Search
  • Follow NativePlanet
Share
» »ಪ್ರಖ್ಯಾತಿ ಕೊಡುವ ಬಲಿಜಿಪೇಟದ ಬಾಲಾಜಿ!

ಪ್ರಖ್ಯಾತಿ ಕೊಡುವ ಬಲಿಜಿಪೇಟದ ಬಾಲಾಜಿ!

By Vijay

ಇದೊಂದು ವೆಂಕಟೇಶ್ವರನ ಸನ್ನಿಧಿ. ಈ ವೆಂಕಟೇಶ್ವರನನ್ನು ಭಕ್ತರು ಮುಂದೆ ಪಟ್ಟಿ ಮಾಡಲಾದ ಕಾಮನೆಗಳಿಗಾಗಿ ಭೇಟಿ ನೀಡುತ್ತಾರಂತೆ! ಪ್ರಖ್ಯಾತಿಗಳಿಸಲು, ಸಕಲ ರೋಗಗಳಿಂದ ಮುಕ್ತರಾಗಲು, ಸಂಪತ್ತುಗಳಿಸಲು, ಧೈರ್ಯಗಳಿಸಲು ಹಾಗೂ ಜಾತಕದಲ್ಲಿರುವ ದೋಷಗಳನ್ನು ಸರಿಪಡಿಸಲು. ಭಕ್ತಿ ಹಾಗೂ ನಂಬಿಕೆಯಿಂದ ಬೇಡಿದರೆ ಈ ಎಲ್ಲ ಕಾಮನೆಗಳು ಸಿದ್ಧಿಸುತ್ತವೆ ಎಂದು ನಂಬಲಾಗುತ್ತದೆ.

ಪ್ರಸ್ತುತ ಲೇಖನವು ವೆಂಕಟೇಶ್ವರನ ಈ ದೇವಾಲಯದ ಕುರಿತು ತಿಳಿಸುತ್ತದೆ. ನಿಮಗೆ ಅವಕಾಶ ದೊರೆತರೆ ಒಂದೊಮ್ಮೆ ಖಂಡಿತವಾಗಿಯೂ ಈ ದೇವಾಲಯಕ್ಕೊಮ್ಮೆ ಭೇಟಿ ನೀಡಬಹುದು. ಮೂಲತಃ ಈ ದೇವಾಲಯವು ಆಂಧ್ರಪ್ರದೇಶ ರಾಜ್ಯದಲ್ಲಿದೆ. ಇನ್ನೊಂದು ವಿಶೇಷವೆಂದರೆ ಮೂಲತಃ ಈ ಸ್ಥಳದಿಂದಲೆ ಬಲಿಜಿಗರು ಹಲವೆಡೆ ವಲಸೆ ಹೋದರೆಂಬುದು ಕೆಲವು ಇತಿಹಾಸಕಾರರ ಅಭಿಪ್ರಾಯವಾಗಿದೆ.

ವಿಜಿನಗರಂನಲ್ಲಿದೆ

ವಿಜಿನಗರಂನಲ್ಲಿದೆ

ವೆಂಕಟೇಶ್ವರ ಸ್ವಾಮಿಗೆ ಮುಡಿಪಾದ ಈ ದೇವಾಲಯವು ಆಂಧ್ರಪ್ರದೇಶ ರಾಜ್ಯದ ವಿಜಿನಗರಂ ಜಿಲ್ಲೆಯ ಬಲಿಜಿಪೇಟ ತಾಲೂಕಿನ ಪಾಲಾಗರ ಎಂಬ ಗ್ರಾಮದಲ್ಲಿದೆ. ವಿಶಾಖಾಪಟ್ಟಣದಿಂದ ಸುಮಾರು 103 ಕಿ.ಮೀ ಗಳಷ್ಟು ದೂರದಲ್ಲಿ ಈ ದೇವಾಲಯ ತಾಣವಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Nvvchar

ವೆಂಕಟೇಶ್ವರನ ಸನ್ನಿಧಿ

ವೆಂಕಟೇಶ್ವರನ ಸನ್ನಿಧಿ

ಇತಿಹಾಸದಿಂದ ತಿಳಿದುಬರುವ ಕೆಲವು ವಿಚಾರವೆಂದರೆ ಬಲಿಜಿಗರು ಈ ಪ್ರದೇಶದಿಂದಲೆ ಬೇರೆಡೆಗಳಲ್ಲಿ ವಲಸೆ ಹೋದರೆಂಬುದು. ಅಲ್ಲದೆ ಇಲ್ಲಿನ ಬಲಿಜಿಗರ ಪ್ರಮುಖ ದೇವ ವೆಂಕಟೇಶ್ವರ. ಹಾಗಾಗಿ ಇಂದಿಗೂ ಇಲ್ಲಿನ ಬಲಿಜಿಗ ಸಮುದಾಯದಲ್ಲಿ ಬಹುತೇಕರು ತಮ್ಮ ಹೆಸರುಗಳಲ್ಲಿ ವೆಂಕಟ ಎಂಬ ಶಬ್ದವನ್ನು ಹೊಂದೆ ಹೊಂದಿರುತ್ತಾರೆಂಬುದು. ಹಾಗಾಗಿ ಈ ದೇವಾಲಯ ಸಾಕಷ್ಟು ವಿಶೇಷ ಎನಿಸುತ್ತದೆ.

ಚಿತ್ರಕೃಪೆ: Phanibandaru

ಸರ್ವರನ್ನು ಸೆಳೆಯುತ್ತದೆ

ಸರ್ವರನ್ನು ಸೆಳೆಯುತ್ತದೆ

ಗ್ರಾಮದ ಗಾತ್ರಕ್ಕೆ ಸಂಬಂಧಿಸಿದಂತೆ ಈ ದೇವಾಲಯವು ತಕ್ಕ ಮಟ್ಟಿಗೆ ದೊಡ್ಡದಾಗಿದ್ದು ಸುತ್ತಮುತ್ತಲಿನ ಸಾಕಷ್ಟು ಜನರನ್ನು ಆಕರ್ಷಿಸುತ್ತದೆ. ಈ ದೇವಾಲಯದಲ್ಲಿ ಕುತೂಹಲ ಮೂಡಿಸುವ ಅಂಶವೆಂದರೆ ವೆಂಕಟೇಶ್ವರನ ಅರ್ಥಾತ್ ವಿಷ್ಣು ದೇವರ ದಶಾವತಾರಗಳ ವಿಗ್ರಹಗಳನ್ನು ನಿರ್ಮಿಸಲಾಗಿರುವುದು.

ಚಿತ್ರಕೃಪೆ: Rajasekhar1961

ಮತ್ಸ್ಯಾವತಾರ

ಮತ್ಸ್ಯಾವತಾರ

ಮತ್ಸ್ಯಾವತಾರ : ಮೊದಲನೇಯದಾಗಿ ಮತ್ಸ್ಯಾವತಾರ ಎಂದು ಹೇಳಲಾಗುತ್ತದೆ. ಒಂದೊಮ್ಮೆ ಭೂಮಿಯು ನೀರಿನಲ್ಲಿ ಸಂಪೂರ್ಣವಾಗಿ ಮುಳುಗುವ ಭಯವಿದ್ದಾಗ ವಿಷ್ಣು ಮುಖದಲ್ಲಿ ಕೊಂಬನ್ನುಳ್ಳ ಮೀನಿನ ಅವತಾರ ತಾಳಿ ಭೂಮಿಯನ್ನು ತನ್ನ ಕೊಂಬಿನಲ್ಲಿ ಸಿಗಿಸಿಕೊಂಡು ಎಲ್ಲ ಜೀವ ಸಂಕುಲವನ್ನು ಕಾಪಾಡುತ್ತಾನೆ.

ಚಿತ್ರಕೃಪೆ: Rajasekhar1961

ಕೂರ್ಮಾವತಾರ

ಕೂರ್ಮಾವತಾರ

ಕೂರ್ಮಾವತಾರ : ಸುರರು ಹಾಗೂ ಅಸುರರು ಅಮೃತ ಪಡೆಯಲು ಸಮುದ್ರ ಮಂಥನ ಮಾಡುತ್ತಿರುವಾಗ ಸಮುದ್ರ ಕಡೆಯುವ ಕೋಲಾಗಿ ಮೇರು ಪರ್ವತವನ್ನು ಬಳಸುತ್ತಾರೆ. ಆದರೆ ಕಡೆಯುತ್ತ ಪರ್ವತವು ಪಾತಾಳಕ್ಕೆ ಕುಸಿಯುವ ಭೀತಿ ಉಂಟಾದಾಗ ವಿಷ್ಣು ಕೂರ್ಮಾವತಾರ ತಾಳಿ ತನ್ನ ಬೆನ್ನಿನ ಕವಚದ ಮೇಲೆ ಮೇರುವನ್ನು ಹಾಕಿಕೊಂಡು ಮತ್ತೆ ಲೋಕ ಕಲ್ಯಾಣ ಉಂಟುಮಾಡುತ್ತಾನೆ.

ಚಿತ್ರಕೃಪೆ: Rajasekhar1961

ವರಾಹವತಾರ

ವರಾಹವತಾರ

ವರಾಹ : ಒಂದೊಮ್ಮೆ ಹಿರಣ್ಯಾಕ್ಷ ರಕ್ಕಸನು ಭೂಮಿಯನ್ನು (ಭೂದೇವಿ) ಅಪಹರಿಸಿ ಪಾತಾಳದಲ್ಲಿ ಬಚ್ಚಿಟ್ಟಾಗ ವಿಷ್ಣು ವರಾಹ ಅವತಾರ ತಾಳಿ ಭೂಮಿಯನ್ನು ರಕ್ಷಿಸಿ ತನ್ನ ಕೋರೆ ಹಲ್ಲುಗಳ ಸಹಾಯದಿಂದ ಭೂಮಿಯನ್ನು ಮೇಲಕ್ಕೆ ತರುತ್ತಾನೆ>

ಚಿತ್ರಕೃಪೆ: Rajasekhar1961

ನರಸಿಂಹಾವತಾರ

ನರಸಿಂಹಾವತಾರ

ನರಸಿಂಹ : ಈ ಅವತಾರದ ಕುರಿತು ಬಹುತೇಕರಿಗೆ ತಿಳಿದೆ ಇದೆ. ಸಾವು ಬರುವ ಎಲ್ಲ ರೀತಿಯ ಸಂಭವನೀಯತೆಗಳನ್ನು ಅವಲೋಕಿಸಿ ಅವುಗಳಿಂದ ಸಾವು ಬರದಂತೆ ವರ ಪಡೆದು ವಿಷ್ಣುವಿನ ಭಕ್ತನಾದ ಪ್ರಹ್ಲಾದನಿಗೆ ಎಲ್ಲ ರೀತಿಯ ಹಿಂಸೆಗಳನ್ನು ನೀಡಿ ಹರಿಯನ್ನು ಅವಮಾನಿಸಿದಾಗ ಖಂಬಗಳನ್ನು ಮುರಿದು ಅದರಿಂದ ಪ್ರತ್ಯಕ್ಷನಾದ ಅರ್ಧ ಮನುಷ್ಯ ಅರ್ಧ ಸಿಂಹದ ರೂಪ ಪಡೆದು ಅವತರಿಸುವ ವಿಷ್ಣುವಿನ ಅವತಾರ ಇದಾಗಿದೆ.

ಚಿತ್ರಕೃಪೆ: Rajasekhar1961

ವಾಮನಾವತಾರ

ವಾಮನಾವತಾರ

ವಾಮನ : ಬಲಿಯ ಅಹಂಕಾರವನ್ನು ಮುರಿಯಲು ತಾಳಿದ ವಿಷ್ಣುವಿನ ಅವತಾರ ಇದಾಗಿದೆ. ಕುಬ್ಜ ಬ್ರಾಹ್ಮಣನ ಅವತಾರದಲ್ಲಿ ಬಲಿ ಚಕ್ರವರ್ತಿಯಿಂದ ಲೋಕವನ್ನು ರಕ್ಷಿಸುತ್ತಾನೆ.

ಚಿತ್ರಕೃಪೆ: Rajasekhar1961

ಪರಶುರಾಮನಾವತಾರ

ಪರಶುರಾಮನಾವತಾರ

ಪರಶುರಾಮ : ಕ್ರೂರ ಕ್ಷತ್ರೀಯ ರಾಜರಿಂದ ನಲುಗಿಹೋದ ಲೋಕವನ್ನು ಉದ್ಧರಿಸಲು ಹಾಗೂ ರಾಜರನ್ನು ಸಂಹರಿಸಲು ಎತ್ತಿದ ವಿಷ್ಣುವಿನ ಅವತಾರ ಇದಾಗಿದೆ.

ಚಿತ್ರಕೃಪೆ: Rajasekhar1961

ರಾಮಾವತಾರ

ರಾಮಾವತಾರ

ರಾಮ : ಆದರ್ಶ ಪುರುಷನ ಲಕ್ಷಣಗಳನ್ನು ಲೋಕಕ್ಕೆ ಸಾರುವ ಆದರ್ಶಮಯ ಜೀವನ ನಡೆಸುವ ಬಗೆ ತಿಳಿ ಹೇಳಲು ಎತ್ತಿದ ಅವತಾರ ಇದಾಗಿದೆ.

ಚಿತ್ರಕೃಪೆ: Rajasekhar1961

ಕೃಷ್ಣಾವತಾರ

ಕೃಷ್ಣಾವತಾರ

ಕೃಷ್ಣ : ಧರ್ಮದಿಂದ ಬಾಳಿ ಬದುಕಿ, ಮಾಯೆಯಿಂದ ಮುಕ್ತರಾಗಿ ಸತ್ಯದ ಅರಿವೊಂದೆ ಹುಡುಕುವುದು, ಮೋಕ್ಷ ಪಡೆಯುವುದು ಜೀವನದ ಪರಮೋದ್ದೇಶ ಎಂದು ಸಾರಲು ಎತ್ತಿದ ವಿಷ್ಣುವಿನ ಅವತಾರ ಇದಾಗಿದೆ.

ಚಿತ್ರಕೃಪೆ: Rajasekhar1961

ಬಲರಾಮಾವತಾರ

ಬಲರಾಮಾವತಾರ

ಬಲರಾಮ/ಬುದ್ಧ : ಈ ಅವತಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳಿವೆ. ಕೆಲವರು ಬುದ್ಧನು ಈ ಅವತಾರ ಎಂದು ಹೆಳಿದರೆ, ಇನ್ನೂ ಕೆಲವರ ಪ್ರಕಾರ, ಬುದ್ಧನಿಗೂ ವಿಷ್ಣುವಿಗೂ ಯಾವುದೆ ರೀತಿಯ ಸಂಬಂಧವಿಲ್ಲವೆಂದೂ, ವಿಷ್ಣುವಿನ ಪ್ರತಿರೂಪವಾದ ಅನಂತ ಸರ್ಪದ ಅವತಾರ ಬಲರಾಮನಾಗಿದ್ದು ಬಲರಾಮನೆ ಈ ಅವತಾರ ಎಂದು ಹೇಳುತ್ತಾರೆ. ಆದಾಗ್ಯೂ ಇನ್ನೂ ಹಲವರ ಪ್ರಕಾರ, ವಿಷ್ಣುವಿನ ದಶಾವತಾರಗಳು ವಿಷ್ಣುವನ್ನು ಗಣನೆಗೆ ತೆಗೆದುಕೊಂಡಿದ್ದು ಬಲರಾಮನಾಗಲಿ ಅಥವಾ ಬುದ್ಧನಾಗಲಿ ಅವತಾರ ಅಲ್ಲವೆ ಅಲ್ಲ ಎಂದು ಹೇಳುತ್ತಾರೆ.

ಚಿತ್ರಕೃಪೆ: Rajasekhar1961

ಕಲ್ಕಿ

ಕಲ್ಕಿ

ಕಲ್ಕಿ : ಕಲಿಯುಗದಲ್ಲಿ ಕುದುರೆ ಏರಿ ಸರ್ವ ಕ್ರೂರತ್ವವನ್ನು ವಿನಾಶ ಮಾಡುವ ವಿಷ್ಣುವಿನ ಅವತಾರ ಇದಾಗಿದೆ.

ಚಿತ್ರಕೃಪೆ: Rajasekhar1961

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X