Search
  • Follow NativePlanet
Share
» »ವಿಗ್ರಹವನ್ನು ಕೆತ್ತದೆಯೇ ನೆಲೆಸಿರುವ ಸ್ವಾಮಿಯ ದೇವಾಲಯದ ರಹಸ್ಯ!

ವಿಗ್ರಹವನ್ನು ಕೆತ್ತದೆಯೇ ನೆಲೆಸಿರುವ ಸ್ವಾಮಿಯ ದೇವಾಲಯದ ರಹಸ್ಯ!

ಭಕ್ತರಿಗಾಗಿ ದೇವತೆಗಳು ವಿವಿಧ ರೂಪದಲ್ಲಿ, ವಿವಿಧ ಪ್ರದೇಶದಲ್ಲಿ ನೆಲೆಸಿ ದುಷ್ಟಶಕ್ತಿಗಳಿಂದ ಕಾಪಾಡಿ ರಕ್ಷಣೆಯನ್ನು ನೀಡುತ್ತಾ ಇರುತ್ತಾರೆ. ಕೋರಿಕೆಗಳನ್ನು ಪೂರೈಸುತ್ತಾ ಇರುವ ಬಗ್ಗೆ ಹಲವಾರು ಗ್ರಂಥಗಳಲ್ಲಿ ಮತ್ತು ಪುರಾಣ ಇತಿಹಾಸದಲ್ಲಿ ತಿಳಿದುಕೊಳ್ಳಬಹುದು. ಹಾಗೆಯೇ ಭಕ್ತರಿಗಾಗಿ ಬೆಟ್ಟದ ಮೇಲೆ ನೆಲೆಸಿದ್ದಾನೆ ಶ್ರೀ ವೆಂಕಟೇಶ್ವರಸ್ವಾಮಿ. ಈ ದೇವಾಲಯವನ್ನು ಚಿಕ್ಕ ತಿರುಪತಿ, ಮನ್ಯಂಕೊಂಡ ಎಂದು ಹಲವಾರು ಹೆಸರುಗಳಿಂದ ಕರೆಯುತ್ತಾರೆ.

ನಿಮಿಷಕ್ಕೆ ಒಮ್ಮೆ ಭಾರ ಹೆಚ್ಚಾಗುವ ಮೂರ್ತಿ ಇವನು....

ಶ್ರೀ ವೆಂಕಟೇಶ್ವರ ಸ್ವಾಮಿಯು ತನ್ನ ಭಕ್ತರನ್ನು ದುಷ್ಟಶಕ್ತಿಗಳಿಂದ ಕಾಪಾಡಲು..ಕೆಲವು ಪ್ರದೇಶದಲ್ಲಿ ನೆಲೆಸಿದ್ದಾನೆ. ಅಂಥಹ ಪ್ರದೇಶಗಳಲ್ಲಿ ಒಂದು "ಮನ್ಯಕೊಂಡ". ಇದನ್ನು 2 ನೇ ತಿರುಪತಿ ಎಂದೂ ಸಹ ಕರೆಯುತ್ತಾರೆ. ತಿರುಪತಿಯಲ್ಲಿನ ಸ್ವಾಮಿಯನ್ನು ನೋಡುವುದಕ್ಕೆ ಆಗದೇ ಇರುವವರು ಈ ದೇವಾಲಯದಲ್ಲಿ ದರ್ಶನ ಪಡೆಯಬಹುದು.

ಪ್ರಸ್ತುತ ಲೇಖನದಲ್ಲಿ ಚಿಕ್ಕ ತಿರುಪತಿಯ ಬಗ್ಗೆ ಕೆಲವು ಕುತೂಹಲಕಾರಿಯಾದ ಮಾಹಿತಿಯನ್ನು ಪಡೆಯೋಣ.

ಎಲ್ಲಿದೆ?

ಎಲ್ಲಿದೆ?

ಈ ಕ್ಷೇತ್ರ ತೆಲಂಗಾಣ ರಾಜ್ಯದ ಮೆಹೆಬೂಬ್ ನಗರದಿಂದ ಸುಮಾರು 17 ಕಿ. ಮೀ ದೂರದಲ್ಲಿದೆ. ಸಿದ್ದರು, ಮುನಿಗಳು ಒಂದು ಕಾಲದಲ್ಲಿ ಈ ಪ್ರದೇಶದಲ್ಲಿ ತಪಸ್ಸು ಮಾಡುತ್ತಿದ್ದರಿಂದ ಹಾಗಾಗಿ ಇದನ್ನು "ಮುನಿಗಳ ಕೊಂಡ" ಎಂದು ಕರೆಯುತ್ತಾರೆ. ತದನಂತರ ಅರಣ್ಯ ಪ್ರದೇಶಗಳಿಂದ ಅವೃತ್ತಗೊಂಡಿದ್ದರಿಂದ "ಮನ್ಯಕೊಂಡ" ಎಂದು ಹೆಸರು ಬಂದಿತು.

ಕೇಶವಯ್ಯ ಎಂಬ ಮುನಿ

ಕೇಶವಯ್ಯ ಎಂಬ ಮುನಿ

ಕೇಶವಯ್ಯ ಎಂಬ ಮುನಿ ಮಲಗಿರುವ ಸಮಯದಲ್ಲಿ ಶ್ರೀನಿವಾಸ ಕನಸ್ಸಿನಲ್ಲಿ ಕಾಣಿಸಿ ಕೃಷ್ಣಾ ನದಿ ತೀರದಲ್ಲಿ ಮುನಿಗಳ ಕೊಂಡದಲ್ಲಿ ಸ್ವಯಂ ಭೂವಾಗಿ ನೆಲೆಸುತ್ತೇನೆ ಎಂದು ಹೇಳುತ್ತಾನೆ. ಆ ನಂತರ ಕೇಶವಯ್ಯ ಈ ಪ್ರದೇಶಕ್ಕೆ ತೆರಳಿ ಸ್ವಾಮಿಗೆ ಪೂಜೆಗಳನ್ನು ಮಾಡುವುದನ್ನು ಪ್ರಾರಂಭ ಮಾಡಿದನಂತೆ.

ಸ್ಥಳೀಯ ಕಥೆಯ ಪ್ರಕಾರ

ಸ್ಥಳೀಯ ಕಥೆಯ ಪ್ರಕಾರ

ಹಾಗೆಯೇ ಇನ್ನೊಂದು ಕಥನದ ಪ್ರಕಾರ ತಿರುಪತಿಗೆ ಕಾಲುನಡಿಗೆಯ ಮೂಲಕ ಹಿಂದಿರುಗುತ್ತಿರುವ ಒಬ್ಬ ವೃದ್ಧೆ ಸ್ವಾಮಿಯನ್ನು ನೆನೆಯುತ್ತಾಳೆ. ಆಗ "ಸ್ವಾಮಿ ನಿನ್ನನ್ನು ಕಾಣಲು ಅಷ್ಟು ದೂರ ಬರಲು ನನ್ನಲ್ಲಿ ಶಕ್ತಿ ಕುಂದಿ ಹೋಗಿದೆ. ಹಾಗಾಗಿ ಸಮೀಪದಲ್ಲಿಯೇ ದರ್ಶನ ನೀಡುವಂತೆ ಮಾಡು ತಂದೆ ಎಂದು ಕೋರಿಕೊಳ್ಳುತ್ತಾಳೆ. ಹೀಗಾಗಿಯೇ ಸ್ವಾಮಿ ಸ್ವಯಂ ಭೂವಾಗಿ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ.

ದೇವಾಲಯದ ವಿಶೇಷತೆ

ದೇವಾಲಯದ ವಿಶೇಷತೆ

ಇಲ್ಲಿ ಸ್ವಾಮಿ ಆದಿಶೇಷನ ಮೇಲೆ ನೀರಿನಲ್ಲಿ ಲಕ್ಷ್ಮೀಸಮೇತನಾಗಿ ನೆಲೆಸಿದ್ದಾನೆ. ತಿರುಮಲದಲ್ಲಿ ಸ್ವಾಮಿಗೆ ಕಾಲು ನಡಿಗೆ ಮಾರ್ಗದಿಂದ ಹೇಗೆ ಕೆಲವರು ಸಾಗುತ್ತಾರೆಯೋ ಅದೇ ರೀತಿಯಲ್ಲಿ ಮಾನ್ಯಕುಂಡದಲ್ಲಿನ ಆ ದೇವಾಲಯಕ್ಕೂ ಮೆಟ್ಟಿಲುಗಳ ಮೂಲಕ ಹಾಗೆಯೇ ಸೇರಿಕೊಳ್ಳಬೇಕು.

ಸ್ವಯಂ ಭೂ

ಸ್ವಯಂ ಭೂ

ಯಾವುದೇ ಶಿಲ್ಪಗಳು ಕೆತ್ತನೆ ಮಾಡದೆಯೇ ಸ್ವಾಮಿ ಈ ದೇವಾಲಯದಲ್ಲಿ ಸ್ವಯಂ ಭೂವಾಗಿ ನೆಲೆಸಿದ್ದಾನೆ. ಹಾಗೆಯೇ ಇಲ್ಲಿನ ಕೊಳವನ್ನು ಯಾರು ಕೂಡ ನಿರ್ಮಾಣ ಮಾಡಿಲ್ಲ. ಇದೇ ಈ ದೇವಾಲಯದ ವಿಶೇಷಗಳು.

ಭಕ್ತರ ವಿಶ್ವಾಸ

ಭಕ್ತರ ವಿಶ್ವಾಸ

ಕೆಲವು ವರ್ಷಗಳ ನಂತರ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದರು. ಇಲ್ಲಿನ ಸ್ವಾಮಿಯನ್ನು ಭಕ್ತಿ, ಶ್ರದ್ಧೆಯಿಂದ ದರ್ಶನ ಮಾಡಿ ಆರಾಧನೆ ಮಾಡಿದರೆ ಕೋರಿಕೆಗಳನ್ನು ನೇರವೇರಿಸುತ್ತಾನಂತೆ. ಇದು ಭಕ್ತರ ಪ್ರಬಲವಾದ ನಂಬಿಕೆಯಾಗಿದೆ.

ಪುಣ್ಯ ಭೂಮಿ

ಪುಣ್ಯ ಭೂಮಿ

ಒಂದು ಕಾಲದಲ್ಲಿ ಮುನಿಗಳು, ಸಿದ್ದರು ಈ ಪ್ರದೇಶದಲ್ಲಿ ತಪಸ್ಸು ಮಾಡಿದ ಪುಣ್ಯ ಭೂಮಿಯಾಗಿದೆ. ಶ್ರೀನಿವಾಸ ಕನಸ್ಸಿನಲ್ಲಿ ಕಾಣಿಸಿ ಸ್ವಯಂ ಭೂವಾಗಿ ನೆಲೆಸಿರುವ ಪವಿತ್ರವಾದ ಸ್ಥಳವಿದು.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಮನ್ಯಕೊಂಡ ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಪಟ್ಟಣಕ್ಕೆ ಸುಮಾರು 17 ಕಿ.ಮೀ ದೂರದಲ್ಲಿರುವ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಮಹೆಬೂಬ್ ನಗರದಿಂದ ರಾಯಚೂರಿಗೆ ತೆರಳುವ ಅಂತರಾಷ್ಟ್ರೀಯ ರಹದಾರಿ ಮಾರ್ಗದಿಂದ ಸುಮಾರು 4 ಕಿ.ಮೀ ಒಳಭಾಗದಲ್ಲಿದೆ.

ಬ್ರಹ್ಮೋತ್ಸವಗಳು

ಬ್ರಹ್ಮೋತ್ಸವಗಳು

ಮೆಹುಬೂಬ್ ನಗರ ಜಿಲ್ಲೆಯಲ್ಲಿಯೇ ಅತ್ಯಂತ ಪ್ರಮುಖವಾದ ಪುಣ್ಯಕ್ಷೇತ್ರವಾಗಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವಿದೆ. ಎತ್ತರವಾದ ಬೆಟ್ಟದ ಮೇಲೆ, ಪ್ರಶಾಂತವಾದ ವಾತಾವರಣದಲ್ಲಿ ನೆಲೆಸಿರುವ ಸ್ವಾಮಿಗೆ ವರ್ಷಕ್ಕೊಮ್ಮೆ ಬ್ರಹ್ಮೋತ್ಸವವನ್ನು ವಿಜೃಂಬಣೆಯಿಂದ ನಡೆಸುತ್ತಾರೆ.

2 ನೇ ತಿರುಪತಿ

2 ನೇ ತಿರುಪತಿ

ಮನ್ಯಕೊಂಡದಲ್ಲಿನ ದೇವಾಲಯವು 2 ನೇ ತಿರುಪತಿ ಎಂದು ಹೆಸರುವಾಸಿಯಾಗಿದೆ. ಹೋದರೆ ತಿರುಪತಿ ಇಲ್ಲದೇ ಹೋದರೆ ಮಾನ್ಯಕೊಂಡ ಎಂಬಂತೆ ಭಕ್ತರು ತೆರಳುತ್ತಾರೆ. ಇಲ್ಲಿನ ಸ್ವಾಮಿಯನ್ನು ಕಂಡರೆ ಅಲ್ಲಿನ ಸ್ವಾಮಿಯನ್ನು ಕಂಡತೆ ಎಂದು ಭಕ್ತರು ನಂಬುತ್ತಾರೆ.

ಸಾರಿಗೆ ಸೇವೆ

ಸಾರಿಗೆ ಸೇವೆ

ಬ್ರಹ್ಮೋತ್ಸವ ಸಮಯದಲ್ಲಿ ಗುಡ್ಡದ ಮೇಲೆ ಬಸ್ಸುಗಳು ಹೋಗುತ್ತವೆ. ಸಾಮಾನ್ಯ ದಿನಗಳಲ್ಲಿಯೇ ರಾಯಚೂರು ಪ್ರಧಾನ ರಹದಾರಿಯಲ್ಲಿ ನಿಲ್ಲಿಸಿ, ಅಲ್ಲಿಂದ ಖಾಸಗಿ ವಾಹನಗಳ ಮೂಲಕ ತೆರಳಬಹುದಾಗಿದೆ.

ಎಲ್ಲಾ ವಿಶೇಷತೆಗಳೆ

ಎಲ್ಲಾ ವಿಶೇಷತೆಗಳೆ

ಬೆಟ್ಟದ ಮೇಲೆ ನೆಲೆಸಿರುವ ಈ ಸ್ವಾಮಿ ದೇವಾಲಯದಲ್ಲಿರುವುದೆಲ್ಲಾ ವಿಶೇಷವೇ. ಅದೆನೆಂದರೆ ಮಾಡದೇ ಇರುವ ಪಾದಗಳು, ನಿರ್ಮಾಣ ಮಾಡದ ಕೊಳ, ನಿರ್ಮಾಣ ಮಾಡದ ದೇವಾಲಯ, ಕೆತ್ತನೆ ಮಾಡದ ವಿಗ್ರಹ ಇವೆಲ್ಲವನ್ನೂ ಕಂಡು ಪುನೀತರಾಗಬಹುದು.

ಅಲಮೇಲು ಮಂಗಮ್ಮ

ಅಲಮೇಲು ಮಂಗಮ್ಮ

ಬೆಟ್ಟವನ್ನು ಇಳಿಯುತ್ತಿರುವವರು ಅಲಮೇಲು ಮಂಗಮ್ಮನನ್ನು ತಪ್ಪದೇ ದರ್ಶನ ಮಾಡಬೇಕು. ಬೆಟ್ಟದ ಮೇಲೆ ಒಂದು ಸ್ಥಳದಲ್ಲಿ ಸ್ವಾಮಿಯ ಪಾದಗಳು ಕಾಣಿಸುತ್ತವೆ. ಇಲ್ಲಿ ಅತ್ಯಂತ ಸುಂದರವಾದ ಪರಿಸರವನ್ನು ಕೂಡ ಅಸ್ವಾಧಿಸಬಹುದು.

 ರೈಲ್ವೆ ನಿಲ್ದಾಣ

ರೈಲ್ವೆ ನಿಲ್ದಾಣ

ಮನ್ಯಕೊಂಡ ರೈಲ್ವೆ ನಿಲ್ದಾಣ ಇಲ್ಲದೆ. ಇದು ಗದ್ವಾಲ್, ಕಾಚಿಗೂಡ, ಸಿಕಿಂದ್ರಾಬಾದ್, ಗುಂಟೂರು ಪ್ರದೇಶಗಳಿಂದ ಇಲ್ಲಿಗೆ ರೈಲುಗಳ ಸಂಪರ್ಕವಿದೆ. ಬೆಟ್ಟದ ಕೆಳಗಿನಿಂದ ದೇವಾಲಯಕ್ಕೆ ಸೇರಬೇಕಾದರೆ ಉಚಿತ ಬಸ್ಸು, ಆಟೋ, ಖಾಸಗಿ ವಾಹನಗಳ ಸೌಲಭ್ಯವೂ ಕೂಡ ಇಲ್ಲಿದೆ.

ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more