Search
  • Follow NativePlanet
Share
» »ವಿಷ್ಣುವಿಗೆ ಮೂರು ಕಣ್ಣು ಇರುವ ಪ್ರಪಂಚದಲ್ಲಿಯೇ ಏಕೈಕ ದೇವಾಲಯವಿದು...

ವಿಷ್ಣುವಿಗೆ ಮೂರು ಕಣ್ಣು ಇರುವ ಪ್ರಪಂಚದಲ್ಲಿಯೇ ಏಕೈಕ ದೇವಾಲಯವಿದು...

ಪರಮಶಿವನಿಗೆ ಮೂರು ಕಣ್ಣು ಇರುವುದರಿಂದ ಆತನನ್ನು ತ್ರಿನೇತ್ರನಾಗಿ ಆರಾಧಿಸುತ್ತಿರುವುದರ ಬಗ್ಗೆ ಸಾಮಾನ್ಯವಾಗಿ ತಿಳಿದಿರುವುದೇ. ಆದರೆ ಪ್ರಪಂಚದಲ್ಲಿಯೇ ಒಂದೇ ಒಂದು ದೇವಾಲಯದಲ್ಲಿ ವಿಷ್ಣುವಿಗೂ ಕೂಡ ನೆತ್ತಿಯ ಮೇಲೆ ಕಣ್ಣು ಇರುವುದನ್ನು ಕಾಣಬಹುದು.

By Sowmyabhai

ಪರಮಶಿವನಿಗೆ ಮೂರು ಕಣ್ಣು ಇರುವುದರಿಂದ ಆತನನ್ನು ತ್ರಿನೇತ್ರನಾಗಿ ಆರಾಧಿಸುತ್ತಿರುವುದರ ಬಗ್ಗೆ ಸಾಮಾನ್ಯವಾಗಿ ತಿಳಿದಿರುವುದೇ. ಆದರೆ ಪ್ರಪಂಚದಲ್ಲಿಯೇ ಒಂದೇ ಒಂದು ದೇವಾಲಯದಲ್ಲಿ ವಿಷ್ಣುವಿಗೂ ಕೂಡ ನೆತ್ತಿಯ ಮೇಲೆ ಕಣ್ಣು ಇರುವುದನ್ನು ಕಾಣಬಹುದು. ಆ ದೇವಾಲಯದಲ್ಲಿ ಪೂಜೆಗಳು ಮಾಡುವುದರಿಂದ ಗ್ರಹ ಭಾದೆಗಳಿಂದ ಮುಕ್ತಿ ಪಡೆಯಬಹುದು. ವಿವಾಹ, ಸಂತಾನದ ವಿಷಯದಲ್ಲಿ ವರವನ್ನು ಸ್ವಾಮಿಯು ಪ್ರಸಾಧಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ.

ಅಷ್ಟೇ ಅಲ್ಲ, 12 ವರ್ಷಕ್ಕೆ ಒಮ್ಮೆ ಬರುವ ಮಹಾಮಹಾ ಉತ್ಸವದ ಜೊತೆ ಸಂಬಂಧವಿರುವ ವೈಷ್ಣವಾಲಯದಲ್ಲಿ ಇದು ಕೂಡ ಒಂದು. ಇಲ್ಲಿ ಸ್ವಾಮಿಯನ್ನು ಬಿಲ್ವ ಪತ್ರೆಗಳಿಂದ ಪೂಜಿಸುತ್ತಾರೆ. ಬಿಲ್ವ ಪತ್ರೆಗಳಿಂದ ಪೂಜಿಸುವುದು ಶೈವ ಧರ್ಮಕ್ಕೆ ಸಂಬಂಧಿಸಿದ ಆರಾಧನ ಇಲ್ಲಿ ಮಾತ್ರ ಮಾಡುತ್ತಾರೆ ಎಂಬುದು ಗಮರ್ನಾಹ. ಇಂತಹ ವಿಶೇಷತೆಗಳಿರುವ ಕುಂಭಕೋಣದ ವಿಷ್ಣುವಿನ ದೇವಾಲಯಕ್ಕೆ ಸಂಬಧಿಸಿದ ಕಥೆಯ ಬಗ್ಗೆ ನೇಟಿವ್ ಪ್ಲಾನೆಟ್‍ನಲ್ಲಿ ತಿಳಿಯೋಣ.

1.ಸುದರ್ಶನ ಚಕ್ರ

1.ಸುದರ್ಶನ ಚಕ್ರ

PC:YOUTUBE

ಸ್ಥಿತಿಕಾರನಾದ ವಿಷ್ಣುವು ಆಯುಧವಾದ ಸುದರ್ಶನ ಚಕ್ರ ಎಂಬ ವಿಷಯ ಗೊತ್ತಿರುವುದೇ. ಈ ಸುದರ್ಶನ ಚಕ್ರದಿಂದ ಅನೇಕ ಮಂದಿ ರಾಕ್ಷಸರನ್ನು ಮಹಾವಿಷ್ಣುವು ಸಂಹಾರ ಮಾಡಿದ್ದಾನೆ. ಒಮ್ಮೆ ಪ್ರಜೆಗಳು ಹಿಂಸಿಸುತ್ತಿರುವ ಜಲಂದಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಲು ಸುದರ್ಶನ ಚಕ್ರವನ್ನು ಆತನ ಮೇಲೆ ವಿಷ್ಣುವು ಪ್ರಯೋಗಿಸುತ್ತಾನೆ.

2.ಪಾತಾಳದ ಒಳಗೆ ತೆರಳಿ

2.ಪಾತಾಳದ ಒಳಗೆ ತೆರಳಿ

PC:YOUTUBE

ಸುದರ್ಶನ ಚಕ್ರದ ಪ್ರತಾಪಕ್ಕೆ ಭಯಪಟ್ಟ ಜಲಂದದಾಸುರನು ಪಾತಾಳದೊಳಗೆ ತೆರಳಿ ಅಡಗಿಸಿಕೊಳ್ಳುತ್ತಾನೆ. ಆತನ ಸುದರ್ಶನ ಚಕ್ರವು ಪಾತಾಳ ಲೋಕಕಕ್ಕೂ ಹೋಗಿ ಆ ಜಲಂದಾಸುರ ಎಂಬ ಅಸುರನನ್ನು ಸಂಹಾರ ಮಾಡುತ್ತದೆ. ಕಾವೇರಿ ನದಿಯ ಮೂಲಕ ಪ್ರಸ್ತುತವಿರುವ ಚಕ್ರಪಾಣಿ ಇರುವ ದೇವಾಲಯದ ಸ್ಥಳದ ಭೂಮಿಯ ಮೇಲೆ ಬರುತ್ತದೆ.

3.ಚಕ್ರತೀರ್ಥ

3.ಚಕ್ರತೀರ್ಥ

PC:YOUTUBE

ಅದೇ ಸಮಯದಲ್ಲಿ ಬ್ರಹ್ಮದೇವನು ಅಲ್ಲಿ ಸ್ನಾನವನ್ನು ಮಾಡುತ್ತಿರುತ್ತಾನೆ. ಈ ಸುದರ್ಶನ ಚಕ್ರವನ್ನು ಗುರುತಿಸಿ ಅಲ್ಲಿಯೇ ಪ್ರತಿಷ್ಟಾಪಿಸುತ್ತಾನೆ. ಇನ್ನು ಆ ಸುದರ್ಶನ ಚಕ್ರವು ಭೂಮಿಯ ಮೇಲೆ ಬಂದ ಸ್ಥಳವೇ ಚಕ್ರತೀರ್ಥ ಎಂದು ಕರೆಯುತ್ತಾರೆ.

4.ಶತ್ರುಗಳನ್ನು ಜಯಿಸುವ ಶಕ್ತಿ

4.ಶತ್ರುಗಳನ್ನು ಜಯಿಸುವ ಶಕ್ತಿ

PC:YOUTUBE

ಈ ತೀರ್ಥದಲ್ಲಿ ಸ್ನಾನವನ್ನು ಆಚರಿಸಿದರೆ ಎಂಥಹ ಶತ್ರುಗಳನ್ನಾದರೂ ಜಯಿಸುವ ಶಕ್ತಿಯು ಲಭಿಸುತ್ತದೆ ಎಂದು ಸ್ಥಳೀಯರ ಭಕ್ತರ ನಂಬಿಕೆಯಾಗಿದೆ. ಹಾಗಾಗಿಯೇ ಅನೇಕ ಪ್ರದೇಶಗಳಿಂದ ಕೂಡ ಮುಖ್ಯವಾಗಿ ಚುಣಾವಣೆಯ ಸಮಯದಲ್ಲಿ ರಾಜಕೀಯ ನಾಯಕರು ಹೆಚ್ಚಾಗಿ ಈ ಪರಮ ಪುಣ್ಯ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ.

5.ಅಪಾರ ಕಾಂತಿ

5.ಅಪಾರ ಕಾಂತಿ

PC:YOUTUBE

ಇದು ಹೀಗೆ ಇದ್ದರೆ, ಈ ಸುದರ್ಶನ ಚಕ್ರವನ್ನು ಇಲ್ಲಿ ಪ್ರತಿಷ್ಟಾಪಿಸಿದ ನಂತರ ಆ ಚಕ್ರವು ಅಪಾರ ಕಾಂತಿಯುತವಾಗಿ ಬೆಳಗುತ್ತಾ ಇತ್ತಂತೆ. ಹಾಗಾಗಿಯೇ ಈ ಸ್ಥಳವನ್ನು ಅತ್ಯಂತ ಪವಿತ್ರವಾದುದು ಎಂದು ಭಾವಿಸುತ್ತಾರೆ.

6.ಸೂರ್ಯನ ಕಾಂತಿ

6.ಸೂರ್ಯನ ಕಾಂತಿ

PC:YOUTUBE

ಈ ಸುದರ್ಶನ ಚಕ್ರದ ಕಾಂತಿಯ ಮುಂದೆ ಸೂರ್ಯನ ಕಾಂತಿಯು ಕಡಿಮೆಯಾಯಿತಂತೆ. ಸೂರ್ಯನಿಗಿಂತ ಸುದರ್ಶನ ಚಕ್ರದ ತೇಜಸ್ಸು ಹೆಚ್ಚಾಗಿ ಇದ್ದ ಕಾರಣದಿಂದ ಸೂರ್ಯನು ಅಸೂಯೆಯಿಂಧ ತನ್ನ ತೇಜಸ್ಸುನ್ನು ಮತ್ತಷ್ಟು ಹೆಚ್ಚು ಮಾಡಿದನಂತೆ.

7.ಸೂರ್ಯನ ಕಿರಣ

7.ಸೂರ್ಯನ ಕಿರಣ

PC:YOUTUBE

ಆ ಬಿಸಿಗೆ, ಬೆಳಕಿಗೆ ಭೂ ಮಂಡಲದ ಮೇಲಿರುವ ಸಮಸ್ತ ಜೀವಿಗಳು ತೀವ್ರವಾಗಿ ತೊಂದರೆಯನ್ನು ಅನುಭವಿಸದವಂತೆ. ಇದರಿಂದಾಗಿ ಸುದರ್ಶನ ಚಕ್ರವು ಸೂರ್ಯನ ತೇಜಸ್ಸುನ್ನು ತನ್ನಲ್ಲಿ ವೀಲಿನ ಮಾಡಿಕೊಂಡಿತಂತೆ.

8.ಶಕ್ತಿ

8.ಶಕ್ತಿ

PC:YOUTUBE

ಆಗ ಬುದ್ಧಿ ಬಂದ ಸೂರ್ಯನು ಸುದರ್ಶನ ಚಕ್ರವನ್ನು ಪರಿಪರಿ ವಿಧವಾಗಿ ಪ್ರಾರ್ಥನೆ ಮಾಡಿಕೊಂಡನಂತೆ. ಇದರಿಂದಾಗಿ ಶಾಂತಿಸಿದ ಸುದರ್ಶನ ಚಕ್ರವು ಸೂರ್ಯನಿಗೆ ಶಕ್ತಿವೆಲ್ಲಾ ತಿರುಗಿ ನೀಡಿತಂತೆ.

9.ಇಲ್ಲಿ ದೇವಾಲಯ ನಿರ್ಮಾಣ ಮಾಡಿದನು

9.ಇಲ್ಲಿ ದೇವಾಲಯ ನಿರ್ಮಾಣ ಮಾಡಿದನು

PC:YOUTUBE

ಇದರಿಂದಾಗಿ ಸೂರ್ಯದೇವನಿ ಈ ಲೀಲೆಯೆಲ್ಲಾ ವಿಷ್ಣುಭಗವಾನನದ್ದು ಎಂದು ತಿಳಿದುಕೊಂಡು ಆತನಿಗೆ ಇಲ್ಲಿ ದೇವಾಲಯವನ್ನು ನಿರ್ಮಾಣ ಮಾಡಿದನು. ವಿಷ್ಣುವು ಕೂಡ ಸೂರ್ಯನ ತಪ್ಪುಗಳನ್ನು ಕ್ಷಮಿಸಿ, ತಾನು ಇನ್ನು ಮೇಲೆ ಚಕ್ರಪಾಣಿಯಾಗಿ ನೆಲೆಸಿರುತ್ತೇನೆ ಎಂದು ಹೇಳುತ್ತಾನೆ.

10.ಭಾಸ್ಕರ ಕ್ಷೇತ್ರ

10.ಭಾಸ್ಕರ ಕ್ಷೇತ್ರ

PC:YOUTUBE

ಅಷ್ಟೇ ಅಲ್ಲದೇ, ಈ ಭೂ ಮಂಡಲದಲ್ಲಿರುವವರೆಗೆ ಈ ಕ್ಷೇತ್ರ ಭಾಸ್ಕರ ಕ್ಷೇತ್ರವಾಗಿ ಹೆಸರುವಾಸಿಯಾಗುತ್ತದೆ ಎಂದು ಹೇಳುತ್ತಾನೆ. ಈ ಚಕ್ರಪಾಣಿ ಗರ್ಭಗುಡಿಯು ಉಳಿದ ದೇವಾಲಯಗಳಿಗಿಂತ ಸ್ವಲ್ಪ ಎತ್ತರದಲ್ಲಿದೆ.

11.ಚಕ್ರಪಾಣಿ ವಿಗ್ರಹ

11.ಚಕ್ರಪಾಣಿ ವಿಗ್ರಹ

PC:YOUTUBE

ಇನ್ನು ಮೂಲ ವಿಗ್ರಹವಾದ ಚಕ್ರಪಾಣಿ ವಿಗ್ರಹವು 6 ಕೋನಗಳನ್ನು ಹೊಂದಿರುವ ಚಕ್ರಮಧ್ಯದಲ್ಲಿರುತ್ತದೆ. ಸ್ವಾಮಿ ನಿಂತಿರುವ ಸ್ಥಿತಿಯಲ್ಲಿದ್ದು, 8 ಕೈಗಳಿಂದ, 8 ಆಯುಧಗಳನ್ನು ಹೊಂದಿದ್ದಾನೆ.

12.ವಿಷ್ಣುವಿಗೆ ಮೂರು ಕಣ್ಣು

12.ವಿಷ್ಣುವಿಗೆ ಮೂರು ಕಣ್ಣು

PC:YOUTUBE

ಎಲ್ಲಾದಕ್ಕಿಂತ ಮುಖ್ಯವಾಗಿ ಇಲ್ಲಿ ವಿಷ್ಣುವಿಗೆ ಮೂರು ಕಣ್ಣುಗಳನ್ನು ಹೊಂದಿದ್ದಾನೆ. ಹೀಗೆ ವಿಷ್ಣುವು ಮೂರು ಕಣ್ಣುಗಳನ್ನು ಇರುವುದು ಪ್ರಪಂಚದಲ್ಲಿ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ.

13.2 ದ್ವಾರಗಳು

13.2 ದ್ವಾರಗಳು

PC:YOUTUBE

ಈ ಸಾರಂಗಪಾಣಿ ದೇವಾಲಯದಲ್ಲಿ ಉತ್ತರದ್ವಾರ, ದಕ್ಷಿಣ ದ್ವಾರ ಎಂಬ 2 ದ್ವಾರಗಳಿವೆ. ಇಲ್ಲಿ ಅಂಬುಜವಲ್ಲಿ ಎಂಬ ಹೆಸರಿನಿಂದ ನೆಲೆಸಿರುವ ದೇವಿಯನ್ನು ಪೂಜಿಸಿ ತದನಂತರ ಸ್ವಾಮಿಯನ್ನು ದರ್ಶಿಸಿಕೊಳ್ಳಬೇಕು. ತದನಂತರ ಭಕ್ತರ ಕೋರಿಕೆಗಳನ್ನು ದೇವಿಯು ಸ್ವಾಮಿಗೆ ಹೇಳುತ್ತಾರೆ ಎಂದು ಸ್ಥಳೀಯ ಪೂಜಾರಿಗಳು ಹೇಳುತ್ತಾರೆ.

14.ಗೋವಿಂದ ದೀಕ್ಷಿತಾರ್

14.ಗೋವಿಂದ ದೀಕ್ಷಿತಾರ್

PC:YOUTUBE

ದೇವಾಲಯವನ್ನು ಕ್ರಿ.ಶ 1620 ರಲ್ಲಿ ನಾಯಕ ರಾಜರ ಮಂತ್ರಿ ಗೋವಿಂದ ದೀಕ್ಷಿತಾರ್ ನಿರ್ಮಾಣ ಮಾಡಿದರು ಎಂದು ಸ್ಥಳೀಯ ಶಾಸನಗಳಿಂದ ತಿಳಿದುಬರುತ್ತದೆ. ದೇವಾಲಯದ ಸುತ್ತ ಗ್ರಾನೈಟ್‍ನಿಂದ ನಿರ್ಮಾಣ ಮಾಡಿದ ಪ್ರಹರಿ ಗೋಡೆಯ ಮೇಲೆ ಇದೆ. ರಾಜಗೋಪುರವು 5 ಅಂತಸ್ತುಗಳಿಂದ ಕಂಗೊಳಿಸುತ್ತಿದೆ.

15.ಬಿಲ್ವ ಪತ್ರೆಗಳಿಂದ

15.ಬಿಲ್ವ ಪತ್ರೆಗಳಿಂದ

PC:YOUTUBE

ವಿನಾಯಕ, ಪಂಚಮುಖ ಆಂಜನೇಯ ಸ್ವಾಮಿದಂತಹ ಉಪ ದೇವಾಲಯಗಳು ಕೂಡ ಇಲ್ಲಿ ಕಾಣಬಹುದು. 12 ವರ್ಷಕ್ಕೆ ಒಮ್ಮೆ ಮಹಾಮಹಾ ಉತ್ಸವದ ಸಂಬಂಧವಿರುವ ವೈಷ್ಣವ ದೇವಾಲಯದಲ್ಲಿ ಇದು ಕೂಡ ಒಂದು. ವಿಶೇಷವೆನೆಂದರೆ ಇಲ್ಲಿ ಸ್ವಾಮಿಯನ್ನು ಬಿಲ್ವ ಪತ್ರೆಯಿಂದ ಪೂಜಿಸುತ್ತಾರೆ.

16.ಗ್ರಹ ಭಾದೆಗಳಿಂದ

16.ಗ್ರಹ ಭಾದೆಗಳಿಂದ

PC:YOUTUBE

ಈ ದೇವಾಲಯದಲ್ಲಿ ಸ್ವಾಮಿಯನ್ನು ಮೂರು ಕಣ್ಣುಗಳು ಇರುವುದರಿಂದ ಪೂಜೆಗಳು ಮಾಡಿದರೆ ಗ್ರಹ ಪೀಡೆಗಳಿಂದ ಕಾಪಾಡುತ್ತಾರೆ ಎಂದೂ, ವಿವಾಹ, ಸಂತಾನ ವಿಷಯದಲ್ಲಿ ವರಲು ಪ್ರಸಾದಿಸುತ್ತಾರೆ ಎಂದು ಭಕ್ತರು ನಂಬುತ್ತಾರೆ. ಮುಖ್ಯವಾಗಿ ಸುದರ್ಶನ ಯಾಗವನ್ನು ಮಾಡಿದರೆ ಬಹುಮುಖ ಫಲವು ಹೊಂದಬಹುದು ಎಂದು ಭಕ್ತರು ನಂಬುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X