Search
  • Follow NativePlanet
Share
» »ಹೆಬ್ರಿಯ ಅನಂತ ಪದ್ಮನಾಭಸ್ವಾಮಿ ದೇವಾಲಯ

ಹೆಬ್ರಿಯ ಅನಂತ ಪದ್ಮನಾಭಸ್ವಾಮಿ ದೇವಾಲಯ

ಉಡುಪಿಯಿಂದ 35 ಕಿ.ಮೀ ಗಳಷ್ಟು ದೂರದಲ್ಲಿರುವ ಕಾರ್ಕಳದ ಹೆಬ್ರಿಯು ವಿಷ್ಣುವಿಗೆ ಮುಡಿಪಾದ ಶ್ರೀ ಅನಂತ ಪದ್ಮನಾಭಸ್ವಾಮಿಯ ದೇವಾಲಯದಿಂದಾಗಿ ಸಾಕಷ್ಟು ಹೆಸರುವಾಸಿಯಾಗಿದೆ

By Vijay

ಜಿಲ್ಲೆ : ಉಡುಪಿ

ಸ್ಥಳ : ಹೆಬ್ರಿ

ರಾಜ್ಯ : ಕರ್ನಾಟಕ

ವಿಶೇಷತೆ : ಶ್ರೀಮನ್ನಾರಾಯಣನಿಗೆ ಮುಡಿಪಾದ ವಿಶಿಷ್ಟ ಶ್ರೀ ಅನಂತ ಪದ್ಮನಾಭಸ್ವಾಮಿಯ ದೇವಾಲಯ

ಉಡುಪಿ ಹಾಗೂ ಹೆಬ್ರಿ ಕುರಿತು

ಉಡುಪಿ ಜಿಲ್ಲೆಯು ಕರ್ನಾಟಕದ ಪ್ರಬುದ್ಧ ಪ್ರವಾಸಿ ಕೇಂದ್ರಗಳಲ್ಲೊಂದಾಗಿದೆ. ದೇವಾಲಯಗಳ ಪಟ್ಟಣ ಎಂಬ ಹೆಸರಿನಿಂದಲೂ ಸಹ ಉಡುಪಿಯನ್ನು ಕರೆಯುತ್ತಾರೆ. ಉಡುಪಿ ನಗರವೊಂದರಲ್ಲೆ ಸಾಕಷ್ಟು ಸಂಖ್ಯೆಯಲ್ಲಿ ವಿಶೇಷವಾದ ದೇವಾಲಯಗಳಿರುವುದನ್ನು ಕಾಣಬಹುದು.

ಇನ್ನೂ ಇದರ ಆಸು ಪಾಸಿನ ಸ್ಥಳಗಳಲ್ಲೂ ಸಹ ಕೆಲವು ವಿಶೇಷ ದೇವಾಲಯಗಳಿವೆ. ಅಂತಹ ಒಂದು ದೇವಾಲಯವೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿಯಲ್ಲಿರುವ ಶ್ರೀ ಅನಂತ ಪದ್ಮನಾಭಸ್ವಾಮಿಯ ದೇವಾಲಯ. ಸಾಕಷ್ಟು ವಿಶೇಷವಾದ ದೇವಾಲಯ ಇದಾಗಿದೆ.

ಹೆಬ್ರಿಯ ಅನಂತ ಪದ್ಮನಾಭಸ್ವಾಮಿ ದೇವಾಲಯ

ಚಿತ್ರಕೃಪೆ: Dvellakat

ಹೆಬ್ರಿ, ಮೂಲತಃ ಉಡುಪಿ ಜಿಲ್ಲೆಯ ಒಂದು ವ್ಯಾಪಾರಿ ಕೇಂದ್ರ. ಅನೇಕ ಕೈಗಾರಿಕೆಗಳು ಇಲ್ಲಿ ತಲೆ ಎತ್ತಿ ನಿಂತಿವೆ. ಸೀತಾನದಿ ತತದ ಈ ಸುಂದರ ಪ್ರದೇಶವು ಸಾಕಷ್ಟು ಶಾಂತಮಯವಾಗಿದ್ದು ಸುತ್ತಲೂ ಹಸಿರು ಗದ್ದೆಗಳು, ತೆಂಗು ಹಾಗೂ ಪಾಮ್ ಮರಗಳಿಂದ ಆವೃತವಾಗಿದೆ.

ಅನಂತಪದ್ಮನಾಭಸ್ವಾಮಿ ದೇವಾಲಯ

ಹೆಬ್ರಿಯ ಮುಖ್ಯ ರಸ್ತೆಯಲ್ಲಿರುವ ಅನಂತ ಪದ್ಮನಾಭಸ್ವಾಮಿಯ ದೇವಾಲಯವು ಪಟ್ಟಣದ ಪ್ರಮುಖ ಧಾರ್ಮಿಕ ಕೇಂದ್ರ. ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯದ ಆವರಣದಲ್ಲಿ ಪದ್ಮನಾಭನ ಜೊತೆ ಖಡ್ಗ ರಾವಣ, ಕ್ಷೇತ್ರಪಾಲಕ ಹಾಗೂ ಧೂಮವತಿಯರ ಸನ್ನಿಧಿಗಳಿವೆ.

ಹೆಬ್ರಿಯ ಅನಂತ ಪದ್ಮನಾಭಸ್ವಾಮಿ ದೇವಾಲಯ

ಚಿತ್ರಕೃಪೆ: Dvellakat

ಪ್ರಸಿದ್ಧ ಇತಿಹಸಕಾರರಾ ಡಾ. ಗುರುರಾಜ್ ಭಟ್ ಅವರ ಪ್ರಕಾರ ಇಲ್ಲಿರುವ ಮೂರ್ತಿಯು ಶ್ರೀನಿವಾಸನದ್ದಾಗಿದೆ. ಆದರೆ ಇಲ್ಲಿರುವ ಶಾಸನಗಳಲ್ಲಿ ಅನಂತ ದೇವರು, ಅನಂತ ಪದ್ಮನಾಭ ಸ್ವಾಮಿ ಎಂಬ ಉಲ್ಲೇಖಗಳಿರುವುದರಿಂದ ಇದನ್ನು ಅನಂತ ಪದ್ಮನಾಭಸ್ವಾಮಿಯ ದೇವಾಲಯ ಎಂದು ಹೇಳಲಾಗುತ್ತದೆ.

ತಲುಪುವ ಬಗೆ

ಹೆಬ್ರಿ ಪಟ್ಟಣವು ಉಡುಪಿ ನಗರ ಕೇಂದ್ರದಿಂದ ಕೇವಲ 35 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಹಾಗಾಗಿ ಉಡುಪಿಯಿಂದ ಬಾಡಿಗೆ ಕಾರಿನ ಮುಲಕವಾಗಿಯೂ ಹೆಬ್ರಿಗೆ ತಲುಪಬಹುದು. ಅಲ್ಲದೆ ಉಡುಪಿಯಿಂದ ಹೆಬ್ರಿಗೆ ತೆರಳಲು ಬಸ್ಸುಗಳು ದೊರೆಯುತ್ತವೆ. ಕುಂಭ ಸಂಕ್ರಮಣದ ಸಂದರ್ಭದಲ್ಲಿ ಐದು ದಿನಗಳ ಕಾಲ ಇಲ್ಲಿ ಗೌಣೋತ್ಸವವನ್ನು ಅದ್ದುರಿಯಾಗಿ ಆಚರಿಸಲಾಗುತ್ತದೆ.

ಆಕರ್ಷಕ ಕಾರ್ಕಳ ಪಟ್ಟಣಕ್ಕೊಂದು ಪವಿತ್ರ ಯಾತ್ರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X