• Follow NativePlanet
Share
» »ಯಮಧರ್ಮರಾಜನ ದೇವಾಲಯ ಎಲ್ಲಿದೆ ಗೊತ್ತ?

ಯಮಧರ್ಮರಾಜನ ದೇವಾಲಯ ಎಲ್ಲಿದೆ ಗೊತ್ತ?

Written By:

ಪ್ರಾಣದ ಮೇಲೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ? ಒಂದು ಸಣ್ಣದಾದ ಜೀವಿಯಿಂದ ಹಿಡಿದು ಎಲ್ಲರಿಗೂ ಮೃತ್ಯು ಭಯ ಇರುವುದು ಸಾಮಾನ್ಯ. ಅವರಿಗೆ ಏನಾದರೂ ಮೃತ್ಯು ಭಯ ಬಂದಾಗ ಮೊದಲು ದೇವಾಲಯಕ್ಕೆ ಭೇಟಿ ನೀಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಯಮಧರ್ಮ ರಾಜನಿಗೆ ಮಾತ್ರ ನೆನಸಿಕೊಳ್ಳುವುದಿಲ್ಲ. ಅಷ್ಟಕ್ಕೂ ಆತನ ಕೆಲಸ ಆತ ಮಾಡುತ್ತಿದ್ದಾನೆ ಅಷ್ಟೆ ಅಲ್ಲವೇ?.

ಇಲ್ಲೊಂದು ಆಶ್ಚರ್ಯಕರವಾದ ವಿಷಯ ಏನೆಂದರೆ ನಮ್ಮ ಪ್ರಾಣ ಪಕ್ಷಿಯನ್ನು ತನ್ನ ಜೊತೆ ತೆಗೆದುಕೊಂಡು ಹೋಗುವ ಯಮಧರ್ಮ ರಾಜನಿಗೂ ಕೂಡ ಒಂದು ದೇವಾಲಯವಿದೆ. ಇಲ್ಲಿ ಭಕ್ತಿ, ಭಾವದಿಂದ ಈ ಸ್ವಾಮಿಯ ಆರಾಧನೆಯನ್ನು ಮಾಡುತ್ತಾರೆ.

ಜಾತಕದ ಪ್ರಕಾರ ಸಂಭವಿಸುವ ಅಪಾಯಗಳನ್ನು ತಡೆದು ಮನಸ್ಸಿಗೆ ನೆಮ್ಮದಿಗಾಗಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯದಲ್ಲಿ ಸ್ವಾಮಿಯನ್ನು ದರ್ಶನ ಮಾಡಿದ್ದಾರೆ ಅವರ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ ಎಂಬ ವಿಶ್ವಾಸ ಅಲ್ಲಿನ ಜನರದ್ದು. ಅಲ್ಲಿ ಹಲವಾರು ವಿಶೇಷ ಪೂಜೆಗಳನ್ನು ಮಾಡಿಕೊಳ್ಳತ್ತಿರುವ ಪುಣ್ಯ ಪುರುಷ ಯಮ ಎಂದರೆ ಆಶ್ಚರ್ಯವಾದರೂ ಕೂಡ......ಇದು ನಿಜ. ಈ ದೇವಾಲಯದ ವಿಶೇಷಗಳು ಮಾತ್ರ ಆಸಕ್ತಿಕರವಾಗಿರುತ್ತದೆ.

ಹಾಗಾಗದರೆ ಪ್ರಸ್ತುತ ಲೇಖನದಲ್ಲಿ ಯಮಧರ್ಮ ರಾಜನ ದೇವಾಲಯದ ಕೆಲವು ವಿಶೇಷ ಮಹಿಮೆಗಳನ್ನು ತಿಳಿಯೋಣ.

ಯಮಧರ್ಮರಾಜನ ದೇವಾಲಯ

ಯಮಧರ್ಮರಾಜನ ದೇವಾಲಯ

ನಮ್ಮ ಪ್ರಾಣವನ್ನು ತೆಗೆಯುವ ದೇವತೆ ಎಂದು ನಂಬಿರುವ ಯಮಧರ್ಮರಾಜನಿಗೆ ಕೂಡ ಭಕ್ತಿ, ಭಾವದಿಂದ ಪೂಜೆ ಮಾಡುವ ದೇವಾಲಯವಿದೆ. ಅದು ನಮ್ಮ ಕರ್ನಾಟಕದ ಪಕ್ಕದ ರಾಜ್ಯ ತೆಲಂಗಣದಲ್ಲಿ.

ಯಮಧರ್ಮರಾಜನ ದೇವಾಲಯ

ಯಮಧರ್ಮರಾಜನ ದೇವಾಲಯ

ಆಂಧ್ರ ಪ್ರದೇಶದ ಕರೀಂನಗರ ಜಿಲ್ಲೆಯ ಜಗಿತ್ಯಾಲ ಎಂಬ ಸ್ಥಳದಲ್ಲಿ ಒಂದು ಮಾಹಿಮಾನ್ವಿತವಾದ ಉಗ್ರ ನರಸಿಂಹ ಸ್ವಾಮಿಯ ದೇವಾಲಯವಿದೆ. ಈ ದೇವಾಲಯದಲ್ಲಿನ ಆಸಕ್ತಿಕರವಾದ ವಿಷಯಗಳು ಏನು ಗೊತ್ತ?

ಯಮಧರ್ಮರಾಜನ ದೇವಾಲಯ

ಯಮಧರ್ಮರಾಜನ ದೇವಾಲಯ

ಈ ದೇವಾಲಯವು ಹಲವಾರು ವಿಶೇಷಗಳನ್ನು ಹೊಂದಿದ್ದು, ಯಮಧರ್ಮ ರಾಜ ಎಂದರೆ ಭಕ್ತಿ ಪೂರ್ವಕವಾಗಿ ಇಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಲಯಕ್ಕೆ ಯಾರ್ಯಾರು ಭೇಟಿ ನೀಡುತ್ತಾರೆ ಗೊತ್ತ?

ಯಮಧರ್ಮರಾಜನ ದೇವಾಲಯ

ಯಮಧರ್ಮರಾಜನ ದೇವಾಲಯ

ತಮ್ಮ ಜಾತಕದಲ್ಲಿ ಏನಾದರೂ ದೋಷ ಇದ್ದರೆ ಅಥವಾ ಜಾತಕದ ಪ್ರಕಾರ ಯಾವುದಾದರೂ ದೊಡ್ಡ ಅಪತ್ತು ಭವಿಷ್ಯದಲ್ಲಿ ಬರುತ್ತದೆ ಎಂದು ಇದ್ದರೆ ಅಂಥಹವರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇದರಿಂದಾಗಿ ಮಾನಸಿಕ ಪ್ರಶಾಂತತೆ ದೊರೆಯುತ್ತದೆ ಎಂಬ ಭಾವ ಅವರದ್ದು. ಈ ದೇವಾಲಯದಲ್ಲಿನ ಯಮಧರ್ಮರಾಜನನ್ನು ದರ್ಶನ ಮಾಡಿದರೆ ಎಲ್ಲಾ ಪಾಪಗಳು ಪರಿಹಾರವಾಗುತ್ತದೆ ಎಂತೆ.

ಯಮಧರ್ಮರಾಜನ ದೇವಾಲಯ

ಯಮಧರ್ಮರಾಜನ ದೇವಾಲಯ

ಹಾಗೆಯೇ ಶನಿ ಗ್ರಹ ದೋಷಗಳು, ಜಾತಕ ದೋಷಗಳು ಇರುವವರು ಕೂಡ ಇಲ್ಲಿ ಭೇಟಿ ನೀಡಿ ಪೂಜೆಗಳನ್ನು ಮಾಡಿಸುತ್ತಾರೆ. ಇದರಿಂದಾಗಿ ಅವರಿಗೆ ಇರುವ ಕಷ್ಟಗಳು ತ್ವರಿತವಾಗಿ ಉಪಶಮನವಾಗುತ್ತದೆ. ಈ ದೇವಾಲಯದ ಬಗ್ಗೆ ಭಕ್ತರಿಗೆ ಇರುವ ಮುಖ್ಯವಾದ ನಂಬಿಕೆ ಏನು ಗೊತ್ತ?

ಯಮಧರ್ಮರಾಜನ ದೇವಾಲಯ

ಯಮಧರ್ಮರಾಜನ ದೇವಾಲಯ

ದೇವಾಲಯದ ಪ್ರಾಂಗಣದಲ್ಲಿನ ಒಂದು ಮಂಟಪದಲ್ಲಿರುವ ದೀಪಕ್ಕೆ ಎಣ್ಣೆಯನ್ನು ಹಾಕಿ ಯಮನ ವಿಗ್ರಹಕ್ಕೆ ನಮಸ್ಕರಿಸಿದರೆ ಭವಿಷ್ಯದಲ್ಲಿ ಸಂಭವಿಸುವ ಗಂಡಾಂತರಗಳೆಲ್ಲವೂ ಮಟಾ ಮಾಯವಾಗುತ್ತದೆ ಎಂತೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಯಮಧರ್ಮರಾಜನ ದೇವಾಲಯ

ಯಮಧರ್ಮರಾಜನ ದೇವಾಲಯ

ಪ್ರತಿ ತಿಂಗಳ ಭರಣಿ ನಕ್ಷತ್ರ ದಿನದಂದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಊಟ ಮಾಡಿದರೆ ಎಲ್ಲಾ ಭಾದೆಗಳು ನಾಶವಾಗುತ್ತದೆ.

ಯಮಧರ್ಮರಾಜನ ದೇವಾಲಯ

ಯಮಧರ್ಮರಾಜನ ದೇವಾಲಯ

ಅಷ್ಟೇ ಅಲ್ಲ ದೀಪಾವಳಿಹಬ್ಬದ 2 ದಿನಗಳ ನಂತರ ಬರುವ "ಯಮ ದ್ವಿತೀಯ" ದಿನದಂದು ಯಮನು ತನ್ನ ತಂಗಿಯಾದ ಯಮುನದೇವಿಯ ಮನೆಗೆ ಭೊಜನಕ್ಕೆ ತೆರಳಿ, ನಂತರ ಯಮಲೋಕಕ್ಕೆ ಹೋಗುವ ಮೊದಲು ಆ ದಿನ ಯಾರಾದರೂ ತಮ್ಮ ಒಡಹುಟ್ಟಿದವರ ಕೈಯಲ್ಲಿ ಭೋಜನ ಮಾಡಿದರೆ ಅವರಿಗೆ ನರಕ ಭಾದೆಗಳು ಇರುವುದಿಲ್ಲ ಎಂದು ವರವನ್ನು ನೀಡುತ್ತಾನಂತೆ. ಯಾವ ನದಿಯಲ್ಲಿ ಸ್ನಾನ ಮಾಡಿ ಯಮನಿಗೆ ಪೂಜೆಗಳು ನಿರ್ವಹಿಸಬೇಕು ಗೊತ್ತ?

ಯಮಧರ್ಮರಾಜನ ದೇವಾಲಯ

ಯಮಧರ್ಮರಾಜನ ದೇವಾಲಯ

ಆ ದಿನದಂದು ಇಲ್ಲಿ ಯಮನಿಗೆ ವಿಶೇಷವಾದ ಪೂಜೆಗಳನ್ನು ಮಾಡುತ್ತಾರೆ. ಯಮನನ್ನು ದರ್ಶನ ಮಾಡುವವರು ಮೊದಲು ಗೋದಾವರಿ ನದಿಯಲ್ಲಿ ಸ್ನಾನ ಮಾಡಿ, ಯಮನಿಗೆ ಪೂಜೆಗಳು ನೇರವೇರಿಸುತ್ತಾರೆ. ಇಲ್ಲಿನ ವಿಶೇಷವಾದ ಪೂಜೆ ಏನು ಗೊತ್ತ?

ಯಮಧರ್ಮರಾಜನ ದೇವಾಲಯ

ಯಮಧರ್ಮರಾಜನ ದೇವಾಲಯ

ಹೆಸರನ್ನು ನೆನಸಿಕೊಳ್ಳಲು ಭಯ ಪಡುವ ಜನರು ಯಮನ ಅನುಗ್ರಹಕ್ಕಾಗಿ ಪೂಜೆಗಳು ನಿರ್ವಹಿಸುತ್ತಾರೆ. ಭಕ್ತರು ಎಲ್ಲಾ ಮಾಸದಲ್ಲಿಯೂ ಇಲ್ಲಿಗೆ ಭೇಟಿ ನೀಡುತ್ತಾರೆ.

ಯಮಧರ್ಮರಾಜನ ದೇವಾಲಯ

ಯಮಧರ್ಮರಾಜನ ದೇವಾಲಯ

ಈ ದೇವಾಲಯವನ್ನು 1,500 ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಪ್ರಾಚೀನವಾದ ದೇವಾಲಯ ಇದು. ಈ ದೇವಾಲಯಕ್ಕೆ ಕಾರ್ತಿಕ ಮಾಸದಲ್ಲಿ ಭಕ್ತರು ಹೆಚ್ಚಾಗಿ ಭೇಟಿ ನೀಡುತ್ತಾರೆ. ಈ ದೇವಾಲಯದಲ್ಲಿ ಯಮ ಇಂಥಹ ವರಗಳನ್ನು ನೀಡುತ್ತಾನೆ.

ಯಮಧರ್ಮರಾಜನ ದೇವಾಲಯ

ಯಮಧರ್ಮರಾಜನ ದೇವಾಲಯ

ಮಾರ್ಕಂಡೇಯನಿಗೆ, ಮಹಾ ಪತಿವ್ರತ ಸಾವಿತ್ರಿಗೆ ಅಲ್ಲದೇ ನಮಗೂ ಕೂಡ ವರಗಳನ್ನು ಇಂದಿಗೂ ನೀಡುತ್ತಾ ನೆಲೆಸಿರುವ ಮಾಹಿಮಾನ್ವಿತವಾದ ದೇವತ ಮೂರ್ತಿಯಾಗಿದ್ದಾನೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಈ ಯಮಧರ್ಮರಾಜನ ದೇವಾಲಯಕ್ಕೆ ಹೇಗೆ ಸಾಗಬೇಕು?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ