Search
  • Follow NativePlanet
Share
» »ಸಫಾರಿಯ ನಿಜವಾದ ಅನುಭವ ಪಡೆಯಬೇಕಾದ್ರೆ ಮಚಿಯಾ ಸಫಾರಿ ಪಾರ್ಕ್‌ಗೆ ಹೋಗಿ

ಸಫಾರಿಯ ನಿಜವಾದ ಅನುಭವ ಪಡೆಯಬೇಕಾದ್ರೆ ಮಚಿಯಾ ಸಫಾರಿ ಪಾರ್ಕ್‌ಗೆ ಹೋಗಿ

ರಾಜಸ್ಥಾನದ ಎರಡನೇಯ ದೊಡ್ಡ ನಗರವಾಗಿರುವ ಜೋಧಪುರ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇಲ್ಲಿ ಮತ್ತು ಹತ್ತಿರದಲ್ಲಿ ಅನೇಕ ಮಂದಿರಗಳು, ಅರಮನೆಗಳು, ಮತ್ತು ಕೋಟೆಗಳು, ವನ್ಯಜೀವಿ ಧಾಮಗಳೂ ಇವೆ. ಅಲ್ಲದೇ ಥಾರ್ ಮರುಭೂಮಿಯ ಸುಂದರ ದೃಶ್ಯವನ್ನೂ ಇಲ್ಲಿ ನೋಡಬಹುದು. ಇಂದು ನಾವು ಜೋಧಪುರದಲ್ಲಿರುವ ಪ್ರಸಿದ್ಧ ಮಚಿಯಾ ಸಫಾರಿ ಪಾರ್ಕ್‌ ಬಗ್ಗೆ ತಿಳಿಸಲಿದ್ದೇವೆ.

ಎಲ್ಲಿದೆ ಮಚಿಯಾ ಸಫಾರಿ ಪಾರ್ಕ್‌

ಎಲ್ಲಿದೆ ಮಚಿಯಾ ಸಫಾರಿ ಪಾರ್ಕ್‌

PC: Jodhpur tourism
ಜೋಧಪುರ್ ಜಂಕ್ಷನ್‌ನಿಂದ 8.5 ಕಿ.ಮೀ ದೂರದಲ್ಲಿ, ಮಚಿಯಾ ಸಫಾರಿ ಪಾರ್ಕ್‌ ಜೋಧಪುರ್-ಜೈಸಲ್ಮೇರ್ ಮಾರ್ಗದಲ್ಲಿ ಕಲ್ಯಾಣ ಸರೋವರದ ಬಳಿ ಇರುವ ಜೈವಿಕ ಉದ್ಯಾನವಾಗಿದೆ. ಇದು ವನ್ಯಜೀವಿಗಳಲ್ಲಿ ಆಸಕ್ತಿ ಹೊಂದಿರುವವರು ಈ ಸ್ಥಳವನ್ನು ನೋಡಲೇ ಬೇಕು.

ವಿವಿಧ ಪ್ರಬೇಧದ ಪ್ರಾಣಿ ಪಕ್ಷಿಗಳು

ವಿವಿಧ ಪ್ರಬೇಧದ ಪ್ರಾಣಿ ಪಕ್ಷಿಗಳು

PC: Jodhpur tourism
ಮಚಿಯಾ ಸಫಾರಿ ಪಾರ್ಕ್‌ ಇರುವುದು ಜೈಸಲ್ಮೇರ‍್-ಜೋಧ್‌ಪುರ ರಸ್ತೆಯಲ್ಲಿ. ಜೋಧ್‌ಪುರ ನಗರದಿಂದ ಸುಮಾರು 9 ಕಿ.ಮೀ ದೂರದಲ್ಲಿ ಈ ಪಾರ್ಕ್‌ ಇದೆ. ಇದು ಜನಪ್ರಿಯ ಪಿಕ್‌ನಿಕ್‌ ತಾಣವಾಗಿದೆ. ಈ ಪಾರ್ಕ್‌ ನಲ್ಲಿ ಅಳಿಲುಗಳು, ತೋಳಗಳು, ಮುಂಗುಸಿಗಳು, ಮೊಲಗಳು, ಕಾಡುಬೆಕ್ಕುಗಳು ಮತ್ತು ಮಂಗಗಳನ್ನು ನೋಡಬಹುದು. ಜೊತೆಗೆ ಈ ಪ್ರದೇಶವು ಪಕ್ಷಿ ಪ್ರಿಯರಿಗೆ ಸೂಕ್ತವಾದ ಸ್ಥಳ. ಇಲ್ಲಿ ವಿವಿಧ ಪ್ರಬೇಧದ ಪಕ್ಷಿಗಳು ಆಗಮಿಸುತ್ತವೆ. ಈ ಪಾರ್ಕ್‌‌ನಲ್ಲಿ ಕೋಟೆಯೂ ಇದೆ. ಈ ಕೋಟೆಯ ಮೇಲಿನಿಂದ ಸೂರ್ಯಾಸ್ತದ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳಬಹುದು.

 ಯಾವಾಗ ಸ್ಥಾಪಿಸಿದ್ದು

ಯಾವಾಗ ಸ್ಥಾಪಿಸಿದ್ದು

PC: Jodhpur tourism
ಮಚಿಯಾ ಜೈವಿಕ ಉದ್ಯಾನವನ್ನು 1982-83 ರಲ್ಲಿ ನಿರ್ಮಿಸಲಾಗಿತ್ತು. ಈ ಪಾರ್ಕ್ ಮೂಲಭೂತವಾಗಿ ಜೋಧಪುರದ ಹಳೆಯ ಪರಂಪರೆ ಮೃಗಾಲಯವಾಗಿದೆ. ಮಚಿಯಾ ಜೈವಿಕ ಉದ್ಯಾನವನವು ಮಾಚಿಯ ಫಾರೆಸ್ಟ್ ಬ್ಲಾಕ್‌ನ 604 ಹೆಕ್ಟೇರ್ ಪ್ರದೇಶದಲ್ಲಿ 41 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ.

ಎಲಿಫೆಂಟ್ ಸವಾರಿ

ಇದು ಪಕ್ಷಿ ವೀಕ್ಷಕರಿಗೆ ಅತ್ಯುತ್ತಮವಾದ ಸ್ಥಳವಾಗಿದೆ. ಪಾರ್ಕ್ ಆವರಣದಲ್ಲಿ, ಒಂದು ದೃಶ್ಯ ಸೂರ್ಯಾಸ್ತದ ನೋಟವನ್ನು ಪಡೆಯುವ ಕೋಟೆ ಇದೆ. ಉದ್ಯಾನವನದ ಪ್ರಮುಖ ಆಕರ್ಷಣೆ ಎಲಿಫೆಂಟ್ ಸವಾರಿ, ಇದು ಸುಂದರವಾದ ವನ್ಯಜೀವಿ ಉದ್ಯಾನವನದ ಪಕ್ಷಿ ನೋಟವನ್ನು ನೀಡುತ್ತದೆ.

ಭೇಟಿಯ ಸಮಯ

ಭೇಟಿಯ ಸಮಯ

PC: Jodhpur tourism
ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ 8.30 ರಿಂದ 5 ಗಂಟೆಗೆ ವರೆಗೆ ಈ ವನ್ಯಜೀವಿಧಾಮಕ್ಕೆ ಭೇಟಿ ನೀಡಬಹುದು. ಪ್ರವೇಶ ಶುಲ್ಕ: ಭಾರತೀಯರಿಗೆ 30ರೂ., ವಿದೇಶಿಯರಿಗೆ 300 ರೂ. ಕ್ಯಾಮೆರಾಕ್ಕೆ 80ರೂ. ಮತ್ತು ವೀಡಿಯೊಗಾಗಿ 200ರೂ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Jodhpur tourism
ಸಮೀಪದ ಬಸ್ ಸ್ಟಾಪ್ ಅಖಾಲಿಯಾ ಚೂರಾಹ ಬಸ್ ಸ್ಟಾಪ್ ಆಗಿದೆ. ಇದು ಪಾರ್ಕ್‌ನಿಂದ 4 ಕಿಲೋಮೀಟರ್ ದೂರದಲ್ಲಿದೆ. ಈ ಗಮ್ಯಸ್ಥಾನವನ್ನು ತಲುಪಲು ಟ್ಯಾಕ್ಸಿಗಳು ಮತ್ತು ಆಟೋ ರಿಕ್ಷಾಗಳನ್ನು ಬಳಸಬಹುದು. ಹೆಚ್ಚು ಸುಂದರವಾದ ಮಾರ್ಗಕ್ಕಾಗಿ, ಚಾಪ್ನಾನಿ ರಸ್ತೆಯನ್ನು ತೆಗೆದುಕೊಳ್ಳಬಹುದು, ಅದು ಕೇಯ್ಲಾನಾ ಸರೋವರದ ಉದ್ದಕ್ಕೂ ಸಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X