ದೇಶದ ಅಲ್ಲಲ್ಲಿ ಪುಣ್ಯಕೇತ್ರವಾಗಿವೆ.

6.ಶಕ್ತಿಪೀಠಗಳು

6.ಶಕ್ತಿಪೀಠಗಳು

PC:YOUTUBE

ಪ್ರಸ್ತುತ ಈ ಶಕ್ತಿಪೀಠಗಳು ಪುಣ್ಯಕ್ಷೇತ್ರಗಳಾಗಿ ಭಕ್ತರ ಕೋರಿಕೆಗಳನ್ನು ನೆರವೇರಿಸುತ್ತದೆ. ಈ ಕ್ರಮದಲ್ಲಿ ಶಕ್ತಿ ಪೀಠಗಳಲ್ಲಿ ಒಂದಾದ ಹದಿನಾಲ್ಕನೇ ಶಕ್ತಿ ಪೀಠವೇ ಅಲಹಾಬಾದ್ನಲ್ಲಿನ ಶ್ರೀ ಮಾಧವೇಶ್ವರ್ ಶಕ್ತಿ ಪೀಠ. ಇಲ್ಲಿ ದ್ರಾಕ್ಷಾಯಿಣಿಯ ಕೈಬೆರಳುಗಳು ಬಿದ್ದ ಪ್ರದೇಶ ಎಂದು ನಂಬಲಾಗಿದೆ

 7.ಮಾಧವೇಶ್ವರ್ ಈ ಹೆಸರಿನಿಂದ ಕರೆಯುತ್ತಾರೆ

7.ಮಾಧವೇಶ್ವರ್ ಈ ಹೆಸರಿನಿಂದ ಕರೆಯುತ್ತಾರೆ

PC:YOUTUBE

ಆ ತಾಯಿಯನ್ನು ಇಲ್ಲಿ ಶ್ರೀ ಮಾಧವೇಶ್ವರ ಎಂಬ ಹೆಸರಿನಿಂದ ಕರೆದು ಆರಾಧಿಸುತ್ತಾರೆ. ಅಷ್ಟೇ ಅಲ್ಲ ಮಾತಾ ಆಲೋಪಿಶಂಕರಿ ಎಂದು ಕೂಡ ಕರೆಯುತ್ತಾರೆ ಇಲ್ಲಿ ವಿಗ್ರಹಾರಾಧನೆ ಇರುವುದಿ್ಲ. ಗರ್ಭಗುಡಿಯಲ್ಲಿ ಯಾವುದೇ ರೀತಿಯ ವಿಗ್ರಹಗಳು ಇರುವುದಿಲ.

8. ವಿಗ್ರಹ ಆರಾಧನೆ ಇಲ್ಲದ ಶಕ್ತಿ ಪೀಠ

8. ವಿಗ್ರಹ ಆರಾಧನೆ ಇಲ್ಲದ ಶಕ್ತಿ ಪೀಠ

PC:YOUTUBE

ಹೀಗೆ ಶಕ್ತಿಪೀಠಗಳಲ್ಲಿ ವಿಗ್ರಹ ಆರಾಧನೆ ಇಲ್ಲದ ಏಕೈಕ ದೇವಾಲಯ ಇದೊಂದೇ ಎಂದೇ ಹೇಳಬಹುದು. ಪುರಾಣಗಳ ಪ್ರಕಾರ ಶ್ರೀರಾಮಚಂದ್ರನು ಇಲ್ಲಿನ ದೇವಿಯನ್ನು ಆರಾಧಿಸಿದನು ಎಂದು ಹೇಳುತ್ತವೆ.

9. ಚಿತ್ರಕೂಟ

9. ಚಿತ್ರಕೂಟ

PC:YOUTUBE

ತನ್ನ ತಮ್ಮನಾದ ಲಕ್ಷ್ಮಣ ಹಾಗೂ ಪತ್ನಿ ಸೀತೆಯೊಂದಿಗೆ ಚಿತ್ರಕೂಟದಲ್ಲಿನ ಪರ್ಣಶಾಲ ನಿರ್ಮಿಸುವುದಕ್ಕೆ ಮುಂಚೆ ಪ್ರಯಾಗ್ ನಲ್ಲಿ ಕೆಲವು ದಿನಗಳ ಕಾಲ ಇದ್ದನು. ಆ ಸಮಯದಲ್ಲಿ ಈ ದೇವಿಯನ್ನು ಆರಾಧಿಸಿದನು ಎಂದು ಹೇಳುತ್ತಾರೆ.

10. ಜಾನಪದ ಕಥೆಯ ಪ್ರಕಾರ

10. ಜಾನಪದ ಕಥೆಯ ಪ್ರಕಾರ

PC:YOUTUBE

ಸ್ಥಳಿಯ ಜಾನಪದ ಕಥೆಯ ಪ್ರಕಾರ ಆಲೋಪಿ ಎಂಬ ರಾಣಿ ವಿವಾಹ ವನ್ನು ಮಾಡಿಕೊಂಡು ಮೊದಲ ಬಾರಿಗೆ ಅತ್ತೆಯ ಮನೆಗೆ ಹೋಗುತ್ತಿರುತ್ತಾಳೆ. ಆಕೆ ಪ್ರಯಾಣಿಸುತ್ತಿರುವ ಪಲ್ಲಕಿ ಪ್ರಯಾಗ್ಗೆ ತಲುಪಿದ ಕೂಡಲೇ ದಾಳಿಕೋರರು ಆಕ್ರಮಣ ಮಾಡುತ್ತಾರೆ.

11. ಪಲ್ಲಕ್ಕಿಯಿಂದ ಮಾಯವಾಗುತ್ತಾಳೆ

11. ಪಲ್ಲಕ್ಕಿಯಿಂದ ಮಾಯವಾಗುತ್ತಾಳೆ

PC:YOUTUBE

ಇದರಿಂದಾಗಿ ಆಕೆಯು ಆ ಪಲ್ಲಕ್ಕಿ ಇಂದ ಮಾಯವಾಗುತ್ತಾಳೆ. ಅಂದಿನಿಂದ ಆಕೆಯು ಇಲ್ಲಿ ಆಲೋಪಿ ಎಂದು ಹಾಗೂ ತನಗೆ ಆಕಾರ ವಿರುವುದಿಲ್ಲ ಎಂದು ಅಶರೀರವಾಣಿಯ ಮೂಲಕ ತಿಳಿಸುತ್ತಾಳೆ. ಆದ್ದರಿಂದಲೇ ಇಲ್ಲಿಯ ಮಾತೆಯನ್ನು ಆಲೋಪಿ ಮಾತಾ ಎಂದು ಆರಾಧಿಸುತ್ತಾರೆ.

12. ಪ್ರಯಾಗ್ ಎಂಬ ಹೆಸರು

12. ಪ್ರಯಾಗ್ ಎಂಬ ಹೆಸರು

PC:YOUTUBE

ಅಲಹಾಬಾದ್ ನನ್ನು ಪೂರ್ವದಲ್ಲಿ ಪ್ರಯಾಗ್ ಎಂದು ಕರೆಯುತ್ತಿದ್ದರು. ಪ್ರಳಯದ ನಂತರ ಜೀವ ಸೃಷ್ಟಿ ನಡೆಯುವುದಕ್ಕಿಂತ ಮುಂಚೆ ಇಲ್ಲಿ ಬ್ರಹ್ಮದೇವನು ಅನೇಕ ಯಾಗಗಳನ್ನು ಮಾಡಿದ್ದರಿಂದ ಪ್ರಯಾಗ್ ಎಂಬ ಹೆಸರು ಬಂದಿತು. ಆದ್ದರಿಂದಲೇ ಈ ಸ್ಥಳವನ್ನು ಪ್ರಯಾಗ್ ಎಂದು ಕರೆಯುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X