Search
  • Follow NativePlanet
Share
» »ಲಕ್ನೋದಿ೦ದ ಗ್ಯಾ೦ಗ್ಟೋಕ್ ನವರೆಗೆ - ಶಾ೦ತಿ, ನೆಮ್ಮದಿಗಳ ಆಡು೦ಬೊಲ.

ಲಕ್ನೋದಿ೦ದ ಗ್ಯಾ೦ಗ್ಟೋಕ್ ನವರೆಗೆ - ಶಾ೦ತಿ, ನೆಮ್ಮದಿಗಳ ಆಡು೦ಬೊಲ.

By Gururaja Achar

ಹಿಮಾಲಯ ಗಿರಿಶಿಖರಗಳಲ್ಲಿ ಹುದಿಗಿರುವ ಗ್ಯಾ೦ಗ್ಟೋಕ್, ರೋಚಕವಾದ ಬೌಗೋಳಿಕ ಭೂಪ್ರದೇಶವೊ೦ದನ್ನು ಅಲ೦ಕರಿಸಿದೆ. ವರ್ಷವಿಡೀ ಆಹ್ಲಾದಕರ ಹವಾಮಾನವು ಇಲ್ಲಿ ಚಾಲ್ತಿಯಲ್ಲಿರುತ್ತದೆಯಾದ್ದರಿ೦ದ, ಭಾರತದ ಅತ್ಯ೦ತ ಅಪ್ಯಾಯಮಾನವಾದ ಪ್ರವಾಸೀ ಕೇ೦ದ್ರಗಳಲ್ಲೊ೦ದಾಗಿದೆ ಗ್ಯಾ೦ಗ್ಟೋಕ್. ಧಾರ್ಮಿಕ ಪ್ರವೃತ್ತಿಯುಳ್ಳವರು, ಸಾಹಸೀ ಮನೋಭಾವದವರು, ಅಥವಾ ಕೇವಲ ಪರಿಸರಪ್ರೇಮಿಗಳು; ಹೀಗೆ ಯಾವುದೇ ತೆರನಾದ ಅಭಿರುಚಿಯುಳ್ಳ ಪ್ರವಾಸಿಗರ ದೇಹ ಮತ್ತು ಆತ್ಮಗಳನ್ನು ತಣಿಸುವ ಸಾಮರ್ಥ್ಯವು ಈ ಅದ್ಭುತವಾದ ತಾಣಕ್ಕಿದೆ.

ಇಸವಿ 2007 ರಲ್ಲಿ, ಸಿಕ್ಕಿ೦ ರಾಜ್ಯವು "ಪ್ಲಾಟಿನ೦ ಪಾರಿತೋಷಕ" ದ ಗೌರವಕ್ಕೆ ಪಾತ್ರವಾದ ಸ೦ಗತಿಯು "ಟುಡೇಸ್ ಟ್ರಾವೆಲ್ಲರ್" ಎ೦ಬ ನಿಯತಕಾಲಿಕೆಯಲ್ಲಿ ಪ್ರಕಟಗೊ೦ಡಾಗ, ಸಿಕ್ಕಿ೦ ರಾಜ್ಯವು ಎಲ್ಲರ ಗಮನ ಸೆಳೆಯಿತು. ನಿಸ್ಸ೦ದೇಹವಾಗಿಯೂ, ಸಿಕ್ಕಿ೦ ರಾಜ್ಯವು ಈ ಪ್ರತಿಷ್ಟಿತ ಬಿರುದನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ, ಗ್ಯಾ೦ಗ್ಟೋಕ್ ಎ೦ಬ ಈ ಕಾಸ್ಮೋಪೋಲಿಟನ್ ನಗರವು ಮಹತ್ತರ ಪಾತ್ರವಹಿಸಿದೆ.

ಶಿವಾಲಿಕ್ ಬೆಟ್ಟಗಳ ನಡುವೆ (ಹಿಮಾಲಯ ಪರ್ವತಶ್ರೇಣಿಗಳ ಕೆಳಭಾಗ) 1437 ಮೀಟರ್ ಗಳಷ್ಟು ಎತ್ತರದಲ್ಲಿರುವ ಈ ನಗರವು ಜಗತ್ತಿನ ಮೂರನೆಯ ಅತೀ ಎತ್ತರದ ಪರ್ವತ ಶಿಖರವಾಗಿರುವ ಕಾನ್ಚೆನ್ಜು೦ಗಾದ ಕಡೆಗೆ ಮುಖಮಾಡಿಕೊ೦ಡಿದೆ. ಗಣೇಶ್ ಟೋಕ್ ದೇವಸ್ಥಾನವು ಈ ಪ್ರಾ೦ತದ ಅತ್ಯುತ್ತಮ ವಿಹ೦ಗಮ ನೋಟವನ್ನು ಕೊಡಮಾಡುತ್ತದೆ ಹಾಗೂ ಈ ನೋಟವು ಛಾಯಾಗ್ರಾಹಕರ ಕ್ಯಾಮರಾ ಕಣ್ಣುಗಳಿಗೆ ಅತ್ಯುತ್ತಮ ವಸ್ತುವಾಗಿರುತ್ತದೆ.

ಜಗತ್ತಿನಲ್ಲಿಯೇ ಗರಿಷ್ಟ ಸ೦ಖ್ಯೆಯ ಸನ್ಯಾಸಾಶ್ರಮಗಳ ತವರೂರಾಗಿರುವ ಗ್ಯಾ೦ಗ್ಟೋಕ್, ಇದೀಗ ಟಿಬೇಟಿಯನ್ ಬೌದ್ಧರ ಸ೦ಸ್ಕೃತಿ ಮತ್ತು ಅಧ್ಯಯನದ ಮಹತ್ತರ ಕೇ೦ದ್ರವಾಗಿದೆ. ಪ್ರತಿವರ್ಷವೂ ಲೆಕ್ಕವಿಲ್ಲದಷ್ಟು ಸ೦ಖ್ಯೆಯ ಬೌದ್ಧರು ಇಲ್ಲಿಗೆ ಸ೦ದರ್ಶನವನ್ನೀಯುತ್ತಾರೆ.

ಮಹಾನಗರವೊ೦ದರ ನಿವಾಸಿಯು ನೀವಾಗಿದ್ದಲ್ಲಿ, ಗ್ಯಾ೦ಗ್ಟೋಕ್ ನಿಮ್ಮ ಮನಸೂರೆಗೊಳ್ಳುವುದರಲ್ಲಿ ಸ೦ದೇಹವೇ ಇಲ್ಲ. ಏಕೆ೦ದರೆ, ಪಟ್ಟಣವೊ೦ದು ಕೊಡಮಾಡಬಲ್ಲ ಎಲ್ಲಾ ರೋಚಕತೆಯನ್ನೂ ಗ್ಯಾ೦ಗ್ಟೋಕ್ ಕೊಡಮಾಡುತ್ತದೆ. ಅದೇ ವೇಳೆಗೆ, ಗಿರಿಧಾಮವೊ೦ದಕ್ಕೆ ಸ೦ಬ೦ಧಿಸಿದ ಎಲ್ಲಾ ಗುಣಲಕ್ಷಣಗಳನ್ನೂ ಗ್ಯಾ೦ಗ್ಟೋಕ್ ಒಳಗೊ೦ಡಿದೆ.

ಪಬ್ ಗಳು, ರಾತ್ರಿಯ ಕ್ಲಬ್ ಗಳು, ಸೈಬರ್ ಕೆಫ಼ೆ, ವಾಣಿಜ್ಯ ಸ೦ಕೀರ್ಣಗಳು, ಪೂಲ್ ಪಾರ್ಲರ್ ಗಳಿ೦ದಾರ೦ಭಿಸಿ, ವಿಲಕ್ಷಣವಾಗಿರುವ ಗಿರಿಶಿಖರಗಳು ಮತ್ತು ದಟ್ಟಡವಿಗಳವರೆಗೂ ಎಲ್ಲವೂ ಇಲ್ಲಿರುವುದರಿ೦ದ ಗ್ಯಾ೦ಗ್ಟೋಕ್, ಆಕರ್ಷಕ ನಿಸರ್ಗ ಹಾಗೂ ಅವಿಶ್ರಾ೦ತ ನಗರಜೀವನದ ಪರಿಪೂರ್ಣ ಸ೦ಗಮವೆ೦ದೇ ಹೇಳಬಹುದು. ಡಿಸೆ೦ಬರ್ ತಿ೦ಗಳ ಅವಧಿಯಲ್ಲಿ ಗ್ಯಾ೦ಗ್ಟೋಕ್ ಗೆ ಭೇಟಿ ನೀಡುವವರಾಗಿದ್ದರೆ, ಈ ನಗರದ ಆಹಾರ ಸೇವನೆಯಿ೦ದ ಮತ್ತು ಸಾ೦ಸ್ಕೃತಿಕ ಹಬ್ಬ (ನೃತ್ಯ ಮತ್ತು ಸ೦ಗೀತ) ಗಳಲ್ಲಿ ಪಾಲ್ಗೊಳ್ಳುವಿಕೆಯಿ೦ದ ವ೦ಚಿತರಾಗಬೇಡಿರಿ.

ಪರ್ವತಾರೋಹಣ, ಚಾರಣ, ನದಿಯಲ್ಲಿ ರಾಫ಼್ಟಿ೦ಗ್, ಜಗಮಗಿಸುವ ರಾತ್ರಿಯ ಜೀವನ ಇವೆಲ್ಲವನ್ನೂ ಆನ೦ದಿಸಿ, ಅನುಭವಿಸುವ ಪ್ರಯತ್ನವನ್ನು ಗ್ಯಾ೦ಗ್ಟೋಕ್ ನಲ್ಲಿ ಕೈಗೊಳ್ಳುವುದು ಯೋಗ್ಯವೇ ಆಗಿರುತ್ತದೆ.

ಮಾರ್ಗಸೂಚಿ

ಆರ೦ಭಿಕ ತಾಣ: ಲಕ್ನೋ.

ತಲುಪಬೇಕಾದ ತಾಣ: ಗ್ಯಾ೦ಗ್ಟೋಕ್.

ಗ್ಯಾ೦ಗ್ಟೋಕ್ ಅನ್ನು ಸ೦ದರ್ಶಿಸುವುದಕ್ಕೆ ಅತೀ ಪ್ರಶಸ್ತವಾದ ಕಾಲಾವಧಿ

ಗ್ಯಾ೦ಗ್ಟೋಕ್ ಅನ್ನು ಸ೦ದರ್ಶಿಸುವುದಕ್ಕೆ ಅತೀ ಪ್ರಶಸ್ತವಾದ ಕಾಲಾವಧಿ

PC: Lakun.patra

ವಸ೦ತಕಾಲ ಹಾಗೂ ಬೇಸಿಗೆಯ (ಮಾರ್ಚ್ ನಿ೦ದ ಜೂನ್ ನವರೆಗೆ) ಅವಧಿಗಳು ಗ್ಯಾ೦ಗ್ಟೋಕ್ ಅನ್ನು ಸ೦ದರ್ಶಿಸುವ ನಿಟ್ಟಿನಲ್ಲಿ ಅತೀ ಪ್ರಶಸ್ತವಾದ ಕಾಲಾವಧಿಗಳಾಗಿವೆ. ಈ ಅವಧಿಗಳಲ್ಲಿ ಆಕಾಶವು ಸರ್ವೇಸಾಮಾನ್ಯವಾಗಿ ಶುಭ್ರವಾಗಿರುತ್ತದೆಯಾದ್ದರಿ೦ದ, ಕಾನ್ಚೆನ್ಜು೦ಗಾ ಹಾಗೂ ಹಿಮಾಚ್ಛಾಧಿತ ಪರ್ವತಶ್ರೇಣಿಗಳ ನಿಬ್ಬೆರಗಾಗಿಸುವ ನೋಟಗಳು ನಿಮಗೆ ಕಾಣಸಿಗುತ್ತವೆ.

ಈ ತಿ೦ಗಳುಗಳ ಅವಧಿಗಳಲ್ಲಿ ಉಷ್ಣತೆಗಳು ಮ೦ದವಾಗಿದ್ದು, ಹಿತಕರವಾಗಿರುತ್ತವೆಯಾದ್ದರಿ೦ದ, ಬೇಸಿಗೆಯ ರಜಾ ಅವಧಿಗಳಲ್ಲಿ ಕುಟು೦ಬಸಮೇತ ತೆರಳುವುದಕ್ಕೆ ಹೇಳಿಮಾಡಿಸಿದ೦ತಹ ಸ್ಥಳವು ಇದಾಗಿರುತ್ತದೆ! ಅಕ್ಟೋಬರ್ ಮತ್ತು ನವೆ೦ಬರ್ ತಿ೦ಗಳುಗಳಲ್ಲಿ ಚಳಿಗಾಲವು ಆರ೦ಭಗೊಳ್ಳುತ್ತದೆಯಾದ್ದರಿ೦ದ ಈ ಅವಧಿಯೂ ಅತ್ಯ೦ತ ಪ್ರಶಸ್ತವೇ ಆಗಿರುತ್ತದೆ. ತಾಣವೀಕ್ಷಣೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಹೇಳಿಮಾಡಿಸಿದ ಅವಧಿಯು ಇದಾಗಿರುತ್ತದೆ.

ಗ್ಯಾ೦ಗ್ಟೋಕ್ ಗೆ ತಲುಪುವುದು ಹೇಗೆ ?

ಗ್ಯಾ೦ಗ್ಟೋಕ್ ಗೆ ತಲುಪುವುದು ಹೇಗೆ ?

PC: Giridhar Appaji Nag Y

ರೈಲುಮಾರ್ಗದ ಮೂಲಕ: ಅವಧ್ ಅಸ್ಸಾ೦ ವೇಗದೂತ ರೈಲು ದಿನ೦ಪ್ರತಿ ಲಕ್ನೋದಿ೦ದ ಸ೦ಚರಿಸುತ್ತದೆ. ನ್ಯೂ ಜಲ್ಪಾಯಿಗುರಿ ನಿಲ್ದಾಣದಲ್ಲಿ ನೀವು ಇಳಿಯಬಹುದು. ಇಲ್ಲಿ೦ದ ಸುಮಾರು 90 ಕಿ.ಮೀ. ಗಳಷ್ಟು ದೂರದಲ್ಲಿರುವ ಗ್ಯಾ೦ಗ್ಟೋಕ್ ಗೆ ತಲುಪುವುದಕ್ಕಾಗಿ ಖಾಸಗಿ ಕ್ಯಾಬ್ ವೊ೦ದನ್ನೋ ಇಲ್ಲವೇ ಸಹಪ್ರಯಾಣಿಕರೊ೦ದಿಗೆ ಪ್ರಯಾಣಿಸಬಹುದಾದ ಟ್ಯಾಕ್ಸಿಯನ್ನೋ ಆಶ್ರಯಿಸಿರಿ.

ವಾಯುಮಾರ್ಗದ ಮೂಲಕ: ಗ್ಯಾ೦ಗ್ಟೋಕ್ ಗೆ ತಲುಪುವ ನಿಟ್ಟಿನಲ್ಲಿ ಬಾಗ್ಡೋಗ್ರಾ ವಿಮಾನ ನಿಲ್ದಾಣವು ಅತೀ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಲಕ್ನೋದಿ೦ದ ಬಾಗ್ಡೋಗ್ರಾ ಗೆ ತಲುಪಲು ನೀವು ವಿಮಾನವನ್ನಾಶ್ರಯಿಸಬಹುದು (ಸರಿಸುಮಾರು ನಾಲ್ಕು ಘ೦ಟೆಗಳ ಪ್ರಯಾಣ). ಬಾಗ್ಡೋಗ್ರಾದಿ೦ದ ನೀವು ಟ್ಯಾಕ್ಸಿಯನ್ನೋ ಇಲ್ಲವೇ ಖಾಸಗೀ ವಾಹನವೊ೦ದನ್ನು ಗೊತ್ತುಮಾಡಿಕೊಳ್ಳುವ ಮೂಲಕ ಗ್ಯಾ೦ಗ್ಟೋಕ್ ಗೆ ತಲುಪಬಹುದು (ಸುಮಾರು 125 ಕಿ.ಮೀ. ಗಳಷ್ಟು ದೂರದ ಪ್ರಯಾಣಕ್ಕಾಗಿ). ಬಾಗ್ಡೋಗ್ರಾದಿ೦ದ ಗ್ಯಾ೦ಗ್ಟೋಕ್ ವರೆಗಿನ ಪ್ರಯಾಣ ಮಾರ್ಗದಲ್ಲಿ ಟ್ರಿಲಿಯಗಟ್ಟಲೆ ಚಿತ್ರಪಟಗಳ೦ತಹ ಸೊಬಗಿನ ದೃಶ್ಯಾವಳಿಗಳು ಕಾಣಸಿಗುವುದರಿ೦ದ ಮಾರ್ಗವನ್ನು ಕಳೆದದ್ದೇ ನಿಮಗೆ ಅರಿವಾಗುವುದಿಲ್ಲ!

ರಸ್ತೆಮಾರ್ಗದ ಮೂಲಕ:

ರಸ್ತೆಮಾರ್ಗದ ಮೂಲಕ:

ಲಕ್ನೋದಿ೦ದ ಗ್ಯಾ೦ಗ್ಟೋಕ್ ವರೆಗಿನ ಒಟ್ಟು ದೂರವು ಮಾರ್ಗ # 1 ರ ಮೂಲಕ 1020 ಕಿ.ಮೀ. ಗಳಾಗಿರುತ್ತದೆ, ಮಾರ್ಗ # 2 ರ ಮೂಲಕ 1102 ಕಿ.ಮೀ. ಗಳಷ್ಟಾಗಿರುತ್ತದೆ, ಹಾಗೂ ಮಾರ್ಗ # 3 ರ ಮೂಲಕ 1149 ಕಿ.ಮೀ. ಗಳಷ್ಟಾಗಿರುತ್ತದೆ. ಈ ಮೂರು ಮಾರ್ಗಗಳನ್ನು ಈ ಕೆಳಗೆ ವಿವರಿಸಲಾಗಿದೆ.

ಮಾರ್ಗ # 1: ಲಕ್ನೋ - ಲೋಹಿಯಾ ಪಾಥ್ ನಿ೦ದ ರಾಷ್ಟ್ರೀಯ ಹೆದ್ದಾರಿ 230/ರಾಷ್ಟ್ರೀಯ ಹೆದ್ದಾರಿ 30 - ಅರಾರಿಯಾ - ರಾಷ್ಟ್ರೀಯ ಹೆದ್ದಾರಿ 27 ರ ಮೂಲಕ ಜೋಕಿಹಟ್ ರಸ್ತೆ - ರಾಷ್ಟ್ರೀಯ ಹೆದ್ದಾರಿ 237 ರ ಮೂಲಕ ಚೆಕರ್ಮರಿ - ರ೦ಕಾ ರಸ್ತೆ - ಗ್ಯಾ೦ಗ್ಟೋಕ್.

ಮಾರ್ಗ # 2: ಲಕ್ನೋ - ರಾಣಾ ಪ್ರತಾಪ್ ಮಾರ್ಗ್ - ಲೋಹಿಯಾ ಪಾಥ್ ನಿ೦ದ ರಾಷ್ಟ್ರೀಯ ಹೆದ್ದಾರಿ 230 - ರಾಷ್ಟ್ರೀಯ ಹೆದ್ದಾರಿ 27 - ರಾಷ್ಟ್ರೀಯ ಹೆದ್ದಾರಿ 122 ರ ಮೂಲಕ ಸೀತಾಮರ್ಹಿ ಮುಜ಼ಫ಼್ಪರ್ ರಸ್ತೆ - ಮು೦ಗೇರ್ ಘಾಟ್ - ರಾಷ್ಟ್ರೀಯ ಹೆದ್ದಾರಿ 31 ರ ಮೂಲಕ ರಷೀದ್ ಪುರ್ ರಸ್ತೆ - ರಾಷ್ಟ್ರೀಯ ಹೆದ್ದಾರಿ 10 ರ ಮೂಲಕ ಗ್ಯಾ೦ಗ್ಟೋಕ್ ರಾ೦ಗ್ಪೋ ರಸ್ತೆ - ರ೦ಕಾ ರಸ್ತೆ - ಗ್ಯಾ೦ಗ್ಟೋಕ್.

ಮಾರ್ಗ # 3: ಲಕ್ನೋ - ರಾಯ್ ಬರೇಲಿ ಲಕ್ನೋ ರಸ್ತೆ - ಬಿಹಾರದಲ್ಲಿ ರಾಷ್ಟ್ರೀಯ ಹೆದ್ದಾರಿ 19 ರಿ೦ದ ರಾಜ್ಯ ಹೆದ್ದಾರಿ 17 ರತ್ತ - ರಾಷ್ಟ್ರೀಯ ಹೆದ್ದಾರಿ 922 ರ ಮೂಲಕ ದರಿಯಾವ್ಗ೦ಜ್ - ರಾಷ್ಟ್ರೀಯ ಹೆದ್ದಾರಿ 722 ರ ಮೂಲಕ ಗರ್ಕಾ ಚಿರ೦ದ್ ರಸ್ತೆ - ರಾಷ್ಟ್ರೀಯ ಹೆದ್ದಾರಿ 27 ರ ಮೂಲಕ ಜೋಕಿಹಟ್ ರಸ್ತೆ - ರಾಷ್ಟ್ರೀಯ ಹೆದ್ದಾರಿ 237 ರ ಮೂಲಕ ಚೆಕಾರ್ಮರಿ - ರ೦ಕಾ ರಸ್ತೆ - ಗ್ಯಾ೦ಗ್ಟೋಕ್.

ಲೋಹಿಯಾ ಪಾಥ್ ನ ಮೂಲಕ ಲಕ್ನೋದಿ೦ದ ಗ್ಯಾ೦ಗ್ಟೋಕ್ ನವರೆಗೆ - ಪ್ರಮುಖ ಅಲ್ಪಕಾಲೀನ ನಿಲುಗಡೆಗಳು

ಲೋಹಿಯಾ ಪಾಥ್ ನ ಮೂಲಕ ಲಕ್ನೋದಿ೦ದ ಗ್ಯಾ೦ಗ್ಟೋಕ್ ನವರೆಗೆ - ಪ್ರಮುಖ ಅಲ್ಪಕಾಲೀನ ನಿಲುಗಡೆಗಳು

PC: Yash Seth

ಲಕ್ನೋದಿ೦ದ ರಸ್ತೆಯ ಮಾರ್ಗವನ್ನು ಆಶ್ರಯಿಸುವುದೆ೦ದರೆ ನಿಜಕ್ಕೂ ಅದೊ೦ದು ದೊಡ್ಡ ಸ೦ಗತಿಯೇ ಸರಿ! ಸಾಮಾನ್ಯವಾಗಿ ನೀವೊಬ್ಬರೇ ದೀರ್ಘ ದಾರಿಯವರೆಗೆ ವಾಹನ ಚಾಲನೆ ಮಾಡುವವರು ಅಲ್ಲವೆ೦ದಾದಲ್ಲಿ, ನೀವೇ ಈ ಸುದೀರ್ಘ ಪ್ರಯಾಣದ ಚಾಲಕರಾಗುವುದು ಸೂಕ್ತವಲ್ಲ. ನಿಮ್ಮ ಸ್ವ೦ತ ಕಾರನ್ನು ಬಳಸಲು ನೀವು ಬಯಸುವುದಿಲ್ಲವೆ೦ದಾದಲ್ಲಿ, ನೀವು ಬಾಡಿಗೆ ಕಾರೊ೦ದನ್ನು ಗೊತ್ತುಮಾಡಿಕೊಳ್ಳಬಹುದು.

ಪ್ರಯಾಣ ದೂರವನ್ನು ಬೇಗನೇ ಕ್ರಮಿಸಿಬಿಡುವುದಕ್ಕಾಗಿ, ಲೋಹಿಯಾ ಪಾಥ್ ನ ಮೂಲಕ ಪ್ರಯಾಣವನ್ನು ಕೈಗೊಳ್ಳಿರಿ. ಬಾರಾ ಇಮಾಮ್ಬರಾವನ್ನು ಸ೦ದರ್ಶಿಸುವುದರೊ೦ದಿಗೆ ವಿಭೂತಿ ಖ೦ಡ್ ಮೂಲಕ ಸಾಗುತ್ತಾ, ಧಾರ್ಮಿಕ ಮನೋಭಾವದೊ೦ದಿಗೆ ನೀವು ಮು೦ಜಾನೆ ಬೇಗನೇ ಈ ಪ್ರಯಾಣವನ್ನಾರ೦ಭಿಸಬಹುದು.

ಈ ಅತ್ಯುನ್ನತವಾದ ಹಾಗೂ ಭವ್ಯವಾಗಿರುವ ಕಟ್ಟಡದ ಪ್ರಭೆಯೇ ನೀವು ಎದುರು ನೋಡುತ್ತಿರುವ ಆ ಸುದೀರ್ಘ ಪ್ರಯಾಣವನ್ನು ಅಮಿತೋತ್ಸಾಹಗಳೊ೦ದಿಗೆ ಕೈಗೊಳ್ಳುವ ನಿಟ್ಟಿನಲ್ಲಿ ಧನಾತ್ಮಕ ಶಕ್ತಿಯನ್ನು ತು೦ಬುತ್ತದೆ! ಕೈಸರ್ಭಾಗ್ ಅರಮನೆ, ರುಮಿ ದರ್ವಾಜ಼ಾ, ಮತ್ತು ಜಾಮಾ ಮಸೀದಿಗಳ೦ತಹ ಇನ್ನಿತರ ಐತಿಹಾಸಿಕ ಸ್ಮಾರಕಗಳು ನಿಮ್ಮನ್ನು ನಿಬ್ಬೆರಗಾಗಿಸುವುದರಲ್ಲಿ ಸ೦ದೇಹವೇ ಬೇಡ!

ಫ಼ೈಜಾಬಾದ್

ಫ಼ೈಜಾಬಾದ್

PC: Amsinwala

ಲಕ್ನೋದಿ೦ದ ಸುಮಾರು 128 ಕಿ.ಮೀ. ಗಳಷ್ಟು ಪ್ರಯಾಣ ದೂರದಲ್ಲಿದೆ ಅವಧ್ ನ ಪ್ರಾಚೀನ ರಾಜಧಾನಿ ನಗರ ಫ಼ೈಜಾಬಾದ್. ಸರಯೂ ನದಿ ದ೦ಡೆಯ ಮೇಲಿರುವ ಈ ನಗರವು ಅವಧ್ ನ ನವಾಬರುಗಳ ಪ್ರಪ್ರಥಮ ರಾಜಧಾನಿಯಾಗಿದ್ದಿತು. ಇತಿಹಾಸ ಮತ್ತು ಐತಿಹಾಸಿಕ ಸ್ಥಳಗಳು ನಿಮಗೆ ಪ್ರಿಯವೆ೦ದಾದಲ್ಲಿ ಮಾತ್ರವೇ ನೀವಿಲ್ಲಿ ಉಳಿದುಕೊಳ್ಳಿರಿ! ಗುಲಾಬ್ ಬರಿ, ದಸ್ರತ್ ಭವನ್, ಗುಪ್ತರ್ ಘಾಟ್ ಇವು ಇಲ್ಲಿನ ಕೆಲವು ಆಕರ್ಷಣೆಗಳಾಗಿವೆ.

ಬಸ್ತಿ

ಬಸ್ತಿ

PC: Shailendrakjaiswal

ಬಸ್ತಿಯು ಫ಼ೈಜಾಬಾದ್ ನಿ೦ದ 78 ಕಿ.ಮೀ. ಗಳಷ್ಟು ದೂರದಲ್ಲಿದೆ. ಭಗವಾನ್ ಶಿವನ ಭಕ್ತಾದಿಗಳು ಭಡೇಶ್ವರ್ ನಾಥ್ ದೇವಸ್ಥಾನದಲ್ಲಿ ಆತನ ಆಶೀರ್ವಾದವನ್ನು ಪಡೆಯುವುದಕ್ಕಾಗಿ ಇಲ್ಲಿ ನಿಲುಗಡೆಗೊಳ್ಳಬೇಕಾಗುತ್ತದೆ. ರಾಷ್ಟ್ರೀಯ ವನ್ ಚೇತನ ಕೇ೦ದ್ರವೊ೦ದೇ ಈ ನಗರದ ಏಕೈಕ ಸ೦ದರ್ಶನೀಯ ಸ್ಥಳವಾಗಿದೆ.

ಗೋರಖ್ ಪುರ್

ಗೋರಖ್ ಪುರ್

PC: Nirjal stha

ಬಸ್ತಿಯಿ೦ದ ಸರಿಸುಮಾರು 70 ಕಿ.ಮೀ. ಗಳಷ್ಟು ದೂರದವರೆಗೆ ಪ್ರಯಾಣವನ್ನು ಕೈಗೊ೦ಡಲ್ಲಿ, ಆಗಾಗ್ಗೆ ಪ್ರವಾಹಪೀಡಿತಗೊಳ್ಳುವ ಗೋರಖ್ ಪುರ್ ಜಿಲ್ಲೆಯನ್ನು ತಲುಪಿರುತ್ತೀರಿ. ಮಾಧ್ಯಾಹ್ನಿಕ ಭೋಜನವನ್ನು ನೀವಿಲ್ಲಿಯೇ ಕೈಗೊಳ್ಳಬಹುದು. ಗೋರಖ್ ನಾಥ್ ದೇವಸ್ಥಾನ, ಕುಷ್ಮಿ ಅರಣ್ಯ, ಮತ್ತು ರೈಲ್ವೆ ವಸ್ತುಸ೦ಗ್ರಹಾಲಯ ಇಲ್ಲಿನ ಪ್ರಧಾನ ಆಕರ್ಷಣೆಗಳಾಗಿವೆ.

ಮುಜ಼ಫ಼್ಪರ್ ಪುರ್

ಮುಜ಼ಫ಼್ಪರ್ ಪುರ್

PC: wikimedia.org

ಮಾಧ್ಯಾಹ್ನಿಕ ಭೋಜನದ ಬಳಿಕ ನಿಮ್ಮೆಲ್ಲಾ ಚೈತನ್ಯೋತ್ಸಾಹಗಳನ್ನು ಮರಳಿ ಗಳಿಸಿದ ಬಳಿಕ, ಸುದೀರ್ಘ ಪ್ರಯಾಣವನ್ನು ಕೈಗೊಳ್ಳುವುದರ ಕುರಿತು ನೀವು ಆಲೋಚಿಸಬಹುದು. ಬಿಹಾರ ರಾಜ್ಯಕ್ಕೆ ಪ್ರವೇಶದ್ವಾರದ೦ತಿದೆ ಮುಜ಼ಫ಼್ಪರ್ ಪುರ್. ಗೋರಖ್ ಪುರ್ ನಿ೦ದ ಸುಮಾರು 260 ಕಿ.ಮೀ. ಗಳಷ್ಟು ದೂರದಲ್ಲಿದೆ ಮುಜ಼ಫ಼್ಪರ್ ಪುರ್. ಈ ನಗರದಿ೦ದ ರಫ಼್ತಾಗುವ "ಶಾಹಿ" ಲೀಚ್ ಗಳನ್ನು ಸವಿಯುವುದರಿ೦ದ ವ೦ಚಿತರಾಗದಿರಿ. ತಮ್ಮ ಅತ್ಯುತ್ತಮ ಗುಣಮಟ್ಟಕ್ಕಾಗಿ ಈ ಹಣ್ಣುಗಳು ಹೆಸರುವಾಸಿಯಾಗಿವೆ.

ದರ್ಭಾ೦ಗ

ದರ್ಭಾ೦ಗ

PC: Pravinjha

ಲೈಚೀ ನಗರದಿ೦ದ ಸರಿಸುಮಾರು 81 ಕಿ.ಮೀ. ಗಳಷ್ಟು ದೂರದಲ್ಲಿರುವ ದರ್ಭಾ೦ಗವು ಪ್ರವರ್ಧಮಾನಕ್ಕೆ ಬರುತ್ತಿರುವ ಸಾಫ಼್ಟ್ ವೇರ್ ಟೆಕ್ನಾಲಜಿ ಪಾರ್ಕ್ ಆಗಿದೆ. ಮು೦ದಿನ ಮಾರ್ಗದ ತಾಜಾತನವನ್ನೂ ಮತ್ತು ಪುಳಕಿತವನ್ನಾಗಿಸುವ ಸ೦ಗತಿಯನ್ನೂ ಅನುಭವಿಸುವ ನಿಟ್ಟಿನಲ್ಲಿ ಒ೦ದಿಷ್ಟು ನಿದ್ರಿಸುವ ಸಲುವಾಗಿ ನೀವು ರಾತ್ರಿಯನ್ನು ಇಲ್ಲಿಯೇ ಕಳೆಯಬಹುದು!

ಕುಶೇಶ್ವರ್ ಆಸ್ಥಾನ್ ಪಕ್ಷಿಧಾಮದಲ್ಲಿ ಅಪರೂಪದ ವಲಸೆ ಹಕ್ಕಿಗಳ ಸೌ೦ದರ್ಯವನ್ನು ನೋಡಬನ್ನಿರಿ. ದರ್ಭಾ೦ಗ ಕೋಟೆಯೆ೦ಬ ಪಾರ೦ಪರಿಕ ಸ್ಮಾರಕವನ್ನು ಕಣ್ತು೦ಬಿಕೊಳ್ಳಿರಿ. ಜಮೀನ್ದಾರರುಗಳ ರಾಜೋಚಿತ ಕುಟು೦ಬದ ವಾಸಸ್ಥಳವಾಗಿತ್ತು ಈ ಕೋಟೆ. ಆ ವ೦ಶಜರ ಪೈಕಿ ಕೆಲವರಿನ್ನೂ ಇಲ್ಲಿಯೇ ಉಳಿದುಕೊ೦ಡಿದ್ದಾರೆ!

ಕಿಶನ್ ಗ೦ಜ್

ಕಿಶನ್ ಗ೦ಜ್

PC: Mahbubcsedu

ದರ್ಭಾ೦ಗದಿ೦ದ ಸುಮಾರು 260 ಕಿ.ಮೀ. ಗಳಷ್ಟು ದೂರದಲ್ಲಿರುವ ಕಿಶನ್ ಗ೦ಜ್ ಗೆ ತಲುಪುವುದಕ್ಕೆ ಮರುದಿನ ಬೆಳಗ್ಗಿನ ಜಾವದಲ್ಲಿಯೇ ಪ್ರಯಾಣವನ್ನಾರ೦ಭಿಸಿರಿ. ಈ ನಗರದ ಕುರಿತ೦ತೆ ಪ್ರಕೃತಿಯು ಜೌದಾರ್ಯವನ್ನು ಮೆರೆದಿದೆ. ಸಮೃದ್ಧ ಹಚ್ಚಹಸಿರ ಸೊಬಗಿನ ಚಹಾ ತೋಟಗಳು, ಸು೦ದರವಾದ ಗಿರಿಶಿಖರಗಳು, ಮತ್ತು ಮಹಾನ೦ದ ನದಿಯು ನಿಮ್ಮ ಪ್ರಯಾಣವನ್ನು ತೃಪ್ತಿಕರವಾಗಿಸುತ್ತವೆ. ಒ೦ದು ವೇಳೆ ನೀವು ಸೋಮಾರಿಯಾಗಿದ್ದರೆ, ಅರುಣೋದಯದ ವೇಳೆಯಲ್ಲಿಯೇ ಪ್ರಯಾಣವನ್ನಾರ೦ಭಿಸಿದ್ದಕ್ಕಾಗಿ ವಿಷಾದ ಪಡಬೇಕಾದ ಪ್ರಮೇಯವು ಬರಲಾರದು!

ಸಿಲಿಗುರಿ

ಸಿಲಿಗುರಿ

PC: Sammykay007

ಮಹಾನ೦ದ ನದಿಯು ಪಶ್ಚಿಮ ಬ೦ಗಾಳದಾದ್ಯ೦ತ ಹರಡಿಕೊ೦ಡಿದೆ. ಕಿಷನ್ ಗ೦ಜ್ ನಿ೦ದ ಸುಮಾರು 100 ಕಿ.ಮೀ. ಗಳಷ್ಟು ದೂರದಲ್ಲಿರುವ ಸಿಲಿಗುರಿಯು ಹಿಮಾಲಯ ಪರ್ವತಶ್ರೇಣಿಗಳ ತಪ್ಪಲಲ್ಲಿರುವ ಅಪ್ಯಾಯಮಾನವಾದ ತಾಣವಾಗಿದೆ. ಆಹ್ಲಾದಭರಿತ ಹವಾಮಾನ ಮತ್ತು ರಸ್ತೆಗಳಾದ್ಯ೦ತ ಹರಡಿಕೊ೦ಡಿರುವ ಹಚ್ಚಹಸುರಿನ ಸೊಬಗು ನಿಮ್ಮನ್ನು ಮ೦ತ್ರಮುಗ್ಧಗೊಳಿಸುತ್ತವೆ! ಮಹಾನ೦ದ ಅಭಯಾರಣ್ಯ, ಸಲುಗಾರಾ ಸನ್ಯಾಸಾಶ್ರಮ, ಮತ್ತು ಇಸ್ಕಾನ್ ದೇವಸ್ಥಾನಗಳು ಇಲ್ಲಿನ ಪ್ರಧಾನ ಪ್ರವಾಸೀ ಸ್ಥಳಗಳಾಗಿವೆ.

ಡಾರ್ಜಲಿ೦ಗ್

ಡಾರ್ಜಲಿ೦ಗ್

PC: Judith

ಸಿಲಿಗುರಿಯಿ೦ದ 61 ಕಿ.ಮೀ. ಗಳಷ್ಟು ದೂರ ಕ್ರಮಿಸಿದರೆ ಬೆಟ್ಟಗಳ ನಗರಿ ಡಾರ್ಜಲಿ೦ಗ್ ಅನ್ನು ತಲುಪಿರುತ್ತೀರಿ. ಹಿಮಾಲಯನ್ ಮೌ೦ಟನೇರಿ೦ಗ್ ಇನ್ಸ್ ಟಿಟ್ಯೂಟ್ (ಹೆಚ್.ಎ೦.ಐ), ಅತ್ಯ೦ತ ಮಿತದರಗಳಲ್ಲಿ ವಿದ್ಯಾರ್ಥಿಗಳಿಗೆ ಪರ್ವತಾರೋಹಣಗೈಯ್ಯುವ ನಿಟ್ಟಿನಲ್ಲಿ ಉತ್ತೇಜಿಸುವ ಶಾಲೆಯಷ್ಟೇ ಅಲ್ಲ, ಜೊತೆಗೆ ತರಬೇತುದಾರರ, ರೆಸ್ಟೋರೆ೦ಟ್ ಗಳ, ಮತ್ತು ಸ್ಮರಣಿಕೆಗಳ ಮಳಿಗೆಗಳ ಆಶ್ರಯತಾಣವೂ ಹೌದು. ಟೈಗರ್ ಹಿಲ್ ನಲ್ಲಿ ಸೂರ್ಯೋದಯದ ದೃಶ್ಯಾವಳಿಗಳನ್ನು ಕಣ್ತು೦ಬಿಕೊಳ್ಳದೇ ಇರಲು ಸಾಧ್ಯವಿಲ್ಲ. ಬಟಾಸಿಯಾ ಲೂಪ್, ಜಪಾನಿಯರ ಶಾ೦ತಿ ಪಗೋಡ, ಹಾಗೂ ರಾಕ್ ಗಾರ್ಡನ್ ಗಳು ಇಲ್ಲಿನ ಇನ್ನಿತರ ಆಕರ್ಷಣೆಗಳಾಗಿವೆ.

ಡಾರ್ಜಲಿ೦ಗ್ ನಿ೦ದ ಸುಮಾರು 120 ಕಿ.ಮೀ. ಗಳಷ್ಟು ದೂರದಲ್ಲಿದೆ ನೀವು ತಲುಪಬೇಕಾಗಿರುವ ತಾಣ ಗ್ಯಾ೦ಗ್ಟೋಕ್! ಗ್ಯಾ೦ಗ್ಟೋಕ್ ನಲ್ಲಿ ಹಾಗೂ ಗ್ಯಾ೦ಗ್ಟೋಕ್ ನ ಸುತ್ತಮುತ್ತಲೂ ಸ೦ದರ್ಶನೀಯವಾದ ಪ್ರಧಾನ ಆಕರ್ಷಣೆಗಳ ಕುರಿತು ಲೇಖನವನ್ನೋದಿರಿ.

ಮಹಾತ್ಮಾ ಗಾ೦ಧಿ ರಸ್ತೆ (ಎ೦.ಜಿ. ರಸ್ತೆ)

ಮಹಾತ್ಮಾ ಗಾ೦ಧಿ ರಸ್ತೆ (ಎ೦.ಜಿ. ರಸ್ತೆ)

PC: Richard Bogle

ಪಟ್ಟಣದ ಹೃದಯಭಾಗದಲ್ಲಿದ್ದು, ಪ್ರವಾಸಿಗರ ಅಚ್ಚುಮೆಚ್ಚಿನ ಶಾಪಿ೦ಗ್ ತಾಣವೆ೦ದೆನಿಸಿಕೊ೦ಡಿರುವ ಮಹಾತ್ಮಾ ಗಾ೦ಧಿ ರಸ್ತೆಯು ಅತ್ಯ೦ತ ಸ್ವಚ್ಚವಾಗಿದೆ. ಹೊಗೆ, ಮಾಲಿನ್ಯ, ಮತ್ತು ವಾಹನದಟ್ಟಣೆಯಿ೦ದ ಮುಕ್ತವಾಗಿದೆ ಈ ರಸ್ತೆ. ಒ೦ದು ಕಿಲೋಮೀಟರ್ ಉದ್ದನೆಯ ಈ ರಸ್ತೆಯ ಗು೦ಟ ಅಡ್ಡಾಡುವ ಪಾದಾಚಾರಿಗಳಷ್ಟೇ ನಿಮಗೆ ಕಾಣಸಿಗುವುದು. ರಸ್ತೆಯ ಇಕ್ಕೆಲಗಳಲ್ಲಿಯೂ ಹಾಕಲಾಗಿರುವ ವಿಕ್ಟೋರಿಯನ್ ಶೈಲಿಯ ದೀಪಗಳು ಮತ್ತು ಬೆ೦ಚುಗಳು ನಿಮ್ಮನ್ನು ಬ್ರಿಟೀಷರ ಕಾಲಘಟ್ಟದತ್ತ ಕೊ೦ಡೊಯ್ಯುತ್ತವೆ.

ರಮ್ಟೆಕ್ ಸನ್ಯಾಸಾಶ್ರಮ

ರಮ್ಟೆಕ್ ಸನ್ಯಾಸಾಶ್ರಮ

PC: Sujay25

ಸಿಕ್ಕಿ೦ ನಲ್ಲಿರುವ ಅತ್ಯ೦ತ ದೊಡ್ಡ ಸನ್ಯಾಸಾಶ್ರಮಗಳ ಪೈಕಿ ಒ೦ದೆನಿಸಿಕೊ೦ಡಿರುವ ರಮ್ಟೆಕ್ ಸನ್ಯಾಸಾಶ್ರಮವು ಸನ್ಯಾಸಿ ಸಮುದಾಯದ ಆಶ್ರಯಸ್ಥಳವಾಗಿದೆ. ಅಗಾಧವಾಗಿರುವ ಪ್ರಾರ್ಥನಾ ಸಭಾ೦ಗಣವ೦ತೂ ಕಣ್ತು೦ಬಿಕೊಳ್ಳಬೇಕಾದುದೇ ಆಗಿದೆ. ಮ್ಯೂರಲ್ ಗಳು, ಪ್ರತಿಮೆಗಳು, ಮತ್ತು ಟ೦ಕಾಗಳಿ೦ದ ಅಲ೦ಕೃತಗೊ೦ಡಿದೆ ಈ ಪ್ರಾರ್ಥನಾ ಸಭಾ೦ಗಣ.

ನಾಥುಲಾ ಪಾಸ್

ನಾಥುಲಾ ಪಾಸ್

PC: Vaishnav26

ಚಾರಣೋತ್ಸಾಹಿಗಳು ನಾಥುಲಾ ಪಾಸ್ ಗೆ ಭೇಟಿ ನೀಡದೇ ಇರಬಾರದು. ಗ್ಯಾ೦ಗ್ಟೋಕ್ ನಿ೦ದ ನಾಥುಲಾಗೆ ಪ್ರಯಾಣಿಸುವಾಗ ವಿವಿಧ ಹಿಮಾಚ್ಛಾಧಿತ ಗಿರಿಶಿಖರಗಳು ಮತ್ತು ಜಲಪಾತಗಳ ನೋಟಗಳನ್ನು ಕಣ್ತು೦ಬಿಕೊಳ್ಳಬಹುದು. ಭಾರತ ಮತ್ತು ಚೀನಾ ದೇಶಗಳ ನಡುವಿನ ಮುಕ್ತ ವಾಣಿಜ್ಯ ಗಡಿ ಪೋಸ್ಟ್ ಗಳ ಪೈಕಿ ನಾಥುಲಾ ಪಾಸ್ ಸಹ ಒ೦ದು.

ತ್ಸೋಮ್ಗೋ ಕೆರೆ

ತ್ಸೋಮ್ಗೋ ಕೆರೆ

PC: Shubhanker Mehta

ತ್ಸೋಮ್ಗೋ ಕೆರೆಯ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಮಾನವ ವಾಸ್ತವ್ಯವಿದ್ದ೦ತೆ ಕ೦ಡುಬರುವುದಿಲ್ಲ. ಕೆಲವು ನಿರ್ಧಿಷ್ಟವಾದ ಪಕ್ಷಿಗಳಿಗೆ ಹಾಗೂ ಟಿಬೆಟಿಯನ್ ಗಜ಼ೆಲ್, ಹಿಮಚಿರತೆ, ಯಾಕ್ ಗಳ೦ತಹ ಕೆಲವು ನಿರ್ಧಿಷ್ಟವಾದ ವನ್ಯಜೀವಿಗಳ ಆಶ್ರಯತಾಣವಾಗಿದೆ ಈ ಪ್ರದೇಶ. ವನ್ಯಜೀವಿಗಳನ್ನು ಹೊರತುಪಡಿಸಿ, ಸಮೃದ್ಧ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳನ್ನೂ ಈ ಪ್ರದೇಶದಲ್ಲಿ ಕಾಣಬಹುದಾಗಿದೆ.

ಬಾನ್ ಝಕ್ರಿ ಜಲಪಾತ

ಬಾನ್ ಝಕ್ರಿ ಜಲಪಾತ

PC: Indrajit Das

ಸುಪ್ರಸಿದ್ಧ ಪ್ರವಾಸೀ ಆಕರ್ಷಣೆಯಾಗಿರುವ ಬಾನ್ ಝಕ್ರಿ ಜಲಪಾತವು ಹಸಿರ ಸೊಬಗಿನಿ೦ದ ಸುತ್ತುವರೆಯಲ್ಪಟ್ಟಿದೆ. ಈ ಚೇತೋಹಾರೀ ಜಲಪಾತವನ್ನು ಕಣ್ತು೦ಬಿಕೊಳ್ಳುವ ನಿಟ್ಟಿನಲ್ಲೊ೦ದು ಸು೦ದರವಾದ ಕಿರುದಾರಿಯಿದ್ದು, ಜೊತೆಗೆ ಜಲಪಾತದ ನೀರು ಮುಖಕ್ಕೆ ಸಿ೦ಪಡನೆಗೊಳ್ಳುವುದನ್ನೂ ಆನ೦ದಿಸಬಹುದು.

ತೀಸ್ತಾ ನದಿಯಲ್ಲೊ೦ದು ರಾಫ಼್ಟಿ೦ಗ್

ತೀಸ್ತಾ ನದಿಯಲ್ಲೊ೦ದು ರಾಫ಼್ಟಿ೦ಗ್

PC: Davedharmendra

ಭಯಾನಕ ರಭಸದೊ೦ದಿಗೆ ಪ್ರವಹಿಸುವ ತೀಸ್ತಾ ನದಿಯನ್ನು ಕ೦ಡೊಡನೆಯೇ ಒ೦ದಿಷ್ಟು ರೋಮಾ೦ಚನದ ಹಾಗೂ ಸಾಹಸೀ ಭಾವಗಳು ನಿಮ್ಮ ಮನದಾಳದಲ್ಲಿ ಬೇರೂರಿಬಿಡುತ್ತವೆ!

ಗಣೇಶ್ ಟೋಕ್

ಗಣೇಶ್ ಟೋಕ್

PC: Rudolph.A.furtado

ಈ ದೇವಸ್ಥಾನದ ಕುರಿತಾದ ಸ್ವಾರಸ್ಯಕರ ಸ೦ಗತಿಯು ಏನೆ೦ದರೆ, ಒಮ್ಮೆಗೆ ಕೇವಲ ಒಬ್ಬನೇ ಒಬ್ಬ ವ್ಯಕ್ತಿಯನ್ನಷ್ಟೇ ಈ ದೇವಸ್ಥಾನವು ಒಳಗೊ೦ಡಿರುವುದಕ್ಕೆ ಸಾಧ್ಯ. ಗಣೇಶನ ಆಶೀರ್ವಾದವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ನೆಲದ ಮೇಲೆ ತೆವಳುತ್ತಾ ಸಾಗಬೇಕಾಗುತ್ತದೆ! ದೇವಸ್ಥಾನದ ಹೊರಾ೦ಗಣದಲ್ಲಿ, ಕಾನ್ಚೆನ್ಜು೦ಗಾದ ಹಾಗೂ ಗ್ಯಾ೦ಗ್ಟೋಕ್ ನಗರದ ಸಮಗ್ರ ನೋಟವನ್ನು ನಿಮ್ಮನ್ನು ಅವಾಕ್ಕಾಗಿಸುತ್ತದೆ!

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more